Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಈ ನಾಲ್ಕು ಗುಣಗಳು ನಿಮ್ಮನ್ನು ಎಂದಿಗೂ ಸಂತೋಷವಾಗಿರಲು ಬಿಡುವುದಿಲ್ಲ : ವಿಧುರ
ಮಹಾತ್ಮ ವಿಧುರರ ಪ್ರಕಾರ ನಮ್ಮ ಆತ್ಮ ಪರಿಶುದ್ಧವಾಗಿದ್ದಾಗ ಮಾತ್ರ ನಮ್ಮ ಮುಖದಲ್ಲಿ ನಗು ಮೂಡೋದಕ್ಕೆ ಸಾಧ್ಯ. ಒಳಗಿನಿಂದ ಕೆಟ್ವರಾಗಿದ್ದು ಹೊರಗಿನಿಂದ ನಗು ಮುಖ ತೋರಿದರೆ ಅದು ವ್ಯರ್ಥವೇ ಸರಿ. ಮನುಷ್ಯನಲ್ಲಿ ಈ ಆರು ಕೆಟ್ಟ ಗುಣಗಳು ಇದ್ದರೆ ಆತ ಜೀವನದಲ್ಲಿ ಖುಷಿಯಾಗಿರಲು ಸಾಧ್ಯವೇ ಇಲ್ಲ. ಹಾಗಾದ್ರೆ ಮಹಾತ್ಮ ವಿಧುರರು ಹೇಳಿರುವ ಮನುಷ್ಯನ ಆ ಕೆಟ್ಟ ಗುಣಗಳು ಯಾವುದು ಅನ್ನೋದನ್ನ ನೋಡೋಣ.

1. ಹೊಟ್ಟೆಕಿಚ್ಚು
ನಮ್ಮ ಸ್ನೇಹಿತರು ಅಥವಾ ನಮ್ಮ ಆಪ್ತರೇ ಬೆಳೆಯುತ್ತಿದ್ದಾಗ ಮನುಷ್ಯನಿಗೆ ಹೊಟ್ಟೆ ಕಿಚ್ಚು ಅನ್ನೋದು ಶುರುವಾಗುತ್ತದೆ. ಹೊಟ್ಟೆ ಕಿಚ್ಚು ಒಳ್ಳೆಯದಲ್ಲ ಇದು ಮನುಷ್ಯನನ್ನು ಸುಟ್ಟು ಹಾಕುತ್ತದೆ ಎಂದು ಮಹಾತ್ಮ ವಿಧುರರು ಹೇಳಿದ್ದಾರೆ. ಸಾಧ್ಯವಾದರೆ ಬೇರೆಯವರು ಬೆಳೆಯುತ್ತಿರುವುದನ್ನು ಕಂಡು ಖುಷಿ ಪಡಿ ಅದನ್ನು ಬಿಟ್ಟು ಆತನಿಗೆ ಕೆಟ್ಟದಾಗಲಿ ಎಂದು ಬಯಸೋದು ತಪ್ಪು. ಹೀಗಿದ್ದಾಗ ನೀವು ಖುಷಿ ಪಡೋದಕ್ಕೆ ಸಾಧ್ಯವ ಇಲ್ಲ ಎಂದು ವಿಧುರರು ಹೇಳಿದ್ದಾರೆ.
2. ದ್ವೇಷ
ಮಹಾತ್ಮ ವಿಧುರರ ಪ್ರಕಾರ ದ್ವೇಷ ಮನುಷ್ಯನ ಅತೀ ದೊಡ್ಡ ಶತ್ರು. ಪ್ರತಿಯೊಬ್ಬ ವ್ಯಕ್ತಿಗೂ ತಾರಾದರೂ ಒಬ್ಬರ ಮೇಲೆ ದ್ವೇಷ ಇದ್ದೇ ಇರುತ್ತದೆ. ದ್ವೇಷ ಇದ್ದಾಗ ನಾವು ಇಡೀ ದಿನ ಅವರ ಬಗ್ಗೆನೇ ಚಿಂತೆ ಮಾಡುತ್ತೇವೆ. ಅವರನ್ನು ಹೇಗೆ ಸೋಲಿಸಬಹುದು ಅನ್ನೋದೇ ನಮ್ಮ ಆಲೋಚನೆಯಾಗಿ ಬಿಡುತ್ತದೆ. ಇದೇ ಗುಂಗಿನಲ್ಲಿ ನಮ್ಮ ಸಂತೋಷವನ್ನು ನಾವು ಕಾಣೋದನ್ನು ಮರೆತು ಬಿಡ್ತೀವಿ ಎಂದು ಮಹಾತ್ಮರು ಹೇಳಿದ್ದಾರೆ.
3. ಕೋಪ
ಮನುಷ್ಯನಿಗೆ ಕೋಪ ಇರಬೇಕು ಆದರೆ ಅತಿಯಾದ ಕೋಪ ಒಳ್ಳೆಯದಲ್ಲ ಎಂದು ವಿಧುರರು ಹೇಳಿದ್ದಾರೆ. ಅತಿಯಾದ ಕೋಪ ನಿಮ್ಮ ಬದುಕನ್ನೇ ನಾಶ ಮಾಡಿಬಿಡಬಹುದು. ಯಾಕಂದ್ರೆ ಮನುಷ್ಯನಿಗೆ ತಾಳ್ಮೆ ಅನ್ನೋದು ತುಂಬಾನೇ ಮುಖ್ಯವಾಗುತ್ತದೆ. ತಾಳ್ಮೆ ಕಳೆದುಕೊಂಡಾಗ ಅದು ಕೋಪಕ್ಕೆ ತಿರುಗೋದಕ್ಕೆ ಸಾಧ್ಯ. ಹೀಗಾಗಿ ನಿಮ್ಮೊಳಗಡೆ ಕೋಪದ ಜ್ವಾಲೆ ಕುದಿಯುತ್ತಿದ್ದರೆ ನೀವೆಂದಿಗೂ ಖುಷಿಯಿಂದಿರಲು ಸಾಧ್ಯವೇ ಇಲ್ಲ.
4. ತೃಪ್ತಿ ಇಲ್ಲದ ಜೀವನ
ಯಾವ ವ್ಯಕ್ತಿ ಇರೋದ್ರಲ್ಲಿ ತೃಪ್ತಿ ಪಟ್ಟುಕೊಳ್ಳುತ್ತಾನೋ ಆತನ ಜೀವನದಲ್ಲಿ ತುಂಬಾನೇ ಖುಷಿಯಾಗಿರುತ್ತಾನೆ. ಆದರೆ ಅನೇಕರಿಗೆ ದೇವರು ಎಷ್ಟು ಕೊಟ್ಟರು ಸಾಲೋದೇ ಇಲ್ಲ. ಇನ್ನೂ ಬೇಕು ಎಂದು ಅವರ ಮನ ಹಂಬಲಿಸುತ್ತಿರುತ್ತದೆ. ಹೀಗಾಗಿ ಅಂತವರಿಗೆ ಖುಷಿ ಅನ್ನೋದೇ ಇರೋದಿಲ್ಲ. ಜೀವನದಲ್ಲಿ ಮತ್ತಷ್ಟು ಬೇಕು ಎಂದು ಹುಡುಕಾಡೋದ್ರಲ್ಲೇ ಸಮಯ ಕಳೆದು ಹೋಗುತ್ತದೆ ಎಂದು ವಿಧುರರು ಹೇಳಿದ್ದಾರೆ.
ಹುಟ್ಟು ಹಾಗೂ ಸಾವು ನಮ್ಮ ಕೈಯಲ್ಲಿಲ್ಲ. ಬದುಕಿರುವ ನಾಲ್ಕು ದಿನ ಇರೋದ್ರಲ್ಲಿ ತೃಪ್ತಿ ಪಟ್ಟುಕೊಂಡು ಖುಷಿಯಾಗಿರೋಣ.



Click it and Unblock the Notifications


