Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಸೆಪ್ಟೆಂಬರ್ 6 ಅಥವಾ 7ರಲ್ಲಿ ಯಾವಾಗ ಕೃಷ್ಣ ಜನ್ಮಾಷ್ಟಮಿ ? ಪೂಜೆಗೆ ಶುಭ ಮುಹೂರ್ತ ಯಾವಾಗ?
ಕೃಷ್ಣ ಜನ್ಮಾಷ್ಟಮಿ ಎಂದರೆ ಶ್ರೀಕೃಷ್ಣ ಭಕ್ತರಿಗೆ ಮಾತ್ರವಲ್ಲ ಎಲ್ಲರಿಗೂ ಸಡಗರ-ಸಂಭ್ರಮ... ಈ ದಿನ ಜಾತಿ-ಮತ ಎಂಬ ಬೇಧವಿಲ್ಲದೆ ಈ ದಿನವನ್ನು ಆಚರಿಸುತ್ತಾರೆ. ಶಾಲೆಗಳಲ್ಲಿ ಪುಟಾಣಿಗಳಿಗೆ ಶ್ರೀಕೃಷ್ಣನ ವೇಷ ಹಾಕುವ ಸ್ಪರ್ಧೆಗಳು ಇರುತ್ತದೆ, ಪುಟಾಣಿಗಳಿಗೆ ಈ ದಿನ ರಾಧೆ-ಕೃಷ್ಣನ ಉಡುಗೆಗಳನ್ನು ತೊಟ್ಟು ತಮ್ಮ ಮಕ್ಕಳಲ್ಲಿಯೇ ಬಾಲಕೃಷ್ಣನನ್ನು ನೋಡಿ ಆನಂದಿಸುತ್ತಾರೆ. ಕೃಷ್ಣ ಜನ್ಮಾಷ್ಟಮಿಯೆಂದರೆ ಶ್ರೀಕೃಷ್ಣ ಜನಿಸಿದ ದಿನ.
ಈ ವರ್ಷ ಕೃಷ್ಣ ಜನ್ಮಾಷ್ಟಮಿಯನ್ನು ಯಾವಾಗ ಆಚರಿಸಲಾಗುವುದು, ಪೂಜೆಯನ್ನು ಯಾವ ಮುಹೂರ್ತದಲ್ಲಿ ಮಾಡಬೇಕು ಎಂಬ ಮಾಹಿತಿ ತಿಳಿಯೋಣ ಬನ್ನಿ:

ಶ್ರೀಕೃಷ್ಣನನ್ನು ವಿಷ್ಣುವಿನ 8ನೇ ಅವತಾರ ಎಂದು ಹೇಳಲಾಗುವುದು. ಕೃಷ್ಣ ಜನ್ಮಾಷ್ಟಮಿಯನ್ನು ಶ್ರಾವಣ ಮಾಸದ ಕೃಷ್ಟ ಪಕ್ಷದ ಅಷ್ಟಮಿಯ ದಿನದಂದು ಆಚರಿಸಲಾಗುವುದು.
2023ರಲ್ಲಿ ಕೃಷ್ಣ ಜನ್ಮಾಷ್ಟಮಿ
ಸೆಪ್ಟೆಂಬರ್ 6 ಮತ್ತು 7
ಈ ವರ್ಷ ಶ್ರೀಕೃಷ್ಣ ಜನ್ಮಾಷ್ಟಮಿಯನ್ನು ಸೆಪ್ಟೆಂಬರ್ 6ರಂದು ಆಚರಿಸುವುದಾ? ಸೆಪ್ಟೆಂಬರ್ 7ರಂದು ಆಚರಿಸುವುದಾ ಎಂಬ ಗೊಂದಲ ಜನರಲ್ಲಿದೆ.
ಪಂಚಾಂಗ ಪ್ರಕಾರ ಅಷ್ಟಮಿ ತಿಥಿ ಸೆಪ್ಟೆಂಬರ್ 6 ಮಧ್ಯಾಹ್ನ 3:37ಕ್ಕೆ ಪ್ರಾರಂಭ
ಸೆಪ್ಟೆಂಬರ್ 7ರಂದು ಸಂಜೆ 04:14ಕ್ಕೆ ಮುಕ್ತಾಯ.
ರೋಹಿಣಿ ನಕ್ಷತ್ರ ಸೆಪ್ಟೆಂಬರ್ 6 ಬೆಳಗ್ಗೆ 09:20ಕ್ಕೆ ಪ್ರಾರಂಭವಾಗಿ ಸೆಪ್ಟೆಂಬರ್ 7 ಬೆಳಗ್ಗೆ 10:25ರವರೆಗೆ ಇರಲಿದೆ. ಆದ್ದರಿಂದ ಈ ವರ್ಷ ಅಷ್ಟಮಿಯನ್ನು ಸೆಪ್ಟೆಂಬರ್ 6ರಂದು ಆಚರಿಸಲಾಗುವುದು.
ಜನ್ಮಾಷ್ಟಮಿ ಪೂಜಾ ಮುಹೂರ್ತ
ಜನ್ಮಾಷ್ಟಮಿಯನ್ನು ಮಧ್ಯರಾತ್ರಿಯಲ್ಲಿ ಆಚರಿಸಲಾಗುವುದು. ಸೆಪ್ಟೆಂಬರ್ 6ರಂದು ಮಧ್ಯರಾತ್ರಿ 11:57ರಂದು 12:42ರವರೆಗೆ ಪೂಜಾ ಮುಹೂರ್ತವಿದೆ.
ಎರಡು ಪ್ರಮುಖ ಯೋಗಗಳು ಕೂಡ ರೂಪುಗೊಂಡಿದೆ
ಈ ವರ್ಷ ಎರಡು ಪ್ರಮುಖ ಯೋಗಗಳು ಕೂಡ ರೂಪುಗೊಂಡಿದೆ. ರವಿಯೋಗ, ಸರ್ವಾರ್ಥ ಸಿದ್ಧಿ ಯೋಗ ಏರ್ಪಡಲಿದೆ. ಈ ಸಮಯದಲ್ಲಿ ಏನಾದರೂ ಹೊಸ ಕಾರ್ಯ ಮಾಡಿದರೆ ಯಸಸ್ಸು ಸಿಗಲಿದೆ. ರವಿಯೋಗ ಬೆಳಗ್ಗೆ 06:01ರಿಂದ 09:20ರವರೆಗೆ ಇರಲಿದೆ. ನೀವು ಏನಾದರೂ ಹೊಸ ಕೆಲಸ ಪ್ರಾರಂಭಿಸಲಿದ್ದರೆ ಈ ಅವಧಿ ತುಂಬಾನೇ ಶುಭವಾಗಿದೆ.
ಶ್ರೀ ಕೃಷ್ಣ ಆರಾಧನೆ ಮಾಡುವುದರಿಂದ ಜೀವನದಲ್ಲಿ ನಾವು ತೆಗೆದುಕೊಳ್ಳುವ ನಿರ್ಧಾರಗಳು ಸ್ಪಷ್ಟವಾಗಿರುತ್ತದೆ, ಯಾವುದೇ ಗೊಂದಲಗಳು ಉಂಟಾಗುವುದಿಲ್ಲ, ಇದರಿಂದ ಒಳಿತಾಗುತ್ತದೆ ಎಂಬ ನಂಬಿಕೆ. ಶ್ರೀಕೃಷ್ಣನನ್ನು ಭಕ್ತಿಯಿಂದ ಬೇಡಿಕೊಂಡರೆ ಸಾಕು ಬಯಸಿರುವ ಎಲ್ಲಾ ಕಾರ್ಯಗಳು ನೆರವೇರುವುದು. ಕಷ್ಟಕಾಲದಲ್ಲಿ ಪಾಂಡವರನ್ನು ಶ್ರೀ ಕೃಷ್ಣ ಗೆಲ್ಲಿಸಿದಂತೆ ಅವನ ಶಕ್ತಿಯಿಂದ ನಮ್ಮ ಎಲ್ಲಾ ಕಷ್ಟಗಳನ್ನು ದೂರಾಗಿಸಲು ಸಾಧ್ಯವಾಗುವುದು ಎಂಬುವುದು ಶ್ರೀ ಕೃಷ್ಣನ ಭಕ್ತರ ಅಚಲ ನಂಬಿಕೆ.
ಶ್ರೀಕೃಷ್ಣ ಅರ್ಜುನನಿಗೆ ಬೋಧಿಸಿದ ಭಗವದ್ಗೀತೆಯ ತತ್ವಗಳು ಇಂದಿಗೂ ಪ್ರಸ್ತುತ. ಆ ತತ್ವಗಳನ್ನು ಅರ್ಥ ಮಾಡಿಕೊಂಡರೆ ಬದುಕನ್ನು ಹೇಗೆ ನಡೆಸಬೇಕು ಎಂಬುವುದು ತಿಳಿಯುತ್ತದೆ. ಈ ಕಾರಣದಿಂದಲೇ ಭಗವದ್ಗೀತೆ ಪವಿತ್ರ ಗ್ರಂಥವಾಗಿದೆ. ಶ್ರೀಕೃಷ್ಣ ತತ್ವಗಳನ್ನು ಅನುಸರಿಸೋಣ.. ಎಲ್ಲರಿಗೂ ಶ್ರೀ ಕೃಷ್ಣ ಸಕಲ ಐಶ್ವರ್ಯ, ಆರೋಗ್ಯ ನೀಡಿ ಅನುಗ್ರಹಿಸಲಿ.



Click it and Unblock the Notifications