Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ರಾಜ್ಯಕ್ಕೆ ಮಳೆ ಯಾವಾಗ ಆಗಮನ..! ಏಪ್ರಿಲ್‌ನಲ್ಲಿ ಯಾವಾಗಿಂದ ಮಳೆ ನಕ್ಷತ್ರ ಆರಂಭ..!
ಮನೆಯಿಂದ ಹೊರಬಂದರೆ ಮೈಸುಡುವ ಬಿಸಿಲಿ ಜನರನ್ನು ಹೈರಾಣಾಗಿಸಿದೆ. ರಾಜ್ಯದ ಬಹುತೇಕ ಜಲಾಶಯಗಳಿಂದು ನೀರಿಲ್ಲದೆ ಒಣಗಿವೆ. ಮಳೆಯ ನಿರೀಕ್ಷೆಯಲ್ಲಿದ್ದ ಜನರಿಗೆ ಈಗ ನಿರಾಸೆಯಾಗಿದೆ. ಏಕೆಂದರೆ ವಾಡಿಕೆಯಂತೆ ಈ ವೇಳೆಗೆ ಒಂದಾದರು ದೊಡ್ಡ ಮಳೆಯಾಗಬೇಕಿತ್ತು, ಒಂದು ಮಳೆಯಾದರೆ ತಾಪ ಸ್ವಲ್ಪ ಇಳಿಕೆಯಾಗಬಹುದು ಎಂಬ ನಿರೀಕ್ಷೆ ಜನರದ್ದು.
ಇದರ ಜೊತೆ ಬಿಸಿಗಾಳಿಯು ಅನಾರೋಗ್ಯ ಸಮಸ್ಯೆಯನ್ನು ತರುತ್ತಿದೆ. ಉತ್ತರ ಭಾಗ ದಕ್ಷಿಣ ಭಾಗದಲ್ಲಿ ಬಿಸಿಗಾಳಿ ಬಿರುಸು ಪಡೆದಿದೆ. ಹಗಲಿನಲ್ಲಿ ಮಾತ್ರವಲ್ಲ ರಾತ್ರಿಯ ವೇಳೆಯಲ್ಲೂ ಬಿಸಿಗಾಳಿ ವಾತಾವರಣವನ್ನು ಮತ್ತಷ್ಟು ಬೆಂಕಿಯಾಗಿಸಿದೆ. ಹೀಗಾಗಿ ಆದಷ್ಟು ಬೇಗ ಮಳೆಯಾಗಲಿ ಎಂಬ ಪ್ರಾರ್ಥನೆ ಎಂಬ ಕೂಗುಗಳು ಕೇಳಿಬರುತ್ತಿವೆ.

ಇತ್ತ ಹವಾಮಾನ ಇಲಾಖೆ ನಿತ್ಯ ಮಳೆಯಾಗುವ ಮುನ್ಸೂಚನೆ ನೀಡುತ್ತಾ ಬಂದರೂ ಈವರೆಗೂ ಎಲ್ಲಿಯೂ ಮಳೆಯಾಗಿಲ್ಲ. ರಾಜ್ಯದ ಒಂದಿಷ್ಟು ಕಡೆ ತುಂತುರು ಮಳೆಯಾಗಿದ್ದು ಬಿಟ್ಟರೆ ನೀರು ಹರಿದು ಹಳ್ಳ, ಕೊಳ್ಳ, ಜಲಮೂಲಗಳು ತುಂಬವಂತಹ ಮಳೆ ಇನ್ನೂ ಆಗಿಲ್ಲ. ಹಾಗಾದ್ರೆ ಏಪ್ರಿಲ್‌ನಲ್ಲಿ ಯಾವಾಗಿಂದ ಈ ಮಳೆ ನಕ್ಷತ್ರಗಳು ಆರಂಭವಾಗುತ್ತವೆ. ಒಮ್ಮೆ ಮಳೆ ನಕ್ಷತ್ರಗಳು ಆರಂಭಗೊಂಡರೆ ಮಳೆಗಾಲ ಆರಂಭವಾಗಿದೆ ಅಂತಲೇ ಅರ್ಥ. ಈ ಮಳೆ ನಕ್ಷತ್ರದ ಪ್ರಕಾರ ಮೊದಲ ಎರಡು ನಕ್ಷತ್ರಗಳು ಮಳೆ ತರದೇ ಇರಬಹುದು, ಆದ್ರೆ 3ನೇ ನಕ್ಷತ್ರದಿಂದ ಮಳೆಯಾಗುವುದು ಖಚಿತ.
ಹಾಗಾದ್ರೆ 2024ನೇ ಸಾಲಿನ ಮಳೆ ನಕ್ಷತ್ರಗಳು ಯಾವಾಗ ಆರಂಭವಾಗುತ್ತವೆ. ಯಾವಾಗ ಮಳೆ ಆರಂಭವಾಗಬಹುದು ಎಂಬುದನ್ನು ನಾವಿಂದು ತಿಳಿಯೋಣ.
ಅಶ್ವಿನಿ
ದಿನಾಂಕ-13-4-2024
ಶನಿವಾರ
ಸಾಮಾನ್ಯ ಮಳೆ
ಬರುವ ಸಾಧ್ಯತೆ ಕಡಿಮೆ
ವಾಹನ- ಆನೆ
ಭರಣಿ
ದಿನಾಂಕ-27-4-2024
ಶನಿವಾರ
ಸಾಮಾನ್ಯ ಮಳೆ
ವಾಹನ-ಕತ್ತೆ
ಕೃತಿಕಾ
ದಿನಾಂಕ-11-5-2024
ಶುಕ್ರವಾರ
ಉತ್ತಮ ಮಳೆ
ವಾಹನ-ಕಪ್ಪೆ
ರೋಹಿಣಿ
ದಿನಾಂಕ-24-5-2024
ಶುಕ್ರವಾರ
ಸಾಮಾನ್ಯ ಮಳೆ
ಮಳೆಯಾಗುವ ಸಾಧ್ಯತೆ ಹೆಚ್ಚು
ವಾಹನ- ನವಿಲು
ಮೃಗಶಿರ
ದಿನಾಂಕ 07-06-2024
ಶುಕ್ರವಾರ
ಸಾಮಾನ್ಯ ಮಳೆ
ವಾಹನ- ಕುದುರೆ
ಆರಿದ್ರಾ
ದಿನಾಂಕ 21-06-2024
ಶುಕ್ರವಾರ
ಸಾಮಾನ್ಯ ಮಳೆ
ವಾಹನ-ಟಗರು
ಪುನರ್ವಸು
ದಿನಾಂಕ 05-7-2024
ಶುಕ್ರವಾರ
ಸಾಮಾನ್ಯ ಮಳೆ
ವಾಹನ- ಆನೆ
ಪುಷ್ಯ
ದಿನಾಂಕ-19-7-2024
ಶುಕ್ರವಾರ
ಉತ್ತಮ ಮಳೆ
ವಾಹನ- ಕಪ್ಪೆ
ಆಶ್ಲೇಷ
ದಿನಾಂಕ-02-08-2024
ಶುಕ್ರವಾರ
ಸಾಮಾನ್ಯ ಮಳೆ
ವಾಹನ- ಟಗರು
ಮಘ
ದಿನಾಂಕ 16-08-2024
ಶುಕ್ರವಾರ
ಉತ್ತಮ ಮಳೆ
ವಾಹನ- ಕುದುರೆ
ಹುಬ್ಬ
ದಿನಾಂಕ-30-8-2024
ಶುಕ್ರವಾರ
ಸಾಮಾನ್ಯ ಮಳೆ
ವಾಹನ- ಇಲಿ
ಉತ್ತರ
ದಿನಾಂಕ-13-09-2024
ಶುಕ್ರವಾರ
ಸಾಮಾನ್ಯ ಮಳೆ
ವಾಹನ- ಆನೆ
ಹಸ್ತ
ದಿನಾಂಕ-26-09-2024
ಗುರುವಾರ
ಉತ್ತಮ ಮಳೆ
ಹಸ್ತ- ಟಗರು
ಚಿತ್ತ
ದಿನಾಂಕ-10-10-2024
ಗುರುವಾರ
ಉತ್ತಮ ಮಳೆ
ವಾಹನ- ಎಮ್ಮೆ
ಸ್ವಾತಿ
ದಿನಾಂಕ-23-10-2024
ಬುಧವಾರ
ಸಾಮಾನ್ಯ ಮಳೆ
ವಾಹನ- ಟಗರು
ವಿಶಾಖ
ದಿನಾಂಕ-6-11-2024
ಬುಧವಾರ
ಸಾಮಾನ್ಯ ಮಳೆ
ವಾಹನ- ಟಗರು
ಈ ದಿನಾಂಕಗಳಲ್ಲಿ ನಿಖರತೆ ಇದ್ದರೂ ಮಳೆ ಸುರಿಯುವ ಪ್ರಮಾಣದಲ್ಲಿ ಏರಿಳಿತವಾಗಬಹುದು. ಏಕೆಂದರೆ ಮಳೆ ಆರಂಭವಾಗುವ ಸಮಯದಲ್ಲಿ ಇರುವ ಹವಾಮಾನ ಪರಿಸ್ಥಿತಿ ಸಹ ಆ ಮಳೆ ನಕ್ಷತ್ರ ಎಷ್ಟು ಪ್ರಮಾಣದಲ್ಲಿ ಮಳೆ ತರಲಿದೆ ಎಂಬುದನ್ನು ನಿರ್ಧಾರ ಮಾಡುತ್ತದೆ. ಸದ್ಯ ಈ ವರ್ಷ ಮಳೆಗಾಗಿ ಈಗಲೇ ಪ್ರಾರ್ಥನೆ ಆರಂಭವಾಗಿದೆ. ಆದರೆ ಮಳೆ ನಕ್ಷತ್ರದ ಪ್ರಕಾರ ನೋಡುವುದಾದರೆ ಮೊದಲ ಮಳೆ ಆರಂಭವಾಗುವುದು ಏಪ್ರಿಲ್ 13ರಂದು ಆದರೆ ಈ ಮಳೆ ನಕ್ಷತ್ರ ಮಳೆ ತಂದಿರುವ ಉದಾಹರಣೆ ಬಹಳ ಕಡಿಮೆ. ಹೀಗಾಗಿ ಏಪ್ರಿಲ್ ಅಂತ್ಯದವರೆಗೆ ಮಳೆಯಾಗುವ ನಿರೀಕ್ಷೆ ಕಡಿಮೆ ಇದೆ.



Click it and Unblock the Notifications
