Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ವಿಶ್ವದಲ್ಲಿಯೇ ದುಬಾರಿ ಬೆಲೆ ಅಕ್ಕಿಯಿದು: 1 ಕೆಜಿ ಬೆಲೆ ಅಬ್ಬಾ ಇಷ್ಟೊಂದಾ?
ಒಂದು ಕೆಜಿ ಅಕ್ಕಿ ಬೆಲೆ ಸಾಮಾನ್ಯ 40-45 ರುಪಾಯಿಯಿಂದ ಪ್ರಾರಂಭವಾಗುತ್ತದೆ, ಇನ್ನು ನೀವು ಮಾಲ್‌ಗಳಿಗೆ ಹೋದಾಗ ಕೆಜಿಗೆ 100 ರುಪಾಯಿ, ಒಂದು ಚಿಕ್ಕ ಡಬ್ಬದಲ್ಲಿ ಒಂದು ಕೆಜಿಯಷ್ಟು ಇರುವ ಅಕ್ಕಿಗೆ 500 ರುಪಾಯಿ ಅಂತೆಲ್ಲಾ ಕಾಣಬಹುದು.
ಅವುಗಳನ್ನು ನೋಡಿದಾಗ ಅಕ್ಕಿಗೆ ಇಷ್ಟೊಂದು ಬೆಲೆಯೇ ಎಂದನಿಸಬಹುದು. ಆದರೆ ಕಿನ್‌ಮೆಮಾಯಿ ಪ್ರೀಮಿಯಂ ಎಂಬ ಅಕ್ಕಿ ದೊರೆಯುತ್ತದೆ, ಇದು ವಿಶ್ವದ ದುಬಾರಿ ಅಕ್ಕಿಯಂತೆ, ಹಾಗಾದರೆ ಕೆಜಿಗೆ ಎಷ್ಟು ಗೊತ್ತಾ? ಜೊತೆಗೆ ಈ ಅಕ್ಕಿಯ ವಿಶೇಷತೆ ಬಗ್ಗೆ ಕೂಡ ನೋಡೋಣ:

ಕಿನ್‌ಮೆಮಾಯಿ ಪ್ರೀಮಿಯಂ ಅಕ್ಕಿಯ ಬೆಲೆಯೆಷ್ಟು?
ಇದರ ಬೆಲೆ ಕೆಜಿಗೆ $109 ಆದರೆ ರುಪಾಯಿಗಳಲ್ಲಿ ಹೇಳುವುದಾದರೆ 9,122.99. ಇಷ್ಟು ಬೆಲೆಯಿಂದ ಒಂದು ಸಾಧಾರನ 5-6 ಮಂದಿ ಇರುವ ಕುಟುಂಬ 5-6 ತಿಂಗಳು ಊಟ ಮಾಡಬಹುದು.
ಈ ಅಕ್ಕಿ ಪೋಷಕಾಂಶಗಳ ಆಗರವಂತೆ
ಈ ಭೂಮಿ ಮೇಲಿರುವ ಆಹಾರದಲ್ಲಿ ಇದರಷ್ಟು ಪೋಷಕಾಂಶವಿರುವ ಅಹಾರ ಮತ್ತೊಂದಿಲ್ವಂತೆ, ಇದನ್ನು ಜಪಾನ್‌ನ ಟೋಯೋ ರೈಸ್ ಕಾರ್ಪೋರೇಷನ್ ಉತ್ಪಾದನೆ ಮಾಡುತ್ತದೆ.
ಸುಮಾರು 17 ವರ್ಷಗಳಿಂದ ಈ ಅಕ್ಕಿ ಉತ್ಪಾದನೆಗೆ ಪ್ರಯತ್ನ ಮಾಡಲಾಗಿತ್ತು
ಜಪಾನ್‌ನಲ್ಲಿ ಅಕ್ಕಿಯನ್ನು ಕೂಡ ತಂತ್ರಜ್ಞಾನ ಬಳಸಿ ಮಾಡಲಾಗುವುದು, ಇಂಥದ್ದೊಂದು ಅಕ್ಕಿಯನ್ನು ಉತ್ಪಾದನೆ ಮಾಡಲು 17 ವರ್ಷ ಸಮಯ ತೆಗೆದುಕೊಂಡಿದ್ದಾರೆ. ಬೆಳೆಯಲು ಅಲ್ಲ, ಇದನ್ನು ಹೇಗೆ ಬೆಳೆಯಬಹುದು ಎಂಬ ತಂತ್ರಜ್ಞಾನ ಕಂಡುಕೊಳ್ಳಲು.
ನಟ್ಸ್ ರುಚಿಯಂತೆ
ನಟ್ಸ್ ಎಷ್ಟು ರುಚಿಯಾಗಿರುತ್ತದೆ ಎಂಬುವುದು, ಈ ಅಕ್ಕಿ ಕೂಡ ನಟ್ಸ್ ರುಚಿಯಂತೆ. ಇನ್ನು ಇದೇ ಅಕ್ಕಿಯನ್ನು ಹೊಟ್ಟೆ ತುಂಬುವಷ್ಟು ತಿನ್ನಬಹುದೇ? ಇದರ ಬಗ್ಗೆ ಮಾಹಿತಿಯಿಲ್ಲ, ಈಗ ನಟ್ಸ್ ನಾವು ಹೊಟ್ಟೆ ತುಂಬ ತಿನ್ನಲ್ಲ ತಾನೆ, ಇದು ಕೂಡ ಅದರಂತೆ ಬಳಸಬಹುದೇನೂ? ಲೈಫ್‌ನಲ್ಲಿ ಒಮ್ಮೆಯಾದರು ಈ ಅಕ್ಕಿ ಟೇಸ್ಟ್ ಮಾಡಬೇಕು ಎಂದಾದರೆ ಒಂದು ಬಾರಿಯಾದರೂ ನಮಗೆ ಖರೀದಿಸಲು ಸಾಧ್ಯವಾಗಬಹುದು ಅಲ್ವಾ?
ನೋಡಲು ಚಿಕ್ಕದಾಗಿ ವಜ್ರದಂತಿರುತ್ತದೆ
ಈ ಅಕ್ಕಿ ವಜ್ರದಂತೆ ಹೊಳಪು ಹೊಂದಿರುವ ಅಕ್ಕಿ, ಇದರಲ್ಲಿರುವ ಪೋಷಕಾಂಶಗಳಿಗೆ ಕಿನ್‌ಮೆಮಾಯಿಗೆ ಕಿನ್‌ಕಿಮಾಯಿನೇ ಸಾಟಿ.
ಇದರಲ್ಲಿರುವ ಪೋಷಕಾಂಶಗಳೇನು?
ಇದರಲ್ಲಿ LPS ( lipopolysaccharides) 6 ಪಟ್ಟು ಹೆಚ್ಚಿರುತ್ತದೆ
ರೋಗ ನಿರೋಧಕ ಶಕ್ತಿ ವೃದ್ಧಿಸುತ್ತದೆ.
ಆರೋಗ್ಯ ಸಮಸ್ಯೆ ಕಡಿಮೆಯಾಗುವುದು.
ಇದರಲ್ಲಿ ವಿಟಮಿನ್ ಬಿ1 7 ಪಟ್ಟು ಅಧಿಕವಿದೆ
1.8 ಪಟ್ಟು ಅಧಿಕ ನಾರಿನಂಶವಿದೆ.
ಚಿಕ್ಕ-ಚಿಕ್ಕ ಪ್ಯಾಕೆಟ್ ಮಾಡಿ ಮಾರಲಾಗುವುದು
ಒಂದು ಕೆಜಿ ಕೊಳ್ಳುವವರು ಕಡಿಮೆ ಹಾಗಾಗಿ 140 ಗ್ರಾಂ ಪ್ಯಾಕ್ ಮಾಡಿ ಸರ್ವ್ ಮಾಡಲಾಗುವುದು. 2016ರಿಂದಲೇ ವಿಶ್ವದ ಅತ್ಯಂತ ದುಬಾರಿ ಅಕ್ಕಿ ಇದಾಗಿದೆ.



Click it and Unblock the Notifications
