Latest Updates
-
ಅಕ್ಷಯ ತೃತೀಯ: ಸಾಲದ ಸುಳಿಯಿಲ್ಲದೆ ಚಿನ್ನ ಖರೀದಿಸುವುದು ಹೇಗೆ? -
ಬಿಸಿಲಿನ ತಾಪ: ನಿಮ್ಮ ಮನೆಯನ್ನು ತಂಪಾಗಿಡಲು ಅದ್ಭುತ ಟಿಪ್ಸ್ -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ತಂಪು ಆಹಾರಗಳೇ ಮದ್ದು -
ಹಬ್ಬದ ಸೀರೆ ಫ್ಯಾಷನ್: ಈ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಬಿಸಿಗಾಳಿ ಎಚ್ಚರಿಕೆ: ಸುಡುವ ಬಿಸಿಲಿನಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಸುಪ್ರೀಂ ಕೋರ್ಟ್ ಶಾಕ್: ವಿಚ್ಛೇದನ ಒಪ್ಪಂದ ಮುರಿದರೆ ಕಾದಿದೆ ಕಠಿಣ ಶಿಕ್ಷೆ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ -
ಬಿಸಿಗಾಳಿ ಕಾಟವೇ? ಈ ತಂಪು ಪಾನೀಯಗಳೇ ನಿಮ್ಮ ರಕ್ಷಕ -
ಹಬ್ಬದ ಫ್ಯಾಷನ್: ಈ ಟಿಪ್ಸ್ ಫಾಲೋ ಮಾಡಿ ಮಿಂಚಿ! -
ಬಿಸಿಲ ಧಗೆಯಿಂದ ಪಾರಾಗಲು ನಿಮ್ಮ ವರ್ಕೌಟ್ ರೂಟೀನ್ ಬದಲಾಯಿಸಿ
ಸ್ವೀಡನ್‌ನಲ್ಲಿ ನಡೆಯಲಿದೆ 'ಸೆಕ್ಸ್ ಚಾಂಪಿಯನ್ ': ಬಿಸಿ ಬಿಸಿ ಚರ್ಚೆ ಹುಟ್ಟುಹಾಕಿದೆ ಈ ಸ್ಪರ್ಧೆ
'ಸೆಕ್ಸ್ ಚಾಂಪಿಯನ್ ' ಇದೀಗ ತುಂಬಾನೇ ಸದ್ದು ಮಾಡುತ್ತಿದೆ, ಏನು ಸೆಕ್ಸ್ ಚಾಂಪಿಯನಾ? ಅಯ್ಯೇ... ಎಂದು ಹೇಳುವವರೇ ಇದರ ಬಗ್ಗೆ ಮತ್ತಷ್ಟು ತಿಳಿಯಲು ಕುತೂಹಲ ವ್ಯಕ್ತಪಡಿಸುತ್ತಿದ್ದಾರೆ. ಹಲವು ಬಗೆಯ ಸ್ಪೋರ್ಟ್ಸ್ ಬಗ್ಗೆ ಕೇಳಿದ್ದೇವೆ. ಆದರೆ ಸ್ವೀಡನ್ ಸೆಕ್ಸ್ ಅನ್ನು ಒಂದು ಸ್ಪೋರ್ಟ್ಸ್ ರೀತಿ ಸ್ಪರ್ಧೆಯಂತೆ ನಡೆಸಲು ಮುಂದಾಗಲು... ಇದನ್ನು ಕೇಳಿದ ಮಡಿವಂತರು ಕರ್ಮ.. ಕರ್ಮ ಎಂಥ ಕಾಲ ಬಂತಪ್ಪಾ ಎಂದು ಹೇಳಿದರೆ ತುಂಟರು ಇದರ ಲೈವ್ ಯಾವುದರಲ್ಲಿ ಬರಲಿದೆ ಎಂದು ಆಸಕ್ತಿಯಿಂದ ಇದರ ಕುರಿತು ಮಾಹಿತಿ ಹುಡುಕುತ್ತಿದ್ದಾರೆ.

ಸ್ವೀಡನ್ ಸೆಕ್ಸ್ ಫೆರೇಷನ್ ವತಿಯಿಂದ ಈ ಸ್ಪರ್ಧೆ ಏರ್ಪಡಿಸಲಾಗಿದೆ. ಜೂನ್ 8ರಿಂದ ಹಲವು ದಿನಗಳವರೆಗೆ ಈ ಸ್ಪರ್ಧೆ ನಡೆಯಲಿದೆ. ಆದರೆ ಈ ಸ್ಪರ್ಧೆಗೆ ಹಲವು ನಿಯಮಗಳೂ ಇವೆ.
45-60 ನಿಮಿಷ ಲೈಂಗಿಕ ಚಟುವಟಿಕೆಯಲ್ಲಿ ಭಾಗಿಯಾಗಬೇಕು
ಈ ಸ್ಪರ್ಧೆಯಲ್ಲಿ ಭಾಗವಹಿಸುವವರು ತುಂಬಾನೇ ಸ್ಟೆಮಿನಾ ಹೊಂದಿರಬೇಕು, ಹಾಗಂತ ವಯಾಗ್ರ ತೆಗೆದುಕೊಳ್ಳುವಂತಿಲ್ಲ. ಯಾರು ಈ ಸ್ಪರ್ಧೆಯಲ್ಲಿ ಭಾಗವಹಿಸುತ್ತಾರೋ 45-60 ನಿಮಿಷ ಈ ಚಟುವಟಿಕೆ ನಡೆಸಬೇಕು. ಇದಕ್ಕೆ ಈಗಾಗಲೇ ಹಲವು ದೇಶಗಳಿಂದ ಕೆಲ ಸ್ಪರ್ಧಿಗಳು ತಮ್ಮ ಹೆಸರು ನೋಂದಾಯಿಸಿಕೊಂಡಿದ್ದಾರೆ. ಈಗಾಗಲೇ 20ಕ್ಕೂ ಅಧಿಕ ಜನರು ಹೆಸರು ನೋಂದಾಯಿಸಿದ್ದು, ಸ್ಪರ್ಧಿಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗಲಿದೆ.
ಇವರ ಆಟ ನೋಡಲು ಜಡ್ಜ್, ಪ್ರೇಕ್ಷರೂ ಇರುತ್ತಾರೆ
ಈ ಸೆಕ್ಸ್ ಚಾಂಪಿಯನ್‌ಶಿಪ್ ಆಟದಲ್ಲಿ ಜ್ಯೂರಿಗಳು, ತೀರ್ಪುಗಾರರು ಹಾಗೂ ಪ್ರೇಕ್ಷಕರೂ ಇರುತ್ತಾರೆ. ಜ್ಯೂರಿಗಳ ತೀರ್ಪು ಜೊತೆ ಪ್ರೇಕ್ಷಕರ ವೋಟಿಂಗ್ ಕೂಡ ಇರಲಿದೆ. ಈ ಸ್ಪರ್ಧೆಯಲ್ಲಿ ಮುಂದಿನ ಅಂಕಕ್ಕೆ ಹೋಗಲು ನಿರ್ಧಿಷ್ಟ ಸ್ಕೋರ್ ಪಡೆಯಬೇಕು, ಅದನ್ನು ಪಡೆಯದ ಜೋಡಿ ಸ್ಪರ್ಧೆಯಿಂದ ಔಟ್. ಆದರೆ ಈ ಸ್ಪರ್ಧೆ ಕುರಿತು ಸ್ವೀಡನ್ ಅಧಿಕೃತವಾಗಿ ಯಾವುದೇ ಮಾಹಿತಿ ನೀಡಿಲ್ಲ.
ಈ ಸ್ಪರ್ಧೆಯಲ್ಲಿ ಭಾಗವಹಿಸುವವರಿಗೆ ಇರಬೇಕಾದ ಅರ್ಹತೆ
* ಬುದ್ಧಿವಂತಿಕೆ * ಸ್ಟಾಮಿನಾ * ತಾಳ್ಮೆ, * ಕಲ್ಪನೆ ಎಲ್ಲಾ ಇರಬೇಕಾಗುತ್ತದೆ ಎಂಬುವುದು ಈ ಸ್ಪರ್ಧೆ ನಡೆಸುತ್ತಿರುವವರ ಹೇಳಿಕೆ.
ಸಾಮಾಜಿಕ ತಾಣದಲ್ಲಿ ತೀವ್ರ ಚರ್ಚೆ ಹುಟ್ಟು ಹಾಕಿದೆ ಈ ಸ್ಪರ್ಧೆ
ಈ ಸ್ಪರ್ಧೆ ಕುರಿತು ಸಾಮಾಜಿಕ ತಾಣದಲ್ಲಿ ತುಂಬಾ ಟ್ರೋಲ್ ಆಗುತ್ತಿದೆ, ಚರ್ಚೆ ಆಗುತ್ತಿದೆ. ಕೆಲವರು ಇಂಥ ಸ್ಪರ್ಧೆ ಸಮಾಜಕ್ಕೆ ಏನು ಸಂದೇಶ ನೀಡಲಿದೆ ಎಂಬ ಆತಂಕ ವ್ಯಕ್ತಪಡಿಸುತ್ತಿದ್ದಾರೆ. ಕೆಲವರು ಇದರಲ್ಲಿ ಭಾಗಿಯಾಗಲು ಇನ್ನು ಕೆಲವರು ಈ ಸ್ಪರ್ಧೆಯನ್ನು ಯಾವ ಫ್ಲಾಟ್‌ಫಾರಂನಲ್ಲಿ ನೋಡಬಹುದು ಎಂಬುವುದರ ಬಗ್ಗೆ ಆಸಕ್ತಿ ವ್ಯಕ್ತಪಡಿಸುತ್ತಿದ್ದಾರೆ. ಈ ಸ್ಪರ್ಧೆ ಮೂಲಕ ಪೋರ್ನ್‌ಗೆ ಮುಕ್ತ ಅವಕಾಶ ನೀಡಲಾಗುತ್ತಿದೆಯೇ ಎಂದು ಕೆಲವರು ಅಸಮಧಾನ ವ್ಯಕ್ತಪಡಿಸುತ್ತಿದ್ದಾರೆ.
ಸ್ವೀಡನ್‌ನಲ್ಲಿ ಸೆಕ್ಸ್ ಕಲ್ಚರ್
ಸೆಕ್ಸ್ ಬಗ್ಗೆ ಸ್ವೀಡನ್ ತುಂಬಾನೇ ಓಪನ್ ಮೈಂಡೆಡ್. 60ರ ದಶಕದಲ್ಲಿ ಮಹಿಳೆಯ ನಗ್ನ ಶರೀರ ಚಲನಚಿತ್ರಗಳಲ್ಲಿ ತೋರಿಸಲಾಗಿತ್ತು. ಸ್ವೀಡನ್ ದೇಶದವರು ಬೇಸಿಗೆ ಕಾಲವನ್ನು ತುಂಬಾ ಇಷ್ಟಪಡುತ್ತಾರೆ. ಏಕೆಂದರೆ ಈ ಕಾಲದಲ್ಲಿ ಬಟ್ಟೆಯ ಗೊಡವೆ ಇಲ್ಲದೆ ಆರಾಮವಾಗಿ ಬಿದ್ದುಕೊಳ್ಳುತ್ತಾರೆ. ಜಗತ್ತಿನಲ್ಲಿಯೇ ಪ್ರೈಮರಿ ಶಾಲಾ ಮಕ್ಕಳಿಗೆ ಸೆಕ್ಸ್ ಶಿಕ್ಷಣ ನೀಡಿದ ಮೊದಲ ದೇಶ ಸ್ವೀಡನ್. ಅನಗ್ಯತ ಗರ್ಭಧಾರಣೆ ತಡೆಗಟ್ಟಲು ಪ್ರೈಮರಿ ಶಾಲಾ ಮಕ್ಕಳಿಗೆ ಸೆಕ್ಸ್ ಎಜುಕೇಷನ್ ನೀಡಿತ್ತು.



Click it and Unblock the Notifications











