Latest Updates
-
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು! -
ಬಿಸಿಗಾಳಿಯ ನಡುವೆ ಮದುವೆ ಸಂಭ್ರಮ: ಅತಿಥಿಗಳ ಸುರಕ್ಷತೆಗಾಗಿ ನೀವು ಮಾಡಲೇಬೇಕಾದ ಬದಲಾವಣೆಗಳಿವು! -
ಬಿಸಿಗಾಳಿಯ ಅಬ್ಬರ ಶುರು: ನಿಮ್ಮ ಮನೆ ತಂಪಾಗಿರಲು ಮತ್ತು ಗಿಡಗಳನ್ನು ಉಳಿಸಲು ಈ ಸೀಕ್ರೆಟ್ ಟಿಪ್ಸ್ ಮಿಸ್ ಮಾಡ್ಬೇಡಿ! -
ಸುಡುವ ಬಿಸಿಲಿಗೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರ ಕ್ರಮ ಪಾಲಿಸಿ! -
ಮದರ್ಸ್ ಡೇ 2026: ಅಮ್ಮನಿಗೆ ಸರ್ಪ್ರೈಸ್ ನೀಡಲು ಈ ವೈರಲ್ ಟ್ರೆಂಡ್ಸ್ ಫಾಲೋ ಮಾಡಿ, ಮಿಸ್ ಮಾಡ್ಬೇಡಿ!
ಪ್ರಶಾಂತ್ ನೀಲ್‌ಗೆ ಬಣ್ಣಗಳ ಕುರಿತು OCD.! ನಿಮ್ಮಲ್ಲೂ ಇರಬಹುದು ಈ ಸಮಸ್ಯೆ..!!
ನಿರ್ದೇಶಕ ಪ್ರಶಾಂತ್ ನೀಲ್ ಸದ್ಯ ಪ್ರಭಾಸ್ ನಟನೆಯ ಸಲಾರ್ ಸಿನಿಮಾ ಬಿಡುಗಡೆಯಲ್ಲಿ ಬ್ಯುಸಿಯಾಗಿದ್ದಾರೆ. ಸಲಾರ್ ಟ್ರೈಲರ್ ನೋಡಿರುವ ಮಂದಿ ಮತ್ತೊಂದು ಸಾವಿರ ಕೋಟಿ ಕ್ಲಬ್ ಸೇರುವ ಸಿನಿಮಾ ಇದಾಗಿರಲಿದೆ ಎಂದು ಅಂದಾಜಿಸಿದ್ದಾರೆ. ಹಾಗೆ ಸಲಾರ್, ಕೆಜಿಎಫ್ ನಡುವೆ ಲಿಂಕ್ ಇದೆ ಅಂತಲೂ ಮಾತನಾಡಿಕೊಳ್ಳುತ್ತಿದ್ದಾರೆ.
ಈ ಎಲ್ಲಾ ಪ್ರಶ್ನೆಗಳಿಗೂ ನಿರ್ದೇಶಕ ಪ್ರಶಾಂತ್ ನೀಲ್ ಉತ್ತರ ಕೊಟ್ಟಿದ್ದಾರೆ. ಸಂದರ್ಶನವೊಂದರಲ್ಲಿ ಮಾತನಾಡಿದ್ದ ಅವರು, ಸಲಾರ್ ಹಾಗೂ ಕೆಜಿಎಫ್ ನಡುವೆ ಯಾವ ಸಂಬಂಧವೂ ಇಲ್ಲ, ಎರಡೂ ಬೇರೆ ಬೇರೆ ಸಿನಿಮಾಗಳು ಎಂಬ ಸ್ಪಷ್ಟನೆಯಂತು ಕೊಟ್ಟಿದ್ದಾರೆ. ಆದರೆ ಈ ಸಂದರ್ಶನದಲ್ಲಿ ಅವರು ಮತ್ತೊಂದು ಮಾನಸಿಕ ಸಮಸ್ಯೆ ಕುರಿತಂತೆ ಮಾತನಾಡಿ ಎಲ್ಲರಿಗೂ ಶಾಕ್ ನೀಡಿದ್ದಾರೆ.

ಹೌದು ಸಂದರ್ಶನದಲ್ಲಿ ಸಲಾರ್ ಹಾಗೂ ಕೆಜಿಎಫ್ ನಡುವಿನ ಸಾಮ್ಯತೆ ಬಗ್ಗೆ ಮಾತನಾಡುತ್ತಾ. ಎರಡೂ ಸಿನಿಮಾಗಳಲ್ಲಿ ಕಲರ್ ಗ್ರೇಡಿಂಗ್ ಒಂದೇ ರೀತಿ ಇರಲು ಕಾರಣ ಬಿಚ್ಚಿಟ್ಟಿದ್ದಾರೆ. ನನಗೆ ಒಸಿಡಿ ಇದೆ ಹೀಗಾಗಿ ಹೆಚ್ಚು ಬಣ್ಣಗಳಿಗಿಂತ ಬ್ಲಾಕ್ ಎಂಡ್ ವೈಟ್ ಹೆಚ್ಚು ಇಷ್ಟವಾಗುತ್ತದೆ ಎಂದಿದ್ದಾರೆ. ಅರೆ ಹಾಗಾದ್ರೆ ಏನಿದು ಒಸಿಡಿ, ಇದಕ್ಕೂ ಬಣ್ಣದ ಮೇಲಿನ ಅವರ ಅಭಿಪ್ರಾಯ ಅಂತೀರ ಇಲ್ಲಿದೆ ನೋಡಿ ಅದಕ್ಕೆಲ್ಲಾ ಉತ್ತರ.
OCD ಎಂದರೇನು?
ಪ್ರಶಾಂತ್ ನೀಲ್ OCD ಬಗ್ಗೆ ಸಂದರ್ಶನದಲ್ಲಿ ಹೇಳಿದ್ದಾರೆ. ಅವರು ಬಣ್ಣಗಳ ಕುರಿತಾಗಿ ಮಾತನಾಡುತ್ತಾ OCD ಪದ ಬಳಸಿದ್ದಾರೆ. OCD ಎಂದರೆ ವೈದ್ಯಕೀಯ ಭಾಷೆಯಲ್ಲಿ ಒಬೆಸಿವ್ ಕಂಪಲ್ಸಿವ್ ಡಿಸಾರ್ಡರ್ ಎನ್ನುವ ಅರ್ಥ ಇದೆ. ಇದೇನು ಗಂಭೀರ ಸ್ವರೂಪದ ಮಾನಸಿಕ ಕಾಯಿಲೆ ಅಲ್ಲ, ಬದಲಿಗೆ ಇದೊಂದು ಭಯ, ಗೊಂದಲ ಅಥವಾ ಏನನ್ನೂ ಒಪ್ಪಿಕೊಳ್ಳಲಾಗದ ಸ್ಥಿತಿ ಎನ್ನಬಹುದು.
ಈ ಸಮಸ್ಯೆಗೆ ತುತ್ತಾದವರು ಹೇಗಿರುತ್ತಾರೆ?
ಒಬೆಸಿವ್ ಕಂಪಲ್ಸಿವ್ ಡಿಸಾರ್ಡರ್ ಮನಸ್ಸಿಗೆ ಸಂಬಂಧಿಸಿದ ಸಮಸ್ಯೆಯಾಗಿದೆ. ಅವರು ಎಲ್ಲರ ಜೊತೆ ಸಾಮಾನ್ಯರಂತೆಯೇ ಇದ್ದರೂ ಸುಪ್ತ ಚೇತನದಲ್ಲಿ ಈ ಸಮಸ್ಯೆ ಕಾಡುತ್ತಿರುತ್ತದೆ. ಉದಾಹರಣೆಗೆ ಹೇಳಬೇಕೆಂದರೆ ಕೈಗೆ ಕೊಳೆ ಅಂಟಿಕೊಂಡಿದೆ ಎಂದು ಹತ್ತಾರು ಬಾರಿ ತೊಳೆಯುತ್ತಲೇ ಇರುವುದು. ಹಾಗೆ ಪ್ರಶಾಂತ್ ನೀಲ್ ಹೇಳಿದಂತೆ ಬಣ್ಣಗಳ ಕುರಿತು ಅವರಿಗಿರುವ ಗೊಂದಲ. ಯಾವ ಬಣ್ಣದ ಬಟ್ಟೆ ಸೂಕ್ತ, ಈ ಬಣ್ಣದಲ್ಲಿ ಹೇಗೆ ಕಾಣಿಸುತ್ತೇನೆ, ಈ ಬಣ್ಣ ಬೇರೆಯವರಿಗೆ ಇಷ್ಟವಾಗುತ್ತಾ? ಇಲ್ವಾ? ಈ ಬಣ್ಣದಿಂದ ಸಮಸ್ಯೆ ಇದ್ಯಾ? ಈ ರೀತಿ ಗೊಂದಲ ಉಂಟಾಗುವುದು ಈ ಗೊಂದಲ ಬಣ್ಣದ ಬಗ್ಗೆ ಭಯ ಉಂಟು ಮಾಡುವ ಸ್ಥಿತಿಗೆ ಒಸಿಡಿ ಎಂಬ ಸಮಸ್ಯೆ ಕಾರಣವಾಗಿರುತ್ತದೆ.
ನಿಮ್ಮಲ್ಲೂ ಇರಬಹುದು OCD..!
ಮೊದಲೇ ಹೇಳಿದಂತೆ ಒಸಿಡಿ ಎಂದರೆ ಅದೇನು ಗಂಭೀರ ಸ್ವರೂಪದ ಸಮಸ್ಯೆಯಲ್ಲ, ನಾವು ನಮ್ಮ ಮೇಲೆ ಸ್ವಹಿಡಿತ ಸಾಧಿಸಲು ಸಾಧ್ಯವಾಗದ ಸ್ಥಿತಿ ಎನ್ನಬಹುದಷ್ಟೇ. ಇನ್ನೂ ಸುಲಭವಾಗಿ ಹೇಳಬೇಕೆಂದರೆ ನೀವು ಸ್ನಾನ ಮಾಡಿದ ಬಳಿಕ ಮೈ ಒರೆಸಿಕೊಂಡು ಟವೆಲ್ ಅನ್ನು ಒಣಗಿಸಲೇಬೇಕು, ನೀವು ಅದನ್ನು ಮಾಡುತ್ತೀರಿ ಕೂಡ, ಆದ್ರೆ ಟವೆಲ್ ಒಣಗಿಸುವಾಗ ಅದರಲ್ಲಿರುವ ಚಿತ್ರ ನೇರವಾಗಿ ಕಾಣುವಂತೆ ಮಾಡುವುದು, ಇಲ್ಲದೆ ಟವೆಲ್‌ನ 4 ಅಂಚುಗಳು ಸಮನಾಂತರವಾಗಿ ಬರುವಂತೆ ಒಣಗಿಸುವುದು, ಇದು ಸ್ವಲ್ಪ ಹಿಂದೆ ಮುಂದೆ ಆದರೂ ನಿಮಗೆ ಸಮಾಧಾನವಾಗುವುದಿಲ್ಲ. ನೀವು ಬೇರೆ ಕೆಲಸದಲ್ಲಿ ತೊಡಗಿದರೂ ಟವೆಲ್‌ನ ಚಿತ್ರ ಯಾವಾಗಲೂ ಕಣ್ಣು ಮುಂದೆ ಬಂದರೆ ಅಥವಾ ಸರಿಯಾಗಿ ಟವೆಲ್ ಒಣಗಿಸಿದ್ದೀನಾ? ಇಲ್ಲವಾ? ಎಂದು ಅನಗತ್ಯವಾಗಿ ಯೋಚಿಸುವ ತೊಳಲಾಟದ ಸ್ಥಿತಿಯಾಗಿದೆ.
ಈ ಉದಾಹರಣೆ ಮೂಲಕ ನಿಮಗೆ ಒಸಿಡಿ ಸಮಸ್ಯೆ ಅರ್ಥವಾಗಿರಬಹುದು. ಇದು ಪ್ರಶಾಂತ್ ನೀಲ್ ಅವರಿಗೂ ಕಾಡಿರುತ್ತದೆ. ಬಣ್ಣಗಳ ಆಯ್ಕೆಯಲ್ಲಿ ಅವರು ಗೊಂದಲಕ್ಕೆ ಒಳಗಾಗಬಹುದು. ಯಾವುದು ಸರಿ ಎಂಬ ಆಯ್ಕೆ ಮಾಡುವಾಗ ಗೊಂದಲ ಏರ್ಪಟ್ಟಿರಬಹುದು. ಹೀಗಾಗಿ ಅವರ ಸಿನಿಮಾಗಳಲ್ಲಿ ನಾವು ಕಪ್ಪು ಅಥವಾ ಬ್ಲಾಕ್ ಎಂಡ್ ವೈಟ್ ಅನ್ನೇ ಹೆಚ್ಚಾಗಿ ಕಾಣುತ್ತೇವೆ. ಎಲ್ಲಿಯೂ ಬ್ರೈಟ್ ಕಲರ್ ದೃಶ್ಯಗಳ ಕಾಣಲು ಸಾಧ್ಯವಾಗುವುದಿಲ್ಲ.



Click it and Unblock the Notifications