Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಊಟದ ಬಳಿಕ ಮೌತ್ ಫ್ರೆಶ್ನರ್ ಎಂದು ಡ್ರೈಐಸ್ ಸೇವನೆ: 5 ಜನಕ್ಕೆ ರಕ್ತ ವಾಂತಿ..! ಏನಿದು ಗೊತ್ತಾ ಡ್ರೈ ಐಸ್..?
ಹೋಟೆಲ್‌ನಲ್ಲಿ ನೀವು ಊಟ ಮುಗಿದ ಮೇಲೆ ಬಾಯಿಯಿಂದ ಆಹಾರದ ವಾಸನೆ ಬಾರದಿರಲಿ ಎಂದು ಮೌತ್ ಫ್ರೆಶ್ನರ್‌ಗಳ ಬಾಯಿಗೆ ಹಾಕಿಕೊಳ್ಳುತ್ತೇವೆ. ಬಹುಪಾಲು ಎಲ್ಲಾ ಹೋಟೆಲ್‌ಗಳಲ್ಲೂ ಬಿಲ್ ಕೌಂಟರ್ ಮುಂದೆಯೇ ಇದನ್ನು ಇಟ್ಟಿರುತ್ತಾರೆ. ಇನ್ನೂ ಕೆಲವರು ಮನೆಯಲ್ಲಿ ಊಟ ಆದ ಮೇಲೆ ಇದನ್ನು ತಿನ್ನುತ್ತಾರೆ. ಆದ್ರೆ ಈ ಮೌತ್ ಫ್ರೆಶ್ನರ್ ತಿಂದು ರಕ್ತವಾಂತಿ ಮಾಡಿಕೊಂಡು ಐದಾರು ಮಂದಿ ಈಗ ಆಸ್ಪತ್ರೆ ಸೇರಿದ್ದಾರೆ.
ಹೌದು ಕೆಫೆಯೊಂದರಲ್ಲಿ ಊಟ ಮಾಡಿದ ಐದು ಮಂದಿ ಮೌತ್ ಫ್ರೆಶ್ನರ್ ಎಂದು ಡ್ರೈ ಐಸ್ ಸೇವಿಸಿದ ನಂತರ ರಕ್ತ ವಾಂತಿ ಮಾಡಲು ಪ್ರಾರಂಭಿಸಿ ಆಸ್ಪತ್ರೆ ಸೇರಿದ್ದಾರೆ. ಹಾಗಾದರೆ ಅಲ್ಲಿ ಆಗಿದ್ದೇನು? ಮೌತ್ ಫ್ರಶ್ನರ್ ತಿಂದರೆ ರಕ್ತ ವಾಂತಿ ಆಗಿದ್ದೇಕೆ? ಅಷ್ಟಕ್ಕೂ ಏನಿದು ಘಟನೆ ಎಂಬುದನ್ನು ನೋಡಿ.
ಗುರುಗ್ರಾಮ್‌ನ ಕೆಫೆಯೊಂದರಲ್ಲಿ ಆಹಾರ ಸೇವಿಸಿದ 5 ಮಂದಿ, ಅಲ್ಲಿದ್ದ ಮೌತ್ ಫ್ರೆಶ್ನರ್ ಸೇವಿಸಿದ ನಂತರ ರಕ್ತ ವಾಂತಿ ಮಾಡಿಕೊಂಡಿದ್ದಾರೆ ಎಂದು ಹೇಳಲಾದ ವಿಡಿಯೋವೊಂದು ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ಅವರ ನಾಲಿಗೆಯಲ್ಲಿ ಉರಿ ಕಂಡುಬಂದಿದ್ದು, ರಕ್ತವೂ ಬಂದಿದೆ. ಮೌತ್ ಫ್ರಶ್ನರ್ ಜೊತೆ ಡ್ರೈ ಐಸ್ ಸಹ ಬೆರೆತಿದೆ ಎಂದು ಸಂತ್ರಸ್ತ ಅಂಕಿತ್ ಕುಮಾರ್ ಎಂಬಾತ ಆರೋಪಿಸಿದ್ದಾನೆ. ಅಲ್ಲದೆ ಈ ಕುರಿತು ಪೊಲೀಸ್ ದೂರು ನೀಡಲಾಗಿದೆ.

ಮಾರ್ಚ್ 2 ರಂದು ಮಾಣಿಕ್ ಗೋಯೆಂಕಾ ಎಂಬುವರು ಪತ್ನಿ ಪ್ರೀತಿಕಾ ರುಸ್ತಗಿ, ಸ್ನೇಹಿತರಾದ ದೀಪಕ್ ಅರೋರಾ ಮತ್ತು ಅವರ ಪತ್ನಿ ಹಿಮಾನಿ, ಅಂಕಿತ್ ಕುಮಾರ್ ಮತ್ತು ಅವರ ಪತ್ನಿ ನೇಹಾ ಸಬರ್ವಾಲ್ ಮತ್ತು ಕುಮಾರ್ ಮತ್ತು ನೇಹಾ ಅವರ ಒಂದು ವರ್ಷದ ಮಗಳೊಂದಿಗೆ ಲಫಾರೆಸ್ಟ ಕೆಫೆಯಲ್ಲಿ ಹುಟ್ಟುಹಬ್ಬ ಆಚರಿಸಿಕೊಂಡ ಬಳಿಕ ಊಟ ಮಾಡಿದ್ದಾರೆ ಎಂದು ವರದಿಯಾಗಿದೆ.
ಈ ಡ್ರೈ ಐಸ್ ಅಂದರೆ ಏನು.?
ಕಾರ್ಬನ್ ಡೈಆಕ್ಸೈಡ್ (CO2)ನ ಘನ ರೂಪವಾದ ಡ್ರೈ ಐಸ್, ಪಾರ್ಟಿಗಳಲ್ಲಿ ದೊಡ್ಡ ಸಮಾರಂಭಗಳಲ್ಲಿ ಬಳಸಲಾಗುತ್ತದೆ. ಅಂದರೆ ವೇದಿಕೆ ಮೇಲೆ ಮಂಜು ಕವಿದಂತೆ ಮಾಡಲು ಈ ಡ್ರೈ ಐಸ್ ಬಳಸುತ್ತಾರೆ. ಅಲ್ಲದೆ ಆಹಾರವನ್ನು ಒಂದು ನಗರದಿಂದ ಇನ್ನೊಂದು ನಗರಕ್ಕೆ ಸಾಗಿಸುವಾಗಲೂ ಡ್ರೈ ಐಸ್ ಬಳಸಲಾಗುತ್ತದೆ. ಆದರೆ ಡ್ರೈ ಐಸ್ ತಿಂದರೆ ಬಹಳಷ್ಟು ಸಮಸ್ಯೆ ಎದುರಾಗುತ್ತದೆ. ಆದರೆ ಈ ಬಗ್ಗೆ ಜನ ನಿರ್ಲಕ್ಷ್ಯ ವಹಿಸಿರುವುದು ಈ ಘಟನೆಗೆ ಕಾರಣವಾಗಿದೆ.
ಡ್ರೈ ಐಸ್ ತಿಂದಾಗ ಏನಾಗುತ್ತದೆ?
ಆರಂಭದಲ್ಲಿ, ಡ್ರೈ ಐಸ್ ಸೇವಿಸಿದವರ ಬಾಯಿ ಮತ್ತು ಗಂಟಲಿನಲ್ಲಿ ತೀಕ್ಷ್ಣವಾದ ಉರಿಯುವ ಮತ್ತು ಸುಡುವ ರೀತಿಯ ಅನುಭವವಾಗುತ್ತದೆ. ಒಣಗಿರುವ ಮಂಜುಗಡ್ಡೆಯು ಒಮ್ಮಿಂದೊಮ್ಮೆಲೆ ತಂಪಾಗುತ್ತದೆ. ಇದರಿಂದ ಗಂಟಲು ಮತ್ತು ನಾಲಿಗೆಯ ಮೇಲೆ ಗಾಯವಾಗುತ್ತದೆ. ಅಲ್ಲದೆ ಈ ವೇಳೆ ಅನಿಲವಾಗಿ ಪರಿವರ್ತನೆಯಾಗಿ ಇಂಗಾಲದ ಡೈ ಆಕ್ಸೈಡ್ ಅನ್ನು ಬಿಡುಗಡೆ ಮಾಡುತ್ತದೆ. ಇದು ಹೊಟ್ಟೆ ನೋವು ಉಬ್ಬುವುದು ಮತ್ತು ತೀವ್ರ ಅಸ್ವಸ್ಥತೆಗೆ ಕಾರಣವಾಗಬಹುದು, ಹೆಚ್ಚು ಸಾಮಾನ್ಯವಾದ ಜಠರಗರುಳಿನ ಸಮಸ್ಯೆಗಳನ್ನು ಅನುಕರಿಸುವ ರೋಗಲಕ್ಷಣಗಳು ಆದರೆ ಹೆಚ್ಚು ಅಪಾಯಕಾರಿ ಕಾರಣದಿಂದ ಉಂಟಾಗುತ್ತವೆ.
ಡ್ರೈ ಐಸ್ ಸೇವಿಸಿದ್ದು ಹೇಗೆ?
ಹೋಟೆಲ್‌ನಲ್ಲಿ ಮೌತ್ ಫ್ರಶ್ನರ್ ಬಾಕ್ಸ್‌ನಲ್ಲಿ ಡ್ರೈಐಸ್ ಕಾಳುಗಳ ಹಾಕಿರುವ ಸಾಧ್ಯತೆ ಹೆಚ್ಚಾಗಿದೆ ಎಂದು ಶಂಕಿಸಲಾಗಿದೆ. ಏಕೆಂದರೆ ಈ ಕಾಳುಗಳ ರೂಪದಲ್ಲಿರುವ ಡ್ರೈ ಐಸ್ ಹಾಗೂ ಬಿಳಿ ಬಣ್ಣದ ಜೀರಿಗೆ ಕಾಳುಗಳು ಒಂದೇ ರೀತಿ ಹೋಲುತ್ತದೆ. ಡ್ರೈ ಐಸ್ ಅನ್ನೇ ಅವರು ಮೌತ್ ಫ್ರಶ್ನರ್ ಎಂದು ಸೇವಿಸಿದ್ದರಿಂದ ಈ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ.



Click it and Unblock the Notifications
