Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ದೇವರ ದೀಪಕ್ಕೆ ಯಾವೆಲ್ಲಾ ಬತ್ತಿ ಬಳಸಬಹುದು? ಒಂದೊಂದು ಬಗೆಯ ಬತ್ತಿಗೆ ಇದೆ ಅದರದ್ದೇ ಆದ ಪ್ರಾಮುಖ್ಯತೆ
ದೇವರಿಗೆ ದೀಪ ಹಚ್ಚಿ ದೇವರನ್ನು ಪ್ರಾರ್ಥಿಸುವುದು ಸನಾತನ ಧರ್ಮದ ಸಂಸ್ಕೃತಿ. ಮನೆಯಲ್ಲಿ ದೀಪ ಬೆಳಗುವುದರಿಂದ ಧನಾತ್ಮಕ ಶಕ್ತಿ ಹೆಚ್ಚುವುದು. ಮನಸ್ಸಿಗೆ ಕೂಡ ಒಂಥರಾ ನೆಮ್ಮದಿ ಸಿಗುವುದು. ನಮ್ಮ ಇಷ್ಟ ದೇವರನ್ನು ದೀಪ ಹಚ್ಚಿ ಬೇಡಿದರೆ ಆ ದೇವರು ನಮ್ಮನ್ನು ಸದಾ ಕಾಯುತ್ತಾನೆ ಎಂಬುವುದು ನಮ್ಮ ಬಲವಾದ ನಂಬಿಕೆ. ಬೆಳಕು ಸತ್ಯ, ಸುಜ್ಞಾನದ ಸಂಕೇತವೂ ಹೌದು.

ನಾವು ದೇವರಿಗೆ ದೀಪ ಹಚ್ಚುವಾಗ ಬತ್ತಿ ಹಾಕಿ ದೇವರಿಗೆ ದೀಪ ಹಚ್ಚುತ್ತೇವೆ, ದೇವರಿಗೆ ಅನೇಕ ಬಗೆಯ ಬತ್ತಿಗಳನ್ನು ಬಳಸಲಾಗುವುದು. ಆದರೆ ದೇವರಿಗೆ ಯಾವ ಬಗೆಯ ಬತ್ತಿ ಬಳಸುತ್ತೇವೆ ಎಂಬುವುದರ ಹಿಂದೆಯೂ ಒಂದು ಉದ್ದೇಶವಿದೆ. ಹೇಗೆ ತುಪ್ಪದ ದೀಪ, ಎಳ್ಳೆಣ್ಣೆ ದೀಪ, ಸಾಸಿವೆಯೆಣ್ಣೆ ಅದರದ್ದೇ ಪ್ರಾಮುಖ್ಯತೆ ಹೊಂದಿದೆಯೋ ಅದೇ ರೀತಿ ವಿವಿಧ ಬಗೆ ಬತ್ತಿ ಕೂಡ ಅದರದ್ದೇ ಆದ ಪ್ರಾಮುಖ್ಯತೆ ಹೊಂದಿದೆ. ದೇವರ ದೀಪ ಹಚ್ಚಲು ಯಾವೆಲ್ಲಾ ಬಗೆಯ ಬತ್ತಿ ಬಳಸಲಾಗುತ್ತಿದೆ, ಆ ಬತ್ತಿ ಬಳಸುವುದರಿಂದ ಹಿಂದಿರುವ ಪ್ರಯೋಜನವನ್ನು ಪಡೆಯಬಹುದು ಎಂದು ನೋಡೋಣ ಬನ್ನಿ:
ಹಳದಿ ಬಣ್ಣದ ನೂಲು: ದೇವರಿಗೆ ಹಳದಿ ಬಣ್ಣದ ನೂಲು ಅಥವಾ ಅಥವಾ ಬಿಳಿ ನೂಲಿಗೆ ಅರಿಶಿಣ ಹಚ್ಚಿ ಆ ನೂಲನ್ನು ಬತ್ತಿಯಾಗಿ ಬಳಸಲಾಗುವುದು. ಕೆಲವರು ಹಳದಿ ಬಣ್ಣದ ಕಾಟನ್ ಬಟ್ಟೆಯನ್ನು ಕೂಡ ಬತ್ತಿಯಾಗಿ ಬಳಸಲಾಗುವುದು. ಪಾರ್ವತಿ ದೇವಿಯನ್ನು ಪೂಜಿಸುವಾಗ ಹಳದಿ ನೂಲಿನ ಬತ್ತಿ ಬಳಸಲಾಗುವುದು.
ವೈವಾಹಿಕ ಜೀವನದಲ್ಲಿ ಏನಾದರೂ ಸಮಸ್ಯೆಯಿದ್ದರೆ ಹಳದಿ ಬಣ್ಣದ ಸೀರೆಯನ್ನು ಬತ್ತಿಯಂತೆ ಬಳಸಿದರೆ ಇಬ್ಬರ ನಡುವೆ ಇದ್ದ ಸಮಸ್ಯೆ ಬಗೆಹರಿದು ವೈವಾಹಿಕ ಜೀವನ ಚೆನ್ನಾಗಿರಲಿದೆ ಎಂಬ ನಂಬಿಕೆ ಇದೆ.
ಮದುವೆ, ಸಂತಾನ ಭಾಗ್ಯಕ್ಕಾಗಿ ಬೇಡುವಾಗ
ಕೆಲವರಿಗೆ ಮದುವೆ ಯೋಗ ಕೂಡಿ ಬಂದಿರುವುದಿಲ್ಲ, ಯಾವುದೋ ಒಂದು ಕಾರಣದಿಂದ ಮದುವೆ ತಪ್ಪಿ ಹೋಗುತ್ತಿರುತ್ತದೆ, ಇನ್ನು ಕೆಲವರು ವಿವಾಹವಾಗಿ ಕೆಲ ವರ್ಷಗಳು ಕಳೆದರೂ ಮಕ್ಕಳಾಗದಿದ್ದಾಗ ಸಂತಾನ ಅಪೇಕ್ಷಿಸಿ ದೇವರನ್ನು ಪ್ರಾರ್ಥಿಸುತ್ತಾರೆ. ಈ ಬಗೆಯ ಸಮಸ್ಯೆ ಬಗೆಹರಿಸಲು ದೇವರಿಗೆ ಕೆಂಪು ಬತ್ತಿಯ ದೀಪ ಹಚ್ಚಿದರೆ ಒಳ್ಳೆಯದು ಎಂದು ಹೇಳಲಾಗುವುದು.
ತಾವರೆಯ ದಂಟು
ತಾವರೆಯ ದಂಟನ್ನು ಕೂಡ ಬತ್ತಿಯಾಗಿ ಬಳಸಲಾಗುವುದು. ಜೀವನದಲ್ಲಿ ಪಾಪಕರ್ಮದಿಂದಾಗಿ ಹಲವಾರು ಸಮಸ್ಯೆ ಉಂಟಾಗುತ್ತಿದ್ದರೆ, ಹಿಂದಿನ ಜನ್ಮದ ಪಾಪ ಕಳೆಯಲು ಹಾಗೂ ಬದುಕಿನಲ್ಲಿ ಎದುರಾಗುತ್ತಿರುವ ಕಷ್ಟಗಳಿಂದ ಮುಕ್ತಿ ಪಡೆಯಲು ತಾವರೆಯ ದಂಟಿನ ಬತ್ತಿಯನ್ನು ದೀಪಕ್ಕೆ ಹಾಕಿ ದೀಪ ಹಚ್ಚಿ ದೇವರನ್ನು ಪ್ರಾರ್ಥಿಸಲಾಗುವುದು.
ಬಾಳೆಗಿಡದ ನಾರನ್ನು ಬತ್ತಿಯಾಗಿ ಬಳಸಲಾಗುವುದು
ಬಾಳೆಗಿಡದ ನಾರನ್ನು ಕೂಡ ಬತ್ತಿಯಾಗಿ ಬಳಸಲಾಗುವುದು. ಗೊತ್ತಿಲ್ಲದೆ ನಮ್ಮಿಂದ ಏನಾದರೂ ತಪ್ಪಾಗಿದ್ದರೆ ಆ ತಪ್ಪನ್ನು ಕ್ಷಮಿಸುವಂತೆ ಕೋರಲು ಬಾಳೆಗಿಡದ ನಾರಿನ ಬತ್ತಿ ಬಳಸಿ.
ರೋಸ್ ವಾಟರ್ ಬತ್ತಿ
ಬತ್ತಿಗೆ ಸ್ವಲ್ಪ ರೋಸ್‌ವಾಟರ್ ಹಾಕಿ ಆ ಬತ್ತಿಯನ್ನು ದೇವರಿಗೆ ಹಚ್ಚಬಹುದು, ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುವುದು, ಸಂಪತ್ತು ಐಶ್ವರ್ಯ ಹೆಚ್ಚಾಗುವುದು ಎಂಬ ನಂಬಿಕೆ ಇದೆ.



Click it and Unblock the Notifications
