Latest Updates
-
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ!
ಈ ನಾಲ್ಕು ದೋಷಗಳು ಮನುಷ್ಯನಲ್ಲಿ ಇರಲೇಬಾರದು : ವಿಧುರ
ಮನುಷ್ಯ ಜೀವನದಲ್ಲಿ ಸಂತೋಷವಾಗಿರಲು ಏನೆಲ್ಲಾ ಮಾಡುತ್ತಾನೆ. ಕೆಲವರಂತೂ ದುಡ್ಡಿದ್ದರೇ ಮಾತ್ರ ಖುಷಿಯಾಗಿರಲು ಸಾಧ್ಯ ಎಂದುಕೊಂಡಿದ್ದಾರೆ. ಆದರೆ ಆ ಕಲ್ಪನೆ ತಪ್ಪು. ದುಡ್ಡಿದ್ದ ಮಾತ್ರಕ್ಕೆ ಒರ್ವ ವ್ಯಕ್ತಿ ಸಂತೋಷವಾಗಿರಲು ಸಾಧ್ಯವಿಲ್ಲ. ಕೆಲವೊಂದು ಸಾರಿ ಮನಃಶಾಂತಿ ಕೂಡ ಮುಖ್ಯವಾಗುತ್ತದೆ.
ಹೀಗಾಗಿ ಮಹಾತ್ಮ ವಿಧುರರು ಜನರಿಗೆ ಒಂದು ಮುಖ್ಯವಾದ ಸಂದೇಶವನ್ನು ನೀಡಿದ್ದಾರೆ. ಅದೇನೆಂದರೆ ಈ 4 ತಪ್ಪುಗಳು ನಿಮ್ಮನ್ನು ಖುಷಿಯಾಗಿರಲು ಬಿಡೋದೇ ಇಲ್ವಂತೆ. ಹಾಗಾದ್ರೆ ಆ ತಪ್ಪುಗಳು ಯಾವುದು ಅನ್ನೋದನ್ನ ನೋಡೋಣ.

1. ಅತಿಯಾದ ಕೋಪ
ಮಹಾತ್ಮ ವಿಧುರರ ಪ್ರಕಾರ ಯಾವ ವ್ಯಕ್ತಿ ಅತಿಯಾದ ಕೋಪವುಳ್ಳವನಾಗಿರುತ್ತಾನೋ ಆತನ ಆಯುಷ್ಯ ಕಡಿಮೆಯಾಗುತ್ತಂತೆ. ಇಂತಹ ವ್ಯಕ್ತಿಗಳು ತಮ್ಮ ತಪ್ಪುಗಳಿಗಾಗಿ ಭವಿಷ್ಯದಲ್ಲಿ ಒದ್ದಾಡಬೇಕಾಗುತ್ತಂತೆ. ವಿಧುರರ ಪ್ರಕಾರ ಎಷ್ಟು ಕೋಪ ಬಂದರೂ ಕೂಡ ಅದನ್ನು ನಿಯಂತ್ರಿಸೋದು ಹೇಗೆ ಅನ್ನೋದು ಗೊತ್ತಿರಬೇಕು. ತಾಳ್ಮೆ ಅನ್ನೋದು ಮನುಷ್ಯನಿಗೆ ತುಂಬಾ ಮುಖ್ಯ. ಯಾರಿಗೆ ಕೋಪ ಮೂಗಿನ ತುದಿಯಲ್ಲಿರುತ್ತದೆಯೋ ಅವರು ಸಂತೋಷವಾಗಿರಲು ಸಾಧ್ಯವೇ ಇಲ್ಲ. ಅಂತಹ ವ್ಯಕ್ತಿಗಳಿಗೆ ಮನಃಶಾಂತಿ ಇರೋದಿಲ್ಲ. ಒಂದಲ್ಲ ಒಂದು ವಿಚಾರಕ್ಕೆ ಕೋಪ ಮಾಡಿಕೊಂಡು ಮನಃಶಾಂತಿಯನ್ನು ಹಾಳು ಮಾಡಿಕೊಳ್ಳುತ್ತಾರೆ.
2. ಈ ಮೂರು ದೋಷಗಳು ಮನುಷ್ಯನಲ್ಲಿ ಇರಬಾರದು
ಮಹಾತ್ಮ ವಿಧುರರ ಪ್ರಕಾರ ಕಾಮ, ಕೋಪ ಮತ್ತು ದುರಾಸೆ ಈ ಮೂರು ವಿಚಾರಗಳು ಮನುಷ್ಯನ ದೋಷಗಳು. ಈ ಮೂರು ದೋಷಗಳು ಮನುಷ್ಯ ಆತ್ಮವನ್ನೇ ನಾಶ ಪಡಿಸುತ್ತಂತೆ. ಮನುಷ್ಯರು ಈ ವಿಚಾರಗಳಿಂದ ದೂರ ಇರಬೇಕು ಅಂತಾರೆ ಮಹಾತ್ಮ ವಿಧುರರು. ಯಾಕಂದ್ರೆ ಈ ವಿಚಾರಗಳು ನಿಮ್ಮ ತಲೆಯಲ್ಲಿ ಸುತ್ತುತ್ತಿದ್ದರೆ ನೀವು ಸಂತೋಷವಾಗಿರಲು ಸಾಧ್ಯವೇ ಇಲ್ಲ. ಸಂತೋಷವಾಗಿರಬೇಕೆಂದರೆ ಇದನ್ನೆಲ್ಲಾ ಬಿಟ್ಟು ಬಿಡಿ ಎಂದು ಕಿವಿ ಮಾತು ಹೇಳಿದ್ದಾರೆ.
3. ಬೇರೆಯವರ ಆಸ್ತಿಗೆ ಕನ್ನ ಹಾಕಬೇಡಿ
ಮಹಾತ್ಮ ವಿಧುರರ ಪ್ರಕಾರ ನಾವು ಬೇರೆಯವರ ಆಸ್ತಿಯ ಮೇಲೆ ಆಸೆ ಪಡೋದು ತಪ್ಪು. ಕಳ್ಳತನ, ವಂಚನೆ, ಮೋಸ ಮಾಡಿ ನಾವು ಬೇರೆಯವರ ಆಸ್ತಿಯನ್ನು ಕಬಳಿಸಿದ್ದರೆ ಅದು ಕೊನೆವರೆಗೂ ನಮ್ಮ ಜೊತೆ ಉಳಿಯೋದಿಲ್ಲ. ಭವಿಷ್ಯದಲ್ಲಿ ಇದಕ್ಕೆ ನಾವು ಬಹುದೊಡ್ಡ ಮೊತ್ತವನ್ನೇ ತೆರಬೇಕಾಗುತ್ತದೆ. ವಿಧುರರ ಪ್ರಕಾರ ಇನ್ನೊಬ್ಬರ ಆಸ್ತಿಯನ್ನು ಕೊಳ್ಳೆ ಹೊಡೆಯೋದು ಬಿಡಿ, ಅದರ ಬಗ್ಗೆ ಯೋಚಿಸೋದು ಕೂಡ ಮಹಾ ಪಾಪ ಎಂದು ಹೇಳಿದ್ದಾರೆ.
4. ಸುಖಾ ಸುಮ್ಮನೆ ಅನುಮಾನ ಪಡೋದು ತಪ್ಪು
ಮಹಾತ್ಮ ವಿಧುರರ ಪ್ರಕಾರ ಮನುಷ್ಯನಿಗೆ ಅನುಮಾನ ಇರಬೇಕು. ಆದರೆ ಹೆಜ್ಜೆ ಹೆಜ್ಜೆಗೂ ಅನುಮಾನ ಪಡೋದು ಬಹುದೊಡ್ಡ ತಪ್ಪು. ಕೆಲವು ವ್ಯಕ್ತಿಗಳು ಹೇಗಿರುತ್ತಾರೆ ಅಂದರೆ ತಮ್ಮ ಪತ್ನಿಯ ಮೇಲೆಯೇ ಸುಮ್ಮನೇ ಅನುಮಾನ ಪಡುವವರು ತುಂಬಾ ಜನರಿದ್ದಾರೆ. ಅಷ್ಟೇ ಯಾಕೆ ಸ್ನೇಹಿತರು, ಪೋಷಕರು, ಆಪ್ತರ ಮೇಲೆಯೂ ಅನುಮಾನ ಪಟ್ಟುಕೊಳ್ಳುವವರಿದ್ದಾರೆ. ಇಂತಹ ವ್ಯಕ್ತಿಗಳು ನೆಮ್ಮದಿಯ ಜೀವನ ನಡೆಸೋದಕ್ಕೆ ಸಾಧ್ಯವೇ ಇಲ್ಲ ಎಂದು ಮಹಾತ್ಮ ವಿಧುರರು ಹೇಳಿದ್ದಾರೆ.
ತಪ್ಪುಗಳು ಮನುಷ್ಯನಿಂದ ಆಗದೇ ಮರದಿಂದ ಆಗೋದಿಲ್ಲ. ಆದರೆ ನಾವು ಮಾಡಿದ ತಪ್ಪುಗಳಿಂದ ಪಾಠ ಕಲಿತುಕೊಂಡು ಅದನ್ನು ತಿದ್ದಿಕೊಳ್ಳಬೇಕೆಂದು ವಿಧುರರು ಹೇಳಿದ್ದಾರೆ.



Click it and Unblock the Notifications


