Latest Updates
-
ಮುಂಬೈ-ಥಾಣೆಯಲ್ಲಿ 39 ಡಿಗ್ರಿ ಬಿಸಿಲ ಅಬ್ಬರ: ಯೆಲ್ಲೋ ಅಲರ್ಟ್ ನಡುವೆ ನಿಮ್ಮ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ? -
ಮೆಟ್ ಗಾಲಾ 2026: ಇಶಾ ಅಂಬಾನಿ-ಕರಣ್ ಜೋಹರ್ ಲುಕ್ ನೋಡಿ ಫಿದಾ ಆದ ಫ್ಯಾಷನ್ ಪ್ರಿಯರು! -
ಹವಾಮಾನ ಇಲಾಖೆ ಎಚ್ಚರಿಕೆ: ಇಂದಿನ ಮಳೆ-ಸಿಡಿಲಿನ ಆರ್ಭಟಕ್ಕೆ ನಿಮ್ಮ ದಿನಚರಿ ಬದಲಾಯಿಸಿಕೊಳ್ಳಿ! -
ನೀಟ್ 2026 ಪರೀಕ್ಷೆ ಮುಗಿದಿದೆ: ಪೋಷಕರ ಜೊತೆ ಮನಬಿಚ್ಚಿ ಮಾತನಾಡಿ ಒತ್ತಡವನ್ನು ದೂರ ಮಾಡುವುದು ಹೇಗೆ? -
IMD ರೆಡ್ ಅಲರ್ಟ್: ಬಿರುಗಾಳಿ ಅಬ್ಬರಕ್ಕೆ ನಿಮ್ಮ ಬಾಲ್ಕನಿ ಮತ್ತು ಗಿಡಗಳು ಬಲಿಯಾಗದಿರಲಿ, ಈ ಕೆಲಸ ತಕ್ಷಣ ಮಾಡಿ! -
ಹೀಟ್ವೇವ್ ಎಫೆಕ್ಟ್: ಸುಡುವ ಬಿಸಿಲಿಗೆ ತಂಪಾಗಲು ಮಜ್ಜಿಗೆ, ಎಳನೀರು ಸಾಕಾ? ಇಲ್ಲಿದೆ ಆರೋಗ್ಯದ ಗುಟ್ಟು -
ಮೆಟ್ ಗಾಲಾ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯ ತಾರೆಯರ ಅಬ್ಬರ, ಲೈವ್ ನೋಡುವುದು ಹೇಗೆ? -
ಪಾರ್ಕ್ಗಳಲ್ಲಿ ನಗು-ಯೋಗದ ಅಲೆ: ಒತ್ತಡ ಮರೆಸಿ ದಿನವಿಡೀ ಎನರ್ಜಿಟಿಕ್ ಆಗಿರೋದು ಹೇಗೆ? -
ಮದುವೆ ಅಥವಾ ಡೇಟಿಂಗ್ ಪ್ಲಾನ್ ಮಾಡಿದ್ದೀರಾ? ಇಂದಿನ ಹವಾಮಾನದ ಅಬ್ಬರಕ್ಕೆ ನಿಮ್ಮ ತಯಾರಿ ಹೇಗಿರಲಿ? -
ಬಿರುಗಾಳಿ ಮಳೆಗೆ ನಿಮ್ಮ ಬಾಲ್ಕನಿ ಗಾರ್ಡನ್ ನಲುಗುತ್ತಿದೆಯೇ? ಗಿಡಗಳನ್ನು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ!
ನಿಮ್ಮ ಸಾವು ನಿಮ್ಮ ಕನಸಲ್ಲಿ ಬಂದರೆ ಏನರ್ಥ..? ಶುಭವೇ..? ಅಶುಭವೇ..? ತಿಳಿಯಿರಿ..!!
ನಮ್ಮಲ್ಲಿ ಪ್ರತಿಯೊಬ್ಬರೂ ಒಂದಲ್ಲ ಒಂದು ದಿನ ಹಲವು ರೀತಿಯ ಕನಸು ಕಾಣುತ್ತೇವೆ. ಕನಸಿನ ಪ್ರಪಂಚವು ಕಾಲ್ಪನಿಕವಾಗಿದ್ದರೂ ಸಹ, ಇದು ನಮ್ಮ ಜೀವನದಲ್ಲಿ ವಿವಿಧ ಮಜಲುಗಳ ತೆರೆದಿಟ್ಟಿರುತ್ತದೆ. ಒಳ್ಳೆಯ ಮತ್ತು ಕೆಟ್ಟ ಘಟನೆಗಳ ಮುನ್ಸೂಚನೆಯನ್ನು ಸಹ ನೀಡುತ್ತದೆ ಎಂದು ಶಾಸ್ತ್ರಗಳು ಹೇಳುತ್ತವೆ. ಕೆಲ ಕೆಟ್ಟ ಕನಸುಗಳು ಹಲವು ದಿನಗಳವರೆಗೂ ಕಾಡುತ್ತವೆ. ಮತ್ತೆ ಕೆಲವು ಬೆಳಗ್ಗೆ ಎದ್ದಾಗಲೂ ನೆನಪಲ್ಲಿ ಉಳಿದಿರುವುದಿಲ್ಲ. ಹಾಗಾದರೆ ಈ ಎಲ್ಲಾ ಕನಸುಗಳ ಅರ್ಥವೇನು? ಅದರಲ್ಲೂ ನೀವು ಸಾಯುವ ಕನಸು ಕಂಡರೆ ಅದರ ಅರ್ಥವೇನು?
ಧರ್ಮಗ್ರಂಥಗಳ ಪ್ರಕಾರ, ಸಾವಿನ ಕನಸುಗಳು ಯಾವಾಗಲೂ ಅಶುಭವಲ್ಲ. ಸಾವಿನ ಕನಸುಗಳು ಆಗಾಗ್ಗೆ ಒಳ್ಳೆಯದನ್ನು ಸೂಚಿಸುತ್ತವೆ. ಸಾವಿನ ಕನಸಿನ ಅರ್ಥವೇನು ಎಂಬುದನ್ನು ನೋಡೋಣ.
ನಿಮ್ಮ ಸಾವಿಗೆ ಸಂಬಂಧಿಕರು ಅಳುವುದು
ಕನಸಿನಲ್ಲಿ ಕುಟುಂಬದ ಸದಸ್ಯರು ನಿಮ್ಮ ಸಾವಿನಂದು ಅಳುವುದನ್ನು ನೀವು ನೋಡಿದರೆ, ನಿಮ್ಮ ಕುಟುಂಬದ ಯಾವುದೇ ಅಗತ್ಯಗಳನ್ನು ಪೂರೈಸಲು ನಿಮಗೆ ಸಾಧ್ಯವಾಗುತ್ತಿಲ್ಲ ಅಥವಾ ಕುಟುಂಬ ಸದಸ್ಯರು ನಿಮ್ಮಿಂದ ಹೆಚ್ಚಿನ ನಿರೀಕ್ಷೆಗಳನ್ನು ಹೊಂದಿದ್ದಾರೆ ಎಂದರ್ಥ. ಇದಲ್ಲದೆ, ಕನಸು ಮುಂದಿನ ದಿನಗಳಲ್ಲಿ ಕುಟುಂಬದ ಸದಸ್ಯರ ಅನಾರೋಗ್ಯವನ್ನು ಸಹ ಸೂಚಿಸುತ್ತದೆ.

ಅಪಘಾತದಿಂದ ಸಾವು
ಅಪಘಾತದಲ್ಲಿ ನಿಮ್ಮ ಸಾವಿನ ಕನಸು ಕಾಣುವುದು ಎಂದರೆ ನಿಮ್ಮ ಜೀವನದಲ್ಲಿ ಸವಾಲಿನ ಪರಿಸ್ಥಿತಿ ಶೀಘ್ರದಲ್ಲೇ ಬರಲಿದೆ ಎಂದರ್ಥ. ಈ ಕನಸು ವೃತ್ತಿಪರ ಮತ್ತು ವೈಯಕ್ತಿಕ ಜೀವನದಲ್ಲಿ ಸವಾಲುಗಳು, ಕಷ್ಟಕರ ಸಂದರ್ಭಗಳನ್ನು ಸೂಚಿಸುತ್ತದೆ. ಅಪಘಾತದಲ್ಲಿ ನರಳಿ ನರಳಿ ಸಾವನಪ್ಪಿದರೆ ಕಷ್ಟಗಳ ಸಂಕೋಲೆಗಳು ಎದುರಾಗುತ್ತವೆ ಎಂದರ್ಥ. ಆದರೆ ಒಮ್ಮೆಲೆ ಸಾವು ಬಂದರೆ ನೀವು ಕಷ್ಟಗಳ ಸುಲಭವಾಗಿ ನಿವಾರಿಸುತ್ತೀರಿ ಎಂದರ್ಥ.
ನಿಮ್ಮ ಸಾವಿಗೆ ನೀವು ಅಳುವುದು
ನಿಮ್ಮ ಸಾವಿನಿಂದ ನೀವು ಅಳುತ್ತಿರುವಂತೆ ಎಂದಾದರೂ ಕನಸು ಕಂಡರೆ, ನಿಮಗೆ ದ್ರೋಹ ಮಾಡಿದ ವ್ಯಕ್ತಿಯನ್ನು ನೀವು ಶೀಘ್ರದಲ್ಲೇ ಮರೆತುಬಿಡುತ್ತೀರಿ ಎಂದರ್ಥ. ನಿಮ್ಮ ಜೀವನದಲ್ಲಿ ನೀವು ಕೆಲವು ಬದಲಾವಣೆಗಳನ್ನು ಮಾಡಬೇಕಾಗಿದೆ. ಹಿಂದಿನದನ್ನು ಬಿಟ್ಟು ಭವಿಷ್ಯದ ಬಗ್ಗೆ ಹೆಚ್ಚು ಯೋಚಿಸಿ.
ಕನಸಿನಲ್ಲಿ ನಿಮ್ಮ ಸಾವನ್ನೇ ನೋಡುವುದು
ಸ್ವಪ್ನಶಾಸ್ತ್ರದ ಪ್ರಕಾರ, ಒಬ್ಬರ ಸ್ವಂತ ಸಾವಿನ ಕನಸು ಬಹಳ ಮಂಗಳಕರವಾಗಿದೆ. ನೀವು ಹೆಚ್ಚು ಕಾಲ ಬದುಕುತ್ತೀರಿ ಎಂದರ್ಥ. ನೀವು ಶೀಘ್ರದಲ್ಲೇ ಪ್ರಮುಖ ಕೆಲಸದಲ್ಲಿ ಯಶಸ್ಸನ್ನು ಪಡೆಯಬಹುದು. ಜೀವನದಲ್ಲಿ ಒಂದು ಪ್ರಮುಖ ಸಮಸ್ಯೆ ಕೊನೆಗೊಳ್ಳುವ ಸಾಧ್ಯತೆಯಿದೆ. ಇದಲ್ಲದೆ, ಒಬ್ಬರ ಸ್ವಂತ ಸಾವಿನ ಕನಸುಗಳು ಜೀವನದಲ್ಲಿ ಹೊಸ ಆರಂಭವನ್ನು ಸೂಚಿಸುತ್ತವೆ.
ಸತ್ತ ವ್ಯಕ್ತಿಯ ಕನಸು
ಸತ್ತ ವ್ಯಕ್ತಿಯನ್ನು ಕನಸಿನಲ್ಲಿ ನೋಡುವುದು ಎಂದರೆ ನೀವು ಅವನ ಸ್ಮರಣೆಯಿಂದ ಹೊರಬರಲು ಸಾಧ್ಯವಿಲ್ಲ. ಆ ವ್ಯಕ್ತಿಯ ಬಗ್ಗೆ ಇನ್ನೂ ಯೋಚಿಸುತ್ತಿರುತ್ತೇನೆ. ಮತ್ತೆ ನೀವು ಸ್ವಲ್ಪ ಸಮಯದ ಹಿಂದೆ ಮರಣ ಹೊಂದಿದ ಸಂಬಂಧಿಯ ಬಗ್ಗೆ ಕನಸು ಕಂಡರೆ, ಅದು ಸತ್ತ ವ್ಯಕ್ತಿಗೆ ನಿಮ್ಮ ಬಾಂಧವ್ಯವನ್ನು ಸೂಚಿಸುತ್ತದೆ. ಜೊತೆಗೆ ಆ ವ್ಯಕ್ತಿಗೆ ನಿಮ್ಮ ಬಗ್ಗೆ ಒಳ್ಳೆಯ ಆಲೋಚನೆ ಇತ್ತು ಎಂಬರ್ಥ ನೀಡುತ್ತದೆ.
ಅಂತ್ಯಕ್ರಿಯೆ ಮೆರವಣಿಗೆಯ ಕನಸು
ಶವಸಂಸ್ಕಾರದ ಮೆರವಣಿಗೆ ಕನಸು ಬಹಳ ಮಂಗಳಕರವೆಂದು ಪರಿಗಣಿಸಲಾಗಿದೆ. ನೀವು ಈ ಕನಸನ್ನು ನೋಡಿದರೆ, ಶೀಘ್ರದಲ್ಲೇ ದೊಡ್ಡ ಆರ್ಥಿಕ ಲಾಭವಿದೆ ಎಂದರ್ಥ. ಇದು ನಿಮ್ಮ ಹಣಕಾಸು ಪರಿಸ್ಥಿತಿ ಸುಧಾರಿಸುತ್ತದೆ. ಮತ್ತೆ ವಯಸ್ಸಾದ ವ್ಯಕ್ತಿಗೆ ಅಂತಹ ಕನಸು ಇದ್ದರೆ, ಶೀಘ್ರದಲ್ಲೇ ಅವರ ಎಲ್ಲಾ ಕಾಯಿಲೆಗಳು ದೂರವಾಗುತ್ತವೆ ಮತ್ತು ಅವರ ಆಯುಷ್ಯವು ಹೆಚ್ಚಾಗುತ್ತದೆ ಎಂದರ್ಥ.



Click it and Unblock the Notifications