ಸೋಮವಾರ ಶಿವನ ಆರಾಧನೆಯನ್ನು ಮಾಡೋದ್ಯಾಕೆ? ಇದ್ರ ಹಿಂದಿರೋ ಪೌರಾಣಿಕ ಕಥೆಯೇನು?

ಸೋಮವಾರ ಶಿವನಿಗೆ ಪೂಜೆಯನ್ನು ಸಲ್ಲಿಸುವ ಪವಿತ್ರ ದಿನ. ಲಕ್ಷಾಂತರ ಭಕ್ತರು ಈ ದಿನ ಶಿವನನ್ನು ಕುರಿತು ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ. ಹಾಗೂ ತಮ್ಮೆಲ್ಲಾ ಇಷ್ಟಾರ್ಥಗಳನ್ನು ಸಿದ್ದಿಸಿಕೊಳ್ಳುತ್ತಾರೆ. ಶಿವ ಮತ್ತು ಸೋಮವಾರದ ನಡುವಿನ ಅವರ ಪವಿತ್ರ ಸಂಬಂಧವು ಐತಿಹಾಸಿಕ ಮತ್ತು ಪೌರಾಣಿಕ ಮಹತ್ವವನ್ನು ಪಡೆದುಕೊಂಡಿದೆ.

What Is The Sacred Connection Between Monday And Lord Shiva in Kannada.

ಹಿಂದೂ ಪುರಾಣಗಳ ಪ್ರಕಾರ ವಾರದ ಪ್ರತಿ ದಿನವನ್ನು ನಿರ್ದಿಷ್ಟ ದೇವತೆಗೆ ಸಮರ್ಪಿಸಲಾಗಿದೆ. ಅದೇ ರೀತಿ ಸೋಮವಾರವನ್ನು ಶಿವನಿಗೆ ಸಲ್ಲಿಸಲಾಗುತ್ತದೆ. ಈ ದಿನವು ಅಪಾರವಾದ ಆಧ್ಯಾತ್ಮಿಕ ಮೌಲ್ಯವನ್ನು ಹೊಂದಿದೆ. ಅಷ್ಟಕ್ಕು ಸೋಮವಾರ ಶಿವನ ಪೂಜೆಗೆ ಮಹತ್ವ ನೀಡಲಾಗಿದೆ ಯಾಕೆ? ಇದರ ಹಿಂದಿರೋ ಪೌರಾಣಿಕ ಮಹತ್ವವೇನು ಅನ್ನೋದನ್ನು ತಿಳಿಯೋಣ.

ಪುರಾಣದ ಪ್ರಕಾರ ಸೋಮವಾರದ ಮಹತ್ವವೇನು?

ಸೋಮವಾರ ಎನ್ನುವುದು ಸಂಸ್ಕೃತ ಪದ. ಚಂದ್ರನ (ಸೋಮ) ಹೆಸರನ್ನು ಇಡಲಾಗಿದೆ. ಮತ್ತು ಹಿಂದೂ ಕ್ಯಾಲೆಂಡರ್‌ನಲ್ಲಿ ಇದಕ್ಕೆ ವಿಶಿಷ್ಟ ಸ್ಥಾನವನ್ನು ನೀಡಲಾಗಿದೆ. ಹಿಂದೂ ಧರ್ಮಗ್ರಂಥಗಳ ಪ್ರಕಾರ ಚಂದ್ರನನ್ನು ಮನಸ್ಸು ಮತ್ತು ಭಾವನೆಗಳ ಕಾರಕ ಎಂದು ಪರಿಗಣಿಸಲಾಗುತ್ತದೆ. ಸೋಮವಾರದಂದು ಭಗವಾನ್ ಶಿವನನ್ನು ಪೂಜಿಸುವುದು ಆಂತರಿಕ ಶಾಂತಿ, ಭಾವನಾತ್ಮಕ ಸ್ಥಿರತೆ ಮತ್ತು ಮಾನಸಿಕ ಸ್ಪಷ್ಟತೆಯನ್ನು ತರುತ್ತದೆ ಎಂದು ನಂಬಲಾಗಿದೆ.

ಚಂದ್ರನನ್ನು ಶಿವನು ಶಾಪದಿಂದ ಮುಕ್ತಿ ಗೊಳಿಸಿದ್ಹೇಗೆ?

ಹಿಂದೂ ಪುರಾಣಗಳಲ್ಲಿ ಚಂದ್ರನೊಂದಿಗಿನ ಶಿವನ ಸಂಬಂಧವನ್ನು ವಿವರಿಸುವ ಆಕರ್ಷಕ ದಂತಕಥೆ ಇದೆ. ದಂತಕಥೆಯ ಪ್ರಕಾರ ಚಂದ್ರನು ಒಂದು ಕಾಲದಲ್ಲಿ ವಿಕಿರಣ ಮತ್ತು ಶಕ್ತಿಯುತ ಆಕಾಶಕಾಯವಾಗಿತ್ತು. ಆದರೆ ದೂರ್ವಾಸ ಋಷಿಯ ಶಾಪದಿಂದಾಗಿ ಅದು ಕ್ಷೀಣಿಸಲು ಪ್ರಾರಂಭಿಸಿತು. ಮತ್ತು ತನ್ನ ತೇಜಸ್ಸನ್ನು ಕಳೆದುಕೊಳ್ಳಲು ಪ್ರಾರಂಭಿಸಿತು.

ಈ ಶಾಪದಿಂದ ಪರಿಹಾರವನ್ನು ಕೋರಿ ಚಂದ್ರನು ಪವಿತ್ರ ಗಂಗಾ ನದಿಯ ದಡದಲ್ಲಿ ಶಿವನನ್ನು ಕುರಿತು ಪ್ರಾರ್ಥಿಸಲು ಶುರು ಮಾಡುತ್ತಾನೆ. ಚಂದ್ರನ ಭಕ್ತಿಯನ್ನು ಮೆಚ್ಚಿದ ಶಿವನು ಅವನಿಗೆ ವರವನ್ನು ನೀಡುತ್ತಾನೆ. ಪರಿಣಾಮವಾಗಿ ಚಂದ್ರನು ಪ್ರತಿ ಹದಿನೈದು ದಿನಗಳಿಗೊಮ್ಮೆ ಮೇಣದಂತೆ ಕ್ಷೀಣಿಸಿ ಮತ್ತೆ ಪ್ರಕಾಶಿಸುತ್ತಾನೆ. ಇದು ಚಂದ್ರನ ಜೀವನ ಮತ್ತು ಸಾವಿನ ಚಕ್ರವನ್ನು ಸಂಕೇತಿಸುತ್ತದೆ. ಭಗವಾನ್ ಶಿವನೊಂದಿಗಿನ ಈ ಒಡನಾಟವು ಚಂದ್ರನ ಆಧ್ಯಾತ್ಮಿಕ ಮಹತ್ವವನ್ನು ಹೆಚ್ಚಿಸಿತು ಮತ್ತು ಸೋಮವಾರವು ಶಿವ ಮತ್ತು ಚಂದ್ರನ ಗೌರವದ ದಿನವಾಗಿ ರೂಪುಗೊಂಡಿತು.

ಸೋಮವಾರದ ಶಿವನ ಆಚರಣೆ ಹೇಗಿರಬೇಕು?

ಸೋಮವಾರ ಶಿವನನ್ನು ಭಕ್ತಿಯಿಂದ ಆರಾಧಿಸಿ ಅವನ ಆಶೀರ್ವಾದವನ್ನು ಪಡೆಯೋದಕ್ಕೆ ಒಳ್ಳೆಯ ದಿನ. ಈ ದಿನ ಭಕ್ತಾದಿಗಳು ವಿಶೇಷ ಪೂಜೆ ಹಾಗೂ ಪುನಸ್ಕಾರಗಳನ್ನು ಕೈಗೊಳ್ಳುತ್ತಾರೆ. ಇದರಿಂದ ನೀವು ಅಂದುಕೊಂಡಿದ್ದೆಲ್ಲಾ ನೆರವೇರುತ್ತೆ ಅಂತಾನೂ ನಂಬಲಾಗಿದೆ.

ಉಪವಾಸ

ಶಿವನ ಭಕ್ತಾಧಿಗಳು ಸೋಮವಾರ ಶಿವನನ್ನು ಕುರಿತು ಉಪವಾಸವನ್ನು ಕೈಗೊಳ್ಳುತ್ತಾರೆ. ಆ ದಿನ ಸರಳ ಆಹಾರ ಹಾಗೂ ನೀರನ್ನು ಕುಡಿದು ಶಿವನ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ. ಉಪವಾಸ ಮಾಡೋದ್ರಿಂದ ನಿಮ್ಮ ಮೈ ಹಾಗೂ ಮನಸ್ಸು ಶುದ್ಧವಾಗುತ್ತದೆ. ಹಾಗೂ ಶಿವನ ಧ್ಯಾನ್ಯದಲ್ಲಿ ತಲ್ಲೀನರಾಗಲು ಅವಕಾಶ ಕಲ್ಪಿಸಿ ಕೊಡುತ್ತದೆ.

ಶಿವನ ದೇವಾಲಯಗಳಿಗೆ ಭೇಟಿ ನೀಡಿ

ಸೋಮವಾರ ಶಿವ ದೇವಾಲಯಗಳಿಗೆ ಪ್ರಾರ್ಥನೆ ಸಲ್ಲಿಸಲು ಸಾಲು ಸಾಲು ಭಕ್ತರು ಹರಿದು ಬರುತ್ತಾರೆ. ಅನೇಕ ಭಕ್ತರು "ಅಭಿಷೇಕ" ವನ್ನು ಶಿವನಿಗೆ ಅರ್ಪಣೆ ಮಾಡುತ್ತಾರೆ. ಇದ್ರ ಜೊತೆಗೆ ಶಿವಲಿಂಗದ ಮೇಲೆ ಹಾಲು, ಜೇನುತುಪ್ಪ ಮತ್ತು ನೀರು ಮುಂತಾದ ಪವಿತ್ರ ವಸ್ತುಗಳನ್ನು ಕೂಡ ಅರ್ಪಣೆ ಮಾಡುತ್ತಾರೆ.

ಶಿವನ ಮಂತ್ರವನ್ನು ಪಠಣೆ ಮಾಡಲಾಗುತ್ತದೆ!

ಸೋಮವಾರದಂದು ಶಿವನಿಗೆ ಸಮರ್ಪಿತವಾದ ಶಕ್ತಿಯುತ ಮಂತ್ರಗಳನ್ನು ಪಠಿಸುವುದರಿಂದ ಒಳ್ಳೆಯದಾಗಲಿದೆ. "ಓಂ ನಮಃ ಶಿವಾಯ" ಮಂತ್ರವನ್ನು ಪೂಜೆ ಸಲ್ಲಿಸುವ ಸಂದರ್ಭದಲ್ಲಿ ಹೇಳಲಾಗುತ್ತದೆ. ಈ ರೀತಿ ಮಂತ್ರಗಳನ್ನು ಪಠಿಸೋದ್ರಿಂದ ನಮ್ಮ ಆಧ್ಯಾತ್ಮಿಕ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೇ, ಮಹಾದೇವನ ಆಶೀರ್ವಾದ ನಮ್ಮ ಮೇಲೆ ಸದಾ ಇರುತ್ತದೆ.

ಶಿವನ ಕುರಿತ ಗ್ರಂಥಗಳನ್ನು ಓದಿ

ಭಕ್ತರು ಸಾಮಾನ್ಯವಾಗಿ ಸೋಮವಾರದಂದು ಶಿವನಿಗೆ ಸಮರ್ಪಿತವಾದ ಪವಿತ್ರ ಗ್ರಂಥಗಳು ಮತ್ತು ಸ್ತೋತ್ರಗಳನ್ನು ಓದಬೇಕು. "ಶಿವ ಪುರಾಣ" ಮತ್ತು "ಶಿವ ಮಹಾಪುರಾಣ" ಶಿವನ ಕಥೆಗಳು ಮುಂತಾದವುಗಳನ್ನು ಓದೋದ್ರಿಂದ ಶಿವನ ಆಶೀರ್ವಾದ ಪಡೆಯೋದ್ರ ಜೊತೆಗೆ ನಿಮ್ಮ ಮನಸ್ಸಿಗೂ ನೆಮ್ಮದಿ ಸಿಗುತ್ತದೆ.

ಸೋಮವಾರ ಶಿವನಿಗೆ ಪ್ರಿಯವಾದ ದಿನ. ಹಾಗೂ ಶಿವನ ಭಕ್ತಾದಿಗಳಿಗೂ ಕೂಡ ಮಹತ್ವದ ದಿನ ಅಂತಾನೇ ಹೇಳಬಹುದು.

English summary

What Is The Sacred Connection Between Monday And Lord Shiva in Kannada.

What Is The Sacred Connection Between Monday And Lord Shiva. Read more.
Story first published: Monday, August 7, 2023, 8:00 [IST]
X
Desktop Bottom Promotion