Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರತನ್ ಟಾಟಾ ಅವರ ಮ್ಯಾನೇಜರ್ ಶಂತನು ನಾಯ್ಡು ಯಾರು..? ಇಬ್ಬರ ಸ್ನೇಹಕ್ಕೆ ಕಾರಣವಾಗಿದ್ದೇನು?
ದೇಶ ಕಂಡ ಅತ್ಯಂತ ಸರಳ ಉದ್ಯಮಿ ರತನ್ ಟಾಟಾ ಅವರ ಅಗಲಿಕೆ ಇಡೀ ದೇಶವನ್ನೇ ದುಖಃದಲ್ಲಿ ಮುಳುಗಿಸಿದೆ. ಅವರ ಸಾಮಾಜಿಕ ಕಾರ್ಯಗಳು, ಉದ್ಯಮಿಗಯಾಗಿ ಅವರ ಸೇವೆ ನಿರಂತರವಾಗಿ ಜನರ ಮನದಲ್ಲಿ ಉಳಿಯಲಿದೆ. ಅವರು ಉದ್ಯಮಿಯಾಗಿ ಮಾತ್ರ ಗುರುತಿಸಿಕೊಂಡಿದ್ದವರಲ್ಲ, ಬದಲಿಗೆ ಹಲವು ಸಾಮಾಜಮುಖಿ ಕಾರ್ಯಗಳು, ಯೋಜನೆಗಳಿಂದಲೂ ಹೆಸರಾಗಿದ್ದಾರೆ.
ಅವರ ಪ್ರಾಣಿ ಪ್ರೀತಿ ಎಂತಹದ್ದು ಎಂಬುದು ಎಲ್ಲರಿಗೂ ತಿಳಿದಿರುವ ವಿಚಾರ, ಬೀದಿ ನಾಯಿಗಳು, ಸಾಕು ಪ್ರಾಣಿಗಳ ಕುರಿತು ಅವರಿಗೆ ವಿಶೇಷ ಕಾಳಜಿ ಇತ್ತು. ಹೀಗಾಗಿ ಪ್ರಾಣಿಗಳಿಗೆ ಚಿಕಿತ್ಸೆ ನೀಡಲು ಕ್ಲಿನಿಕ್ ತೆರೆದಿದ್ದರು. ಅವರ ಮುಂಬೈ ಕಚೇರಿಯಲ್ಲಿ ನಾಯಿಗಳಿಗೆಂದೇ ಒಂದು ಕೊಠಡಿ ಇತ್ತು. ಈ ಕಟ್ಟದಲ್ಲಿ ನಾಯಿಗಳಿಗೆ ಮುಕ್ತವಾದ ಅವಕಾಶ ಇತ್ತು.

ಆದ್ರೆ ಇದೇ ಪ್ರಾಣಿ ಪ್ರೀತಿ ಅವರಿಗೆ ಅತ್ಯಂತ ಕಿರಿಯ ಸ್ನೇಹಿತನ ನೀಡಿತ್ತು. ಅವರ ಜನರಲ್ ಮ್ಯಾನೇಜರ್ ಆಗಿದ್ದ ಶಂತನು ನಾಯ್ಡು ಅವರ ಅತ್ಯಂತ ನಂಬಿಕಸ್ತ ವ್ಯಕ್ತಿಯಾಗಿದ್ದ. ಹಾಗಾದ್ರೆ ಯಾರು ಈ ಶಂತನು ನಾಯ್ಡು, ಕಿರಿಯ ವಯಸ್ಸಿಗೆ ಆತ ರತನ್ ಟಾಟಾ ಅವರಿಗೆ ಮ್ಯಾನೇಜರ್ ಆಗಿದ್ದು ಹೇಗೆ? ಇಬ್ಬರ ನಡುವಿನ ಸ್ನೇಹ ಎಂತಹದ್ದು ಎಂಬುದನ್ನು ನಾವಿಂದು ತಿಳಿಯೋಣ.
ಯಾರು ಈ ಶಂತನು ನಾಯ್ಡು?
ಶಂತನು ನಾಯ್ಡು 2014 ರಲ್ಲಿ ಸಾವಿತ್ರಿಬಾಯಿ ಫುಲೆ ಪುಣೆ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ಇಂಜಿನಿಯರಿಂಗ್‌ನಲ್ಲಿ ಪದವಿ ಪಡೆದರು. ನಂತರ ಅವರು ಕಾರ್ನೆಲ್ ಜಾನ್ಸನ್ ಗ್ರಾಜುಯೇಟ್ ಸ್ಕೂಲ್ ಆಫ್ ಮ್ಯಾನೇಜ್‌ಮೆಂಟ್‌ನಿಂದ ಎಂಬಿಎ ಪದವಿ ಪಡೆದರು. ಈ ವೇಳೆಗಾಗಲೆ ಅವರು ಹೆಮ್ಮೆಟರ್ ಉದ್ಯಮಶೀಲತೆ ಪ್ರಶಸ್ತಿ ಮತ್ತು ಜಾನ್ಸನ್ ಲೀಡರ್‌ಶಿಪ್‌ನಂತಹ ಪುರಸ್ಕಾರಗಳನ್ನು ಗಳಿಸಿದ್ದರು.
ಪುಣೆಯ ಟಾಟಾ ಎಲ್ಕ್ಸಿಯಲ್ಲಿ ಆಟೋಮೊಬೈಲ್ ಡಿಸೈನ್ ಇಂಜಿನಿಯರ್ ಆಗಿದ್ದ ಅವಧಿಯಲ್ಲಿ, ರಸ್ತೆ ಸುರಕ್ಷತೆ ಮತ್ತು ಪ್ರಾಣಿಗಳ ರಕ್ಷಣೆಗಾಗಿ ನಾಯ್ಡು ಹೊಸ ಸ್ಟಾರ್ಟ್‌ಅಪ್‌ನಲ್ಲಿ ತೊಡಗಿಸಿಕೊಂಡರು. ಈ ಸಂಸ್ಥೆ ಬೀದಿ ನಾಯಿಗಳ ಕುತ್ತಿಗೆಗೆ ಹೊಳೆಯುವ ಪಟ್ಟಿಯನ್ನು ನೀಡುವ ಕಾರ್ಯ ಮಾಡುತ್ತಿತ್ತು. ಇದರಿಂದ ಅಪಘಾತಗಳ ಕಡಿಮೆ ಮಾಡಲು ಅವರು ಬಯಸಿದ್ದರು.
ಚಿಕ್ಕ ಹುಡುಗನ ಈ ಆಲೋಚನೆ ಪ್ರಾಣಿ ಪ್ರಿಯರಾಗಿದ್ದ ರತನ್ ಟಾಟಾ ಅವರ ಗಮನಕ್ಕೂ ಬಂದಿತು. ಇಷ್ಟು ಹೊತ್ತಿಗೆ ಅವರು ನಾಯಿ ಮಾತ್ರವಲ್ಲ ಹಲವು ಪ್ರಾಣಿಗಳ ಕಾಪಾಡಲು ರೇಡಿಯೋ ಕಾಲರ್ ಅಳವಡಿಕೆ ಕಾರ್ಯದಲ್ಲಿ ತೊಡಗಿದ್ದರು. ಈ ಹೊತ್ತಿಗೆ ಅವರ ಆಸಕ್ತಿ ಬದಲಾಗಿ ಹಿರಿಯ ವಯಸ್ಸಿನ ಜನರಿಗೆ ಶಾಶ್ವತ ನಿವಾಸ ನಿರ್ಮಾಣಕ್ಕೆ ಮುಂದಾದರು. ಅಂದರೆ ಓಲ್ಡ್ ಏಜ್ ಹೋಮ್ ತೆರೆದರು. ಗುಡ್ ಫೆಲೋಸ್ ಎಂಬ ಸಂಸ್ಥೆ ಕಟ್ಟಿ ಏಕಾಂಗಿ ಹಿರಿಯ ವಯಸ್ಸಿನವರಿಗೆ ಆಶ್ರಯ ನೀಡಿದರು.
2018ರಲ್ಲಿ ಶಂತನು ನಾಯ್ಡು ಅವರು ರತನ್ ಟಾಟಾ ಅವರಿಗೆ ಹತ್ತಿರವಾದರು. 2021 ರಲ್ಲಿ ಹಾರ್ಪರ್ ಕಾಲಿನ್ಸ್ ಅವರ ಸಹಕಾರದಲ್ಲಿ "ಐ ಕೇಮ್ ಅಪಾನ್ ಎ ಲೈಟ್‌ಹೌಸ್" ಎಂಬ ಪುಸ್ತಕವನ್ನು ಪ್ರಕಟಿಸಿದರು.
ಮೂಲಗಳ ಪ್ರಕಾರ ಈ ಹುಡುಗನಿಗೆ ರತನ್ ಟಾಟಾ ಅವರೇ ಕರೆ ಮಾಡಿ ನೀವು ಮಾಡುತ್ತಿರುವ ಕೆಲಸಗಳು ಇಷ್ಟವಾಗಿವೆ. ಹೀಗಾಗಿ ನೀವು ನನ್ನ ಮ್ಯಾಜೇಜರ್ ಆಗಿ ಕೆಲಸ ಮಾಡಲು ಬಯಸುತ್ತೀರಾ? ಎಂದು ಕೇಳಿದ್ದರಂತೆ, ಈ ಮನವಿ ಕೇಳಿದ ಶಂತನು ಮರು ಮಾತನಾಡದೆ ಒಪ್ಪಿಕೊಂಡು ಮುಂಬೈಗೆ ಬಂದಿದ್ದರಂತೆ.
ಶಂತನು ನಾಯ್ಡು ಕುರಿತ ಮಾಹಿತಿ
ಶಂತನು ನಾಯ್ಡು 1993 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ ಜನಿಸಿದರು. ಈಗ ಅವರು ಟಾಟಾ ಟ್ರಸ್ಟ್‌ನ ಡೆಪ್ಯುಟಿ ಜನರಲ್ ಮ್ಯಾನೇಜರ್ ಆಗಿ ದೇಶಾದ್ಯಂತ ಬಹಳ ಜನಪ್ರಿಯರಾಗಿದ್ದಾರೆ. ಮೊದಲು ನಾಯಿಗಳ ಕೊರಳಿಗೆ ಹೊಳೆಯುವ ಕಾಲರ್ ಹಾಕಲು ಅವರ ಬಳಿ ಹಣವಿರಲಿಲ್ಲ. ಬಳಿಕ ಸ್ನೇಹಿತರಿಂದ ಹಣ ಪಡೆದು 500 ನಾಯಿಗಳಿಗೆ ಕಾಲರ್ ಅಳವಡಿಸಿದ್ದರು. ಈ ಕೆಲಸಗಳು ರತನ್ ಟಾಟಾ ಅವರ ಅರಿವಿಗೆ ಬಂದಿತ್ತು. ಇದಾಗಿ 2017ರಲ್ಲಿ ಅವರಿಗೆ ಟಾಟಾ ಅವರ ಬಳಿಕ ಮೊದಲ ಬಾರಿಗೆ ಮಾತುಕತೆ ಮಾಡಿದ್ದರು, ಅಲ್ಲಿಂದ ಅವರು ಟಾಟಾ ಅವರಿಗೆ ಸ್ನೇಹಿತರಾಗಿ, ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾರೆ.



Click it and Unblock the Notifications



