Latest Updates
-
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ! -
ಗಣೇಶ ವಿಸರ್ಜನೆ ಮೆರವಣಿಗೆ: ಬೆನ್ನು, ಮೊಣಕಾಲು ನೋವು ತಡೆಯಲು 12 ನಿಮಿಷದ ಸ್ಮಾರ್ಟ್ ರೊಟೀನ್ ಇಲ್ಲಿದೆ! -
ಯುಸಿಸಿ ಸಮಿತಿಯಲ್ಲಿ ಭಿನ್ನಮತ: ನಿಮ್ಮ ಮದುವೆ, ಆಸ್ತಿ ಹಕ್ಕಿನ ಮೇಲೆ ಪರಿಣಾಮವೇನು? -
15 ನಿಮಿಷದ ಡೆಂಗ್ಯೂ ಹೋಮ್ ಆಡಿಟ್: ನಿಮ್ಮ ಮನೆಯೇ ಸೊಳ್ಳೆಗಳ ತಾಣವಾಗದಿರಲಿ, ಈ ಸರಳ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ನಕಲಿ ಪ್ರೋಟೀನ್ ಸಪ್ಲಿಮೆಂಟ್ಸ್ ಎಚ್ಚರಿಕೆ: ನಿಮ್ಮ ಆರೋಗ್ಯಕ್ಕೆ ಕಂಟಕವಾಗುವ ಮುನ್ನ ಈ ಲೇಬಲ್ ಚೆಕ್ ಮಾಡಿ! -
ಒಡಿಶಾ-ಆಂಧ್ರ ಕರಾವಳಿಗೆ ಅಪ್ಪಳಿಸಲಿದೆ 'ಡೀಪ್ ಡಿಪ್ರೆಷನ್': ನಿಮ್ಮ ಸುರಕ್ಷತೆಗಾಗಿ ಈ 15 ನಿಮಿಷಗಳ ಮುನ್ನೆಚ್ಚರಿಕೆ ಮರೆಯದಿರಿ!
ನಂಬಿಕೆಗಳ ಪ್ರಕಾರ ಯಾವ ದಿನ ಉಗುರು, ಕೂದಲು ಕತ್ತರಿಸಲೇಬಾರದು?
ಭಾರತದಲ್ಲಿ ಬಹುತೇಕರು ಉಗುರು ಮತ್ತು ಕೂದಲನ್ನು ಎಲ್ಲಾ ದಿನಗಳಲ್ಲಿ ಕತ್ತರಿಸುವುದಿಲ್ಲ, ಕೆಲವೊಂದು ದಿನಗಳಲ್ಲಿ ಉಗುರು ಅಥವಾ ಕೂದಲು ಕತ್ತರಿಸಿದರೆ ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ನೀವು ಏನಾದರೂ ಉಗುರು ಕತ್ತರಿಸುವುದನ್ನು ನೋಡಿದರೆ ಮನೆಯ ಹಿರಿಯರು ಈ ದಿನ ಉಗುರು ಕತ್ತರಿಸಬಾರದು ಎಂದು ನಿನಗೆ ಗೊತ್ತಾಗುವುದಿಲ್ಲವೇ ಎಂದು ಬೈಯ್ಯುತ್ತಾರೆ. ಅರೇ ...
ದಿನಕ್ಕೂ ನಾನು ಉಗುರು ಅಥವಾ ಕೂದಲು ಕತ್ತರಿಸುವುದಕ್ಕೂ ಇರುವ ಸಂಬಂಧವೇನು ಎಂದು ಭಾವಿಸುತ್ತೇವೆ. ನಮ್ಮಲ್ಲಿ ನಮ್ಮದೇ ಆದ ಧಾರ್ಮಿಕ ನಂಬಿಕೆಗಳಿವೆ, ಅವುಗಳನ್ನು ಪಾಲಿಸುವುದರ ಹಿಂದೆ ಒಂದೊಂದು ಕಾರಣವೂ ಇರುತ್ತದೆ. ಅಲ್ಲದೆ ಹಿಂದೂ ಧರ್ಮದಲ್ಲಿ ಪ್ರತಿಯೊಂದು ದಿನವೂ ಒಂದೊಂದು ದೇವರಿಗೆ ಮೀಸಲಾಗಿ ಇಡಲಾಗಿದೆ. ಆ ದಿನಗಳ ಮಹತ್ವ ತಿಳಿದರೆ ಕೆಲವೊಂದು ದಿನಗಳಲ್ಲಿ ಕೂದಲು ಹಾಗೂ ಉಗುರು ಏಕೆ ಕತ್ತರಿಸಬಾರದು ಎಂಬುವುದು ಕೂಡ ತಿಳಿಯುತ್ತದೆ.

ಯಾವ ದಿನ ಯಾವ ದೇವರನ್ನು ಆರಾಧಿಸಲಾಗುವುದು?
ಭಾನುವಾರ: ಭಾನುವಾರ ಸೂರ್ಯ ದೇವನನ್ನು ಆರಾಧಿಸಲಾಗುವುದು. ಸೂರ್ಯನಿಲ್ಲದಿದ್ದರೆ ಈ ಜಗತ್ತು ಇರಲು ಸಾಧ್ಯವೇ?
ಸೋಮವಾರ: ಸೋಮವಾರ ಶಿವನಿಗೆ ಮೀಸಲಾದ ದಿನ. ಅಲ್ಲದೆ ಚಂದ್ರ ಗ್ರಹ ಕೂಡ ಈ ದಿನದ ಅಧಿಪತಿ.
ಮಂಗಳವಾರ: ಮಂಗಳವಾರ ಹನುಮಂತನನ್ನು ಪೂಜಿಸಲಾಗುವುದು. ಅಲ್ಲದೆ ಮಂಗಳ ಗ್ರಹ ಕೂಡ ಈ ದಿನದ ಅಧಿಪತಿ
ಬುಧವಾರ: ಬುಧವಾರ ಶ್ರೀಕೃಷ್ಣನನ್ನು ಆರಾಧಿಸಲಾಗುವುದು. ಅಲ್ಲದೆ ಈ ದಿನದ ಅದಿಪತಿ ಬಧಗ್ರಹ
ಗುರುವಾರ: ಗುರುವಾರದ ಅಧಿಪತಿ ಗುರುಗ್ರಹ. ಈ ದಿನ ಶ್ರೀ ವಿಷ್ಣುವನ್ನು ಆರಾಧಿಸಲಾಗುವುದು.
ಶುಕ್ರವಾರ: ಶುಕ್ರಗ್ರಹ ಶುಕ್ರವಾರದ ಅಧಿಪತಿ. ಈ ದಿನ ಲಕ್ಷ್ಮಿಯನ್ನು ಆರಾಧಿಸಲಾಗುವುದು.
ಶನಿವಾರ: ಶನಿವಾರಕ್ಕೆ ಶನಿಗ್ರಹದ ಅಧಿಪತಿ, ಈ ದಿನ ಶನಿ ದೇವನನ್ನು ಆರಾಧಿಸಲಾಗುವುದು.
ಉಗುರನ್ನು ಯಾವ ದಿನ ದಿನ ಕತ್ತರಿಸಿದರೆ ಅದರ ಪ್ರಭಾವ:
ಸೋಮವಾರ: ಸೋಮವಾರ ಶುಭ ಕಾರ್ಯಗಳಿಗೆ ಶ್ರೇಷ್ಠ . ಈ ದಿನ ಪ್ರಯಾಣ ಮಾಡಿದರೆ ಶುಭ ಎಂದು ಹೇಳಲಾಗುವುದು, ಈ ದಿನ ಹಣ ಖರ್ಚು ಮಾಡಲು, ಏನಾದರೂ ಶಾಪಿಂಗ್ ಮಾಡಲು, ಲಕ್ಷುರಿಯಾಗಿ ಖರ್ಚು ಮಾಡಲು ಶುಭ ಎಂದು ಹೇಳಲಾಗುವುದು. ಈ ದಿನ ಉಗುರನ್ನು ಕತ್ತರಿಸಬಹುದು. ಇದರಿಂದ ನಿಮ್ಮ ಸುತ್ತ ಇರುವ 'ತಮ' ವನ್ನು ಹೋಗಲಾಡಿಸಲು ಸಹಕಾರಿ. ಆದರೆ ಗರ್ಭಿಣಿಯರು ಈ ದಿನ ಉಗುರು ಕತ್ತರಿಸುವಂತಿಲ್ಲ, ಅದು ಅವರ ಮೇಲೆ ಋಣಾತ್ಮಕ ಪ್ರಭಾವ ಬೀರುವುದು.
ಮಂಗಳವಾರ
ಮಂಗಳವಾರ ಯಾವುದಾದರೂ ಚರ್ಚೆಯಲ್ಲಿ ಭಾಗವಹಿಸಲು, ಯುದ್ಧದಲ್ಲಿ ಜಯಗೊಳಿಸಲು ಶುಭ ದಿನ. ಆದರೆ ಈ ದಿನ ಉಗುರನ್ನು ಕತ್ತರಿಸುವಂತಿಲ್ಲ ಎಂದು ಹೇಳಲಾಗುವುದು. ಯಾರು ಈ ದಿನ ಉಗುರು ಕತ್ತರಿಸುತ್ತಾರೋ ಸಾಲ ಹೆಚ್ಚಾಗುವುದು ಎಂದು ಹೇಳಲಾಗುವುದು.
ಬುಧವಾರ
ಈ ದಿನ ತುಂಬಾನೇ ಶುಭ. ಈ ದಿನ ಉಗುರು ಕತ್ತರಿಸಿದರೆ ಒಳ್ಳೆಯದು. ಅಲ್ಲದೆ ಈ ದಿನ ಮನೆಯನ್ನು ಸಂಪೂರ್ಣ ಸ್ವಚ್ಛ ಮಾಡಬೇಕೆಂದು ಹೇಳಲಾಗುವುದು.
ಗುರುವಾರ
ಗುರುವಾರ ಉಗುರು ಕತ್ತರಿಸುವುದು, ಕೂದಲು ಕತ್ತರಿಸುವುದು ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಈ ದಿನ ಉಗುರು ಕತ್ತರಿಸಿದರೆ, ಕೂದಲು ಕತ್ತರಿಸಿದರೆ ದಾರಿದ್ರ್ಯ ಬರುವುದು ಎಂಬ ನಂಬಿಕೆ ಇದೆ.
ಶುಕ್ರವಾರ: ಶುಕ್ರವಾರ ಉಗುರು ಕತ್ತರಿಸಬಹುದು. ಈ ದಿನ ಉಗುರು ಹಾಗೂ ಕೂದಲನ್ನು ಕತ್ತರಿಸಬಹುದು. ಈ ದಿನ ಉಗುರುನ್ನು ಕತ್ತರಿಸುವುದರಿಂದ ಖುಷಿ, ಸಂಪತ್ತು ಹೆಚ್ಚುವುದು ಎಂಬ ನಂಬಿಕೆ ಇದೆ.
ಶನಿವಾರ
ಶನಿವಾರ ಕೂಡ ಉಗುರು, ಕೂದಲು ಕತ್ತರಿಸುವುದು ಒಳ್ಳೆಯದಲ್ಲ ಎಂಬ ನಂಬಿಕೆ ಇದೆ. ಈ ದಿನ ಉಗುರು ಕತ್ತರಿಸಿದರೆ ಮನೆಯಲ್ಲಿ ಜಗಳ ಹೆಚ್ಚಾಗುವುದು, ಸಮಾಜದಲ್ಲಿ ನಿಮ್ಮ ಹೆಸರಿಗೆ ಕಳಂಕ ಉಂಟಾಗುವುದು ಎಂಬ ನಂಬಿಕೆ ಇದೆ. ಆದ್ದರಿಂದ ಈ ದಿನ ಉಗುರು ಕತ್ತರಿಸುವಂತಿಲ್ಲ.



Click it and Unblock the Notifications
