Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ವೈರಲ್ ವೀಡಿಯೋಗಳು: ಕುಕ್ಕರ್‌ನಿಂದ ಇಸ್ತ್ರಿ, ಮುಂಬೈ ಬೀಚ್‌ನಲ್ಲಿ ಡಾಲ್ಫಿನ್, ನಮ್ಮ ಮೆಟ್ರೋದಲ್ಲಿ ಪ್ರೇಮಿಗಳ ರೊಮ್ಯಾಮ್ಸ್
ಈ ದಿನ ಗಮನ ಸೆಳೆದಿರುವ 3 ವೀಡಿಯೋ ನೀಡಿದ್ದೇವೆ, ಕುಕ್ಕರ್ ವೀಡಿಯೋ ಸೂಪರ್ ಐಡಿಯಾ ಅನಿಸಿದರೆ, 2ನೇ ವೀಡಿಯೋ ಸೂಪರ್ ಅನಿಸುತ್ತೆ, 3ನೇ ವೀಡಿಯೋ ಈ ರೀತಿಯ ವರ್ತನೆ ಸಲ್ಲದು ಎಂದು ಸೂಚಿಸುತ್ತೆ

ಕುಕ್ಕರ್‌ನಿಂದ ಇಸ್ತ್ರಿ
ಇಲ್ಲೊಬ್ಬರು ಕುಕ್ಕರ್ ಬಳಸಿ ಶರ್ಟ್ ಇಸ್ತ್ರಿ ಮಾಡುವ ವಿಡಿಯೋ ವೈರಲ್ ಆಗುತ್ತಿದೆ. ಕುಕ್ಕರ್‌ನಲ್ಲಿ ಇಸ್ತ್ರಿ ಸುಲಭದಲ್ಲಿ ಮಾಡಬಹುದು ಎಂದು ತೋರಿಸಿಕೊಟ್ಟಿದ್ದಾರೆ. ಈ ಐಡಿಯಾ ನೋಡಿ, ಸೂಪರ್ ಆದ ಐಡಿಯಾ ತಾನೆ ಎಂದು ನಿಮಗೂ ಅನಿಸಬಹುದು, ಹಾಗಿದೆ ಈ ವೀಡಿಯೋ.
ಕರೆಂಟ್ ಇಲ್ಲ ಎಂದಾಗ ಈ ಐಡಿಯಾ ಬಳಸಬಹುದು ಅಲ್ವಾ, ಆದರೆ ಅವರು ಕಾಟನ್ ಬಟ್ಟೆಗೆ ಇಸ್ತ್ರಿ ಮಾಡಿದ್ದಾರೆ, ಸಿಲ್ಕ್ ಬಟ್ಟೆಗೆ ಮಾಡಿದರೆ ಬಟ್ಟೆ ಸುಟ್ಟು ಕುಕ್ಕರ್ ಕೆಳಭಾಗದಲ್ಲಿ ಅಂಟಿರುತ್ತದೆ. ಇಸ್ತ್ರಿ ಪೆಟ್ಟಿಗೆಯಲ್ಲಿ ಆಮ್ಲೆಟ್ ಮಾಡುವಂತೆ ಇದು ಕೂಡ ಒಂದು ಪ್ರಯೋಗವಷ್ಟೇ ಅಲ್ವಾ?
ಪಾಪ ಎಲ್ಲೋ ಹೋಗಲು ಹೊರಡುವ ಸಮಯದಲ್ಲಿ ನೋಡಿದರೆ ಕರೆಂಟ್ ಇತ್ತಿಲ್ಲ, ಆವಾಗ ಹೊಳೆದ ಐಡಿಯಾ ಇದಾಗಿರಬಹುದು, ಅವರು ಐರನ್ ಮಾಡುತ್ತಿರುವುದು ಕಾಟನ್ ಶರ್ಟ್ ಹಾಗಾಗಿ ತೊಂದರೆಯಿಲ್ಲ, ಆದರೆ ಸಿಲ್ಕ್ ಬಟ್ಟೆಗೆ , ಇಳಿ ಬಟ್ಟೆಗೆ ಈ ಐಡಿಯಾ ವರ್ಕ್ ಆಗಲ್ಲ, ಏಕೆಂದರೆ ಕುಕ್ಕರ್‌ನ ಅಡಿಯಲ್ಲಿ ಏನಾದರೂ ಮಸಿ ರೀತಿ ಅಥವಾ ನೀಟಾಗಿ ಇಲ್ಲದಿದ್ದರೆ ಬಟ್ಟೆ ಹಾಳಾಗುವುದು ಆದ್ದರಿಂದ ಜಾಗ್ರತೆವಹಿಸಿ.
ಮುಂಬೈ ಸಮುದ್ರದಲ್ಲಿ ಡಾಲ್ಫಿನ್!
ಮೇ 4ಕ್ಕೆ ಈ ವಿಡಿಯೋ ಶೇರ್ ಆಗಿದ್ದು ಈ ವೀಡಿಯೋಗೆ ತುಂಬಾನೇ ವ್ಯೂವ್ಸ್ ಬಂದಿದೆ, ಇದು ಗಿರ್ಗೋನ್ ಚೌಪಾಟಿ ಕಡಲಿನಲ್ಲಿ 2016ರಲ್ಲಿ ಕಂಡು ಬಂದಿತ್ತು, ಅಲ್ಲಿಂದ ಕಂಡು ಬಂದಿರಲೇ ಇಲ್ಲ, ಇದೀಗ ಡಾಲ್ಫಿನ್ ಕಂಡು ಬಂದಿರುವುದು ಮುಂಬೈ ನಿವಾಸಿಗಳಿಗೆ ಖುಷಿ ತಂದಿದೆ.
ಈ ವೀಡಿಯೋ ವೈರಲ್ ಆಗಿದ್ದು ಇದಕ್ಕೆ ತುಂಬಾನೇ ಕಮೆಂಟ್ ಬರುತ್ತಿದೆ, ಕೆಲವರು ಇಲ್ಲಿ ಡಾಲ್ಫಿನ್ ಕಂಡು ಬಂದಿರುವುದಕ್ಕೆ ಬಹುಶಃ ಇಲ್ಲಿನ ಜಾಗದ ಬೆಲೆ ಹೆಚ್ಚಿಸಬಹುದು ರಿಯಲ್ ಎಸ್ಟೇಟ್ ಬ್ಯುಸ್‌ನೆಸ್ ಮಾಡುವವರು ಎಂದು ಕಮೆಂಟ್ ಮಾಡಿದ್ದಾರೆ. ಮತ್ತೊಬ್ಬರು ಯಾವುದೇ ಬಿಲ್ಡರ್ ಇದನ್ನು ನೋಡುವುದು ಬೇಡ , ಇಲ್ಲಿಯೂ ಕಾಂಕ್ರಿಟ್ ಬಿಲ್ಡಿಂಗ್ ಕಟ್ಟಿ ಬಿಡುತ್ತಾರೆ ಎಂದು ಕಮೆಂಟ್ ಮಾಡಿದ್ದಾರೆ.
ಮತ್ತೊಂದು ನಮ್ಮ ಮೆಟ್ರೋದಲ್ಲಿ ಕಂಡು ಬಂದಿರುವ ದೃಶ್ಯ: ಪ್ರೀತಿ ಪ್ರೇಮ ಅಂತ ಮೈಮರೆತ ಜೋಡಿ
ದೆಹಲಿ ಮೆಟ್ರೋಗಳಲ್ಲಿ ಕಂಡು ಬಂದತ್ತೆ ನಮ್ಮ ಮೆಟ್ರೋ ಆಗುತ್ತಿದೆ ಎಂದು ಯಾರೋ ಒಬ್ಬರು ಒಂದು ವೀಡಿಯೋ ಪೋಸ್ಟ್ ಮಾಡಿದ್ದಾರೆ. ಅದರಲ್ಲಿ ಪ್ರೇಮಿಗಳು ಹಿರಿಯರಿದ್ದಾರೆ, ಮೆಟ್ರೋದಲ್ಲಿ ಜನರು ಇದ್ದಾರೆ ಎಂಬುವುದನ್ನು ಮರೆತು ಪರಸ್ಪರ ಅಪ್ಪಿಕೊಂಡು ಮುದ್ದಾಡುತ್ತಿದ್ದಾರೆ. ಆ ಹುಡುಗಿ ಅಂತು ಆತನಿಗೆ ಮುತ್ತಿಕ್ಕಿದ್ದಾಳೆ, ನೋಡಿದರೆ ಹದಿಹರೆಯದ ಪ್ರಾಯದವರಂತೆ ಕಾಣಿಸುತ್ತಿದ್ದಾರೆ. ಸಾರ್ವಜನಿಕ ಸ್ಥಳಗಳಲ್ಲಿ ಈ ರೀತಿ ವರ್ತಿಸುವುದಿಂದ ಇತರರಿಗೂ ಮುಜುಗರ.
ಇನ್ನು ವೀಡಿಯೋ ಮಾಡಿದವರು ಇದರ ಬಗ್ಗೆ ಎಚ್ಚರಿಸಬೇಕೆಂದು ವೀಡಿಯೋ ಮಾಡಿದ್ದಾರೆ ಹೊರತು ಅವರಿಗೆ ಅವಮಾನ ಮಾಡಬೇಕೆಂದು ಅಲ್ಲ. ಏಕೆಂದರೆ ವೀಡಿಯೋದಲ್ಲಿ ಹುಡುಗಿಯ ಮುಖ ತೋರಿಸಿಲ್ಲ, ಹುಡುಗನ ಮುಖ ಬರುವಂತೆ ಮಾಡಿಯೂ ಇಲ್ಲ, ಒಂದು ವೇಳೆ ಮುಖ ಬಂದರೆ ಆ ಜೋಡಿಯ ಮನೆಯವರಿಗೆ ಎಷ್ಟು ನೋವಾಗಲ್ಲ?
ಈ ಬಗ್ಗೆ ಜಾಗ್ರತೆ ಮೂಡಿಸಲು ಮಾಡಿದ್ದಾರೆ, ಈ ರೀತಿಯ ವರ್ತನೆಗೆ ಯಾರಿಗೂ ಅವಕಾಶ ನೀಡಬಾರದು , ಸಾವರ್ಜನಿಕ ಸ್ಥಳದಲ್ಲಿ ಹೇಗೆ ವರ್ತಿಸಬೇಕು ಎಂಬ ಪರಿಜ್ಞಾನ ಇರಬೇಕು.



Click it and Unblock the Notifications
