Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಭವಿಷ್ಯ (ಜೂ 17-ಜೂ 24): ಈ ವಾರ ನಿಮ್ಮ ರಾಶಿಫಲ ಹೇಗಿದೆ?
ಗ್ರಹಗತಿಗಳ ಆಧಾರದ ಮೇಲೆ ಜೂನ್ 17ರಿಂದ ಜೂನ್ 24ರವರೆಗಿನ ವಾರ ಭವಿಷ್ಯ ನೋಡುವುದಾದರೆ ಈ ವಾರ ಕೆಲವೊಂದು ರಾಶಿಯವರಿಗೆ ಸೂಪರ್ ಆಗಿದೆ, ಇನ್ನು ಕೆಲವು ರಾಶಿಯವರು ಸ್ವಲ್ಪ ಮುನ್ನೆಚ್ಚರಿಕೆವಹಿಸಿ. ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ:
ಮೇಷ ರಾಶಿ:
ನಿಮಗೆ ಈ ವಾರ ಶುಭ ತರಲಿದೆ. ಸಕಾರಾತ್ಮಕ ಬೆಳವಣಿಗೆ ಕಾಣುವಿರಿ. ನಿಮ್ಮ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಉದ್ಯಮಿಗಳು ತಮ್ಮ ವ್ಯವಹಾರವನ್ನು ಮುಂದುವರಿಸಲು ಇದು ಸದಾವಕಾಶ. ಆರ್ಥಿಕವಾಗಿ ಉತ್ತಮ ವಾರ. ಅವಿವಾಹಿತರಿಗೆ ವಿವಾಹದ ಯೋಗ. ಆರೋಗ್ಯದ ದೃಷ್ಟಿಯಿಂದ ಈ ವಾರ ನಿಮಗೆ ಉತ್ತಮವಾಗಿರುತ್ತದೆ.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 11
ಅದೃಷ್ಟದ ದಿನ: ಸೋಮವಾರ

ವೃಷಭ ರಾಶಿ:
ಪಾರ್ಟನರ್ ಶಿಪ್ ವ್ಯವಹಾರವನ್ನು ಪ್ರಾರಂಭಿಸಲು ಬಯಸಿದರೆ, ಇದು ಸೂಕ್ತ ಕಾಲ. ಆದಾಗ್ಯೂ, ನಿಮ್ಮ ಸಣ್ಣ ನಿರ್ಧಾರವನ್ನು ಕೂಡ ಎಚ್ಚರಿಕೆಯಿಂದ ತೆಗೆದುಕೊಳ್ಳಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ನಿಮ್ಮ ಬಜೆಟ್‌ಗೆ ಅನುಗುಣವಾಗಿ ಖರ್ಚು ಮಾಡಿ. ಅನಗತ್ಯ ಖರ್ಚು ಬೇಡ. ವಾರದ ಕೊನೆಯಲ್ಲಿ, ಇದ್ದಕ್ಕಿದ್ದಂತೆ ನೀವು ಪ್ರಯಾಣವನ್ನು ಮಾಡಬಹುದು. ನಿಮ್ಮ ಆರೋಗ್ಯದ ಬಗ್ಗೆಯೂ ಕಾಳಜಿ ವಹಿಸಿ.
ಅದೃಷ್ಟ ಬಣ್ಣ: ಹಳದಿ
ಅದೃಷ್ಟ ಸಂಖ್ಯೆ: 7
ಅದೃಷ್ಟದ ದಿನ: ಗುರುವಾರ
ಮಿಥುನ ರಾಶಿ:
ಈ ವಾರ ಮಿಶ್ರಫಲ. ಸಂಗಾತಿಯೊಂದಿಗಿನ ವಿರಹ ನೋವುಂಟುಮಾಡಬಹುದು. ನಿಮ್ಮ ನಡುವಿನ ಬಿರುಕು ನಿಮ್ಮ ಮನೆಯ ವಾತಾವರಣದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ. ಹಾಗಾಗಿ ಬಹಳ ಕಾಳಜಿಯಿಂದ ಮಾತನಾಡಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಸಮಯದಲ್ಲಿ ನೀವು ಸಾಲ ತೆಗೆದುಕೊಳ್ಳುವುದನ್ನು ತಪ್ಪಿಸಿ. ಉದ್ಯೋಗಿಗಳಿಗೆ ಈ ವಾರ ಉತ್ತಮವಾಗಿರುತ್ತದೆ. ವ್ಯಾಪಾರಸ್ಥರು ಜಾಗರೂಕರಾಗಿರಬೇಕು. ವಾರದ ಅಂತ್ಯದಲ್ಲಿ ಆರೋಗ್ಯ ಸಮಸ್ಯೆ ಎದುರಾಗಬಹುದು ಎಚ್ಚರ.
ಅದೃಷ್ಟ ಬಣ್ಣ: ಬಿಳಿ
ಅದೃಷ್ಟ ಸಂಖ್ಯೆ: 25
ಅದೃಷ್ಟದ ದಿನ: ಶುಕ್ರವಾರ
ಕರ್ಕ ರಾಶಿ:
ಈ ವಾರ ನಿಮ್ಮ ಜೀವನದಲ್ಲಿ ಹೊಸ ಭರವಸೆ ಮೂಡುತ್ತದೆ. ಮಕ್ಕಳ ಕಡೆಯಿಂದ ಸಂತೋಷ. ಅವರ ಕಡೆಯಿಂದ ಕೆಲವು ಒಳ್ಳೆಯ ಸುದ್ದಿಗಳು ಬರಬಹುದು. ಕುಟುಂಬಕ್ಕೆ ಸಾಕಷ್ಟು ಸಮಯವನ್ನು ನೀಡಿ. ಈ ವಾರ ಹಣದ ವಿಷಯದಲ್ಲಿ ಸಂಕಷ್ಟ. ನಿಮ್ಮ ಬಜೆಟ್ ಗಿಂತ ಖರ್ಚು ಹೆಚ್ಚಾಗಬಹುದು. ಸೇವಿಸುವ ಆಹಾರದ ಬಗ್ಗೆ ಎಚ್ಚರ ಇರಲಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟ ಸಂಖ್ಯೆ: 9
ಅದೃಷ್ಟದ ದಿನ: ಬುಧವಾರ
ಸಿಂಹ:
ನಿಮ್ಮ ಕೋಪವನ್ನು ನೀವು ನಿಯಂತ್ರಿಸುವುದನ್ನು ಕಲಿಯಿರಿ. ನಿಮ್ಮ ಅನಿಯಂತ್ರಿತ ಕೋಪ ಎಲ್ಲಾ ಕೆಲಸವನ್ನೂ ಹಾಳು ಮಾಡಬಹುದು. ಸಣ್ಣ ಕೆಲಸಗಳನ್ನೂ ಸಂಪೂರ್ಣ ಜವಾಬ್ದಾರಿಯಿಂದ ಮಾಡಿ. ಲಾಭ ಗಳಿಸಲು ಶಾರ್ಟ್‌ಕಟ್ ದಾರಿ ಹುಡುಕುವುದು ಸೂಕ್ತವಲ್ಲ. ಹಣದ ವಿಷಯದಲ್ಲಿ ಈ ವಾರ ಸಾಮಾನ್ಯವಾಗಿರುತ್ತದೆ. ವಾರದ ಕೊನೆಯಲ್ಲಿ, ನಿಮ್ಮ ಸಂಗಾತಿಯೊಂದಿಗೆ ಸ್ವಲ್ಪ ದೂರ ಪ್ರಯಾಣಿಸುವ ಸದಾವಕಾಶ ಪಡೆಯುವಿರಿ.
ಅದೃಷ್ಟ ಬಣ್ಣ: ಬೂದು
ಅದೃಷ್ಟ ಸಂಖ್ಯೆ: 16
ಅದೃಷ್ಟದ ದಿನ: ಸೋಮವಾರ
ಕನ್ಯಾ ರಾಶಿ:
ಈ ವಾರ ಚಿಲ್ಲರೆ ವ್ಯಾಪಾರಿಗಳಿಗೆ ತುಂಬಾ ಲಾಭದಾಯಕವಾಗಿರುತ್ತದೆ. ಸಾಕಷ್ಟು ಲಾಭ ಗಳಿಸುವಿರಿ. ಉದ್ಯೋಗಸ್ಥರ ಶ್ರಮಕ್ಕೆ ತಕ್ಕ ಫಲ ಸಿಗುತ್ತದೆ. ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಆದಾಗ್ಯೂ, ಯೋಚಿಸದೆ ಅನಗತ್ಯ ಖರ್ಚು ಮಾಡಬೇಡಿ. ಕೌಟುಂಬಿಕ ಜೀವನ ಸಂತೋಷವಾಗಿರುತ್ತದೆ. ತಂದೆಯೊಂದಿಗಿನ ನಿಮ್ಮ ಸಂಬಂಧವು ಇನ್ನಷ್ಟು ಬಲಗೊಳ್ಳುತ್ತದೆ. ಈ ಅವಧಿಯಲ್ಲಿ ನಿಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ.
ಅದೃಷ್ಟ ಬಣ್ಣ: ನೇರಳೆ
ಅದೃಷ್ಟ ಸಂಖ್ಯೆ: 19
ಅದೃಷ್ಟದ ದಿನ: ಶನಿವಾರ
ತುಲಾ:
ಕೆಲಸದ ವಿಷಯದಲ್ಲಿ ಈ ವಾರ ನಿಮಗೆ ಉತ್ತಮ ಲಾಭ ಸಿಗುವುದಿಲ್ಲ. ಆದರೆ ಮನಸ್ಸು ಕೆಡಿಸಿಕೊಳ್ಳಬೇಡಿ. ಕಷ್ಟ ಹೆಚ್ಚಾದರೂ ಎದೆಗುಂದಬೇಡಿ ವ್ಯಾಪಾರಸ್ಥರು ಈ ವಾರ ಹಣಕ್ಕೆ ಸಂಬಂಧಿಸಿದ ಯಾವುದೇ ಪ್ರಮುಖ ವಹಿವಾಟು ಮಾಡದೇ ಇರುವುದೇ ಉತ್ತಮ. ವೈಯಕ್ತಿಕ ಜೀವನದಲ್ಲಿ ಸಾಕಷ್ಟು ಏರಿಳಿತಗಳು ಇರುತ್ತವೆ. ನಿಮ್ಮ ಸಂಗಾತಿಯೊಂದಿಗೆ ಸಂತೋಷವಾಗಿ ಇರಲು ಶ್ರಮಪಡಬೇಕು. ಸಣ್ಣ ವಿಷಯಗಳಿಗೆ ಕೋಪಗೊಳ್ಳುವುದನ್ನು ತಪ್ಪಿಸಿ. ಆರೋಗ್ಯದ ಸಮಸ್ಯೆಗಳೂ ಕಾಡಬಹುದು.
ಅದೃಷ್ಟದ ಬಣ್ಣ: ಪೀಚ್
ಅದೃಷ್ಟ ಸಂಖ್ಯೆ: 10
ಅದೃಷ್ಟದ ದಿನ: ಗುರುವಾರ
ವೃಶ್ಚಿಕ:
ಈ ವಾರ ನಿಮಗೆ ತುಂಬಾ ರೋಮ್ಯಾಂಟಿಕ್ ಆದ ವಾರ. ಸಂಗಾತಿಯೊಂದಿಗೆ ಉತ್ತಮ ಸಮಯ ಕಳೆಯುವಿರಿ. ಲವ್ ಮ್ಯಾರೇಜ್ ಆಗಲು ಇಚ್ಛಿಸುವವರ ಆಸೆ ಈಡೇರಬಹುದು. ಆರ್ಥಿಕ ಪರಿಸ್ಥಿತಿ ಉತ್ತಮವಾಗಿರುತ್ತದೆ. ವಿದೇಶಕ್ಕೆ ಹೋಗಿ ಉದ್ಯೋಗ ಮಾಡಲು ಬಯಸಿದರೆ, ಈ ವಾರ ಅದೂ ಸಾಧ್ಯ. ಹೋಟೆಲ್ ಅಥವಾ ರೆಸ್ಟೋರೆಂಟ್, ಬಟ್ಟೆ ಇತ್ಯಾದಿಗಳಿಗೆ ಸಂಬಂಧಿಸಿದ ವ್ಯಾಪಾರ ಮಾಡುವವರಿಗೆ ಈ ವಾರ ಆದಾಯ ತರುವ ವಾರವಾಗಿದೆ. ವಯಕ್ತಿಕವಾಗಿ ಆನಂದವಾಗಿರುತ್ತೀರಿ.
ಅದೃಷ್ಟ ಬಣ್ಣ: ಮರೂನ್
ಅದೃಷ್ಟ ಸಂಖ್ಯೆ: 36
ಅದೃಷ್ಟದ ದಿನ: ಮಂಗಳವಾರ
ಧನು ರಾಶಿ:
ಕೌಟುಂಬಿಕ ಜೀವನದಲ್ಲಿ ಸುಖ ಶಾಂತಿ ಮರುಕಳಿಸುತ್ತದೆ. ಒಡಹುಟ್ಟಿದವರೊಂದಿಗಿನ ನಿಮ್ಮ ಸಂಬಂಧ ಉತ್ತಮವಾಗಿರುತ್ತದೆ. ಅವಿವಾಹಿತರಿಗೆ ಉತ್ತಮ ವಿವಾಹ ಪ್ರಸ್ತಾಪ ಬರಬಹುದು, ಹಣದ ವಿಷಯದಲ್ಲಿ ಜಾಗರೂಕರಾಗಿರುವುದು ಒಳ್ಳೆಯದು. ಇಲ್ಲವಾದರೆ ವ್ಯಾಪಾರದಲ್ಲಿಯೂ ನಷ್ಟವಾಗಬಹುದು. ಉದ್ಯೋಗಸ್ಥರಿಗೆ ಮಿಶ್ರ ಫಲ. ಈ ವಾರ ಯಾವುದೇ ದೀರ್ಘಕಾಲದ ಕಾಯಿಲೆಯು ನಿಮ್ಮನ್ನು ಬಾಧಿಸಬಹುದು ಎಚ್ಚರ ವಹಿಸಿ.
ಅದೃಷ್ಟ ಬಣ್ಣ: ಹಸಿರು
ಅದೃಷ್ಟ ಸಂಖ್ಯೆ: 15
ಅದೃಷ್ಟದ ದಿನ: ಸೋಮವಾರ
ಮಕರ:
ಆರ್ಥಿಕ ದೃಷ್ಟಿಯಿಂದ ಈ ವಾರ ನಿಮಗೆ ತುಂಬಾ ಒಳ್ಳೆಯದು. ಹೂಡಿಕೆಗೆ ಉತ್ತಮ ಆದಾಯ ಹಿಂಪಡೆಯುತ್ತೀರಿ. ಆಸ್ತಿಗೆ ಸಂಬಂಧಿಸಿದ ಯಾವುದೇ ವಿಷಯವು ನ್ಯಾಯಾಲಯದಲ್ಲಿ ಇತ್ಯರ್ಥ ಆಗದೇ ಇದ್ದಲ್ಲಿ ಈ ವಾರ ಪರಿಹಾರ ಸಿಗಲಿದೆ. ಕೆಲಸದ ಬಗ್ಗೆ ಅತಿಯಾಗಿ ಚಿಂತಿಸಬೇಡಿ. ಕುಟುಂಬಕ್ಕೆ ಸಮಯ ಕೊಡಿ. ಆರೋಗ್ಯದ ವಿಷಯದಲ್ಲಿ, ಈ ವಾರ ಮಿಶ್ರಫಲ ಎನ್ನಬಹುದು.
ಅದೃಷ್ಟ ಬಣ್ಣ: ಮರೂನ್
ಅದೃಷ್ಟ ಸಂಖ್ಯೆ: 4
ಅದೃಷ್ಟದ ದಿನ: ಭಾನುವಾರ
ಕುಂಭ ರಾಶಿ:
ಈ ವಾರ ನಿಮಗೆ ಮಿಶ್ರಫಲ. ಕೆಲವೊಮ್ಮೆ ಗೆಲುವು ಕೆಲವೊಮ್ಮೆ ಸೋಲು. ಆದರೆ ಎದೆಗುಂದಬೇಡಿ. ನಿಮ್ಮ ಕೆಲವು ಕೆಲಸಗಳು ಮಧ್ಯದಲ್ಲಿ ಸಿಲುಕಿಕೊಳ್ಳಬಹುದು. ಆರ್ಥಿಕ ನಷ್ಟ ಉಂಟಾಗಬಹುದು. ಆದರೆ ಶೀಘ್ರದಲ್ಲೇ ಎಲ್ಲದಕ್ಕೂ ಪರಿಹಾರ ಸಿಗುತ್ತದೆ. ಚೇತರಿಸಿಕೊಳ್ಳಲು ಉತ್ತಮ ಅವಕಾಶ ಸಿಗುತ್ತದೆ. ಅದನ್ನು ಉಪಯೋಗಿಸಿಕೊಳ್ಳಿ. ನಿಮ್ಮ ಮಾತು ಮತ್ತು ನಡವಳಿಕೆಯ ಬಗ್ಗೆ ಗಮನವಿರಲಿ. ಯಾರನ್ನೂ ನೋಯಿಸಬೇಡಿ. ತಂದೆಯ ಆರೋಗ್ಯದ ಬಗ್ಗೆ ಗಮನವಿರಲಿ ಆಸ್ಪತ್ರೆಗಳಿಗೆ ಭೇಟಿ ನೀಡಬೇಕಾಗಬಹುದು. ವಾರಾಂತ್ಯವು ಆರಾಮದಾಯಕವಾಗಿರುತ್ತದೆ.
ಅದೃಷ್ಟ ಬಣ್ಣ: ಕೆಂಪು
ಅದೃಷ್ಟ ಸಂಖ್ಯೆ: 20
ಅದೃಷ್ಟದ ದಿನ: ಶುಕ್ರವಾರ
ಮೀನ:
ಉದ್ಯೋಗಸ್ಥರಿಗೆ ಒಳ್ಳೆಯ ಸಮಯ. ಅದು ಉದ್ಯೋಗ ಅಥವಾ ವ್ಯಾಪಾರದಲ್ಲಿ ನೀವು ಕಷ್ಟಪಟ್ಟು ಕೆಲಸ ಮಾಡಬೇಕು. ಫಲ ಸಿಗುತ್ತದೆ. ಖಾಸಗಿ ಉದ್ಯೋಗ ಮಾಡುವವರಿಗೆ ಕೆಲಸದ ಒತ್ತಡ ಹೆಚ್ಚಿರುತ್ತದೆ. ಹಾಗಾಗಿ ಸುಸ್ತಾದ ಅನುಭವ ಆಗಬಹುದು. ಸ್ವಲ್ಪ ಬ್ರೇಕ್ ತೆಗೆದುಕೊಳ್ಳಿ. ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಉಳಿತಾಯದ ಕಡೆ ಹೆಚ್ಚು ಗಮನ ಹರಿಸಿ. ಆರೋಗ್ಯ ಸಂಬಂಧಿ ಸಮಸ್ಯೆ ಎದುರಾಗಬಹುದು. ಹಾಗಾಗಿ ಆ ಬಗ್ಗೆಯೂ ಗಮನವಹಿಸಿ.
ಅದೃಷ್ಟ ಬಣ್ಣ: ಕ್ರೀಮ್
ಅದೃಷ್ಟ ಸಂಖ್ಯೆ:
ಅದೃಷ್ಟದ ದಿನ: ಬುಧವಾರ



Click it and Unblock the Notifications
