Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
50 ವರ್ಷದಿಂದ ಒಂಟಿಯಾಗಿರುವ ಅಕ್ಷಯ್ ಖನ್ನಾ; 14 ವರ್ಷದ ಹಿಂದೆ ಮದುವೆ ಕುರಿತ ಹೇಳಿಕೆ ಇಂದಿಗೂ ಪ್ರಸ್ತುತ!
ವ್ಯಕ್ತಿಯೊಬ್ಬನ ಬಹುಮುಖ್ಯ ಕಾಲಘಟ್ಟದಲ್ಲಿ ವಿವಾಹ ಮತ್ತು ಕುಟುಂಬ ಹೊಂದುವುದು ಸಹ ಬಹಳ ಮುಖ್ಯ ಘಟ್ಟ ಆಗಿರಲಿದೆ. ವಯಸ್ಸಾಗುವಿಕೆಯ ಮುನ್ನ ವಿವಾಹವಾಗಿ ಮಕ್ಕಳ ಹೊಂದುವುದು ಜೀವನದ ಮುಖ್ಯ ಉದ್ದೇಶಗಳಲ್ಲಿ ಒಂದಾಗಿದೆ. ಭಾರತದಲ್ಲಿ ಈಗ ಯುವ ಸಮುದಾಯ ಮದುವೆಯ ಆಸಕ್ತಿಯಿಂದ ಹೊರಗುಳಿಯುತ್ತಿರುವುದು ನೋಡಬಹುದು.
ಹಾಗೆ ಶ್ರೀಮಂತ ವರ್ಗವು ಕೂಡ ಇದರಿಂದ ಹೊರತಾಗಿಲ್ಲ. ಈಗ ಬಾಲಿವುಡ್ ನಟ ಅಕ್ಷಯ್ ಖನ್ನಾ ಕೂಡ ಇದೇ ವಿಚಾರವಾಗಿ ಸುದ್ದಿಯಾಗುತ್ತಿದ್ದಾರೆ. ಇತ್ತಿಚಿಗೆ ಬಿಡುಗಡೆಯಾದ ರಣವೀರ್ ಸಿಂಗ್ ಅಭಿನಯದ ಧುರಂಧರ್ ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಬಿರುಗಾಳಿ ಎಬ್ಬಿಸಿದೆ. ಇದೇ ಸಿನಿಮಾದಲ್ಲಿ ಕಾಣಿಸಿಕೊಂಡ ಅಕ್ಷಯ್ ಖನ್ನಾ ಈಗ ಎಲ್ಲಾ ಕಡೆ ಸುದ್ದಿಯಾಗುತ್ತಿದ್ದಾರೆ.

ಅಕ್ಷಯ್ ಖನ್ನಾ ಅವರು ಈಗ ತಮ್ಮ ವೈಯಕ್ತಿಕ ಜೀವನ ಕುರಿತಾದ ವಿಚಾರದಿಂದ ಸುದ್ದಿಯಾಗಿದ್ದಾರೆ. ಅವರು 50 ವರ್ಷ ಆಗಿದ್ದರೂ ಇನ್ನು ವಿವಾಹವಾಗಿಲ್ಲ. ಇದೇ ಕಾರಣದಿಂದ ಸುದ್ದಿಯಾಗುತ್ತಿದ್ದಾರೆ. ಆರಂಭದಲ್ಲಿ ಬಾಲಿವುಡ್ ಹೀರೋಗಳ ಸಾಲಿನಲ್ಲಿ ಹಿಟ್ ಸಿನಿಮಾಗಳ ನೀಡಿದ್ದ ಅವರು, ನೋಡಲು ಸುಂದರವಾಗಿಯೂ ಇದ್ದರೂ. ಆದ್ರೆ ವಿವಾಹ ಮಾತ್ರ ಆಗಿರಲಿಲ್ಲ.
ಆದ್ರೆ ಮದುವೆ ಕುರಿತು ಅವರು 14 ವರ್ಷದ ಹಿಂದೆ ಹೇಳಿದ್ದ ಮಾತೊಂದು ಈಗ ನಿಜವಾಗುತ್ತಿದೆ. ಭಾರತದ ಪ್ರಸ್ತುತ ಸ್ಥಿತಿ ಅಥವಾ ಯುವ ಜನತೆಯ ಮನಸ್ಥಿತಿಯನ್ನ ಅವರು 14 ವರ್ಷದ ಹಿಂದೆಯೇ ಹೇಳಿದ್ದರು. ಈ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಹಾಗಾದ್ರೆ ಅಕ್ಷಯ್ ಖನ್ನಾ ಮದುವೆ ಕುರಿತಾಗಿ ಹೇಳಿದ್ದೇನು?
ಹಣವಂತರಾಗಿ, ಸಿನಿಮಾ ಮೂಲಕ ಹೆಸರು ಮಾಡಿದ್ದರೂ ಅವರು ಒಂಟಿಯಾಗಿರಲು ಬಯಸಿದ್ದ ಹಿಂದಿರುವ ಕಾರಣವೇನು ಎಂಬುದನ್ನು ಆವರು ವಿವರಿಸಿದ್ದಾರೆ. 2012ರಲ್ಲಿ ನೀಡಿದ್ದ ಸಂದರ್ಶನವೊಂದರಲ್ಲಿ ಅವರು ವಿವಾಹ ಕುರಿತಾಗಿ ಹಾಗೆ ತಾವು ಒಂಟಿಯಾಗಿರಲು ಬಯಸಿದ್ದೇಕೆ ಅನ್ನೋದನ್ನು ಹೇಳಿಕೊಂಡಿದ್ದಾರೆ. ಈಗ ಮಾತುಗಳು ಪ್ರಸ್ತುತ ದಿನಮಾನಕ್ಕೂ ಸರಿಯಾಗಿ ಹೊಂದುತ್ತಿವೆ.
36 ವರ್ಷದವರಾಗಿದ್ದಾಗ ಈ ಸಂದರ್ಶನ ನೀಡಲಾಗಿದೆ. ಈ ಸಂದರ್ಶನದ ವೇಳೆ ಅವರಿಗೆ ನೀವ್ಯಾಕೆ ಇನ್ನು ಮದುವೆಯಾಗಿಲ್ಲ ಎಂಬ ಪ್ರಶ್ನೆ ಕೇಳಲಾಗಿತ್ತು. ಈ ಪ್ರಶ್ನೆಗೆ ಉತ್ತರಿಸಿದ ಅವರು, ನನಗೆ ತುಂಬಾ ನಿರಾತಂಕದ ಜೀವನ ನಡೆಸಲು ಇಷ್ಟ. ನನಗೆ ಜವಾಬ್ದಾರಿ ಇಷ್ಟವಿಲ್ಲ, ಮತ್ತು ಮಕ್ಕಳನ್ನು ಹೊಂದುವುದಕ್ಕಿಂತ ದೊಡ್ಡ ಜವಾಬ್ದಾರಿ ಇನ್ನೊಂದಿಲ್ಲ. ಹೆಂಡತಿ ಅಥವಾ ಕುಟುಂಬಕ್ಕೆ ಹೊಣೆಗಾರಿಕೆಗಿಂತ ದೊಡ್ಡ ಜವಾಬ್ದಾರಿ ಇನ್ನೊಂದಿಲ್ಲ. ಅದು ಯಾವುದೇ ಪುರುಷನ ಅಂತಿಮ ಜವಾಬ್ದಾರಿ ಮತ್ತು ನಾನು ಆ ಜವಾಬ್ದಾರಿಯನ್ನು ಬಯಸುವುದಿಲ್ಲ. ನಾನು ಯಾವುದೇ ಜವಾಬ್ದಾರಿಯಿಲ್ಲದೆ ಏಕಾಂಗಿಯಾಗಿ ಸಂತೋಷವಾಗಿದ್ದೇನೆ, ನಾನು ಯಾರನ್ನೂ ನೋಡಿಕೊಳ್ಳಬೇಕಾಗಿಲ್ಲ, ನಾನು ಯಾರ ಬಗ್ಗೆಯೂ ಚಿಂತಿಸಬೇಕಾಗಿಲ್ಲ. ನಾನು ನನ್ನ ಬಗ್ಗೆ ಮಾತ್ರ ಚಿಂತಿಸಬೇಕಾಗಿದೆ. ಇದು ಅದ್ಭುತ ಜೀವನ ಎಂದು ಅವರು ಹೇಳಿಕೊಂಡಿದ್ದರು.
ಇದೊಂದೇ ಬಾರಿ ಅಲ್ಲ ಅವರು ಹಲವು ಬಾರಿ, ಹಲವು ಸಂದರ್ಶನದ ಸಮಯದಲ್ಲೂ ಕೂಡ ತಮ್ಮ ವಿವಾಹ ಸಂಬಂಧಿತ ಪ್ರಶ್ನೆಗಳಿಗೆ ಇದೇ ರೀತಿಯಾದ ಉತ್ತರ ನೀಡುತ್ತಿದ್ದರು. ಇದು ವಿವಾಹ ಕುರಿತಾಗಿ ಅವರಲ್ಲಿದ್ದ ಆಲೋಚನೆಗಳನ್ನು ವಿವರಿಸುತ್ತಿತ್ತು.
ಈ ವಿಡಿಯೋ ಇನ್ಸ್‌ಸ್ಟಾಗ್ರಾಮ್‌ನಲ್ಲಿ ಈಗ ಮತ್ತೆ ವೈರಲ್ ಆಗುತ್ತಿದೆ. ಅವರ ವಿವಾಹ ಕುರಿತಾದ ದೂರದೃಷ್ಟಿ ಇಂದಿಗೂ ಪ್ರಸ್ತುತ ಎನಿಸಿದೆ. ಹಲವರು ಅವರ ಹೇಳಿಕೆಯನ್ನು ಬೆಂಬಲಿಸಿದ್ದಾರೆ. ಇಂತಹ ವಿಚಾರದಿಂದಾಗಿ ಅಕ್ಷಯ್ ಖನ್ನಾ ಈಗ ಸುದ್ದಿಯಾಗುತ್ತಿದ್ದು, ಅವರ ಹಳೆಯ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಲು ಆರಂಭಿಸಿದೆ. ಹಾಗೆ ಧುರಂಧರ್ ಸಿನಿಮಾದಲ್ಲಿ ಅವರ ನಟನೆಗೆ ಎಲ್ಲರು ಫಿದಾ ಆಗಿದ್ದಾರೆ. ಅಕ್ಷಯ್ ಖನ್ನಾ ಈಗ ಸಾಲು ಸಾಲು ಸಿನಿಮಾಗಳ ಆಫರ್ ಸಹ ಪಡೆದಿದ್ದಾರೆ.



Click it and Unblock the Notifications
