Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಜೀವನದಲ್ಲಿ ಯಶಸ್ಸು ಸಾಧಿಸಲು ಈ ನಾಲ್ಕು ಜನರ ಆಶೀರ್ವಾದ ಬೇಕೇ ಬೇಕು : ವಿಧುರ
ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಜೀವನದಲ್ಲಿ ಏನಾದರೂ ಒಂದು ಸಾಧನೆ ಮಾಡಬೇಕು ಅನ್ನೋ ಆಸೆ ಇದ್ದೇ ಇರುತ್ತದೆ. ಆರ್ಥಿಕವಾಗಿ ಉತ್ತಮ ಸ್ಥಿತಿಗೆ ತಲುಪಬೇಕು, ಸಮಾಜದಲ್ಲಿ ಹೆಸರು, ಗೌರವ ಗಳಿಸಬೇಕೆಂಬ ಆಸೆ ಇದ್ದೇ ಇರುತ್ತದೆ. ಆದರೆ ಎಲ್ಲರಿಂದಲೂ ಅದು ಸಾಧ್ಯವಾಗೋದಿಲ್ಲ. ಯಾಕಂದ್ರೆ ಮಹಾತ್ಮ ವಿಧುರರ ಪ್ರಕಾರ ಮನುಷ್ಯನಲ್ಲಿ ಈ ಐದು ಗುಣಗಳು ಇದ್ದರಷ್ಟೇ ಆತ ಜೀವನದಲ್ಲಿ ಮುಂದೆ ಬರೋದಕ್ಕೆ ಸಾಧ್ಯವೆಂದು ಹೇಳಿದ್ದಾರೆ. ಹಾಗಾದ್ರೆ ವಿಧುರರು ಹೇಳಿರೋ ಆ ಗುಣಗಳು ಯಾವುದು ಅನ್ನೋದನ್ನು ತಿಳಿಯೋಣ.

1. ತಾಯಿಯ ಆಶೀರ್ವಾದ
ತಾಯಿಗಿಂತ ಮಿಗಿಲಾದ ದೇವರಿಲ್ಲ ಅಂತಾರೆ ಹಾಗೆ ನಾವು ಪ್ರತಿಯೊಂದು ಕೆಲಸ ಮಾಡಬೇಕಾದರೂ ಅದಕ್ಕೆ ತಾಯಿಯ ಆಶೀರ್ವಾದ ಬೇಕೇ ಬೇಕು. ತಾಯಿಯ ಆಶೀರ್ವಾದದ ಹೊರತಾಗಿ ಯಾವುದೇ ಕೆಲಸಗಳು ಯಶಸ್ವಿಯಾಗೋದಕ್ಕೆ ಸಾಧ್ಯವಿಲ್ಲ. ಹೀಗಾಗಿ ತಾಯಿಗೆ ಯಾವುದೇ ಕಾರಣಕ್ಕೂ ನೋವು ಮಾಡೋದಕ್ಕೆ ಹೋಗಬಾರದು. ಆಕೆಗೆ ನಿಮ್ಮ ಮೇಲೆ ಅಸಮಾಧಾನವಿದ್ದರೆ ಆ ಆಶೀರ್ವಾದ ಫಲ ನೀಡುವುದಿಲ್ಲ ಎಂದು ವಿಧುರರು ಹೇಳಿದ್ದಾರೆ.
2. ತಂದೆಯ ಆಶೀರ್ವಾದ
"ಅಪ್ಪ ಎಂದರೆ ಆಕಾಶ". ಅಪ್ಪ ಅನ್ನೋ ಒಬ್ಬ ವ್ಯಕ್ತಿ ಮಕ್ಕಳಿಗಾಗಿ ಇಡೀ ಜೀವನವನ್ನು ಮುಡಿಪಾಗಿ ಇಡುತ್ತಾನೆ. ಮಹಾತ್ಮ ವಿಧುರರ ಪ್ರಕಾರ ಅಪ್ಪ ಮುಗಿಲಿಗಿಂತಲೂ ಮಿಗಿಲು ಎಂದು ಹೇಳಿದ್ದಾರೆ. ಜೀವನವೆಲ್ಲಾ ತನ್ನ ಕುಟುಂಬಕ್ಕಾಗಿ ಬದುಕುವ ವ್ಯಕ್ತಿ ಅಪ್ಪ. ಹೀಗಾಗಿ ಅಪ್ಪನನ್ನು ಕಡೆಗಣಿಸಬಾರದು. ನೀವು ದುಡಿಯುವ ಸಮಯದಲ್ಲಿ ಅಪ್ಪನನ್ನು ತುಂಬಾ ಚೆನ್ನಾಗಿ ನೋಡಿಕೊಳ್ಳಬೇಕು. ಅವರ ಕಣ್ಣಲ್ಲಿ ನೀರು ಬಾರದಂತೆ ನೋಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹೀಗಾದಾಗ ಅಪ್ಪ ನಿಮಗೆ ಮನತುಂಬಿ ಆಶೀರ್ವಾದ ಮಾಡುತ್ತಾರೆ.
3. ಗುರುವಿನ ಆಶೀರ್ವಾದ
ಒರ್ವ ವ್ಯಕ್ತಿಯನ್ನು ಪರಿಪೂರ್ಣ ಮಾಡಬೇಕಾದರೆ ಅದಕ್ಕೆ ಗುರುವಿನ ಸಹಾಯಬೇಕೇ ಬೇಕು. ಶೂನ್ಯ ಜ್ಞಾನ ಹೊಂದಿದ ಒಂದು ಮಗುವಿಗೆ ಗುರುವೊಬ್ಬ ವಿದ್ಯಾರ್ಜನೆಯನ್ನು ನೀಡಿ ಪರಿಪೂರ್ಣ ವ್ಯಕ್ತಿಯನ್ನಾಗಿ ಮಾಡುತ್ತಾನೆ. ಇಂತಹ ಗುರುವಿಗೆ ಅವಮಾನ ಮಾಡಬಾರದು. ಯಾಕಂದ್ರೆ ಗುರುವಿಗೆ ಅವಮಾನ ಮಾಡಿ ಆತನ ಕೋಪಕ್ಕೆ ಗುರಿಯಾಗಬೇಡಿ. ಗುರುವಿನ ಆಶೀರ್ವಾದ ತುಂಬಾನೇ ಮುಖ್ಯವಾಗುತ್ತದೆ ಎಂದು ಮಹಾತ್ಮ ವಿಧುರರು ಹೇಳಿದ್ದಾರೆ.
4. ಅಗ್ನಿಯ ಆಶೀರ್ವಾದವು ಇರಬೇಕು
ಪಂಚಭೂತಗಳಲ್ಲಿ ಅಗ್ನಿಯು ಕೂಡ ಒಂದು. ಪುರಾಣಗಳಲ್ಲಿ ಅಗ್ನಿಗೆ ಮಹತ್ವದ ಸ್ನಾನವನ್ನು ನೀಡಲಾಗಿದೆ. ಅಗ್ನಿಯ ಹೊರತಾಗಿ ಯಾವುದೇ ಯಜ್ಞ-ಯಾಗಾದಿಗಳನ್ನು ಮಾಡೋದಕ್ಕೆ ಸಾಧ್ಯವಿಲ್ಲ. ಪಾಪ ಪರಿಹಾರವಾಗಬೇಕಾದರೆ, ಪುಣ್ಯ ಫಲಗಳು ಪ್ರಾಪ್ತಿಯಾಗಬೇಕಾದರೆ ಹೋಮ-ಹವನಗಳನ್ನು ಕೈಗೊಳ್ಳಲೇಬೇಕು. ಹೀಗಾಗಿ ಪ್ರತಿಯೊಂದು ಕೆಲಸ ಮಾಡಬೇಕಾದರೂ ಅಗ್ನಿಯ ಆಶೀರ್ವಾದ ಮುಖ್ಯವಾಗಿ ಬೇಕಾಗುತ್ತದೆ.
ಜೀವನದಲ್ಲಿ ಮುಂದೆ ಬರಲು ನಿಮ್ಮ ಶ್ರಮ ಒಂದೇ ಸಾಕಾಗುವುದಿಲ್ಲ. ಇದರ ಜೊತೆಗೆ ಈ ನಾಲ್ಕು ವ್ಯಕ್ತಿಗಳ ಆಶೀರ್ವಾದವು ನಮ್ಮ ಅಭಿವೃದ್ಧಿಯಲ್ಲಿ ತುಂಬಾನೇ ಮುಖ್ಯವಾಗುತ್ತದೆ.



Click it and Unblock the Notifications


