Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಬರಿಗಾಲಿನಲ್ಲಿ ನಡೆಯುವ ಟ್ರೆಂಡ್ ಶುರುವಾಗಿದೆ..! ಏಕೆ ಗೊತ್ತಾ?
ಬರಿಗಾಲಿನಲ್ಲಿ ಓಡಾಡುವುದರಿಂದ ಆರೊಗ್ಯಕ್ಕೆ ಒಳ್ಳೆಯದು ಎಂದು ನೀವು ಕೇಳಿರುತ್ತೀರಿ, ನಾವು ಸಹ ಮನೆಯ ಒಲಗೆ ಬರಿಗಾಲಿನಲ್ಲಿಯೇ ಓಡಾಡುತ್ತೇವೆ. ಆದರೆ ಹೊರಗಡೆ ಹೋಗುವಾಗ ನಾವೆಂದಿಗೂ ಬರಿಗಾಲಿನಲ್ಲಿ ಓಡಾಡುವುದಿಲ್ಲ. ಹೊರಗೆ ಹೋಗುವಾಗ ಚಪ್ಪಲಿ, ಶೂಗಳ ಧರಿಸಿಯೇ ಹೋಗುತ್ತೇವೆ. ಅದರಲ್ಲೂ ಈಗಂತು ಒಂದೊಂದು ದಿನಕ್ಕೆ ಒಂದೊಂದು ಚಪ್ಪಲಿ ಬಳಸುತ್ತಾರೆ.
ಜೊತೆಗೆ ಮನೆಯಲ್ಲಿ ಹಾಕಲು ಬೇರೆ, ಹೊರಗಡೆ ಹೋಗುವಾಗ ಬೇರೆ, ಶಾಪಿಂಗ್‌ಗೆ ಬೇರೆ ಹೀಗೆ ವಿಧ ವಿಧದ ಚಪ್ಪಲಿಗಳ ಬಳಸೋದು ನಾವು ನೋಡಿದ್ದೇವೆ. ಆದ್ರೆ ಇಲ್ಲೊಂದು ಕಡೆ ಚಪ್ಪಲಿಯೇ ಹಾಕದೆ ಓಡಾಡುವ ಟ್ರೆಂಡ್ ಹುಟ್ಟಿಕೊಂಡಿದೆ. ಹೌದು ಎಷ್ಟೇ ದೂರದ ಪ್ರಯಾಣವಿದ್ದರೂ ಅಲ್ಲಿ ಕಾಲಿಗೆ ಚಪ್ಪಲಿ ಹಾಕದೆ ಓಡಾಡುವ ಟ್ರೆಂಡ್ ಹುಟ್ಟಿಕೊಂಡಿದೆ.

ನ್ಯೂಜಿಲೆಂಡ್ ಮತ್ತು ಆಸ್ಟ್ರೇಲಿಯನ್ನರು ಈಗ ಬರಿಗಾಲಿನಲ್ಲಿ ಓಡಾಡುತ್ತಿರುವ ದೃಶ್ಯಗಳು ಎಲ್ಲೆಡೆ ಹರಿದಾಡುತ್ತಿದ್ದು, ಅಚ್ಚರಿಗೆ ಕಾರಣವಾಗಿದೆ. ಇತ್ತೀಚಿಗೆ ಒಬ್ಬರು ಪ್ರವಾಸಿಗರು ಆಸ್ಟ್ರೇಲಿಯಾಕ್ಕೆ ತೆರಳಿದಾಗ ಅಲ್ಲಿ ಕಾಲಿಗೆ ಚಪ್ಪಲಿ ಹಾಕದೆ ಓಡಾಡುವವರ ಕಂಡು ಅಚ್ಚರಿ ವ್ಯಕ್ತಪಡಿಸಿದ್ದಾರೆ.
ಅಲ್ಲಿ ಹೋಟೆಲ್, ಪಬ್, ಆಟ್ ಮೈದಾನ, ಪಾರ್ಕ್ ಸೇರಿ ಫುಟ್‌ಪಾತ್‌ನಲ್ಲೂ ಜನರು ಬರಿಗಾಲಿನಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಅವರು ನಾನು ಇದೇ ಮೊದಲ ಬಾರಿಗೆ ಈ ರೀತಿಯ ವಿದ್ಯಮಾನ ನೋಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ.
ಸೀತ್ ಕುಗೆಲ್ ಈ ವಿಡಿಯೋವನ್ನು ಹಂಚಿಕೊಂಡಿದ್ದು, "ಜನರು ಬೀದಿಯಲ್ಲಿ ಬರಿಗಾಲಿನಲ್ಲಿ ನಡೆಯುತ್ತಾರೆ. ಸೂಪರ್ಮಾರ್ಕೆಟ್‌ಗಳಲ್ಲಿ ಎಲ್ಲಾ ಕಡೆ ಇದು ಎಲ್ಲರಿಗೂ ಅಲ್ಲ, ಆದರೆ ಇದು ಆಶ್ಚರ್ಯಕರವಾಗಿದೆ. ಇಲ್ಲಿನ ಫುಟ್‌ಪಾತ್‌ಗಳು ಸ್ವಚ್ಛವಾಗಿದೆ. ಆದರೂ ಅವು ನಗರದ ಫುಟ್‌ಪಾತ್‌ಗಳೇ'' ಎಂದಿದ್ದಾರೆ.
ಬರಿಗಾಲಿನ ನಡಿಗೆ ಶಾಲೆವರೆಗೂ ವ್ಯಾಪಿಸಿದೆ. ಇಲ್ಲಿನ ಕೆಲವು ಶಾಲೆ, ಕಾಲೇಜುಗಳಲ್ಲಿ ಮಕ್ಕಳು ಬರಿಗಾಲಿನಲ್ಲಿ ಬಂದಿರುವುದನ್ನು ನೋಡಿರುವುದಾಗಿ ಅವರು ಹೇಳಿದ್ದಾರೆ. ಈ ರೀತಿ ಬರಿಗಾಲಿನ ನಡಿಗೆಯು ಉತ್ತಮ ಸಂವೇದನಾ ಶಕ್ತಿ, ಗಟ್ಟಿ ಪಾದ ಸೇರಿ ಹಲವು ಪ್ರಯೋಜನಗಳಿವೆ ಎಂದು ಹೇಳಲಾಗಿದೆ. ವಿದ್ಯಾರ್ಥಿಗಳಿಗೆ ಇಲ್ಲಿ ಶೂ ಇಲ್ಲದೆ ಬರಲು ಅನುಮತಿ ಸಹ ನೀಡಲಾಗಿದೆಯಂತೆ.
ಈ ಎರಡೂ ದೇಶಗಳಲ್ಲಿ ಸ್ಥಳೀಯ ಸಂಸ್ಕೃತಿಗಳ ಪ್ರಭಾವವನ್ನು ಕೆಲವರು ಸೂಚಿಸುತ್ತಾರೆ. ಇತರರು ಇದನ್ನು ಹೆಚ್ಚು ಶಾಂತ ಮತ್ತು ಸಾಂದರ್ಭಿಕ ಜೀವನ ವಿಧಾನದ ಪ್ರತಿಬಿಂಬವೆಂದು ನೋಡುತ್ತಾರೆ. ಸಾಂಸ್ಕೃತಿಕ ಸಂಶೋಧನಾ ಪ್ರಾಧ್ಯಾಪಕರಾದ ಡೇವಿಡ್ ರೋವ್ ಅವರು 2021 ರಲ್ಲಿ BBC ಮಾಧ್ಯಮಕ್ಕೆ ಸಂದರ್ಶನ ನೀಡುವಾಗ ವಿಶೇಷವಾದ ದೃಷ್ಟಿಕೋನ ನೀಡಿದ್ದಾರೆ.
'ಅವರು ಶೂ ರಹಿತವಾಗಿ ಹೋಗುವುದು ತಂಪಾದ ವಾತಾವರಣದಿಂದ ವಲಸೆ ಬಂದಿರುವವರು ಈ ವಾತಾನವರಣಕ್ಕೆ ಹೊಂದಿಕೊಳ್ಳು ಇದೂ ಸಹ ಒಂದು ಮಾರ್ಗವಾಗಿದೆ''
ಅಚ್ಚರಿ ಎಂದರೆ ಪ್ರವಾಸಿಗರು ಹಾಗೂ ಇಲ್ಲಿನ ಮಂದಿ ಎಲ್ಲೆಂದರಲ್ಲಿ ಶೂ, ಚಪ್ಪಲಿ ಬಿಟ್ಟು ಹೋಗುತ್ತಾರಂತೆ. ಅದರಲ್ಲೂ ಸಮುದ್ರ ತೀರದಲ್ಲಿ ಚಪ್ಪಲಿಗಳ ರಾಶಿ ಜಮಾವಣೆಯಾಗಲಿದೆ ಎನ್ನಲಾಗಿದೆ. ಒಬ್ಬರನ್ನು ನೋಡಿ ಮತ್ತೊಬ್ಬರು ಅವರನ್ನ ಅನುಸರಿಲು ಮುಂದಾಗಿ ಎಲ್ಲೆಂದರಲ್ಲಿ ಚಪ್ಪಲಿ ಬಿಟ್ಟು ಹೋಗುವ ಅಭ್ಯಾಸ ಬೆಳೆಸಿಕೊಂಡಿದ್ದಾರಂತೆ. ಸದ್ಯ ಆಸ್ಟ್ರೇಲಿಯಾದ ಈ ಹೊಸ ಟ್ರೆಂಡ್ ಕಂಡು ನೆಟ್ಟಿಗರು ಸಹ ಶಾಕ್ ಆಗಿದ್ದಾರೆ. ಒಂದು ಕಡೆ ಇದೊಂದು ಆರೋಗ್ಯಕರ ಬೆಳವಣಿಗೆಯಾಗಿದ್ದರೂ ಮತ್ತೊಂದು ಕಡೆ ಇದರಿಂದ ಸಮಸ್ಯೆಗಳೂ ಸಂಭವಿಸಬಹುದು ಎಂಬುದೇ ಆತಂಕ ಹುಟ್ಟಿಸಿದೆ.
ಜೊತೆಗೆ ಈ ರೀತಿ ಬರಿಗಾಲಿನಲ್ಲಿ ನಡೆಯುವುದರಿಂದ ಅವರಿಗೆ ಯಾವ ಲಾಭವಾಗಿದೆ ಎಂಬುದನ್ನು ಅವರೇ ವಿವರಿಸಿದರೆ ಉತ್ತಮ ಏಕೆಂದರೆ ಇದನ್ನು ಎಲ್ಲರೂ ಪ್ರಯೋಗಿಸಿ ಉತ್ತರ ಪಡೆಯುವುದಕ್ಕಿಂತಲೂ ಬಳಸಿದವರ ಅಭಿಪ್ರಾಯ ಪಡೆಯುವುದು ಒಳಿತು ಎಂದು ನೆಟ್ಟಿಗರು ಅಭಿಪ್ರಾಯ ಪಟ್ಟಿದ್ದಾರೆ.



Click it and Unblock the Notifications