Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಅಂಬಾರಿ ಹೊತ್ತ ಮೊಟ್ಟ ಮೊದಲ ಆನೆ ಯಾವುದು? ಇದು ರಾಜರ ಮುದ್ದಿನ ಆನೆ ಆಗಿದ್ದೇಕೆ?
ಮೈಸೂರು ದಸರಾ ಸಂಭ್ರಮ ಆರಂಭಗೊಂಡಿದೆ. ಮೈಸೂರು ದಸರಾ ಅಂದರೆ ಇಡೀ ವಿಶ್ವದಲ್ಲೇ ಪ್ರಸಿದ್ಧಿ, ಇತಿಹಾಸದ ದಿನಗಳನ್ನು ನೆನಪು ಮಾಡುವ ಈ ಹಬ್ಬದಲ್ಲಿ ಇಡೀ ಮೈಸೂರು ಹಬ್ಬದ ಸಂಭ್ರಮದಲ್ಲಿ ಮಿಂದೇಳಲಿದೆ. ಈ 9 ದಿನಗಳ ಉತ್ಸವದಲ್ಲಿ ಕೊನೆಯದಾಗಿ ನಡೆಯುವ ಜಂಬೂಸವಾರಿ ಉತ್ಸವ ನೋಡಲೆಂದೆ ವಿಶ್ವದ ಮೂಲೆ ಮೂಲೆಯಿಂದಲೂ ಜನರು ಆ ದಿನ ಸಾಂಸ್ಕೃತಿಕ ನಗರಿಗೆ ಆಗಮಿಸುತ್ತಾರೆ.
ಈ ಜಂಬೂಸವಾರಿಯಲ್ಲಿ ಪ್ರಮುಖ ಆಕರ್ಷಣೆ ಅಂದರೆ ಚಿನ್ನದ ಅಂಬಾರಿ. ಬೇರೆ ಎಲ್ಲಿಯೂ ನೋಡಲು ಸಿಗದ ಚಿನ್ನದ ಅಂಬಾರಿ ಅಂದು ಮೈಸೂರು ಬೀದಿಯಲ್ಲಿ ಮೆರವಣಿಗೆಯಲ್ಲಿ ನೋಡಬಹುದು. ಚಾಮುಂಡೇಶ್ವರಿ ತಾಯಿ ಈ ಚಿನ್ನದ ಅಂಬಾರಿಯಲ್ಲಿ ವಿರಾಜಮಾನಳಾಗಿ ಭಕ್ತರನ್ನು ಆಶೀರ್ವದಿಸುತ್ತಾಳೆ. ಈ ಸಂಭ್ರಮ ಕಣ್ತುಂಬಿಕೊಳ್ಳಲು ಲಕ್ಷಾಂತರ ಮಂದಿ ಸೇರುತ್ತಾರೆ.

ಇನ್ನು ಈ ಸಂಭ್ರಮದಲ್ಲಿ ಮತ್ತೊಂದು ಆಕರ್ಷಣೆ ಅಂದರೆ ಅಂಬಾರಿಯನ್ನು ಹೊರುವ ಆನೆಗಳು, ಈ ಆನೆಗಳಿಗೆ ಅಲಂಕಾರಿ ಮಾಡಿ ಮೆರವಣಿಗೆಗೆ ತರವುವಾಗ ಅವು ಸಹ ಗಾಂಭೀರ್ಯದಿಂದ ಹೆಜ್ಜೆ ಹಾಕುತ್ತವೆ, ಯಾವುದೆ ಅವಘಡ ಮಾಡದೆ ಜಂಬೂಸವಾರಿಯಲ್ಲಿ ಭಾಗಿಯಾಗುತ್ತವೆ. ಅಲ್ಲದೆ ಅಂಬಾರಿ ಹೊರುವ ಆನೆ ಮಿಕ್ಕೆಲ್ಲಾ ಆನೆಗಳಿಗಿಂತ ಹೆಚ್ಚು ಗಮನ ಸೆಳೆಯುತ್ತದೆ.
ಅಂಬಾರಿಯನ್ನು ಆನೆಯ ಮೇಲೆ ಮೆರವಣಿಗೆ ಮಾಡುವುದು ದಶಕಗಳಿಂದ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ಆದರೆ ಮೊಟ್ಟ ಮೊದಲ ಬಾರಿಗೆ ಈ ಚಿನ್ನದ ಅಂಬಾರಿ ಹೊತ್ತ ಆನೆ ಯಾವುದು ಎಂದು ನಿಮಗೆ ಗೊತ್ತಾ? ಮೈಸೂರಿನ ಬೀದಿಯಲ್ಲಿ ಮೊದಲ ಬಾರಿಗೆ ಅಂಬಾರಿ ಹೊತ್ತು ಸಾಗಿದ ಆನೆ ಯಾವುದು?
ಅದು 1860ರ ದಶಕ, ಮೈಸೂರು ರಾಜರ ಮನೆತನ ಆಗ ಅತ್ಯಂತ ಸುಭಿಕ್ಷ, ಸಂಪತ್ಭರಿತ ನಾಡಾಗಿತ್ತು. ಈ ವೇಳೆಯಲ್ಲಿ ದಸರಾ ಉತ್ಸವ ಸಹ ನಡೆಯುತ್ತಿತ್ತು. ಆದರೆ ಆನೆಗಳ ಮೂಲಕ ಅಂಬಾರಿ ಹೊರುವ ಸಂಪ್ರದಾಯ ಆರಂಭಗೊಂಡಿದ್ದು ಕೂಡ ಇದೇ ವರ್ಷ. ಅದು ಪಿರಿಯಾಪಟ್ಟಣದ ಬೆಟ್ಟದಪುರದ ಬಳಿ ಆನೆಯೊಂದು ಜನರಿಗೆ ಭಯ ಹುಟ್ಟಿಸಿತ್ತು. ಈ ಆನೆಯನ್ನು ಸೆರೆಹಿಡಿದು ಮೈಸೂರಿಗೆ ತರಲಾಗಿತ್ತು. ಬಳಿಕ ಇದೇ ಆನೆಯ ಮೇಲೆ ಚಿನ್ನದ ಅಂಬಾರಿಯಲ್ಲಿ ರಾಜರು ದಸರಾ ಉತ್ಸವಕ್ಕೆ ಮುಂದಾದರು. ಅದೇ ಮೊಟ್ಟ ಮೊದಲ ಬಾರಿಗೆ ರಾಜರನ್ನು ಹೊತ್ತ ಜಯಮಾರ್ತಾಂಡ ಆನೆ.
ರಾಜರ ಮುದ್ದಿನ ಆನೆ ಜಯಮಾರ್ತಾಂಡ
ಈ ಆನೆ ಮೊಟ್ಟ ಮೊದಲ ಬಾರಿಗೆ ರಾಜರನ್ನು ಹೊತ್ತಿತ್ತು. ಹೀಗಾಗಿ ರಾಜರ ಪಾಲಿನ ಅತ್ಯಂತ ಮುದ್ದಿನ ಆನೆಯಾಗಿ ಬೆಳೆದಿತ್ತು. ದಶಕಳ ಕಾಲ ಇದೇ ಆನೆ ಅಂಬಾರಿ ಹೊರಲು ಮುಂದಾಗಿತ್ತು. ದೀರ್ಘಕಾಲ ದಸರಾದಲ್ಲಿ ಪಾಲ್ಗೊಂಡ ಆನೆ ಕೂಡ ಇದೆ ಆಗಿದೆ. ಹೀಗಾಗಿ ಮೈಸೂರಿನ ಅರಮನೆ ಬಳಿ ರಾಜಮಾರ್ತಾಂಡ ಪ್ರವೇಶ ದ್ವಾರ ಎಂಬುದಾಗಿ ನಾಮಕರಣ ಮಾಡಲಾಗಿದೆ.
ರಾಜರನ್ನು ಹೊತ್ತ ಕೊನೆಯ ಆನೆ ಯಾವುದು?
ಜಯಮಾರ್ತಾಂಡ ರಾಜರ ಮುದ್ದಿನ ಆನೆಯಾಗಿ ರಾಜರನ್ನು ಅಂಬಾರಿಯಲ್ಲಿ ಕೂರಿಸಿಕೊಂಡು ಮೈಸೂರು ದಸರಾದಲ್ಲಿ ಭಾಗಿಯಾಗುತ್ತಿತ್ತು. ಆದರೆ ವರ್ಷಗಳು ಉರುಳಿದಂತೆ ಸಂಪ್ರದಾಯಗಳು ಬದಲಾದವು. ನಂತರದಲ್ಲಿ ರಾಜರ ಆಳ್ವಿಕೆ ಕೊನೆಗೊಂಡಾಗ ಅಂಬಾರಿಯಲ್ಲಿ ರಾಜರ ಬದಲಾಗಿ ಚಾಮುಂಡೇಶ್ವರಿ ದೇವಿಯ ಮೂರ್ತಿ ಮೆರವಣಿಗೆಯಲ್ಲಿ ಸಾಗುತ್ತಿತ್ತು. ಹೀಗಾಗಿ ರಾಜರನ್ನು ಕೊನೆಯದಾಗಿ ಹೊತ್ತು ಸಾಗಿದ ಆನೆ ಅಂದರೆ ಬಿಳಿಗಿರಿ. 7 ಸಾವಿರ ಕೆ.ಜಿ ತೂಕವಿದ್ದ ಈ ಬಿಳಿಗಿರಿ ಎಂಬ ಆನೆ ರಾಜರನ್ನು ಹೊತ್ತು ಸಾಗಿದ ಕೊನೆಯ ಆನೆ. ಇದು 1975ರಲ್ಲಿ ಮರಣ ಹೊಂದಿತ್ತು.
ಸಿನಿಮಾದಲ್ಲಿ ನಟಿಸಿದ ಅಂಬಾರಿ ಆನೆ
ಅಂಬಾರಿ ಹೊತ್ತು ಸಾಗುತ್ತಿದ್ದ ರಾಜೇಂದ್ರ ಎಂಬ ಆನೆ ಮೊಟ್ಟ ಮೊದಲ ಬಾರಿಗೆ ಸಿನಿಮಾದಲ್ಲೂ ಕಾಣಿಸಿಕೊಂಡಿತು. ಡಾ. ರಾಜ್ ಕುಮಾರ್ ನಟನೆಯ ಗಂಧದಗುಡಿ ಸಿನಿಮಾದಲ್ಲಿ ಬರುವ ಹಾಡೊಂದರಲ್ಲಿ ರಾಜ್‌ಕುಮಾರ್ ಅವರು ಕುಳಿತು ಸಾಗುವ ಆನೆ ದಸರಾದಲ್ಲಿ ಅಂಬಾರಿ ಹೊತ್ತು ಸಾಗಿದ ರಾಜೇಂದ್ರ ಆನೆಯಾಗಿತ್ತು.



Click it and Unblock the Notifications