Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಗ್ಲಾಸ್‌ನಲ್ಲಿ ಅರಶಿಣ ಹಾಕಿ ವಿಡಿಯೋ ಮಾಡಿದ್ರಾ..! ಜ್ಯೋತಿಷಿ ಮಾತು ಕೇಳಿದ್ರೆ ಶಾಕ್ ಆಗ್ತಿರಾ..!
ಸಾಮಾಜಿಕ ಜಾಲತಾಣದಲ್ಲಿ ನಿತ್ಯ ನೀವು ವಿಡಿಯೋಗಳ ರೀಲ್ಸ್‌ಗಳ ನೋಡುತ್ತಿರುತ್ತೀರಿ, ಅದ್ರಲ್ಲೂ ಕೆಲವೊಂದು ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗಿರುತ್ತವೆ. ಹಾಗೆ ಕೆಲವೊಂದು ಟ್ರೆಂಡ್ ಹುಟ್ಟುಹಾಕುತ್ತವೆ. ಅಂದರೆ ಒಬ್ಬರು ಮಾಡಿದ ರೀತಿಯಲ್ಲಿ ಮತ್ತೊಬ್ಬರು ಕೂಡ ವಿಡಿಯೋ ಮಾಡಿ ಪೋಸ್ಟ್ ಮಾಡುವುದಾಗಿದೆ. ಈಗಂತು ಸೋಶಿಯಲ್ ಮೀಡಿಯದಿಂದ ಬದುಕು ಕಟ್ಟಿಕೊಳ್ಳೋದು ಹಾಗೆ ಇದೇ ಸೋಶಿಯಲ್ ಮೀಡಿಯಾ ಜೀವನವನ್ನು ಕೂಡ ಹಾಳು ಮಾಡಬಹದು.
ಇನ್ನು ಈ ಟ್ರೆಂಡ್ ಸೆಟ್ಟಿಂಗ್ ಹಾಗೆ ವೈರಸ್ ಆಗುತ್ತಿರುವ ವಿಡಿಯೋಗಳ ಪೈಕಿ ನಾವೀಗ ನೀರಿಗೆ ಅರಶಿಣ ಪುಡಿ ಹಾಕಿ ಮಾಡುವ ವಿಡಿಯೋಗಳು ಸಿಕ್ಕಾಪಟ್ಟೆ ವೈರಲ್ ಆಗುತ್ತಿವೆ. ಕಳೆದ ವಾರದಿಂದಲೂ ಈ ರೀತಿಯ ವಿಡಿಯೋಗಳನ್ನು ಮಾಡಿ ಆನ್‌ಲೈನ್ ಹಂಚಿಕೊಳ್ಳುತ್ತಿರುವುದು ನೋಡಬಹುದು. ಒಂದು ಮೊಬೈಲ್ ಇಟ್ಟು ಅದರ ಫ್ಲಾಶ್ ಲೈಟ್ ಆನ್ ಮಾಡಿ ಬಳಿಕ ಅದರ ಮೇಲೆ ಗಾಜಿನ ಗ್ಲಾಸ್‌ನಲ್ಲಿ ನೀರು ಇಟ್ಟು ಬಳಿಕ ಅದಕ್ಕೆ ಅರಶಿಣ ಪುಡಿಯನ್ನು ಮೇಲಿನಿಂದ ಹಾಕುವ ಟ್ರೆಂಡ್ ಇದಾಗಿದೆ.

ಸದ್ಯ ಎಲ್ಲರೂ ಈ ವಿಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣದ ಖಾತೆಗಳಲ್ಲಿ ಹಂಚಿಕೊಂಡಿರುವುದು ಸಹ ನೋಡಬಹುದು. ಆದರೆ ಈ ರೀತಿಯ ವಿಡಿಯೋ ಮಾಡುವವರಿಗೆ ಈಗ ಆಘಾತ ಹುಟ್ಟಿಸುವ ಸುದ್ದಿಯೊಂದು ಹೊರಬಿದ್ದಿದೆ. ಅದ್ರಲ್ಲೂ ಈ ವೈರಲ್ ವಿಡಿಯೋದಿಂದ ಅಪಾಯ ಕುರಿತು ಜ್ಯೋತಿಷಿಯೊಬ್ಬರು ಹೇಳಿರುವುದು ಈಗ ಸುದ್ದಿಯಾಗಿದೆ.
ಜ್ಯೋತಿಷಿ ಅರುಣ್ ಕುಮಾರ್ ವ್ಯಾಸ್ ಎಂಬುವರೊಬ್ಬರು ಈ ಟ್ರೆಂಡ್ ಹಿಂದಿರುವ ಅಪಾಯಕಾರಿ ವಿಚಾರವನ್ನು ಹಂಚಿಕೊಂಡಿದ್ದಾರೆ. ಅದ್ರಲ್ಲೂ ಈ ರೀತಿ ಅರಶಿಣವನ್ನು ಗಾಜಿನ ಗ್ಲಾಸ್‌ನಲ್ಲಿ ಹಾಕುವುದು ನಕಾರಾತ್ಮಕ ಶಕ್ತಿಯ ಶಕ್ತಿಯ ಆಹ್ವಾನಿಸಲಿದೆಯಂತೆ. ವ್ಯಾಸ್ ಪ್ರಕಾರ ಅರಿಶಿನವನ್ನು ನೀರಿಗೆ ಹಾಕಿ ಕತ್ತಲೆಯಲ್ಲಿ ಬೆಳಕಿನ ಕೆಳಗೆ ಇಡುವ ಪ್ರಕ್ರಿಯೆಯು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುವ ಹಾಗೆ ಸಂಹವನ ನಡೆಸಲು ತಂತ್ರಗಾರಿಕೆ ಮಾಡುವವರು ಅಥವಾ ಮಾಟ ಮಂತ್ರ ಪ್ರವೀಣರು ಬಳಸುವ ಮಾರ್ಗವಂತೆ. ಹೀಗಾಗಿ ಮನೆಯಲ್ಲಿ ಈ ರೀತಿಯಾಗಿ ಅರಶಿಣವನ್ನು ಗಾಜಿನ ಗ್ಲಾಸ್‌ನಲ್ಲಿ ಹಾಕುವುದು ಅಶುಭ ಎಂದು ಅವರು ಹೇಳಿದ್ದಾರೆ.
ಹಾಗೆ ಈ ಅರಶಿಣವನ್ನು ನೀರಿನಲ್ಲಿ ಹಾಕಿಡುವುದು ಅನಾರೋಗ್ಯ, ಅಶಾಂತಿ, ಭಾವನಾತ್ಮಕ ಸಮಸ್ಯೆ, ಆರ್ಥಿಕ ಅಸ್ಥಿರತೆ, ಒತ್ತಡ, ಆತಂಕ ಹೆಚ್ಚಾಗುವುದಕ್ಕೆ ಇದು ಕಾರಣವಾಗಲಿದೆಯಂತೆ. ಹಾಗೆ ಇದು ವಿಶೇಷವಾಗಿ ಚಂದ್ರ ಮತ್ತು ಗುರು ಬಲದ ಮೇಲೆ ಪರಿಣಾಮ ಬೀರುತ್ತದೆ ಎಂದು ಅವರು ಹೇಳಿದ್ದಾರೆ. ಚಂದ್ರನು ನಿಮ್ಮ ಮನಸ್ಸು ಮತ್ತು ಭಾವನೆಗಳ ಹಿಡಿತ ಸಾಧಿಸಿರುವ ಗ್ರಹವಾಗಿದೆ. ಹಾಗೆ ಗುರು ಬುದ್ಧಿವಂತಿಕೆ, ಅದೃಷ್ಟ, ಆಧ್ಯಾತ್ಮಿಕ ವಿಚಾರಗಳ ಪ್ರತಿನಿಧಿಸಲಿದ್ದಾನೆ. ಹೀಗಾಗಿ ಈ ಅವಕಾಶಗಳಿಗೆ ಅರಶಿಣ ನೀರು ಪ್ರಭಾವ ಬೀರಬಹುದು. ಹಾಗೆ ಅದರಿಂದ ನೀವು ವಂಚಿತರಾಗಬಹುದು.
ಚಂದ್ರ ಹಾಗೂ ಗುರುವಿನ ಮೇಲಿನ ಪ್ರಭಾವವು ನಿಮಗೆ ಅಶಾಂತಿ, ಆತಂಕ, ನಿರ್ಧಾರ ತೆಗೆದುಕೊಳ್ಳುವಾಗ ಗೊಂದಲ, ಮಾನಸಿಕ ಅಸ್ಥಿರತೆ, ಕೆಲಸ ಕಾರ್ಯಗಳಲ್ಲಿ ಅಡಚಣೆ, ಅದ್ರಲ್ಲೂ ಹಣಕಾಸು ವಿಚಾರಗಳಲ್ಲಿ ಅಡ್ಡಿ ಉಂಟಾಗುವುದಕ್ಕೆ ಇದು ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. ಅವರ ಈ ಮಾತುಗಳು ಕೂಡ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಇತ್ತೀಚಿಗೆ ಆನ್‌ಲೈನ್‌ನಲ್ಲಿ ಕಾಣಸಿಗುವ ಹಲವು ರೀತಿಯ ವಿಚಾರಗಳನ್ನು ಎಲ್ಲರು ಫಾಲೋ ಮಾಡುತ್ತಾರೆ. ಅದರಿಂದ ಮುಂದೆ ಆಗಬಹುದಾದ ಅಪಾಯಗಳ ಅರಿವಿಲ್ಲದೆ ಅದನ್ನೇ ಅನುಸರಿಸುವ ಮಂದಿಯನ್ನು ನೋಡಬಹುದು. ಸದ್ಯ ಈಗ ಈ ಅರಶಿಣ ನೀರಿನ ಟ್ರೆಂಡ್ ಎಲ್ಲಾ ಕಡೆ ಸುದ್ದಿ ಮಾಡುತ್ತಿದೆ. ಆದ್ರೆ ಅದರಿಂದಾ ಹಲವು ರೀತಿಯ ಸಮಸ್ಯೆಗಳ ಕೂಡ ಎದುರಿಸಬೇಕಾಗುತ್ತದೆ ಎಂಬುದನ್ನು ಯಾರು ಕೂಡ ತಿಳಿದಂತಿಲ್ಲ.



Click it and Unblock the Notifications
