Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಿಧುರರ ಈ ನೀತಿಗಳನ್ನು ಪಾಲಿಸಿದರೆ ಸಮಸ್ಯೆ ಹತ್ತಿರ ಸುಳಿಯೋದಕ್ಕೂ ಸಾಧ್ಯವಿಲ್ಲ!
ಮಹಾತ್ಮ ವಿಧುರರು ಮಹಾಭಾರತ ಕಾಲದ ಮಹಾನ್ ವಿಧ್ವಾಂಸ ಹಾಗೂ ತತ್ವಜ್ಞಾನಿಯಾಗಿದ್ದರು. ಇವರ ಜೀವನ ಪಾಠಗಳನ್ನು ಇಂದಿಗೂ ಜನ ಪಾಲಿಸುತ್ತಿದ್ದಾರೆ. ಇಂತಹ ವಿಧುರರು ಸಮಸ್ಯೆಗಳನ್ನು ಹೇಗೆ ಎದುರಿಸಬೇಕು ಅನ್ನೋದ್ರ ಬಗ್ಗೆ ಕೂಡ ಮಾಹಿತಿ ನೀಡಿದ್ದಾರೆ.
ಮಹಾತ್ಮ ವಿಧುರರ ಪ್ರಕಾರ ಸಮಸ್ಯೆಗಳು ಬರೋ ಮೊದಲೇ ನಾವು ಮುಂಜಾಗೃತ ಕ್ರಮಗಳನ್ನು ಕೈಗೊಂಡು ಅವುಗಳನ್ನು ಎದುರಿಸಲು ಸಿದ್ಧರಾಗಿರಬೇಕು. ಒಂದು ವೇಳೆ ಮಹಾತ್ಮ ವಿಧುರರು ಹೇಳಿದ ಈ ನೀತಿಗಳನ್ನು ಪಾಲಿಸಿದ್ರೆ ನಿಮಗೆ ಯಾವ ಸಮಸ್ಯೆಗಳು ಎದುರಾಗೋದಿಲ್ಲ. ಹಾಗಾದ್ರೆ ಸಮಸ್ಯೆಗಳನ್ನು ಮೆಟ್ಟಿ ನಿಲ್ಲೋದಕ್ಕೆ ವಿಧುರರು ಹೇಳಿಕೊಟ್ಟ ಆ ನೀತಿಗಳು ಯಾವುದು ಅನ್ನೋದನ್ನ ತಿಳಿಯೋಣ.

1. ದೇವರ ಮೇಲೆ ನಂಬಿಕೆ ಇಡಿ
ಮಹಾತ್ಮ ವಿಧುರರು ಪ್ರಕಾರ ನಾವು ಯಾವ ಕೆಲಸವನ್ನು ಮಾಡಬೇಕಾದರೂ ದೇವರನ್ನು ಸ್ತುತಿಸಬೇಕು. ಆಗ ಮಾತ್ರ ನಾವು ಮಾಡೋ ಕೆಲಸದಲ್ಲಿ ನಮಗೆ ಯಶಸ್ಸು ಒಲಿಯೋದಕ್ಕೆ ಸಾಧ್ಯ. ಯಾರು ದೇವರನ್ನು ಪೂಜಿಸುವುದಿಲ್ಲವೂ, ತಮ್ಮನ್ನು ತಾವು ದೇವರಿಗಿಂತ ಮಿಗಿಲು ಅಂತ ಯಾರು ಅಂದುಕೊಂಡಿರುತ್ತಾರೋ ಅವರು ಜೀವನದಲ್ಲಿಉದ್ಧಾರವಾಗೋದಕ್ಕೆ ಸಾಧ್ಯವೇ ಇಲ್ಲ ಎಂದು ಹೇಳಿದ್ದಾರೆ.
2. ಹಿರಿಯರಿಗೆ ಗೌರವ ನೀಡಿ
ಮಾಹಾತ್ಮ ವಿಧುರರ ಪ್ರಕಾರ ಹಿರಿಯರಿಗೆ ನಾವು ಗೌರವ ನೀಡಬೇಕು. ಯಾವ ಮನೆಯಲ್ಲಿ ಹಿರಿಯರಿಗೆ ಗೌರವವನ್ನು ನೀಡಲಾಗುತ್ತದೆಯೋ ಆ ಮನೆಯಲ್ಲಿ ಸುಖ ಹಾಗೂ ಶಾಂತಿ ನೆಲೆಸಿರುತ್ತದೆ. ಹಾಗೂ ತಾಯಿ ಲಕ್ಷ್ಮೀಯ ಆಶೀರ್ವಾದ ಯಾವಾಗಲೂ ಅವರ ಮೇಲಿರುತ್ತದೆ. ಯಾವ ಮನೆಯಲ್ಲಿ ಹಿರಿಯರಿಗೆ ಗೌರವ ನೀಡುವುದಿಲ್ಲವೋ ಆ ಮನೆಯಲ್ಲಿ ಆರ್ಥಿಕ ಸಮಸ್ಯೆ ಎದುರಾಗುತ್ತೆ ಅಂತ ಮಹಾತ್ಮ ವಿಧುರರು ಹೇಳಿದ್ದಾರೆ.
3. ಮನೆಯನ್ನು ಸ್ವಚ್ಛವಾಗಿಡಿ
ವಿಧುರ ನೀತಿಯ ಪ್ರಕಾರ ಯಾವ ಮನೆಯನ್ನು ಪ್ರತಿನಿತ್ಯ ಸ್ವಚ್ಛವಾಗಿ ಇಡೋದಿಲ್ಲವೋ? ಮನೆಯೆಲ್ಲಾ ಗಲೀಜು ತುಂಬಿಕೊಂಡಿರುತ್ತದೆಯೋ ಅಂತಹ ಮನೆಯಲ್ಲಿ ಬಡತನ ಹೆಚ್ಚಾಗುತ್ತಂತೆ. ಹೀಗಾಗಿ ಪ್ರತಿನಿತ್ಯ ಮನೆಯನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಅಂತಹ ಮನೆಯಲ್ಲಿ ಲಕ್ಷ್ಮೀ ನೆಲೆಸುತ್ತಾಳೆ. ಮತ್ತು ಆ ಮನೆಯಲ್ಲಿ ಖುಷಿ, ಸಮೃದ್ಧಿ ಹೆಚ್ಚಾಗುತ್ತದೆ.
4. ಇಂತಹ ವ್ಯಕ್ತಿಗಳೇ ಶ್ರೇಷ್ಠ
ಮಹಾತ್ಮ ವಿಧುರರ ಪ್ರಕಾರ ಯಾವ ವ್ಯಕ್ತಿಗೆ ಒಬ್ಬರ ತಪ್ಪನ್ನು ಕ್ಷಮಿಸುವ ಗುಣ ಇಡುತ್ತದೆಯೋ ಅಂತಹ ವ್ಯಕ್ತಿಗಳು ಶ್ರೇಷ್ಠ. ಸಾಮಾನ್ಯವಾಗಿ ಯಾರು ಕೂಡ ಅಷ್ಟೊಂದು ಸುಲಭವಾಗಿ ಒಬ್ಬರ ತಪ್ಪನ್ನು ಕ್ಷಮಿಸೋದಕ್ಕೆ ಇಷ್ಟ ಪಡೋದಿಲ್ಲ. ಆದರೆ ಕ್ಷಮಿಸುವ ಗುಣ ಇರುವವರ ಮನಸ್ಸು ನಿಜಕ್ಕೂ ತುಂಬಾನೇ ನಿಷ್ಕಲ್ಮಷ. ಇವರು ಜೀವನದಲ್ಲಿ ಎಂತಹ ಸಮಸ್ಯೆಗಳನ್ನಾದರೂ ಮೆಟ್ಟಿ ನಿಲ್ಲುತ್ತಾರೆ.
5. ಇಂಥಹ ವ್ಯಕ್ತಿಗಳಿಂದ ದೂರವಿರಿ
ವಿಧುರ ನೀತಿಯ ಪ್ರಕಾರ ಉದಾಸೀನ, ಕೋಪ, ದುರಾಸೆ, ಅಮಲಿನಲ್ಲಿ ಮಗ್ನವಾಗಿರುವ ವ್ಯಕ್ತಿಗಳಿಂದ ದೂರವಿರಿ ಎಂದು ಹೇಳಿದ್ದಾರೆ. ಇಂಥಹ ಗುಣವಿರುವ ವ್ಯಕ್ತಿಗಳು ತಾವಾಗಿ ಅಭಿವೃದ್ಧಿ ಹೊಂದುವುದಿಲ್ಲ ಹಾಗೂ ತಮ್ಮ ಜೊತೆಗಿರುವವರನ್ನು ಅಭಿವೃದ್ಧಿ ಹೊಂದಲು ಬಿಡೋದಿಲ್ಲ. ಆದಷ್ಟು ಇವರಿಂದ ದೂರವಿದ್ದರೆ ಒಳ್ಳೆಯದು. ಇಲ್ಲವಾದರೆ ಸಮಸ್ಯೆಗಳನ್ನು ನೀವೆ ಮೈಮೇಲೆ ಎಳೆದುಕೊಂಡಂತೆ ಎಂದು ವಿಧುರರು ಹೇಳಿದ್ದಾರೆ.
ಸಮಸ್ಯೆ ಮನುಷ್ಯನಿಗೆ ಬಾರದೆ ಮರಕ್ಕೆ ಬರೋದಿಕ್ಕೆ ಸಾಧ್ಯಾನಾ? ಹೀಗಾಗಿ ಎಂತಹ ಸಮಸ್ಯೆಗಳೇ ಬಂದರೂ ಅದನ್ನು ಎದುರಿಸೋದು ಹೇಗೆ ಅನ್ನೋದು ನಮಗೆ ಗೊತ್ತಿರಬೇಕು.



Click it and Unblock the Notifications



