Latest Updates
-
ಐಟಿಆರ್ ಸಲ್ಲಿಕೆ ಗಡುವು ಹತ್ತಿರ: ದಂಪತಿಗಳು ಒಟ್ಟಾಗಿ ಕುಳಿತು ಈ ಕೆಲಸ ಮಾಡಿದರೆ ಟೆನ್ಷನ್ ಫ್ರೀ! -
ಬೆಂಗಳೂರಿಗರೇ ಗಮನಿಸಿ: ಇಂದು 6 ಗಂಟೆ ಪವರ್ ಕಟ್, ಈ ಮುನ್ನೆಚ್ಚರಿಕೆ ಮರೆಯದಿರಿ! -
ಶ್ರಾವಣ ಉಪವಾಸದಲ್ಲಿ ದಿನವಿಡೀ ಎನರ್ಜಿಯಿಂದ ಇರಬೇಕೆ? ಈ ಹೈ-ಪ್ರೋಟೀನ್ ಸಾತ್ವಿಕ ಆಹಾರ ಪದ್ಧತಿ ಫಾಲೋ ಮಾಡಿ! -
ಗುರು ಪೂರ್ಣಿಮೆ 2026: ಸರಳ ಪೂಜಾ ವಿಧಿ ಮತ್ತು ಕಡಿಮೆ ಬಜೆಟ್ನಲ್ಲಿ ಗುರುಗಳಿಗೆ ನೀಡಬಹುದಾದ ಬೆಸ್ಟ್ ಗಿಫ್ಟ್ ಐಡಿಯಾಗಳು! -
10 ನಿಮಿಷದ 'ಟೈಗರ್ ಫ್ಲೋ': ಬೆನ್ನುನೋವಿಗೆ ಮುಕ್ತಿ ನೀಡುವ ಅದ್ಭುತ ವ್ಯಾಯಾಮ ಇಲ್ಲಿದೆ! -
ಪ್ರತಿಭಟನೆಯಲ್ಲಿ ಪ್ರೀತಿ: 'ಪ್ರೊಟೆಸ್ಟ್ ನೇ ಬನಾ ದಿ ಜೋಡಿ' ಟ್ರೆಂಡ್ ಹಿಂದೆ ಅಡಗಿದೆ ದೊಡ್ಡ ಅಪಾಯ! -
ಮಳೆಗಾಲದಲ್ಲಿ ಮನೆಯಲ್ಲಿ ಬೂಷ್ಟು ಹರಡುತ್ತಿದೆಯೇ? ಈ 20 ನಿಮಿಷದ ಟಿಪ್ಸ್ ಪಾಲಿಸಿ, ಮನೆ ಫ್ರೆಶ್ ಆಗಿಡಿ! -
ಕೇವಲ 200 ರೂಪಾಯಿಯಲ್ಲಿ ಪರಿಸರ ಸ್ನೇಹಿ ಊಟ: ವಿಶ್ವ ಪ್ರಕೃತಿ ಸಂರಕ್ಷಣಾ ದಿನಕ್ಕೆ ನಿಮ್ಮ ಅಡುಗೆಮನೆಯೇ ಮೊದಲ ಹೆಜ್ಜೆ! -
CWG 2026: 6ನೇ ದಿನ ಭಾರತದ ಪದಕದ ಬೇಟೆ; ಮನೆಯಲ್ಲೇ ಕಮ್ಮಿ ಬಜೆಟ್ನಲ್ಲಿ ಅದ್ಭುತ ವಾಚ್ ಪಾರ್ಟಿ ಪ್ಲಾನ್! -
ವಿಶ್ವ ಹೆಪಟೈಟಿಸ್ ದಿನ: ಲಿವರ್ ಆರೋಗ್ಯ ಹೆಚ್ಚಿಸಲು ಈ 10 ನಿಮಿಷದ ಬೆಳಗಿನ ದಿನಚರಿ ಪಾಲಿಸಿ!
ಈ ಕಾರಣಕ್ಕೆ ಭಾರತದಲ್ಲಿ ಮುಂದೆ ವಾಟ್ಸಾಪ್ ಬಳಕೆ ಇಲ್ಲವಾಗಬಹುದು ಎಂದು ಎಚ್ಚರಿಕೆ ನೀಡಿದ ಮೆಟಾ!
ವಾಟ್ಸಾಪ್, ನಮ್ಮ ಮೊಬೈಲ್‌ನಲ್ಲಿ ಬಳಸುವ ಎಲ್ಲಾ ಆ್ಯಪ್‌ಗಳಿಗಿಂತ ಬಹು ಮುಖ್ಯವಾದ ಆ್ಯಪ್. ಈ ವಾಟ್ಸಾಪ್ ಬಂದ ಮೇಲೆ ಫೋನ್ ಮೂಲಕ ಸಂವಹನ ಎಂಬುವುದು ಮತ್ತಷ್ಟು ಸುಲಭವಾಗಿದೆ. ಟೈಪಿಂಗ್ ಬರದೇ ಇರುವವರು ಕೂಡ ವಾಯ್ಸ್ ನೋಟ್ ಕಳುಹಿಸಬಹುದು. ವಿದೇಶದಲ್ಲಿರುವ ಮಕ್ಕಳ ಜೊತೆ, ನೆಂಟರಿಷ್ಟರ ಜೊತೆ ಗಂಟೆ-ಗಂಟೆಗಟ್ಟಲೆ ವೀಡಿಯೋ ಕಾಲ್ ಮಾಡಬಹುದು. ಮೊಬೈಲ್‌ನಲ್ಲಿ ಡಾಟಾ ಇದ್ದರೆ ಸಾಕು...

ಆಫೀಸ್ ಕೆಲಸದ ಸೂಚನೆಗಳು ವಾಟ್ಸಾಪ್ ಗ್ರೂಪ್ ಮೂಲಕ ಬರುತ್ತೆ, ಫ್ಲ್ಯಾಟ್‌ಗಳಲ್ಲಿ ವಾಸಿಸುತ್ತಿದ್ದರೆ ಆ ಫ್ಲ್ಯಾಟ್‌ನಲ್ಲಿ ನಡೆಯುತ್ತಿರುವ ಚಟುವಟಿಕೆಗಳು, ಕೆಲವಂದು ಸಲಹೆಗಳು, ಕೆಲವೊಂದು ಮಾಹಿತಿಗಳು ವಾಟ್ಸಾಪ್‌ನಲ್ಲಿ ಬರುತ್ತದೆ, ಕೆಲವರು ವಾಟ್ಸಾಪ್ ಮೂಲಕ ತಾವು ತಯಾರಿಸಿದ ವಸ್ತುಗಳನ್ನು ವಾಟ್ಸಾಪ್ ಮೂಲಕ ಕಳುಹಿಸಿ ಬ್ಯುಸ್‌ನೆಸ್ ಮಾಡುತ್ತಿದ್ದಾರೆ...
ದೊಡ್ಡ ದೊಡ್ಡ ಬಟ್ಟೆ ಮಳಿಗೆ, ಎಲೆಕ್ಟ್ರಿಕಲ್ ಮಳಿಗೆ , ಆಭರಣ ಅಂಗಡಿಗಳು ಇನ್ನೂ ಅನೇಕ ಶಾಪ್‌ಗಳು ತಮ್ಮ ಆಫರ್‌ಗಳನ್ನು ವಾಟ್ಸಾಪ್ ಮೂಲಕ ಕಳಿಸುತ್ತಿದೆ.. ಹೀಗೆ ಪರ್ಸನ್‌ನಲ್ ಚಾಟ್‌ನಿಂದ ಹಿಡಿದು ಬ್ಯುಸ್‌ನೆಸ್‌ವರೆಗೆ ನಾವೆಲ್ಲಾ ವಾಟ್ಸಾಪ್ ಡಿಪೆಂಟ್ ಆಗಿದ್ದೇವೆ. ಫೇಸ್‌ಬುಕ್ ಕೂಡ ನಾವು ಈ ರೀತಿ ಬಳಸಲ್ಲ, ಆದರೆ ಬೆಳಗ್ಗೆ ಎದ್ದಾಗ ವಾಟ್ಸಾಪ್ ನೋಡುವುದರಿಂದ ಹಿಡಿದು ಮಲಗುವವರೆಗೆ ನಾವು ವಾಟ್ಸಾಪ್ ನೋಡುತ್ತೇವೆ.
ಆದರೆ ಈ ವಾಟ್ಸಾಪ್ ಭಾರತದಲ್ಲಿ ನಿಲ್ಲಿಸುತ್ತೇವೆ ಎಂದು ವಾಟ್ಸಾಪ್ ಮೆಟಾ ಎಚ್ಚರಿಕೆ ನೀಡಿದೆ.. ಇದೀಗ ಈ ಎಚ್ಚರಿಕೆ ಭಾರತದ ಬಳಕೆದಾರರಲ್ಲಿ ದೊಡ್ಡ ಸಂಚಲನ ಮೂಡಿಸಿದೆ.
ವಾಟ್ಸಾಪ್ ಹೇಳುತ್ತಿದೆ ಅದರ ನಿಯಮ ಪಾಲಿಸಲು ಭಾರತದಲ್ಲಿ ಕಷ್ಟವಾಗುತ್ತಿದೆ ಎಂದು ...
ವಾಟ್ಯಾಪ್ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಚಾಟ್ ಸೌಲಭ್ಯ ಇದೆ, ಈ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಚಾಟ್ ಅಂದರೆ ನಾವು ಯಾರಿಗಾದರೂ ಏನಾದರೂ ಸಂದೇಶ ಅಥವಾ ವೀಡಿಯೋ ಕಳುಹಿಸಿದರೆ ಅದನ್ನು ಆ ವ್ಯಕ್ತಿ ನೋಡಬಹುದು, ನಂತರ ನಾವು ಕಳುಹಿಸಿದ ಚಾಟ್ ರಿಕವರ್ ಮಾಡಿ ಬೇರೆಯವರಿಗೆ ನೋಡಲು ಸಾಧ್ಯವಾಗುವುದಿಲ್ಲ, ನಮ್ಮ ವಾಟ್ಸಾಪ್‌ನಲ್ಲಿ ನಾವು ಹಾಕಿರುವ ಮೆಸೇಜ್ ನೋಡುವುದಕ್ಕೆ ಸಾಧ್ಯವಾಗಲ್ಲ. ಆದರೆ ಭಾರತ ಸರ್ಕಾರವು ನಮಗೆ ಅಗ್ಯತ ಬಿದ್ದರೆ ಡಿಕೋಡ್ ಮಾಡಲು ಅವಕಾಶ ನೀಡಬೇಕು ಎಂದು ಅನುಮತಿ ಕೇಳುತ್ತಿದೆ.
ದೇಶದ ಸುರಕ್ಷತೆ ದೃಷ್ಟಿಯಿಂದ ಡಿಕೋಡ್ ಮಾಡಲು ಬಿಡಬೇಕು ಎನ್ನುತ್ತಿದೆ ಭಾರತ
ನಮ್ಮ ದೇಶದ ಭದ್ರತೆ ದೃಷ್ಟಿಯಿಂದ ನಮಗೆ ವಾಟ್ಸಾಪ್ ಸಂದೇಶಗಳನ್ನು ಡಿಕೋಡ್ ಮಾಡುವ ಅವಕಾಶ ಬೇಕು ಎಂಬುವುದಾಗಿ ಕೇಳುತ್ತಿದೆ, ಆದರೆ ಇದು ಮೆಟಾ ರೂಲ್ಸ್‌ಗೆ ವಿರುದ್ಧವಾಗಿದೆ. ಮೆಟಾ ರೂಲ್ಸ್ ಏನು ಹೇಳುತ್ತದೆ ಎಂದರೆ ವಾಟ್ಸಾಪ್ ಬಳಕೆದಾರ ಬಳಸುವ ಸಂದೇಶಗಳು ಸುರಕ್ಷಿತವಾಗಿರುತ್ತದೆ, ಇದನ್ನು ಡಿಕೋಡ್ ಮಾಡಲು, ಹೀಗಾಗಿ ಬಳಕೆದಾರರ ಖಾಸಗಿತನಕ್ಕೆ ಧಕ್ಕೆಯಾಗಲ್ಲ. ಆದರೆ ಭಾರತದ ಸುರಕ್ಷತೆ ದೃಷ್ಟಿಯಿಂದ ಈ ಪಾಲಿಸಿ ಇಲ್ಲಿಗೆ ಸೂಟ್ ಆಗಲ್ಲ. ಇದೀಗಾ ಮೆಟಾ ರೂಲ್ಸ್ ಹಾಗೂ ಭಾರತದ ಬೇಡಿಕೆ ತದ್ವಿರುದ್ಧವಾಗಿದೆ, ಹೀಗಾಗಿ ಭಾರತದಲ್ಲಿ ವಾಟ್ಸಾಪ್ ನಿಲ್ಲಿಸಬೇಕಾಗುವುದು ಎಂದು ಎಚ್ಚರಿಕೆ ನೀಡಿದೆ.
ವ್ಯಾಟ್ಯಾಪ್ ಪರ ವಕೀಲ ತೇಜಸ್ ಕಾರಿಯಾ ದೆಹಲಿ ಹೈಕೋರ್ಟ್‌ನಲ್ಲಿ ವಾದ ಮಂಡಿಸಿದರು. ಭಾರತದಲ್ಲಿ ವ್ಯಾಟ್ಸ್ಆ್ಯಪ್ 400 ಮಿಲಿಯನ್ ವಾಟ್ಸಾಪ್ ಬಳಕೆದಾರರಿದ್ದಾರೆ. ವಾಟ್ಸಾಪ್ ತನ್ನ ಬಳಕೆದಾರರಿಗೆ ಸುರಕ್ಷತೆ ನೀಡುತ್ತಿದೆ. ಆದರೆ ಭಾರತ ಐಟಿ ನಿಯಮದ ಅಡಿ ಎಂಡ್ ಟು ಎಂಡ್ ಎನ್‌ಕ್ರಿಪ್ಟೆಡ್ ಚಾಟ್ ಬ್ರೇಕ್ ಮಾಡಲು ಕೇಳುತ್ತಿದೆ, ಹೀಗೆ ಮಾಡಿದರೆ ಬಳಕೆದಾರರಿಗೆ ಸುರಕ್ಷತೆ ನೀಡಲು ಸಾಧ್ಯವಿಲ್ಲ, ಇದು ನಮ್ಮ ಪಾಲಿಸಿಗೆ ವಿರುದ್ಧ, ನಾವು ನಮ್ಮ ಬಳಕೆದಾರರಿಗೆ ಸುರಕ್ಷತೆ ಬಳಸುತ್ತೇವೆ, ಒಂದು ವೇಳೆ ಭಾರತ ಐಟಿ ನಿಯಮದ ಮೂಲಕ ಒತ್ತಾಯಿಸಿದರೆ ನಾವು ಭಾರತ ತೊರಿಯಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದೆ.
ದೇಶ ಮೊದಲ, ವ್ಯಾಟ್ಯಾಪ್ ಮೊದಲ ಎಂದು ಕೇಳಿದರೆ ದೇಶ ಮೊದಲು
ದೇಶದ ಸುರಕ್ಷತೆ ಬೇರೆ ಎಲ್ಲದಕ್ಕಿಂತಲೂ ಮುಖ್ಯವಾಗಿದೆ. ಒಂದು ವೇಳೆ ವಾಟ್ಸಾಪ್ ಬಳಕೆ ಭಾರತದಲ್ಲಿ ಇಲ್ಲವಾದರೆ ಬೇರೆ ಹೊಸ ಆ್ಯಪ್ ಬರಬಹುದು, ಆದರೆ ಸುರಕ್ಷತೆ ತುಂಬಾನೇ ಮುಖ್ಯ. ವಾಟ್ಸಾಪ್ ಹಾಗೂ ಭಾರತ ತಾರ್ಕಿಕ ನಿಲುವಿಗೆ ಬಂದರೆ ವಾಟ್ಸಾಪ್ ತನ್ನ ಪ್ರಾಬಲ್ಯ ಭಾರತದಲ್ಲಿ ಮುಂದುವರಿಸಬಹುದು...



Click it and Unblock the Notifications