Latest Updates
-
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು? -
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ!
ಸಂಖ್ಯಾಶಾಸ್ತ್ರ ಪ್ರಕಾರ ಜುಲೈ 2-ಜುಲೈ 8ರವರೆಗಿನ ಭವಿಷ್ಯ ಹೇಗಿರಲಿದೆ ನೋಡಿ
ಸಂಖ್ಯಾಶಾಸ್ತ್ರದಲ್ಲಿ ಜುಲೈ 2-ಜುಲೈ 8ರವರೆಗಿನ ಭವಿಷ್ಯ ಹೇಳಲಾಗಿದ್ದು ನಿಮ್ಮ ಸಂಖ್ಯೆಗೆ ಈ ವಾರ ಹೇಗಿರಲಿದೆ ನೋಡೋಣ...
ಸಂಖ್ಯಾ ಶಾಸ್ತ್ರದ ಪ್ರಕಾರ ನಿಮ್ಮ ರಾಶಿ ಸಂಖ್ಯೆ ತಿಳಿಯಲು ನಿಮ್ಮ ಜನ್ಮ ದಿನಾಂಕವನ್ನು ಬಳಸಿಕೊಳ್ಳಬಹುದು. ಉದಾಹರಣೆಗೆ ನಿಮ್ಮ ಜನ್ಮ ದಿನಂಕ 11 ಆಗಿದ್ದರೆ 1+1 = 2 ಈ ರೀತಿ ಲೆಕ್ಕ ಮಾಡಬಹುದು.
ಸಂಖ್ಯೆ 1 ( ಜನ್ಮ ದಿನಾಂಕ 1,10,19,28)
ಈ ವಾರ ಆರ್ಥಿಕ ದೃಷ್ಟಿಯಿಂದ ನಿಮಗೆ ತುಂಬಾ ಒಳ್ಳೆಯದಿದೆ. ಈ ವಾರ ವೃತ್ತಿ ಜೀವನ ಹಾಗೂ ಬ್ಯುಸ್‌ನೆಸ್‌ಗೆ ಸಂಬಂಧಿಸಿದಂತೆ ಪ್ರಯಾಣವನ್ನು ಮಾಡಬಹುದು. ನಿಮ್ಮ ವೃತ್ತಿ ಬದುಕಿಗೆ ಸಂಬಂಧಿಸಿದಂತೆ ಪ್ರಗತಿ ಕಾಣಬಹುದು. ವಿವಾಹಿತರು ಒಬ್ಬರನ್ನೊಬ್ಬರು ತುಂಬಾ ಕಾಳಜಿ ಮಾಡುತ್ತೀರಿ, ಅವಾಹಿತರಿಗೆ ಈ ವಾರ ಮದುವೆ ಪ್ರಪೋಸಲ್ ಬರಬಹುದು.
ಲಕ್ಕಿ ನಂಬರ್: 13
ಲಕ್ಕಿ ಕಲರ್: ಕಂದು
ಲಕ್ಕಿ ದಿನ: ಶನಿವಾರ

ಸಂಖ್ಯೆ 2 (ಜನ್ಮ ದಿನಾಂಕ 2,11,20,29)
ಈ ವಾರ ಮನೆಯವರು ನಮ್ಮ ಜೊತೆ ಸಮಯ ಕಳೆಯಲು ಬಯಸುತ್ತಾರೆ. ಅವರಿಗೆ ನಿರಾಸೆ ಮಾಡಬೇಡಿ, ಈ ವಾರ ತುಂಬಾ ಕ್ರಿಯೇಟಿವ್ ಆಗಿ ನೀವು ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುತ್ತೀರಿ. ಮನೆಯಲ್ಲಿ ಖುಷಿ, ನೆಮ್ಮದಿ ಇರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಆದರೆ ಸಂಬಂಧದಲ್ಲಿ ಸಮಸ್ಯೆಗಳು ಎದುರಾಗಬಹುದು, ಆರೋಗ್ಯ ಸಂಬಂಧಿ ಸಮಸ್ಯೆ ಇರಬಹುದು, ಆದ್ದರಿಂದ ಈ ಕುರಿತು ಜಾಗ್ರತೆವಹಿಸಿ.
ಅದೃಷ್ಟದ ನಂಬರ್: 5
ಅದೃಷ್ಟದ ಬಣ್ಣ: ಕಿತ್ತಳೆ
ಅದೃಷ್ಟದ ದಿನ: ಮಂಗಳು
ಸಂಖ್ಯೆ 3 (ಜನ್ಮ ದಿನಾಂಕ 3,12,21,30)
ಈ ರೀತಿ ವೃತ್ತಿ ಜೀವನದ ದೃಷ್ಟಿಯಿಂದ ಅನುಕೂಲಕರವಾಗಿದೆ. ಆರ್ಥಿಕ ದೃಷ್ಟಿಯಿಂದ ಅನುಕೂಲಕರವಾಗಿದೆ, ಈ ಅವಧಿಯಲ್ಲಿ ನೀವು ಬೇರೆಯವರಿಗೆ ಸಹಾಯ ಮಾಡಬಹುದು. ನೀವು ನಿಮ್ಮ ಸಂಗಾತಿ ಅಹಾಗೂ ಸಹೋದ್ಯೋಗಿಗಳ ಜೊತೆ ಮಾತನಾಡುವಗ ತುಂಬಾನೇ ಎಚ್ಚರವಹಿಸಬೇಕು. ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುವವರು ವೃತ್ತಿ ಬದುಕಿನಲ್ಲಿ ಗುರುತಿಸಿಕೊಳ್ಳುವಿರಿ.
ಅದೃಷ್ಟದ ಸಂಖ್ಯೆ:15
ಅದೃಷ್ಟದ ಬಣ್ಣ: ಪಿಂಕ್
ಅದೃಷ್ಟದ ದಿನ: ಶುಕ್ರವಾರ
ಸಂಖ್ಯೆ 4 ( ಜನ್ಮ ದಿನಾಂಕ 4,13,22,31)
ಸವಾಲುಗಳ ಎದುರಾಗುವುದರಿಂದ ಮಾನಸಿಕ ಒತ್ತಡ ಹೆಚ್ಚಿರಲಿದೆ, ಮಕ್ಕಳ ಕುರಿತು ಚಿಂತೆ ಹೆಚ್ಚಾಗಲಿದೆ. ಅವರ ಪ್ರಗತಿ ಬಗ್ಗೆ ಚಿಂತೆ ಹೆಚ್ಚಬಹುದು. ಮಕ್ಕಳ ಶಿಕ್ಷಣ ಅಥವಾ ಅವರ ವೃತ್ತಿ ಜೀವನಕ್ಕೆ ಸಂಬಂಧಿಸಿದ ಚಿಂತೆ ಕಾಡಬಹುದು. ಈ ಸಮಯದಲ್ಲಿ ಆರೋಗ್ಯದ ಬಗ್ಗೆ ಹೆಚ್ಚು ಜಾಗ್ರತೆವಹಿಸಿ. ಮಾನಸಿಕ ಒತ್ತಡ ಕಡಿಮೆ ಮಾಡಲು ಧ್ಯಾನದ ಕಡೆಗೆ ಗಮನಹರಿಸಿ.
ಅದೃಷ್ಟದ ಸಂಖ್ಯೆ: 20
ಅದೃಷ್ಟದ ಸಂಖ್ಯೆ: ಹಸಿರು
ಅದೃಷ್ಟದ ದಿನ: ಶನಿವಾರ
ಸಂಖ್ಯೆ 5( ಜನ್ಮ ದಿನಾಂಕ 5,14,23)
ನೀವು ಕುಟುಂಬದ ಖುಷಿಗಾಗಿ ಶ್ರಮಿಸುತ್ತೀರಿ. ಕುಟುಂಬದಲ್ಲಿ ಸಂತೋಷದ ವಾತಾವರಣ ಇರಲಿದೆ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ವ್ಯಾಪಾರಸ್ಥರು ತಮ್ಮ ಸ್ಪರ್ಧಿಗಳ ಬಗ್ಗೆ ಹುಷಾರಾಗಿರಬೇಕು. ಆದರೆ ಕಾನೂನು ಬಾಹಿರ, ವಿವಾದದ ವಿಷಯಗಳಿಂದ ದೂರವಿರುವುದು ಒಳ್ಳೆಯದು.
ಅದೃಷ್ಟದ ಸಂಖ್ಯೆ:17
ಅದೃಷ್ಟದ ಬಣ್ಣ: ನೀಲಿ
ಅದೃಷ್ಟದ ಸಂಖ್ಯೆ: ಮಂಗಳವಾರ
ಸಂಖ್ಯೆ 6 (ಜನ್ಮ ದಿನಾಂಕ 6,15,24)
ಈ ವಾರ ನಿಮಗೆ ಅದೃಷ್ಟದಿಂದ ಕೂಡಿರಲಿದೆ. ಈ ವಾರ ನಿಮ್ಮ ಸಂವಹನ ಕೌಶಲ್ಯದಿಂದ ಲಾಭವಾಗಲಿದೆ. ನೀವು ಈ ವಾರ ಆತ್ಮವಿಶ್ವಾಸದಿಂದ ಕೂಡಿರುತ್ತೀರಿ. ಈ ಸಮಯದಲ್ಲಿ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಳ್ಳಿ.
ಅದೃಷ್ಟದ ಸಂಖ್ಯೆ: 23
ಅದೃಷ್ಟದ ಬಣ್ಣ: ನೀಲಮಣಿ ಬಣ್ಣ
ಅದೃಷ್ಟದ ದಿನ: ಸೋಮವಾರ
ಸಂಖ್ಯೆ 7 (ಜನ್ಮ ದಿನಾಂಕ 7,16,25)
ಈ ವಾರ ನಿಮ್ಮ ಮೇಲೆ ಧನಾತ್ಮಕ ಪ್ರಭಾವ ಇರಲಿದೆ. ಜೀವನದಲ್ಲಿ ಸವಾಲುಗಳನ್ನು ಆತ್ಮವಿಶ್ವಾಸದಿಂದ ಎದುರಿಸುತ್ತೀರಿ. ಆರ್ಥಿಕ ಸ್ಥಿತಿ ಚೆನ್ನಾಗಿರಲಿದೆ. ಕೆಲಸ, ಕಾರ್ಯಗಳಿಗೆ ಮೊದಲೇ ಯೋಜನೆ ರೂಪಿಸುವುದು ಒಳ್ಳೆಯದು.
ಅದೃಷ್ಟದ ಸಂಖ್ಯೆ:8
ಅದೃಷ್ಟದ ಬಣ್ಣ: ಪೀಚ್
ಅದೃಷ್ಟದ ದಿನ: ಮಂಗಳವಾರ
ಸಂಖ್ಯೆ 8( ಜನ್ಮ ದಿನಾಂಕ 8,17,26)
ಈ ವಾರ ನೀವು ಬಹುಮುಖ್ಯವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತೀರಿ. ನಿಮ್ಮ ಮನಸ್ಸಿನ ಆಸೆಗಾಹಿ ಪ್ರಯತ್ನಿಸುತ್ತೀರಿ, ನಿಮ್ಮ ಗುರಿ ಸ್ಪಷ್ಟವಾಗಿರಲಿದೆ, ನೀವು ಬಯಸಿದ್ದು ನಿಮಗೆ ಸಿಗಲಿದೆ.
ಅದೃಷ್ಟದ ಸಂಖ್ಯೆ: 14
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಬಣ್ಣ: ಹಸಿರು
ಅದೃಷ್ಟದ ಸಂಖ್ಯೆ 9(ಜನ್ಮ ದಿನಾಂಕ 9,18,27)
ಈ ವಾರ ನಿರಾಸೆ, ಒಂಟಿತನ, ಮೋಸ ಕಾಡಬಹುದು. ನೀವು ನಿಮ್ಮ ತಪ್ಪುಗಳಿಂದ ಪಾಠವನ್ನು ಕಲಿಯುವುದು ಒಳ್ಳೆಯದು. ವಾರದ ಮಧ್ಯದಲ್ಲಿ ನಿಮ್ಮ ಸಮಸ್ಯೆಗಳಿಗೆ ಪರಿಹಾರ ಕಂಡು ಕೊಳ್ಳುತ್ತೀರಿ, ಮನಸ್ಸಿನ ಆತಂಕ, ಒತ್ತಡ ದೂರ ಮಾಡಲು ಧ್ಯಾನ ಮಾಡಿ.
ಅದೃಷ್ಟದ ಬಣ್ಣ 12
ಅದೃಷ್ಟದ ಸಂಖ್ಯೆ ಕಂದು
ಅದೃಷ್ಟದ ದಿನ: ಬುಧವಾರ



Click it and Unblock the Notifications
