Latest Updates
-
ಕ್ರಿಕೆಟ್ ಮ್ಯಾಚ್ ನೋಡುವಾಗ ದಂಪತಿಗಳ ನಡುವೆ ಜಗಳವೇ? ಶಾಂತಿ ಕಾಪಾಡಿಕೊಳ್ಳಲು ಇಲ್ಲಿದೆ ಸಮಾಧಾನದ ಸೂತ್ರ! -
ಕೇರಳದಲ್ಲಿ ಭಾರೀ ಮಳೆ: ನಿಮ್ಮ ಮನೆಯನ್ನು ತೇವಾಂಶ ಮತ್ತು ಬೂಸಿನಿಂದ ರಕ್ಷಿಸಲು ಇಲ್ಲಿವೆ ಸರಳ ಮನೆಮದ್ದುಗಳು! -
ಬೆಂಗಳೂರಿನಲ್ಲಿ ನೀರಿನ ಕಟ್ಟುನಿಟ್ಟಿನ ನಿಯಮ: ದಂಡ ತಪ್ಪಿಸಲು ನೀವು ಮಾಡಬೇಕಾದ ಬದಲಾವಣೆಗಳೇನು? -
ಪುಣೆ ರೈಲು ಪ್ರಯಾಣಿಕರೇ ಎಚ್ಚರ! 9 ಗಂಟೆಗಳ ಮೆಗಾ ಬ್ಲಾಕ್: ನಿಮ್ಮ ಪ್ರಯಾಣಕ್ಕೆ ಪರ್ಯಾಯ ಮಾರ್ಗಗಳಿವು -
ಕರಾವಳಿ ಮಳೆಯಲ್ಲಿ ಸಂಗಾತಿಯೊಂದಿಗೆ ಡೇಟ್ ನೈಟ್: ಕೇವಲ 500 ರೂಪಾಯಿಯಲ್ಲಿ ಮಳೆಗಾಲದ ಸಂಜೆಯನ್ನು ರೊಮ್ಯಾಂಟಿಕ್ ಆಗಿ ಕಳೆಯಿರಿ! -
ಮಳೆಗಾಲದ ತೇವಾಂಶಕ್ಕೆ ಬೇಸತ್ತಿದ್ದೀರಾ? ಅಮೆಜಾನ್ ಪ್ರೈಮ್ ಡೇ 2026ರಲ್ಲಿ ಸಿಗಲಿದೆ ಸ್ಮಾರ್ಟ್ ಪರಿಹಾರ! -
ಟೊಮೆಟೊ ಬೆಲೆ ಏರಿಕೆ: ಅಡುಗೆಯಲ್ಲಿ ರುಚಿ ಕೆಡದಂತೆ ಬಜೆಟ್ನಲ್ಲಿ ಅಡುಗೆ ಮಾಡುವುದು ಹೇಗೆ? -
ಮುಂಬೈನಲ್ಲಿ ರೆಡ್ ಅಲರ್ಟ್: ಶಾಲೆಗಳಿಗೆ ರಜೆ ಘೋಷಣೆ, ಮಳೆಗಾಲದಲ್ಲಿ ಮಕ್ಕಳ ಸುರಕ್ಷತೆಗಾಗಿ ಪೋಷಕರು ಮಾಡಬೇಕಾದ್ದೇನು? -
ದೆಹಲಿಯ ಮಳೆಗಾಲದ ಸೆಖೆ: ಮನೆಯಲ್ಲೇ 10 ನಿಮಿಷದ ಈ ವ್ಯಾಯಾಮ ಮಾಡಿದರೆ ಕಾಲು ನೋವು ಮಾಯ! -
ವಾಟ್ಸಾಪ್ ಹೊಸ ಫೀಚರ್ಗೆ ಬ್ರೇಕ್: ನಿಮ್ಮ ಪ್ರೈವೆಸಿ ಕಾಪಾಡಿಕೊಳ್ಳಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ಯುಗಾದಿಯ ವಿಶೇಷ ಆಚರಣೆ ನಿಮಗೆ ಗೊತ್ತೆ..? ಬ್ರಹ್ಮಧ್ವಜ ಪೂಜೆ ಕೇಳಿದ್ದೀರಾ?
ಹಿಂದೂಗಳಿಗೆ ಹೊಸ ವರ್ಷ ಅಂದರೆ ಹೊಸ ಸಂವತ್ಸರ ಶುರುವಾಗುವುದು ಯುಗಾದಿಯಿಂದ. ಈ ವರ್ಷ ಏಪ್ರಿಲ್ 9ಕ್ಕೆ ಯುಗಾದಿ ಆಚರಿಸಲಾಗುತ್ತಿದೆ. ಇಂದಿನಿಂದ ವಸಂತ ಋತು ಆರಂಭವಾಗುತ್ತದೆ. ಯುಗಾದಿ ಹಬ್ಬವೆಂದರೆ ನಮ್ಮೆಲ್ಲರಿಗೂ ಸಂಭ್ರಮದ ಆಚರಣೆ. ಈ ದಿನ ದೇವರಿಗೆ ಪೂಜಿಸಿ, ಸಮೀಪದ ದೇವಾಲಯಕ್ಕೆ ಹೋಗಿ ಪೂಜೆ ಮಾಡಿ ಬಂದು ಬೇವು-ಬೆಲ್ಲ ಸವಿಯುತ್ತೇವೆ. ಹೊಸ ವರ್ಷದಲ್ಲಿ ಬರುವ ಖುಷಿ-ದುಃಖವನ್ನು ಸಮಾನವಾಗಿ ಸ್ವೀಕರಿಸುತ್ತೇವೆ ಎಂಬ ಉದ್ದೇಶದಿಂದ ಬೇವು ಬೆಲ್ಲವನ್ನು ಸವಿಯುತ್ತೇವೆ.
ಬ್ರಹ್ಮ ಚೈತ್ರಮಾನ ಯುಗಾದಿಯಂದ ಇಡೀ ಬ್ರಹ್ಮಾಂಡವನ್ನು ಸೃಷ್ಟಿಸಿದ ಎಂಬ ಪೌರಾಣಿಕ ನಂಬಿಕೆಯಿದೆ. ಯುಗಾದಿ ಎಂಬುವುದು ಹೊಸತನದ ಸಂಕೇತ, ಸೂಚನೆಯಾಗಿದೆ. ನೀವು ಯುಗಾದಿ ಸಮಯದಲ್ಲಿ ಪ್ರಕೃತ್ತಿಯಲ್ಲೂ ಹೊಸತನ ಕಾಣುವಿರಿ. ಒಣಲೆಗಳು ಉದುರಿ ಚಿಗುರೆಲೆಗಳು ಮೂಡಿರುತ್ತವೆ. ಇವೆಲ್ಲಾ ನಾವು ಪ್ರಕೃತಿಯಲ್ಲಿ ಕಾಣುವ ವಿಶೇಷವಾಗಿದೆ. ಆ ಬ್ರಹ್ಮ ಇಂಥ ಸುಂದರ ಪ್ರಪಂಚವನ್ನು ಯುಗಾದಿಯಂದು ಸೃಷ್ಟಿಸಿದ ಎಂದು ಹೇಳಲಾಗುವುದು. ಆದ್ದರಿಂದ ಆ ದಿನ ಸೃಷ್ಟಿಕರ್ತ ಬ್ರಹ್ಮನನ್ನು ಪೂಜಿಸಲಾಗುವುದು.

ಯಾವುದೇ ಪೂಜೆಯಿರಲಿ ಮೊದಲು ಶ್ರೀ ಗಣೇಶನನ್ನು ಆರಾಧಿಸುವ ಮೂಲಕವೇ ಪ್ರಾರಂಭಿಸಬೇಕು ಎಂಬ ನಿಯಮವಿದೆ. ಮೊದಲು ಗಣೇಶನಿಗೆ ತೆಂಗಿನಕಾಯಿ ಒಡೆದು ನಂತರ ತಮ್ಮ ಇಷ್ಟ ದೈವವನ್ನು ಪೂಜಿಸುತ್ತಾರೆ. ಈ ದಿನ ಶಿವನ ದೇವಾಲಯ, ಶ್ರೀ ವಿಷ್ಣು ದೇವಾಲಯ, ಲಕ್ಷ್ಮಿ ದೇವಾಲಯಕ್ಕೆ ಹೋಗಿ ಪೂಜೆಯನ್ನು ಸಲ್ಲಿಸಿ ಬರುತ್ತಾರೆ.
ಯುಗಾದಿಯೆಂದರೆ ಹೊಸವರ್ಷದ ಆರಂಭದ ದಿನವಾದರೂ ಭಾರತದಲ್ಲಿ ಈ ದಿನವನ್ನು ನಿರ್ಧರಿಸುವ ರೀತಿ ಹಲವಾರಿವೆ. ಮುಖ್ಯವಾಗಿ ಚಾಂದ್ರಮಾನ ಹಾಗೂ ಸೌರಮಾನ ಎಂಬ ಎರಡು ಪ್ರಭೇದಗಳಿದ್ದು, ಹಿಂದೂ ಧರ್ಮದ ವೇದಾಂಗ ಜ್ಯೋತಿಷ ಶಾಸ್ತ್ರದಿಂದ ನಿರ್ಣಯಗೊಳ್ಳುತ್ತವೆ. ಚಂದ್ರನ ಚಲನೆಯನ್ನಾಧರಿಸಿ, ದಿನಗಣನೆ ಮಾಡುವುದನ್ನು ಚಾಂದ್ರಮಾನ ಹಾಗೂ ಸೂರ್ಯನ ಗತಿಯಿಂದ ಎಣಿಕೆ ಮಾಡುವುದನ್ನು ಸೌರಮಾನ ಎನ್ನುತ್ತಾರೆ. ಕರ್ನಾಟಕದಲ್ಲಿ ಚಂದ್ರಮಾನಪದ್ಧತಿ ಮೊದಲಿನಿಂದ ರೂಢಿಯಲ್ಲಿದೆ.
ಯುಗಾದಿಯಂದು ಅಯೋಧ್ಯೆಯಲ್ಲಿ ರಾಮನಿಗೆ ಪಟ್ಟಾಭಿಷೇಕ
ರಾಮಾಯಣದಲ್ಲಿ ಯುಗಾದಿಯಂದು ಅಯೋಧ್ಯೆಯ ರಾಜನಾಗಿ ರಾಮನನ್ನು ಪಟ್ಟಾಭಿಷೇಕ ಮಾಡಲಾಯಿತು ಎಂದು ಹೇಳಲಾಗಿದೆ. ಶ್ರೀರಾಮ ದುಷ್ಟನಾದ ರಾವಣನ ಸಂಹರಿಸಿ ವಿಜಯದೊಂದಿಗೆ ಅಯೋಧ್ಯೆಗೆ ಹಿಂತಿರುಗಿದ, ಅಯೋಧ್ಯೆಯ ಜನರು ರಂಗೋಲಿ ಹಾಕಿ, ಹಣತೆಗಳನ್ನು ಹಚ್ಚಿ ಶ್ರೀರಾಮ, ಸೀತೆ, ಲಕ್ಷ್ಮಣರನ್ನು ಸ್ವಾಗತಿಸಿದರು ಎಂದು ರಾಮಾಯಣದಲ್ಲಿ ಹೇಳಲಾಗಿದೆ. ಇದೇ ದಿನವನ್ನು ಯುಗಾದಿ ಎಂದು ಆಚರಿಸಲಾಗಿತ್ತಂತೆ. ಹೀಗಾಗಿ ಯುಗಾದಿಯಂದು ಅಯೋಧ್ಯೆಯಲ್ಲಿ ಇಂದಿಗೂ ರಾಮನಿಗೆ ವಿಶೇಷ ಪೂಜೆ ನೆರವೇರುತ್ತದೆ.
ಕಲಿಯುಗದ ಆರಂಭ
ಯುಗಾದಿಯಂದು ದ್ವಾಪರಯುಗ ಮುಗಿದು ಕಲಿಯುಗ ಪ್ರಾರಂಭವಾಯಿತು ಎಂದು ನಂಬಲಾಗದೆ, ಶ್ರೀಕೃಷ್ಣ ದ್ವಾಪರಯುಗದ ನಂತರ ದೇವ ಲೋಕಕ್ಕೆ ಹಿಂತಿರುಗಿದ. ಕಲಿಯುಗದದಲ್ಲಿ ಹಿಂಸೆ, ಅನ್ಯಾಯಗಳು ಹೆಚ್ಚಾದಾಗ ಮತ್ತೆ ರೂಪವೆತ್ತಿ ಬರುತ್ತಾನೆ ಬಂದು ದುಷ್ಟರಿಗೆ ತಕ್ಕ ಪಾಠ ಕಲಿಸುತ್ತಾನೆ ಎಂದು ನಂಬಲಾಗಿದೆ. ಹೀಗಾಗಿ ಹೇಗೆ ಯುಗಾದಿಯಂದು ಕಲಿಯುವ ಆರಂಭವಾಗಿತ್ತೋ ಅದೇ ರೀತಿ ಯುಗಾದಿಯಂದೆ ಮತ್ತೆ ಕಲ್ಕಿ ಅವತಾರದಲ್ಲಿ ಭೂ ಲೋಕಕ್ಕೆ ಬಂದು ಈ ಕಲಿಯುಗವನ್ನು ಅಂತ್ಯ ಮಾಡುತ್ತಾನೆ ಎಂಬ ನಂಬಿಕೆಗಳಿವೆ.
ಯುಗಾದಿಯಂದು ಬ್ರಹ್ಮಧ್ವಜ ಪೂಜೆ ಏಕೆ ಮಾಡುತ್ತಾರೆ?
ಬ್ರಹ್ಮದೇವನು ಯುಗಾದಿ ಪಾಡ್ಯದಂದು ಸೃಷ್ಟಿಯನ್ನು ನಿರ್ಮಿಸಿದನು ಎಂದು ನಂಬಲಾಗಿದೆ. ಧರ್ಮಶಾಸ್ತ್ರದಲ್ಲಿ ಧ್ವಜಕ್ಕೆ 'ಬ್ರಹ್ಮ ಧ್ವಜ' ಅಥವಾ 'ಇಂದ್ರಧ್ವಜ' ಎಂದೂ ಸಹ ಕರೆಯುತ್ತಾರೆ. ಇದನ್ನು ಮನೆಮನೆಗಳಲ್ಲಿ ನಿಲ್ಲಿಸುತ್ತಾರೆ. ಈ ಧ್ವಜದ ಮೇಲ್ಭಾಗದಲ್ಲಿ ತಾಮ್ರದ ಕಲಶವನ್ನು ಇಡುತ್ತಾರೆ. ಯುಗಾದಿಯ ದಿನ ಬ್ರಹ್ಮಾಂಡದಲ್ಲಿನ ಪ್ರಜಾಪತಿ ದೇವತೆಯ ಲಹರಿಗಳು ಪೃಥ್ವಿಯ ಮೇಲೆ ಎಲ್ಲಕ್ಕಿಂತ ಹೆಚ್ಚು ಪ್ರಮಾಣದಲ್ಲಿ ಬರುತ್ತವೆ. ಬ್ರಹ್ಮಧ್ವಜದಿಂದಾಗಿ ವಾತಾವರಣದಲ್ಲಿನ ಪ್ರಜಾಪತಿ-ಲಹರಿಗಳು ಕಲಶದ ಸಹಾಯದಿಂದ ಮನೆಯೊಳಗೆ ಪ್ರವೇಶಿಸುತ್ತವೆ ಎಂಬ ನಂಬಿಕೆ ಇದೆ.



Click it and Unblock the Notifications