Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಒಡೆದ ದೇವರ ಮೂರ್ತಿ ಮನೆಯಲ್ಲಿದ್ದರೆ ಈ ಅನಾಹುತಗಳು ಸಂಭವಿಸುವುದು!
ಹಿಂದೂಗಳು ಸಾಮಾನ್ಯವಾಗಿ ದೇವರನ್ನು ಮೂರ್ತಿ ರೂಪದಲ್ಲಿ ಪೂಜಿಸುತ್ತಾರೆ. ಹೆಚ್ಚಾಗಿ ದೇವಸ್ಥಾನಗಳಲ್ಲಿ ನಮಗೆ ದೇವರ ಮೂರ್ತಿಗಳು ಕಾಣ ಸಿಕ್ಕಿದ್ರೆ, ಮನೆಯಲ್ಲಿ ನಾವು ಫೋಟೋದಲ್ಲಿರೋ ದೇವರನ್ನು ಪೂಜಿಸ್ತೀವಿ. ಆದರೆ ಕೆಲವು ಮನೆಗಳಲ್ಲಿ ದೇವರ ಚಿಕ್ಕ ಮೂರ್ತಿಗಳನ್ನು ದೇವರ ಕೋಣೆಯಲ್ಲಿ ಇಟ್ಟು ಪೂಜೆ ಮಾಡಲಾಗುತ್ತದೆ.
ಕೆಲವೊಂದು ಸಲ ಕೈ ತಪ್ಪಿ ಅಥವಾ ನಮ್ಮ ಗಮನಕ್ಕೆ ಬಾರದೆ ಮೂರ್ತಿಗಳು ಒಡೆದು ಹೋಗುವ ಸಾಧ್ಯತೆಯಿದೆ. ಇಂತಹ ಸಂದರ್ಭದಲ್ಲಿ ಒಂದು ರೀತಿ ಆತಂಕವೂ ಇರುತ್ತೆ. ದೇವರ ಮೂರ್ತಿ ಒಡೆದು ಹೋಗಿದ್ದರಿಂದ ಮನೆಯಲ್ಲಿ ಅನಾಹುತ ಏನಾದ್ರು ಸಂಭವಿಸುತ್ತಾ ಅನ್ನೋ ಭಯ ಕಾಡುತ್ತೆ. ಅಷ್ಟಕ್ಕು ಮನೆಯಲ್ಲಿರುವ ದೇವರ ಮೂರ್ತಿ ಒಡೆದು ಹೋದ್ರೆ ಏನು ಮಾಡಬೇಕು? ಆ ಮೂರ್ತಿಯನ್ನು ಮನೆಯಿಂದ ಹೊರ ಹಾಕುವ ವಿಧಾನವೇನು? ಅದೇ ಜಾಗಕ್ಕೆ ಹೊಸ ಮೂರ್ತಿಯನ್ನು ಪ್ರತಿಷ್ಠಾಪನೆ ಮಾಡೋದು ಹೇಗೆ ಅನ್ನೋದನ್ನು ತಿಳಿಯೋಣ.

ಮನೆಯಲ್ಲಿ ದೇವರ ಮೂರ್ತಿ ಒಡೆದು ಹೋದ್ರೆ ಏನರ್ಥ?
ಮನೆಯಲ್ಲಿ ಹೇಗಂದರೆ ಹಾಗೆ ದೇವರ ಮೂರ್ತಿಯನ್ನು ತಂದು ಇಡೋದಕ್ಕೆ ಆಗೋದಿಲ್ಲ. ಈ ಬಗ್ಗೆ ಮೊದಲು ವಾಸ್ತು ತಜ್ಞರ ಬಳಿ ಮಾತನಾಡಿ, ಯಾವ ದಿಕ್ಕಿನಲ್ಲಿ ಮೂರ್ತಿಯನ್ನು ಇಡಬೇಕು ಅನ್ನೋ ಬಗ್ಗೆ ತಿಳಿದುಕೊಳ್ಳಿ. ದೇವರ ಮೂರ್ತಿಯನ್ನು ಸರಿಯಾದ ದಿಕ್ಕಿನಲ್ಲಿ ಇಟ್ಟರೆ ಮಾತ್ರ ಶುಭ ಅಂತ ಹೇಳಲಾಗುತ್ತದೆ.
ಒಡೆದ ಮೂರ್ತಿಯನ್ನು ಮನೆಯಲ್ಲಿ ಇಟ್ಟುಕೊಳ್ಳಲೇಬೇಡಿ!
ಒಂದು ವೇಳೆ ನಿಮ್ಮ ಮನೆಯಲ್ಲಿರುವ ದೇವರ ಮೂರ್ತಿ ಒಡೆದು ಹೋದರೆ ಆದಷ್ಟು ಬೇಗ ಅದನ್ನು ಬದಲಾಯಿಸುವುದು ಒಳ್ಳೆಯದು. ಏಕೆಂದರೆ ದೇವರ ಒಡೆದ ಮೂರ್ತಿಯು ಮನೆಯೊಳಗಡೆ ನಕಾರಾತ್ಮಕ ಶಕ್ತಿಯನ್ನು ಅಹ್ವಾನಿಸುತ್ತಂತೆ. ಇದರಿಂದ ಮನೆಯಲ್ಲಿ ನಾನಾ ರೀತಿಯ ತೊಂದೆಗಳು ಎದುರಾಗಲಿದೆ.
ಕೆಲವೊಂದು ಸಲ ನಾವು ಒಡೆದ ಮೂರ್ತಿಯನ್ನು ಹೊರಗಡೆ ಎಸೆಯುವ ಬದಲು ಅದನ್ನೇ ಸರಿಪಡಿಸಿ ಮನೆಯೊಳಗಡೆ ಇಟ್ಟು ಪೂಜೆ ಮಾಡುತ್ತಾರೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡೋದಕ್ಕೆ ಹೋಗಬೇಡಿ. ಯಾಕಂದ್ರೆ ಇದ್ರಿಂದ ವಾಸ್ತು ದೋಷ ಉಂಟಾಗುವ ಸಾಧ್ಯತೆಯಿದೆ. ಅಷ್ಟೇ ಅಲ್ಲ, ಮನೆಯ ಸದಸ್ಯರ ಒಳಗಡೆ ಚಿಕ್ಕ-ಪುಟ್ಟ ವಿಚಾರಗಳಿಗೆ ಜಗಳ, ಮನಸ್ಥಾಪ ಹೆಚ್ಚಾಗುತ್ತದೆ. ಮನೆಯಲ್ಲಿ ಮನಃ ಶಾಂತಿ ಅನ್ನೋದೇ ಇರೋದಿಲ್ಲ.
ದೇವರ ಮೂರ್ತಿ ತನ್ನಿಂದ ತಾನೇ ಒಡೆದು ಹೋದರೆ ಏನಾಗುತ್ತೆ?
ಕೆಲವೊಂದು ಸಲ ನಮ್ಮ ಮನೆಯಲ್ಲಿ ತನ್ನಿಂದ ತಾನೇ ಮೂರ್ತಿ ಒಡೆದು ಹೋಗುತ್ತದೆ. ಹೀಗಾದಾಗ ಹೆಚ್ಚು ಜನ ಹೆದರುತ್ತದೆ. ಏನು ಗಂಡಾಂತರ ಕಾದಿದ್ಯೋ ಅನ್ನೋ ಭಯ ಕಾಡುತ್ತದೆ. ಅಷ್ಟಕ್ಕು ಭಯ ಪಡೋ ಅಗತ್ಯವಿಲ್ಲ. ಒಂದು ವೇಳೆ ಮೂರ್ತಿಯೂ ತನ್ನಿಂದ ತಾನೇ ಒಡೆದು ಹೋದರೆ ಏನೋ ದೊಡ್ಡ ಅವಘಢ ಆಗೋದು ತಪ್ಪಿ ಹೋಯ್ತು ಅಂತ ಖುಷಿ ಪಡಿ.
ನಿಮ್ಮ ಬಾಳಿನಲ್ಲಿ ಬರುತ್ತಿದ್ದ ದುಷ್ಟ ಶಕ್ತಿಯನ್ನು ಮೂರ್ತಿಯು ತನ್ನತ್ತ ಆಕರ್ಷಿಸಿದೆ. ಹೀಗಾಗಿ ಅದು ಒಡೆದು ಹೋಗಿದೆ. ಆದ್ದರಿಂದ ಆದಷ್ಟು ಬೇಗ ಆ ಒಡೆದ ಮೂರ್ತಿಯ ಜಾಗದಲ್ಲಿ ಇನ್ನೊಂದು ಮೂರ್ತಿಯನ್ನು ತಂದು ಪ್ರತಿಷ್ಠಾಪಿಸಿದರೆ ಒಳ್ಳೆಯದು.
ಒಡೆದು ಹೋದ ಮೂರ್ತಿಯನ್ನು ಮನೆಯಿಂದ ಹೊರ ಹಾಕೋದ್ಹೇಗೆ?
ಮನೆಯಲ್ಲಿ ಮೂರ್ತಿ ಒಡೆದು ಹೋದರೆ ಹೆಚ್ಚಿನವರಿಗೆ ಏನು ಮಾಡೋದು ಅಂತ ಗೊತ್ತಾಗೋದಿಲ್ಲ. ಆಗ ಅವರು ಮಾಡುವ ಮೊದಲ ಕೆಲಸವೇ ಅದನ್ನು ಹೊರಗಡೆ ಎಸೆಯುತ್ತಾರೆ. ಹಳ್ಳಿಯ ಕಡೆಗಳಲ್ಲಿ ಗುಡ್ಡದಲ್ಲಿ ಇಟ್ಟು ಬರುತ್ತಾರೆ. ಇನ್ನೂ ಕೆಲವು ಕಡೆ ಮೂರ್ತಿಯನ್ನು ನೀರಿನಲ್ಲಿ ಮುಳುಗಿಸಲಾಗುತ್ತದೆ. ಯಾವುದೇ ಕಾರಣಕ್ಕೂ ಈ ರೀತಿ ಮಾಡೋದಕ್ಕೆ ಹೋಗಬೇಡಿ.
ಇವುಗಳು ಸರಿಯಾದ ವಿಧಾನ ಅಲ್ಲ. ದೇವರ ಮೂರ್ತಿ ಒಡೆದು ಹೋದ್ರೆ ನಿಮ್ಮ ಹತ್ತಿರ ಇರೋ ದೇವಾಲಯಗಳಿಗೆ ನೀಡಿ. ಅಲ್ಲಿ ಆಚಾರ್ಯರು ಆ ಮೂರ್ತಿಗಳನ್ನು ಸರಿಯಾದ ವಿಧಾನದಲ್ಲಿ ವಿಸರ್ಜನೆ ಮಾಡುತ್ತಾರೆ. ಸಾಧ್ಯವಾದರೆ ಆಚಾರ್ಯರನ್ನು ಮನೆಗೆ ಕರೆಸಿ ಮೂರ್ತಿಯನ್ನು ವಿಸರ್ಜನೆ ಮಾಡಬಹುದು. ಇನ್ನೂ ನಿಮ್ಮ ಮನೆ ಹತ್ತಿರ ಇರೋ ಕೊಳ, ಕೆರೆ ಅಥವಾ ನದಿಯಲ್ಲಿ ಮೂರ್ತಿಯನ್ನು ವಿಸರ್ಜನೆ ಮಾಡಬಹುದು. ಆದರೆ ಮೊದಲು ಕೆಲವೊಂದು ಪೂಜಾ ವಿಧಾನಗಳನ್ನು ಅನುಸರಿಸಿ ನಂತರ ವಿಸರ್ಜನೆ ಮಾಡಬೇಕು.
ಒಂದು ವೇಳೆ ಹಾಳಾದ ವಿಗ್ರಹ ಯಾವುದಾದರೂ ಲೋಹ ಅಥವಾ ರಾಸಾಯನಿಕಗಳನ್ನು ಹಾಕಿ ತಯಾರಿಸಲ್ಪಟ್ಟಿದ್ದರೆ ಅದನ್ನು ಯಾವುದೇ ಕಾರಣಕ್ಕೂ ನೀರಿನಲ್ಲಿ ವಿಸರ್ಜನೆ ಮಾಡೋದಕ್ಕೆ ಹೋಗಬೇಡಿ. ಅಂತಹ ವಿಗ್ರಹಗಳನ್ನು ನಿಮ್ಮ ಮನೆಯ ಹತ್ತಿರ ಯಾವುದಾದರೂ ಆಲದ ಮರ ಇದ್ದರೆ ಅದರ ಕೆಳಗೆ ಇಟ್ಟು ಬನ್ನಿ.
ಹೊಸ ಮೂರ್ತಿಯನ್ನು ಪ್ರತಿಷ್ಠಾಪಿಸೋದು ಹೇಗೆ?
ಹಳೆಯ ಮೂರ್ತಿ ಹಾಳಾದರೆ ನಮಗಿರೋ ಒಂದೇ ಒಂದು ಆಯ್ಕೆ ಎಂದರೆ ಹಳೆಯ ವಿಗ್ರಹದ ಬದಲಿಗೆ ಆ ಜಾಗದಲ್ಲಿ ಹೊಸ ವಿಗ್ರಹವನ್ನು ಪ್ರತಿಷ್ಠಾಪನೆ ಮಾಡುವುದು. ಆದರೆ ಹೇಗಂದರೆ ಹಾಗೆ, ನಮಗೆ ಇಷ್ಟ ಬಂದ ಹಾಗೆ ಹೊಸ ವಿಗ್ರಹದ ಪ್ರತಿಷ್ಠಾಪನೆ ಮಾಡಿದರೆ ಆಗೋದಿಲ್ಲ. ಮೊದಲು ಒಂದು ಚಿಕ್ಕ ಪೂಜೆ ಮಾಡಿಸಿ ನಂತರ ವಿಗ್ರ ಪ್ರತಿಷ್ಠಾಪಿಸಿದರೆ ಒಳ್ಳೆಯದು. ಇದರಿಂದ ಮನೆಯಲ್ಲಿ ಸುಖ, ಸಮೃದ್ಧಿ ಹೆಚ್ಚಾಗುತ್ತೆ ಅನ್ನೋ ನಂಬಿಕೆಯಿದೆ.
ಹೆಚ್ಚಿನ ಸಂದರ್ಭದಲ್ಲಿ ಒಡೆದು ಹೋದ ವಿಗ್ರಹವನ್ನು ಮನೆಯಲ್ಲಿ ಇಟ್ಟುಕೊಳ್ಳುತ್ತೇವೆ. ಇದರಿಂದ ಯಾವ ರೀತಿ ಸಮಸ್ಯೆ ಆಗುತ್ತೆ ಅನ್ನೋದು ಗೊತ್ತಾಯ್ತಲ್ಲ. ಇನ್ನು ಮುಂದೆ ಆ ತಪ್ಪು ಮಾಡೋದಕ್ಕೆ ಹೋಗಬೇಡಿ.



Click it and Unblock the Notifications
