Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ದುಡ್ಡು, ಗೌರವ ಸಂಪಾದಿಸಬೇಕಾ? ಹಾಗಾದ್ರೆ ಈ ಗುಣ ಇರಲೇಬೇಕು : ವಿಧುರ ನೀತಿ
ವಿಧುರನು ಮಹಾಭಾರತ ಕಾಲದಲ್ಲಿ ಪ್ರಾಮಾಣಿಕತೆ, ಬುದ್ಧಿವಂತಿಕೆ, ರಾಜನೀತಿ ರೂಪಿಸುವುದರಲ್ಲಿ ಪ್ರಖ್ಯಾತಿ ಪಡೆದಿದ್ದ ವ್ಯಕ್ತಿ. ಶ್ರೀ ಕೃಷ್ಣನ ಮೆಚ್ಚುಗೆಗೆ ಪಾತ್ರರಾಗಿದ್ದ ಮಹಾನ್ ವ್ಯಕ್ತಿ ಈತ. ಇವರ ಒಂದೊಂದು ಮಾತುಗಳು ಇಂದಿಗೂ ನಮ್ಮ ಜೀವನಕ್ಕೆ ಪಾಠಗಳಾಗಿದೆ.
ವಿಧುರ ನೀತಿಯನ್ನು ಪಾಲಿಸಿದವರು ಜೀವನದಲ್ಲಿ ಎಂದಿಗೂ ಸೋತಿಲ್ಲ. ಅದೇ ರೀತಿ ಜೀವನದಲ್ಲಿ ಆಸ್ತಿ ಹಾಗೂ ಗೌರವಗಳನ್ನು ಪಡೆಯಬೇಕಾದರೆ ಈ ಗುಣಗಳು ನಿಮ್ಮಲ್ಲಿ ಇರಲೇಬೇಕು ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.

ಹಾಗಾದ್ರೆ ಆ ಗುಣಗಳು ಯಾವುದು ಅನ್ನೋದನ್ನ ತಿಳಿಯೋಣ.
1. ಜ್ಞಾನ
ವಿಧುರನ ಪ್ರಕಾರ ಜ್ಞಾನ ಸಂಪಾದನೆಯ ಹಿಂದೆ ನಮ್ಮ ಪರಿಶ್ರಮ ಹಾಗೂ ತ್ಯಾಗ ಇರಲೇಬೇಕು. ಯಾರೂ ಜೀವನದಲ್ಲಿ ಖುಷಿಯನ್ನು ಮಾತ್ರ ಬಯಸುತ್ತಾರೋ ಅಂತವರಿಗೆ ಜ್ಞಾನ ಸಂಪಾದಿಸೋ ಮಾರ್ಗ ಕಷ್ಟವೇ ಸರಿ. ಆದರೆ ಯಾರಿಗೆ ನಿಜವಾಗಿ ಜ್ಞಾನ ಸಂಪಾದಿಸಲೇಬೇಕು ಎಂಬ ಮನಸ್ಸಿರುತ್ತದೆಯೋ ಅವರು ತಮ್ಮೆಲ್ಲಾ ಆಸೆಗಳನ್ನು ತ್ಯಜಿಸಲೇಬೇಕಾಗುತ್ತದೆ. ಇದನ್ನು ಮಾಡುವುದರ ಮುಖಾಂತರ ನೀವು ನಿಮ್ಮ ಭವಿಷ್ಯದಲ್ಲಿ ಆಸ್ತಿ ಹಾಗೂ ಗೌರವವನ್ನು ಸಂಪಾದನೆ ಮಾಡಬಹುದು.
2. ಸತ್ಯ ಮಾರ್ಗದಲ್ಲಿ ನಡೆಯಿರಿ
ವಿಧುರನ ಪ್ರಕಾರ ಯಾರು ಸತ್ಯ ಮಾರ್ಗದಲ್ಲಿ ನಡೆಯುತ್ತಾರೋ ಅವರು ಆರ್ಥಿಕವಾಗಿ ಸದೃಢರಾಗುತ್ತಾರೋ, ಹೆಸರು, ಗೌರವ ಎಲ್ಲವನ್ನೂ ಪಡೆಯುತ್ತಾರೆ. ಧರ್ಮ ಮಾರ್ಗದಲ್ಲಿ ನಡೆಯುವ ವ್ಯಕ್ತಿಗಳು ಜೀವನದಲ್ಲಿ ಎಂದಿಗೂ ಸಂಕಷ್ಟಗಳನ್ನು ಎದುರಿಸೋದಿಲ್ಲ. ವಿಧುರನ ಪ್ರಕಾರ ಅಧರ್ಮ ಮಾರ್ಗದಲ್ಲಿ ಹಣ ಸಂಪಾದನೆ ಮಾಡಿದರೆ ಅದು ನಮ್ಮ ಬಳಿ ಉಳಿಯೋದಿಲ್ಲ ಎಂದು ಹೇಳಿದ್ದಾರೆ.
3. ಏಕಾಗ್ರತೆ
ವಿಧುರನ ಪ್ರಕಾರ ನಾವು ಯಾವುದೇ ಕೆಲಸವನ್ನು ಮಾಡಬೇಕಾದರೂ ಅಲ್ಲಿ ಏಕಾಗ್ರತೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ಯಾರು ತಾವು ಮಾಡೋ ಕೆಲಸದಲ್ಲಿ ಖುಷಿ ಕಂಡುಕೊಳ್ಳುತ್ತಾರೋ ಅವರು ಜೀವನ ಪರ್ಯಂತ ಖುಷಿಯಾಗಿರುತ್ತಾರೆ. ಅಂಥವರನ್ನು ಗೌರವ, ದುಡ್ಡು, ಹೆಸರು ಹುಡುಕಿಕೊಂಡು ಬರುತ್ತದೆ. ಹೀಗಾಗಿ ಯಾವುದೇ ಹಿಂಜರಿಕೆ ಇಲ್ಲದೇ ನಿಮ್ಮ ಗುರಿಯ ಕಡೆಗೆ ಸಾಗಿ ಎಂದು ವಿಧುರ ನೀತಿಯಲ್ಲಿ ಉಲ್ಲೇಖವಾಗಿದೆ.
ಅಧರ್ಮ ಮಾರ್ಗದಿಂದ ಸಂಪಾದಿಸಿದ ಹಣ, ಗೌರವ ಎಲ್ಲವೂ ಕ್ಷಣಿಕ. ಹೀಗಾಗಿ ವಿಧುರ ನೀತಿಯಲ್ಲಿ ಉಲ್ಲೇಖವಾಗಿರುವಂತೆ ಧರ್ಮ ಮಾರ್ಗದಲ್ಲಿ ನಡೆದರೆ ನಾವು ಪಡೆದುಕೊಂಡಿದ್ದೆಲ್ಲಾ ನಮ್ಮ ಬಳಿ ಕೊನೆವರೆಗೂ ಇರುತ್ತೆ ಎಂದು ಹೇಳಲಾಗಿದೆ.



Click it and Unblock the Notifications



