Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ವಾರ ಭವಿಷ್ಯ (ಜೂ 10-ಜೂ 17): ಈ ವಾರ 7 ರಾಶಿಯವರಿಗೆ ಸೂಪರ್ ಆಗಿದೆ
ಗ್ರಹಗತಿಗಳ ಆಧಾರದ ಮೇಲೆ ಜೂನ್ 10ರಿಂದ ಜೂನ್ 17ರವರೆಗಿನ ವಾರ ಭವಿಷ್ಯ ನೋಡುವುದಾದರೆ ಈ ವಾರ ಕೆಲವೊಂದು ರಾಶಿಯವರಿಗೆ ಸೂಪರ್ ಆಗಿದೆ, ಇನ್ನು ಕೆಲವು ರಾಶಿಯವರು ಸ್ವಲ್ಪ ಮುನ್ನೆಚ್ಚರಿಕೆವಹಿಸಿ. ಈ ವಾರ ನಿಮ್ಮ ರಾಶಿಗೆ ಹೇಗಿರಲಿದೆ ಎಂದು ನೋಡೋಣ:

ಮೇಷ ರಾಶಿ
ಮೇಷ ರಾಶಿಯವರಿಗೆ ಈ ವಾರ ಉತ್ತಮವಾಗಿರಲಿದೆ. ಚರ್ಚೆಯನ್ನು ತಪ್ಪಿಸಲು ನಿಮಗೆ ಸಲಹೆ ನೀಡಲಾಗಿದೆ. ಅದು ಮನೆಯಾಗಿರಲಿ, ಉದ್ಯೋಗದ ಸ್ಥಳವಾಗಿರಲಿ ಅನಗ್ಯತ ಚರ್ಚೆಗಳಿಂದ ದೂರವಿರಿ. ವಾರದ ಮಧ್ಯದಲ್ಲಿ ಹಠಾತ್ ಕೆಲಸದ ಹೊರೆ ಹೆಚ್ಚಾಗುವುದರಿಂದ ನೀವು ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಮಾನಸಿಕವಾಗಿಯೂ ನೀವು ಸಾಕಷ್ಟು ಒತ್ತಡವನ್ನು ಅನುಭವಿಸಬೇಕಾಗುವುದು. ವ್ಯಾಪಾರಸ್ಥರು ಈ ಅವಧಿಯಲ್ಲಿ ಪ್ರಯಾಣ ಮಾಡಬಹುದು. ಆದರೆ ಈ ಪ್ರಯಾಣಗಳಿಂದ ನೀವು ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದ ಕಾರಣ ನೀವು ತುಂಬಾ ನಿರಾಶೆಗೊಳ್ಳಬಹುದು. ವಾರದ ಮಧ್ಯ ನಿಮಗೆ ಹೆಚ್ಚು ಫಲಫ್ರದವಾಗಿರಲಿದೆ. ಈ ಸಮಯದಲ್ಲಿ, ನಿಮ್ಮ ಮನೆಯ ವಾತಾವರಣದಲ್ಲಿ ದೊಡ್ಡ ಸುಧಾರಣೆ ಕಂಡು ಬರಲಿದೆ. ಈ ಅವಧಿಯಲ್ಲಿ ನಿಮ್ಮ ಪ್ರೀತಿಪಾತ್ರರ ಬೆಂಬಲವನ್ನು ನೀವು ಪಡೆಯುತ್ತೀರಿ. ಆರೋಗ್ಯದ ವಿಷಯದಲ್ಲಿ, ಈ ವಾರ ಏರಿಳಿತಗಳಿಂದ ತುಂಬಿರುತ್ತದೆ.
ಅದೃಷ್ಟದ ಬಣ್ಣ: ನೇರಳೆ
ಅದೃಷ್ಟದ ಸಂಖ್ಯೆ: 5
ಅದೃಷ್ಟದ ದಿನ: ಶನಿವಾರ
ವೃಷಭ ರಾಶಿ
ಈ ವಾರ ನಿಮಗೆ ಕೆಲಸದ ವಿಷಯದಲ್ಲಿ ನೀವು ತುಂಬಾ ಕಾರ್ಯನಿರತವಾಗಿರುತ್ತೀರಿ. ಕೆಲಸದ ಹೊರೆ ಹೆಚ್ಚಿರಲಿದೆ.ಹೀಗಾಗಿ ಕುಟುಂಬಕ್ಕೆ ಸಮಯ ಕೊಡಲು ಕಷ್ಟವಾಗಬಹುದು. ಕೆಲಸದ ಜೊತೆಗೆ ನಿಮ್ಮ ವೈಯಕ್ತಿಕ ವಿಷಯದ ಕಡೆಗೆ ಗಮನ ಹರಿಸುವುದು ಉತ್ತಮ. ಉದ್ಯೋಗದಲ್ಲಿ ಇರುವವರಿಗೆ ಈ ದಿನ ಅನುಕೂಲಕರವಾಗಿದೆ. ನೀವು ಹೊಸ ಉದ್ಯೋಗವನ್ನು ಹುಡುಕುತ್ತಿದ್ದರೆ ಒಳ್ಳೆಯ ಅವಕಾಶವನ್ನು ಪಡೆಯಬಹುದು. ವ್ಯಾಪಾರಸ್ಥರಿಗೆ ಆರ್ಥಿಕ ಲಾಭ ದೊರೆಯಲಿದೆ. ಆದರೆ, ಹಣದ ವಿಚಾರದಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ಮಾಡಬೇಡಿ. ಈ ಸಮಯದಲ್ಲಿ ಕೆಲವರು ನಿಮಗೆ ಮೋಸ ಮಾಡಲು ಪ್ರಯತ್ನಿಸಬಹುದು. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಆರೋಗ್ಯ ಸಂಬಂಧಿ ಸಮಸ್ಯೆ ಕಾಣಿಸಬಹುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 21
ಅದೃಷ್ಟದ ದಿನ: ಬುಧವಾರ
ಮಿಥುನ ರಾಶಿ
ಉದ್ಯಮಿಗಳು ಹೊಸ ಯೋಜನೆಯಲ್ಲಿ ಹಣವನ್ನು ಹೂಡಿಕೆ ಮಾಡಲು ಯೋಚಿಸುತ್ತಿದ್ದರೆ ಅಥವಾ ತಮ್ಮ ವ್ಯವಹಾರವನ್ನು ವಿಸ್ತರಿಸಲು ಯೋಜಿಸುತ್ತಿದ್ದರೆ, ಅಂತಹ ನಿರ್ಧಾರಗಳನ್ನು ನೀವು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕಾಗಿದೆ, ಪರಿಣಿತರ ಸಲಹೆ ಕೂಡ ಪಡೆಯುವುದು ಒಳ್ಳೆಯದು. ಆತುರದ ಹೆಜ್ಜೆ ನಿಮ್ಮನ್ನು ತೊಂದರೆಗೆ ಸಿಲುಕಿಸಬಹುದು. ಉದ್ಯೋಗಿಗಳಿಗೆ ಈ ವಾರ ತುಂಬಾ ಉತ್ತಮವಾಗಿರಲಿದೆ. ಈ ಅವಧಿಯಲ್ಲಿ ಕೆಲಸದ ಒತ್ತಡ ತುಂಬಾ ಕಡಿಮೆ ಇರಲಿದೆ. ಈ ವಾರದಲ್ಲಿ ನಿಮ್ಮ ಕಠಿಣ ಪರಿಶ್ರಮದ ಸರಿಯಾದ ಫಲಿತಾಂಶಗಳನ್ನು ನೀವು ಪಡೆಯಬಹುದು. ಹಣದ ವಿಷಯದಲ್ಲಿ ಈ ವಾರ ತುಂಬಾ ದುಬಾರಿಯಾಗಬಹುದು. ಹೆಚ್ಚುತ್ತಿರುವ ವೆಚ್ಚಗಳು ನಿಮಗೆ ತಲೆನೋವುಂಟು ಮಾಡಬಹುದುದು. ಕೌಟುಂಬಿಕ ಜೀವನ ತುಂಬಾ ಚೆನ್ನಾಗಿರಲಿದೆ. ಆರೋಗ್ಯದ ಬಗ್ಗೆ ಹೇಳುವುದಾದರೆ ನೀವು ಸಣ್ಣ ಸಮಸ್ಯೆಯನ್ನೂ ನಿರ್ಲಕ್ಷಿಸಬೇಡಿ.
ಅದೃಷ್ಟದ ಬಣ್ಣ: ಕಂದು
ಅದೃಷ್ಟದ ಸಂಖ್ಯೆ: 11
ಅದೃಷ್ಟದ ದಿನ: ಸೋಮವಾರ
ಕರ್ಕ ರಾಶಿ
ಕರ್ಕಾಟಕ ರಾಶಿಯವರಿಗೆ ಈ ವಾರ ತುಂಬಾ ಶುಭವಾಗಿದೆ. ಈ ಅವಧಿ ನಿಮ್ಮ ಕೆಲಸ ಕಾರ್ಯಗಳಿಗೆ ಫಲಪ್ರದವಾಗಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನ ಬಲವಾಗಿರುತ್ತದೆ. ನೀವು ಕ್ಲಿಷ್ಟಕರವಾದ ಕೆಲಸವನ್ನು ಸುಲಭವಾಗಿ ಮಾಡಿ ಮುಗಿಸುತ್ತೀರಿ. ನೀವು ಪಾಲುದಾರಿಕೆಯಲ್ಲಿ ವ್ಯಾಪಾರ ಮಾಡುತ್ತಿದ್ದರೆ ಈ ವಾರ ನಿಮಗೆ ತುಂಬಾ ಲಾಭದಾಯಕವಾಗಿರಲಿದೆ. ನಿಮ್ಮ ಸರಿಯಾದ ನಿರ್ಧಾರಗಳಿಂದ ನೀವು ಉತ್ತಮ ಫಲಿತಾಂಶಗಳನ್ನು ಪಡೆಯಲು ಸಾಧ್ಯವಾಗುವುದು. ಈ ಸಮಯ ನಿಮ್ಮ ಪ್ರೀತಿ ಪಾತ್ರರ ಜೊತೆಗೆ ಚೆನ್ನಾಗಿ ಕಳೆಯಲು ಸಾಧ್ಯವಾಗುವುದು. ನಿಮ್ಮ ಭವಿಷ್ಯಕ್ಕೆ ಸಂಬಂಧಿಸಿದಂತೆ ಕೆಲವು ಪ್ರಮುಖ ನಿರ್ಧಾರಗಳನ್ನು ಸಹ ನೀವು ತೆಗೆದುಕೊಳ್ಳುತ್ತೀರಿ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರುತ್ತದೆ. ಈ ಅವಧಿಯಲ್ಲಿ ಅಧಿಕ ಉಳಿತಾಯ ಮಾಡಲು ಸಾಧ್ಯವಾಗುವುದು. ನಾವು ನಿಮ್ಮ ಆರೋಗ್ಯದ ಬಗ್ಗೆ ಹೇಳುವುದಾದರೆ ಈ ಅವಧಿಯಲ್ಲಿ ನೀವು ದೈಹಿಕವಾಗಿ ಮತ್ತು ಮಾನಸಿಕವಾಗಿ ಉತ್ತಮವಾಗುತ್ತೀರಿ.
ಅದೃಷ್ಟದ ಬಣ್ಣ: ಹಳದಿ
ಅದೃಷ್ಟದ ಸಂಖ್ಯೆ: 8
ಅದೃಷ್ಟದ ದಿನ: ಭಾನುವಾರ
ಸಿಂಹ ರಾಶಿ
ಉದ್ಯೋಗಿಗಳಿಗೆ ಈ ವಾರ ಉತ್ತವಾಗಿರಲಿದೆ. ನೀವು ಬಯಸಿದ ವರ್ಗಾವಣೆಯನ್ನು ನೀವು ಪಡೆಯಬಹುದು ಅಥವಾ ನಿಮ್ಮ ಪ್ರಗತಿಯ ಬಲವಾದ ಸಾಧ್ಯತೆಯಿದೆ. ನೀವು ಸರ್ಕಾರಿ ಉದ್ಯೋಗಕ್ಕಾಗಿ ಪ್ರಯತ್ನಿಸುತ್ತಿದ್ದರೆ ಈ ಅವಧಿಯಲ್ಲಿ ನಿಮ್ಮ ಶ್ರಮ ಫಲ ನೀಡಲಿದೆ. ವ್ಯಾಪಾರಸ್ಥರು ಉತ್ತಮ ಆರ್ಥಿಕ ಲಾಭವನ್ನು ಪಡೆಯಬಹುದು. ಆದರೆ ಯಾವುದೇ ಹೂಡಿಕೆ ಮಾಡುವ ಮುನ್ನ ಎಚ್ಚರಿಕೆಯಿಂದ ನಿರ್ಧಾರ ತೆಗೆದುಕೊಳ್ಳಿ. ವಿದ್ಯಾರ್ಥಿಗಳಲ್ಲಿ ಚಂಚಲತೆ ಹೆಚ್ಚಾಗಬಹುದು, ಇದರಿಂದ ಓದಿನ ಕಡೆಗೆ ಗಮನಹರಿಸಲು ಕಷ್ಟವಾಗುವುದು. ಬೇಡದ ಚಿಂತೆಗಳು ಕಾಡಬಹುದು. ಹಣದ ವಿಷಯದಲ್ಲಿ ಈ ವಾರ ಸರಾಸರಿಯಾಗಿರಲಿದೆ. ವಾರದ ಕೊನೆಯಲ್ಲಿ, ಸಂಗಾತಿಯ ಆರೋಗ್ಯ ಕ್ಷೀಣಿಸಬಹುದು, ಅವರ ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ತಿಳಿ ಹಸಿರು
ಅದೃಷ್ಟದ ಸಂಖ್ಯೆ: 12
ಅದೃಷ್ಟದ ದಿನ: ಶುಕ್ರವಾರ
ಕನ್ಯಾ ರಾಶಿ
ಉದ್ಯಮಿಗಳಿಗೆ ಈ ಸಮಯವು ಬಹಳ ಮುಖ್ಯವಾಗಿರುತ್ತದೆ. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯಲು ನೀವು ಯೋಜಿಸುತ್ತಿದ್ದರೆ, ನೀವು ಯಶಸ್ಸನ್ನು ಪಡೆಯಬಹುದು. ಇದಲ್ಲದೆ ಈ ಅವಧಿಯಲ್ಲಿ ನಿಮಗೆ ಬರಬೇಕಾಗಿದ್ದ ಹಣ ಕೈ ಸೇರಲಿದೆ. ಕೆಲಸದ ವಿಷಯದಲ್ಲಿ ಕಾರ್ಯನಿರವಾಗಿರಲಿದೆ. ಬಾಕಿ ಇರುವ ಕೆಲಸದ ಹೊರೆ ಹೆಚ್ಚಾಗಬಹುದು. ಈ ಅವಧಿಯಲ್ಲಿ ಕೆಲಸದಲ್ಲಿ ಸ್ವಲ್ಪ ಕಿರಿಕಿರಿ ಅನಿಸಬಹುದು. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಸಮತೋಲಿತವಾಗಿ ವರ್ತಿಸುವಂತೆ ಸಲಹೆ ನೀಡಲಾಗುತ್ತದೆ. ಈ ವಾರ ನಿಮಗೆ ಹಣದ ವಿಷಯದಲ್ಲಿ ಮಿಶ್ರಫಲ. ತೆರಿಗೆಯನ್ನು ಗಮನದಲ್ಲಿಟ್ಟುಕೊಂಡು ನಿಮ್ಮ ಆದಾಯವನ್ನು ಖರ್ಚು ಮಾಡಿ. ಆರೋಗ್ಯದಲ್ಲಿ ಏರುಪೇರು ಉಂಟಾಗಬಹುದು.
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ಸಂಖ್ಯೆ: 16
ಅದೃಷ್ಟದ ದಿನ: ಶನಿವಾರ
ತುಲಾ ರಾಶಿ
ಕೆಲಸದ ವಿಷಯದಲ್ಲಿ ಈ ವಾರ ನಿಮಗೆ ತುಂಬಾ ಅನುಕೂಲಕರವಾಗಿದೆ, ಕೆಲಸದಲ್ಲಿ ತೃಪ್ತಿ ಸಿಗಲಿದೆ. ಈ ಸಮಯದಲ್ಲಿ ನೀವು ಹೊಸ ಯೋಜನೆಯಲ್ಲಿ ಕೆಲಸ ಮಾಡಲು ಅವಕಾಶ ಸಿಗಲಿದೆ. ಇದಕ್ಕೆ ಸಂಬಂಧಿಸಿದಂತೆ ವಿದೇಶ ಪ್ರವಾಸವನ್ನು ಮಾಡಬೇಕಾಗುವುದು. ವ್ಯಾಪಾರಸ್ಥರ ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ನೀವು ಉತ್ತಮ ಆರ್ಥಿಕ ಲಾಭವನ್ನು ಗಳಿಸುವ ಸಾಧ್ಯತೆಯಿದೆ. ಈ ಅವಧಿಯಲ್ಲಿ ನಿಮ್ಮ ವ್ಯಾಪಾರದಲ್ಲಿ ಲಾಭ ಇರಲಿದೆ. ಪೂರ್ವಜರ ಆಸ್ತಿಗೆ ಸಂಬಂಧಿಸಿದಂತೆ ಯಾವುದೇ ವಿವಾದವು ಈ ವಾರದಲ್ಲಿ ಬಗೆಹರಿಯಲಿದೆ. ನಿಮ್ಮ ದೊಡ್ಡ ಚಿಂತೆ ದೂರವಾಗುತ್ತದೆ. ಈ ಸಮಯದಲ್ಲಿ ನಿಮ್ಮ ಕೋಪ ನಿಯಂತ್ರಿಸಲು ಸಲಹೆ ನೀಡಲಾಗಿದೆ. ಆರೋಗ್ಯದ ವಿಷಯದಲ್ಲಿ ಈ ವಾರ ನಿಮಗೆ ಸರಾಸರಿಯಾಗಿರಲಿದೆ.
ಅದೃಷ್ಟದ ಬಣ್ಣ: ಮರೂನ್
ಅದೃಷ್ಟದ ಸಂಖ್ಯೆ: 4
ಅದೃಷ್ಟದ ದಿನ: ಗುರುವಾರ
ವೃಶ್ಚಿಕ ರಾಶಿ
ಪ್ರೇಮಿಗಳ ಜೀವನದಲ್ಲಿ ಈ ವಾರ ಹೊಸ ತಿರುವು ಕಂಡು ಬರಲಿದೆ. ನಿಮ್ಮ ಪ್ರೇಮಿ ನಿಮಗೆ ಮದುವೆಯಾಗುವ ಎಂದು ಕೇಳಬಹುದು. ವೃಶ್ಚಿಕ ರಾಶಿಯ ವಿವಾಹಿತರಿಗೆ ಈ ವಾರ ತುಂಬಾ ವಿಶೇಷವಾಗಿರಲಿದೆ. ನಿಮ್ಮ ವೈವಾಹಿಕ ಜೀವನದಲ್ಲಿ ಧನಾತ್ಮಕ ಬದಲಾವಣೆ ಕಂಡು ಬರಲಿದೆ. ನಿಮ್ಮ ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಆದರೆ ನೀವು ಇತರರನ್ನು ಮೆಚ್ಚಿಸಲು ಅಧಿಕ ಖರ್ಚು ಮಾಡಬೇಡಿ, ಹಾಗೆ ಮಾಡಿದರೆ ಭವಿಷ್ಯದಲ್ಲಿ ಹಣದ ಸಮಸ್ಯೆ ಉಂಟಾಗಬಹುದು. ನಿಮ್ಮ ಕೆಲಸದಲ್ಲಿ ನಿರ್ಲಕ್ಷ್ಯ ವಹಿಸಬೇಡಿ , ನಿಮ್ಮ ಎಲ್ಲಾ ಕೆಲಸಗಳನ್ನು ಸಮಯಕ್ಕೆ ಪೂರ್ಣಗೊಳಿಸಿ. ಯಾವುದೇ ಹೊಸ ವ್ಯವಹಾರ ಪ್ರಸ್ತಾಪವನ್ನು ಸ್ವೀಕರಿಸುವ ಮೊದಲು ಉದ್ಯಮಿಗಳು ಎಚ್ಚರಿಕೆಯಿಂದ ಯೋಚಿಸಬೇಕು.
ಅದೃಷ್ಟದ ಬಣ್ಣ: ಆಕಾಶ ನೀಲಿ
ಅದೃಷ್ಟದ ಸಂಖ್ಯೆ: 26
ಅದೃಷ್ಟದ ದಿನ: ಮಂಗಳವಾರ
ಧನು ರಾಶಿ
ಈ ಅವಧಿಯಲ್ಲಿ ನೀವು ಚಿಕ್ಕ ನಿರ್ಧಾರವನ್ನು ಬಹಳ ಎಚ್ಚರಿಕೆಯಿಂದ ತೆಗೆದುಕೊಳ್ಳಬೇಕು. ನೀವು ಯೋಚಿಸದೆ ಯಾವುದೇ ನಿರ್ಧಾರ ತೆಗೆದುಕೊಳ್ಖಬೇಡಿ. ಕೆಲಸದ ಕ್ಷೇತ್ರದಲ್ಲಿ ವಿಭಿನ್ನ ಗುರುತನ್ನು ಮೂಡಿಸಲು ನೀವು ಹೆಚ್ಚಿನ ಶ್ರಮಹಾಕಿ ಕೆಲಸ ಮಾಡಬೇಕು. ಈ ಅವಧಿಯಲ್ಲಿ ಬಾಸ್ ನಿಮಗೆ ಕೆಲವು ಹೊಸ ಜವಾಬ್ದಾರಿಗ ನೀಡಬಹುದು. ಉದ್ಯಮಿಗಳಿಗೆ ಈ ಸಮಯ ಸ್ವಲ್ಪ ನಿರಾಶೆ ಉಂಟಾಗಲಿದೆ. ಈ ಸಮಯದಲ್ಲಿ ಲಾಭ ಗಳಿಸುವ ಉತ್ತಮ ಅವಕಾಶ ನಿಮ್ಮ ಕೈಯಿಂದ ಜಾರಿಹೋಗಬಹುದು. ದಾಂಪತ್ಯ ಜೀವನದಲ್ಲಿ ಖುಷಿ ಇರಲಿದೆ. ಪ್ರತಿಕೂಲ ಸಂದರ್ಭಗಳಲ್ಲಿ ನಿಮ್ಮ ಪ್ರೀತಿಪಾತ್ರರ ಸಂಪೂರ್ಣ ಬೆಂಬಲ ಪಡೆಯುತ್ತೀರಿ. ಈ ವಾರ ನಿಮಗೆ ವಿಶೇಷವಾಗಿರಲಿದೆ. ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಕೆಂಪು
ಅದೃಷ್ಟದ ಸಂಖ್ಯೆ: 10
ಅದೃಷ್ಟದ ದಿನ: ಭಾನುವಾರ
ಮಕರ ರಾಶಿ
ಈ ವಾರ ನಿಮ್ಮ ವೈಯಕ್ತಿಕ ಮತ್ತು ವೃತ್ತಿಪರ ಜೀವನವನ್ನು ಸಮತೋಲನಗೊಳಿಸುವಲ್ಲಿ ನೀವು ಬಹಳಷ್ಟು ತೊಂದರೆಗಳನ್ನು ಎದುರಿಸಬಹುದು. ಕೆಲಸದ ಒತ್ತಡ ಹೆಚ್ಚಿರುವುದರಿಂದ ಕುಟುಂಬದ ಕಡೆ ಗಮನಹರಿಸಲು ಸಾಧ್ಯವಾಗುವುದಿಲ್ಲ, ಇದರಿಂದ ಕುಟುಂಬದಲ್ಲಿ ಸಮಸ್ಯೆ ಹೆಚ್ಚಾಗಲಿದೆ. ನೀವು ಧೈರ್ಯ ಮತ್ತು ತಾಳ್ಮೆಯಿಂದ ವರ್ತಿಸಲು ಸಲಹೆ ನೀಡಲಾಗಿದೆ. ವಾರದ ಮಧ್ಯಭಾಗವು ನಿಮಗೆ ಉತ್ತಮವಾಗಿದೆ. ಈ ಅವಧಿಯಲ್ಲಿ ನೀವು ಮಾನಸಿಕವಾಗಿ ಉತ್ತಮವಾಗಿರಲಿದೆ. ಹಣಕ್ಕೆ ಸಂಬಂಧಿಸಿದ ಚಿಂತೆ ದೂರವಾಗಲಿದೆ. ನೀವು ಹೊಸ ಆದಾಯದ ಮೂಲವನ್ನು ಪಡೆಯಬಹುದು. ವಾರದ ಕೊನೆಯಲ್ಲಿ ನೀವು ಕೆಲವು ಒಳ್ಳೆಯ ಸುದ್ದಿಗಳನ್ನು ಪಡೆಯಬಹುದು.
ಅದೃಷ್ಟದ ಬಣ್ಣ: ಬಿಳಿ
ಅದೃಷ್ಟದ ಸಂಖ್ಯೆ: 45
ಅದೃಷ್ಟದ ದಿನ: ಶುಕ್ರವಾರ
ಕುಂಭ ರಾಶಿ
ನಿಮ್ಮ ವ್ಯಾಪಾರವನ್ನು ವಿಸ್ತರಿಸಲು ಯೋಜಿಸುತ್ತಿದ್ದರೆ, ಈ ವಾರ ನಿಮ್ಮ ಪ್ರೀತಿ ಪಾತ್ರರ ಬೆಂಬಲವನ್ನು ನೀವು ಪಡೆಯಬಹುದು. ವಿದೇಶಿ ಕಂಪನಿಗಳಲ್ಲಿ ಕೆಲಸ ಮಾಡುವವರಿಗೆ ಈ ವಾರ ಶುಭ ಸೂಚನೆ ಕಾಣುತ್ತಿದೆ. ನೀವು ಬಯಸಿದ ಫಲಿತಾಂಶವನ್ನು ಪಡೆಯುತ್ತೀರಿ. ಉದ್ಯೋಗಸ್ಥರಿಗೆ ಈ ಅವಧಿಯಲ್ಲಿ ಕೆಲಸದಲ್ಲಿ ತೃಪ್ತಿ ಸಿಗಲಿದೆ. ಕೆಲಸದ ಹೊರೆ ಕಡಿಮೆ ಇರಲಿದೆ. ಕೌಟುಂಬಿಕ ಜೀವನದಲ್ಲಿ ಸಂತೋಷ ಮತ್ತು ಶಾಂತಿ ಇರಲಿದೆ. ಮನೆಯ ಕಿರಿಯ ಸದಸ್ಯರೊಂದಿಗೆ ನಿಮ್ಮ ಸಂಬಂಧವು ಇನ್ನಷ್ಟು ಬಲವಾಗುವುದು, ಮನೆಯಲ್ಲಿ ವಿವಾಹಯೋಗ್ಯ ಸದಸ್ಯನಿದ್ದರೆ, ಅವರಿ ಮದುವೆಯ ಪ್ರಸ್ತಾಪ ಬರಲಿದೆ. ಈ ಸಮಯವು ಹಣದ ವಿಷಯದಲ್ಲಿ ತುಂಬಾ ದುಬಾರಿಯಾಗಲಿದೆ. ನಿಮ್ಮ ಬಜೆಟ್ ಅನ್ನು ಗಮನದಲ್ಲಿಟ್ಟುಕೊಂಡು ಖರ್ಚು ಮಾಡಿ. ಈ ಅವಧಿಯಲ್ಲಿ ಆರೋಗ್ಯದ ಕಡೆಗೆ ಗಮನಹರಿಸಿ.
ಅದೃಷ್ಟದ ಬಣ್ಣ: ಗುಲಾಬಿ
ಅದೃಷ್ಟದ ಸಂಖ್ಯೆ: 17
ಅದೃಷ್ಟದ ದಿನ: ಮಂಗಳವಾರ
ಮೀನ ರಾಶಿ
ಈ ಸಮಯದಲ್ಲಿ ಮನೆಯ ವಾತಾವರಣವು ಉತ್ತಮವಾಗಿರುವುದಿಲ್ಲ. ಹಣದ ವಿಚಾರದಲ್ಲಿ ಮನೆಯಲ್ಲಿ ಕೆಲ ಚರ್ಚೆ ನಡೆಯುವ ಸಾಧ್ಯತೆ ಇದೆ. ಅಂತಹ ಪರಿಸ್ಥಿತಿಯಲ್ಲಿ, ನೀವು ತುಂಬಾ ಬುದ್ಧಿವಂತಿಕೆಯಿಂದ ವರ್ತಿಸಬೇಕು. ಈ ವಾರ ಉದ್ಯಮಿಗಳಿಗೆ ಸ್ವಲ್ಪ ಸವಾಲಿನ ನಿರೀಕ್ಷೆಯಿದೆ. ವಿರೋಧಿಗಳು ಸಕ್ರಿಯವಾಗಿರುತ್ತಾರೆ ಮತ್ತು ನಿಮ್ಮ ಪ್ರಮುಖ ಕೆಲಸಕ್ಕೆ ಅಡ್ಡಿಯಾಗಬಹುದು. ಉದ್ಯೋಗಸ್ಥರು ಕಚೇರಿಯಲ್ಲಿ ಅಲ್ಲಿ ಇಲ್ಲಿ ಮಾತನಾಡುವುದಕ್ಕೆ ಹೋಗಬಾರದು. ನಿಮ್ಮ ಆರ್ಥಿಕ ಸ್ಥಿತಿಯನ್ನು ಬಲಪಡಿಸಲು, ನಿಮ್ಮ ಆದಾಯವನ್ನು ಹೆಚ್ಚಿಸಲು ನೀವು ಪ್ರಯತ್ನಿಸುತ್ತಿದ್ದರೆ, ನಿಮ್ಮ ಪ್ರಯತ್ನಗಳನ್ನು ನೀವು ವೇಗಗೊಳಿಸಬೇಕು. ನಿಮ್ಮ ಆರೋಗ್ಯದ ಬಗ್ಗೆ ಚಿಂತೆ ಹೆಚ್ಚಾಗಲಿದೆ.
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: 24
ಅದೃಷ್ಟದ ದಿನ: ಸೋಮವಾರ



Click it and Unblock the Notifications

