Latest Updates
-
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ
ಪ್ರತಿ ಪೂಜೆಯಲ್ಲೂ ವೀಳ್ಯದೆಲೆಯನ್ನು ಬಳಕೆ ಮಾಡೋದ್ಯಾಕೆ ಗೊತ್ತಾ?
ವೀಳ್ಯದೆಲೆಗೆ ಹಿಂದೂ ಸಂಪ್ರದಾಯದಲ್ಲಿ ಮಹತ್ವದ ಸ್ಥಾನ ಕಲ್ಪಿಸಲಾಗಿದೆ. ಪೂಜೆಯಿಂದ ಹಿಡಿದು ಪ್ರತಿಯೊಂದು ಶುಭ ಕಾರ್ಯಗಳಿಗೂ ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತದೆ. ವೀಳ್ಯದೆಲೆ ಇಲ್ಲದೇ ಯಾವುದೇ ಶುಭ ಕಾರ್ಯಗಳು ಕೂಡ ನಡೆಯೋದಿಲ್ಲ. ಅಷ್ಟಕ್ಕು ಪ್ರತಿಯೊಂದು ಶುಭ ಸಮಾರಂಭಗಳಲ್ಲಿಯೂ ವೀಳ್ಯದೆಲೆಯನ್ನು ಬಳಕೆ ಮಾಡೋದು ಯಾಕೆ ಗೊತ್ತಾ? ಇದರ ಮಹತ್ವ ಏನು ಅನ್ನೋದನ್ನು ತಿಳಿಯೋಣ.
ಪೂಜೆಗೆ ವೀಳ್ಯದೆಲೆಯನ್ನು ಬಳಸೋದು ಯಾಕೆ?
ಪುರಾತನ ಕಾಲದಿಂದಲೂ ವೀಳ್ಯದೆಲೆಯನ್ನು ಶಾಸ್ತ್ರ ಸಂಪ್ರದಾಯಗಳಲ್ಲಿ ಬಳಕೆ ಮಾಡಲಾಗುತ್ತಿದೆ. ಮನೆಯಲ್ಲಿ ಚಿಕ್ಕ ಹೋಮದಿಂದ ಹಿಡಿದು ದೊಡ್ಡ ದೊಡ್ಡ ಪೂಜೆ ಮಾಡಿಸಬೇಕಾದರೂ ವೀಳ್ಯದೆಲೆ ಇರಲೇಬೇಕು. ವೀಳ್ಯದೆಲೆಯ ಹೊರತಾಗಿ ಯಾವುದೇ ಸಂಪ್ರದಾಯಗಳು ಪೂರ್ತಿಯಾಗೋದಕ್ಕೆ ಸಾಧ್ಯವೇ ಇಲ್ಲ. ವೀಳ್ಯದೆಲೆಯು ಭಾರತದ ಉಪ ಖಂಡದಲ್ಲೇ ಹುಟ್ಟಿತು ಅಂತನೂ ಹೇಳಲಾಗುತ್ತಿದೆ. ಸುಮಾರು ಸಾವಿರಾರು ವರ್ಷಗಳ ಇತಿಹಾಸವೂ ಇದಕ್ಕಿದೆ. ಅಷ್ಟೇ ಅಲ್ಲ, ಹಿಂದಿನ ಕಾಲದಲ್ಲಿ ಅನೇಕ ರೋಗಗಳನ್ನು ಗುಣ ಪಡಿಸೋದಕ್ಕೂ ವೀಳ್ಯದೆಲೆಯನ್ನು ಬಳಕೆ ಮಾಡಲಾಗ್ತಿತ್ತು.

ವೀಳ್ಯದೆಲೆಯ ಸಾಂಕೇತಿಕ ಮಹತ್ವ
ವೀಳ್ಯದೆಲೆಗೆ ತುಂಬಾನೇ ಪವಿತ್ರವಾದ ಸ್ಥಾನವಿದೆ. ಪೂಜೆಯ ಸಂದರ್ಭದಲ್ಲಿ ಆ ಸ್ಥಳವನ್ನು ಶುದ್ಧೀಕರಿಸಲು ವೀಳ್ಯದೆಲೆಯನ್ನು ಬಳಕೆ ಮಾಡಲಾಗುತ್ತದೆ. ಅಷ್ಟೇ ಅಲ್ಲ, ವೀಳ್ಯದೆಲೆಯನ್ನು ಪ್ರೀತಿಯ ಸಂಕೇತ ಎಂತಲೂ ಕರೆಯಲಾಗುತ್ತದೆ. ಯಾರು ವೀಳ್ಯದೆಲೆಯನ್ನು ದೇವರಿಗೆ ಭಕ್ತಿಯಿಂದ ಅರ್ಪಿಸುತ್ತಾರೋ ಅವರು ದೇವರ ಅನುಗ್ರಹಕ್ಕೆ ಪಾತ್ರರಾಗುತ್ತಾರೆ. ಇನ್ನೂ ಪೂಜೆಯ ಸಂದರ್ಭದಲ್ಲಿ ದೇವರಿಗೆ ವೀಳ್ಯದೆಲೆಯನ್ನು ಅರ್ಪಿಸೋವಾಗ ನಮಗಿಷ್ಟ ಬಂದಷ್ಟು ವೀಳ್ಯದೆಲೆಯನ್ನು ಅರ್ಪಿಸುವಂತಿಲ್ಲ. ಬದಲಾಗಿ ಪ್ರತಿಯೊಂದು ದೇವರಿಗೂ ಇಷ್ಟೇ ವೀಳ್ಯದೆಲೆಯನ್ನು ಅರ್ಪಿಸಬೇಕು ಎಂಬ ಕಟ್ಟು ಪಾಡುಗಳಿದೆ ಅದನ್ನು ಪಾಳಿಸಲೇಬೇಕು.
ಪೂಜೆಯಲ್ಲಿ ವೀಳ್ಯದೆಲೆಯ ಪಾತ್ರವೇನು?
ಪೂಜೆಯ ಸಂದರ್ಭದಲ್ಲಿ ಭಕ್ತಿ- ಭಾವದಿಂದ ದೇವರಿಗೆ ವೀಳ್ಯದೆಲೆ ಅರ್ಪಣೆ ಮಾಡಲಾಗುತ್ತದೆ. ಒಂದು ತಟ್ಟೆಯಲ್ಲಿ ಹೂವು, ಹಣ್ಣಿನ ಜೊತೆಗೆ ವೀಳ್ಯದೆಲೆಯನ್ನು ದೇವರಿಗೆ ಅರ್ಪಿಸೋದು ಹಿಂದಿನಿಂದಲೂ ನಡೆದುಕೊಂಡು ಬಂದ ಸಂಪ್ರದಾಯವಾಗಿದೆ. ದೇವಾನು ದೇವತೆಗಳು ಇದನ್ನು ಪ್ರಸಾದದ ರೂಪದಲ್ಲಿ ಸ್ವೀಕರಿಸುತ್ತಾರೆ ಎಂಬ ನಂಬಿಕೆಯಿದೆ. ವೀಳ್ಯದೆಲೆಯನ್ನು ಪೂಜೆಯ ಸಂದರ್ಭದಲ್ಲಿ ಮಾತ್ರವಲ್ಲದೇ ಆರತಿ ಬೆಳಗೋವಾಗ ಜೊತೆಗೆ ದೇವರಿಗೆ ಅಲಂಕಾರ ಮಾಡಲು ಬಳಕೆ ಮಾಡಲಾಗುತ್ತದೆ.
ಪೂಜೆಗೆ ವೀಳ್ಯದೆಲೆ ಬಳಕೆ ಮಾಡೋದ್ರಿಂದ ಪುಣ್ಯ ಪಾಪ್ತಿಯಾಗುತ್ತಾ?
ಪೂಜೆಗೆ ವೀಳ್ಯದೆಲೆಯನ್ನು ಬಳಕೆ ಮಾಡೋದ್ರಿಂದ ಅನೇಕ ಪ್ರಯೋಜನಗಳಿದೆ. ವೀಳ್ಯದೆಲೆಯು ಮನಸ್ಸಿಗೆ ಶಾಂತಿಯನ್ನು ನೀಡುವುದು ಮಾತ್ರವಲ್ಲದೇ ನಮ್ಮ ಆತಂಕವನ್ನೂ ದೂರ ಮಾಡುತ್ತಂತೆ. ಜೊತೆಗೆ ಸುತ್ತಮುತ್ತಲಿನ ವಾತಾವರಣವನ್ನು ಶುದ್ಧಿ ಮಾಡಿ ಮನಶಾಂತಿಗೆ ಸಿಗುವಂತೆ ಮಾಡುತ್ತದೆ.
ಪ್ರತಿಯೊಂದು ಕಾರ್ಯಕ್ರಮದಲ್ಲೂ ವೀಳ್ಯದೆಲೆ ಇರಲೇಬೇಕು. ವೀಳ್ಯದೆಲೆಯ ಹೊರತಾಗಿ ಯಾವುದೇ ಕಾರ್ಯಗಳು ನಡೆಯೋದೇ ಇಲ್ಲ. ಇತ್ತ ವೀಳ್ಯದೆಲೆಯ ಜೊತೆಗೆ ಅಡಿಕೆಯನ್ನೂ ಇಡಬೇಕು. ಯಾಕಂದ್ರೆ ಇದು ಸಂಪ್ರದಾಯ. ತಾಂಬೂಲ ಪೂರ್ತಿಯಾಗಬೇಕಾದರೆ ಅಲ್ಲಿ ಎಲೆ ಹಾಗೂ ಅಡಿಕೆ ಇರಲೇಬೇಕು. ಇವು ಎರಡು ಒಟ್ಟಿಗೆ ಇದ್ದಾಗ ಪೂಜೆಗೊಂದು ಕಳೆ ಬರುತ್ತದೆ.
ವೀಳ್ಯದೆಲೆ ಕೇವಲ ಆರೋಗ್ಯಕಾರಿ ಪ್ರಯೋಜವನ್ನು ಮಾತ್ರ ಹೊಂದಿಲ್ಲ. ಇದರ ಜೊತೆಗೆ ಸಂಪ್ರದಾಯಿಕ ಮಹತ್ವವೂ ವೀಳ್ಯದೆಲೆಗಿದೆ.



Click it and Unblock the Notifications

