Latest Updates
-
ಟೆಲಿಗ್ರಾಮ್ ಬಳಕೆದಾರರೇ ಎಚ್ಚರ: ಜೂನ್ 16 ರಿಂದ 22 ರವರೆಗೆ ಸೇವೆ ಸ್ಥಗಿತ, ಪರ್ಯಾಯ ಮಾರ್ಗಗಳೇನು? -
ಪಂಜಾಬ್-ಹರಿಯಾಣದಲ್ಲಿ ಭಾರಿ ಬಿರುಗಾಳಿ ಎಚ್ಚರಿಕೆ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ 20 ನಿಮಿಷಗಳ ಟಿಪ್ಸ್ ಪಾಲಿಸಿ! -
ಸೋಯಾಬೀನ್ ಎಣ್ಣೆ ಬೆಲೆ ಏರಿಕೆ: ಅಡುಗೆ ಮನೆ ಬಜೆಟ್ ಮೇಲೆ ಹೊರೆ, ಕಲಬೆರಕೆ ಪತ್ತೆ ಹಚ್ಚುವುದು ಹೇಗೆ? -
ದೆಹಲಿ-ಎನ್ಸಿಆರ್ನಲ್ಲಿ ಮಳೆ ಅಬ್ಬರ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ನೀವು ಮಾಡಬೇಕಾದ್ದೇನು? -
ಮುಂಬೈ ಸೆಕೆ ಮತ್ತು ಆರ್ದ್ರತೆ: ಹೊರಗೆ ಹೋಗಿ ಸುಸ್ತಾಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ ಟಿಪ್ಸ್ ಫಾಲೋ ಮಾಡಿ! -
ಇಂದು ರಾತ್ರಿ ದೆಹಲಿ-ಎನ್ಸಿಆರ್ನಲ್ಲಿ ಭೀಕರ ಮಳೆ: ಹೊರಗೆ ಹೋಗುವ ಪ್ಲಾನ್ ಇದೆಯಾ? ಎಚ್ಚರ! -
ಮಳೆಗಾಲದಲ್ಲಿ ಮನೆ ಹಾಳಾಗದಂತೆ ತಡೆಯುವುದು ಹೇಗೆ? ತೇವಾಂಶ ಮತ್ತು ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
'ಹೆಲ್ದಿ' ಆಹಾರದ ಹೆಸರಿನಲ್ಲಿ ಮೋಸ ಹೋಗ್ತಿದ್ದೀರಾ? FSSAI ಹೊಸ ನಿಯಮದ ಅಸಲಿಯತ್ತು ಇಲ್ಲಿದೆ! -
UGC NET 2026 ಅಡ್ಮಿಟ್ ಕಾರ್ಡ್ ಬಿಡುಗಡೆ: ಪರೀಕ್ಷಾ ಕೇಂದ್ರಕ್ಕೆ ಹೋಗುವ ಮುನ್ನ ಈ ನಿಯಮಗಳನ್ನು ಮಿಸ್ ಮಾಡ್ಬೇಡಿ! -
ಬೆಂಗಳೂರು, ಕರಾವಳಿಯಲ್ಲಿ ಭಾರಿ ಮಳೆ: ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಹೊಟ್ಟೆಕಿಚ್ಚು ಪಟ್ಟುಕೊಂಡರೆ ದುರ್ಯೋಧನನಿಗೆ ಆದ ಗತಿಯೇ ನಿಮಗೂ ಬರಬಹುದು : ವಿಧುರ ನೀತಿ
ಈ ಪ್ರಪಂಚದಲ್ಲಿ ಒಬ್ಬರ ಬಗ್ಗೆ ಅಸೂಯೆ ಪಟ್ಟುಕೊಳ್ಳದ ವ್ಯಕ್ತಿಯೇ ಇಲ್ಲ. ಇನ್ನೊಬ್ಬ ವ್ಯಕ್ತಿ ಬೆಳೆಯುತ್ತಿರೋದನ್ನ ಕಂಡರೆ ಆತನ ಬಗ್ಗೆ ನಮಗೆ ಅಸೂಯೆ ಹುಟುತ್ತದೆ. ಅವನಿಂದ ಸಾಧ್ಯವಾಗುವ ಕೆಲಸಗಳು ನಮ್ಮಿಂದ ಯಾಕೆ ಸಾಧ್ಯವಾಗತ್ತಿಲ್ಲ ಎಂದು ನೆನೆದುಕೊಂಡು ಆತನ ಮೇಲೆ ಅಸೂಯೆ ಪಟ್ಟುಕೊಳ್ಳುತ್ತೇವೆ.
ಪ್ರತಿಯೊಬ್ಬ ಮನುಷ್ಯನಿಗೂ ಖಂಡಿತ ಈ ರೀತಿ ಆಗಿರುತ್ತದೆ. ಅಸೂಯೆ ಅನ್ನೋದನ್ನು ನಿಯಂತ್ರಿಸೋದಕ್ಕೆ ಪ್ರಯತ್ನಿಸಿದರೂ ಕೂಡ ಅದು ಸಾಧ್ಯವಾಗೋದಿಲ್ಲ. ಆದರೆ ಮಹಾತ್ಮ ವಿಧುರರು ಅಸೂಯೆಯ ಬಗ್ಗೆ ಕೆಲವೊಂದು ಮಾತುಗಳನ್ನು ಹೇಳಿದ್ದಾರೆ. ಅದೇನೆಂದರೆ ಮನುಷ್ಯ ಯಾವ ವಿಚಾರದ ಬಗ್ಗೆ ಅಸೂಯೆ ಪಟ್ಟುಕೊಂಡರೂ ಕೂಡ ಈ ವಿಚಾರಗಳ ಬಗ್ಗೆ ಅಸೂಯೆ ಬೇಡ ಅಂತ ಹೇಳಿದ್ದಾರೆ. ಹಾಗಾದ್ರೆ ಆ ವಿಚಾರಗಳು ಯಾವುದು ಅನ್ನೋದನ್ನ ತಿಳಿಯೋಣ.

ಮಹಾಭಾರತ ಕಾಲದಲ್ಲಿ ಮಹಾತ್ಮ ವಿಧುರರನ್ನು ಒಬ್ಬ ಮಹಾನ್ ತತ್ವಜ್ಞಾನಿ ಹಾಗೂ ವಿಧ್ವಾಂಸರಾಗಿದ್ದರು. ವಿಧುರರನ್ನು ಧರ್ಮರಾಜನ ಮತ್ತೊಂದು ಅವತಾರ ಎಂದು ಕರೆಯಲಾಗಿದೆ. ವಿಧುರರು ಪಾಂಡವರು ಹಾಗೂ ಕೌರವರು ಸೇರಿದಂತೆ ಇಬ್ಬರಿಗೂ ಸಲಹೆ ಸೂಚನೆಗಳನ್ನು ನೀಡುತ್ತಿದ್ದರು. ಇಂತಹ ವಿಧುರರು ಮನುಷ್ಯರು ಜೀವನದಲ್ಲಿ ಯಾವ ರೀತಿ ಖುಷಿಯಾಗಿರಬಹುದು ಅನ್ನೋದ್ರ ಬಗ್ಗೆ ಕೆಲವೊಂದು ನೀತಿಗಳನ್ನು ರೂಪಿಸಿದ್ದಾರೆ.
ವಿಧುರನ ಪ್ರಕಾರ ಹೊಟ್ಟೆಕಿಚ್ಚು ಪಟ್ಟುಕೊಳ್ಳುವುದು ತಪ್ಪು. ಯಾಕಂದ್ರೆ ಮಹಾಭಾರತ ಯುದ್ಧ ನಡೆಯೋದಕ್ಕೆ ಪಾಂಡವರ ಮೇಲೆ ದುರ್ಯೋಧನನಿಗಿದ್ದ ಹೊಟ್ಟೆಕಿಚ್ಚು ಕಾರಣವಾಗಿತ್ತು. ಹಾಗಾದ್ರೆ ಯಾವುದು ಆ ವಿಚಾರಗಳು ಅನ್ನೋದನ್ನ ಹೇಳ್ತೀವಿ.
1. ಆಸ್ತಿ ಹಾಗೂ ಸೌಂದರ್ಯದ ಮೇಲೆ ಆಸೆ ಪಡಬಾರದು
ಮಹಾತ್ಮ ವಿಧುರನ ಪ್ರಕಾರ ಮನುಷ್ಯರು ಬೇರೆಯವರ ಆಸ್ತಿ ಹಾಗೂ ಸೌಂದರ್ಯದ ಮೇಲೆ ಆಸೆ ಪಟ್ಟುಕೊಳ್ಳಲೇ ಬಾರದು. ಯಾಕಂದ್ರೆ ಆಸ್ತಿ ಹಾಗೂ ಸೌಂದರ್ಯ ಅನ್ನೋದು ಶಾಶ್ವತವಲ್ಲ. ಇದು ಯಾವಾಗ ಬೇಕಾದರೂ ನಮ್ಮಿಂದ ದೂರ ಹೋಗಬಹುದು. ಮಹಾಭಾರತ ಕಾಲದಲ್ಲೂ ಕೂಡ ಕುರುಕ್ಷೇತ್ರ ಯುದ್ಧ ನಡೆಯೋದಕ್ಕೆ ಈ ಎರಡು ವಿಚಾರಗಳೇ ಕಾರಣವಾಗಿತ್ತು. ದುರ್ಯೋಧನನು ಪಾಂಡವರ ಆಸ್ತಿ ಹಾಗೂ ಅವರ ಪತ್ನಿ ದ್ರೌಪತಿಯ ಸೌಂದರ್ಯ ಕಂಡು ಹೊಟ್ಟೆ ಕಿಚ್ಚುಪಟ್ಟ ಕಾರಣ ಅಂದು ಮಹಾ ಯುದ್ಧವೇ ನಡೆದಿತ್ತು.
2. ಬೇರೆಯವರ ಪ್ರಗತಿ ಕಂಡು ಹೊಟ್ಟೆ ಉರಿ ಪಡಬಾರದು
ಕೆಲವು ವ್ಯಕ್ತಿಗಳು ಶ್ರೀಮಂತರಾಗಿ ಹುಟ್ಟಿಲ್ಲ ಅಂದರೂನೂ ತಮ್ಮ ಪರಿಶ್ರಮದಿಂದ ತಾವು ಅಂದುಕೊಂಡದ್ದನ್ನೆಲ್ಲಾ ಸಾಧಿಸುತ್ತಾರೆ. ಅದೇ ರೀತಿ ಕರ್ಣನು ಕೂಡ. ಕರ್ಣನು ಅಧಿರಥನ ಮನೆಯಲ್ಲಿ ಬೆಳೆದರೂ ಆತ ಮುಂದೆ ಅಂಗ ದೇಶದ ರಾಜನಾಗುತ್ತಾನೆ. ಮತ್ತು ಬಿಲ್ವಿಧ್ಯೆಯಲ್ಲಿ ಪ್ರವೀಣ ಅನ್ನಿಸಿಕೊಳ್ಳುತ್ತಾನೆ. ಹೀಗಾಗಿ ಆತ ಎಲ್ಲರಿಂದಲೂ ಗೌರವಕ್ಕೂ ಪಾತ್ರನಾಗುತ್ತಾನೆ. ಆದ್ದರಿಂದ ಕಷ್ಟಪಟ್ಟು ಮೇಲೆ ಬಂದವರನ್ನು ಕಂಡು ಹೊಟ್ಟೆ ಉರಿ ಪಟ್ಟುಕೊಳ್ಳಲೇಬೇಡಿ. ಸಾಧ್ಯವಾದರೆ ಅವರಿಗೆ ಮತ್ತಷ್ಟು ಪ್ರೋತ್ಸಾಹಿಸಿ.
3. ಅದೃಷ್ಟ ಹಾಗೂ ಖುಷಿಯನ್ನು ನಿರ್ಧರಿಸೋದು ಕರ್ಮ
ವಿಧುರನ ಪ್ರಕಾರ ನಾವು ಯಾವಾಗಲೂ ಖುಷಿಯಾಗಿರಬೇಕು ಹಾಗೂ ಇತರರನ್ನು ಖುಷಿಯಾಗಿ ಇಡಬೇಕು. ಬೇರೆಯವರಿಗೆ ಗೌರವ, ಮಾರ್ಯದಿ ಸಿಗುತ್ತಿದ್ದರೆ ಅದನ್ನು ಕಂಡು ನಾವೆಂದಿಗೂ ಅಸೂಯೆ ಪಟ್ಟುಕೊಳ್ಳಬಾರದು. ಯಾಕಂದ್ರೆ ಖುಷಿ ಹಾಗೂ ಅದೃಷ್ಟ ನಾವು ಮಾಡಿದ ಕರ್ಮದಿಂದ ಬರುತ್ತದೆ.
4. ಬೇರೆಯವರ ನಿರ್ಧಾರದ ಮೇಲೆ ನಿಲ್ಲಬೇಡಿ
ನಾವು ಯಾವಾಗಲೂ ನಮ್ಮ ಬುದ್ಧಿಯನ್ನು ಉಪಯೋಗಿಸಬೇಕೇ ಹೊರತು ನಮ್ಮ ಬುದ್ಧಿಯನ್ನು ಬೇರೆಯವರ ಕೈಗೆ ಕೊಡಬಾರದು. ಯಾರು ಬುದ್ಧಿವಂತಿಕೆಯಿಂದ ನಡೆದುಕೊಳ್ಳುತ್ತಾರೋ ಅವರಿಗೆ ಗೌರವ ದೊರೆಯುತ್ತದೆ. ದುರ್ಯೋಧನನ ವಿಚಾರದಲ್ಲೂ ಇದೇ ಆಗಿತ್ತು. ಮೊದಲು ದುರ್ಯೋಧನ ಅವನ ನಿರ್ಧಾರವನ್ನ ಸ್ವತಃ ಆತನೇ ತೆಗೆದುಕೊಳ್ಳುತ್ತಿದ್ದ. ಆದರೆ ಯಾವಾಗ ಮಾವ ಶಕುನಿಯ ಮಾತನ್ನು ಕೇಳೋದಕ್ಕೆ ಶುರು ಮಾಡಿದನೋ ಆಗ ದುರ್ಯೋಧನನ ವಿನಾಶ ಆರಂಭವಾಯಿತು. ಕೊನೆಗೆ ದುರ್ಯೋಧನನಿಗೆ ಯಾವ ಗತಿ ಬಂತು ಅನ್ನೋದನ್ನ ನಾವು ಕಣ್ಣಾರೆ ನೋಡಿದ್ದೀವಿ.
5. ಅಸೂಯೆ ಮನುಷ್ಯನನ್ನು ನಾಶ ಪಡಿಸುತ್ತದೆ
ವಿಧುರನ ಪ್ರಕಾರ ನಾವು ಯಾರ ಮೇಲೆಯೂ ಆಸ್ತಿ, ಅಧಿಕಾರ, ಅದೃಷ್ಟದ ವಿಚಾರದಲ್ಲಿ ಹೊಟ್ಟೆ ಕಿಚ್ಚು ಪಟ್ಟಯಕೊಳ್ಳಲೇಬಾರದು. ಆದರೆ ಈ ಎಲ್ಲಾ ವಿಚಾರದಲ್ಲೂ ದುರ್ಯೋಧನನಿಗೆ ಪಾಂಡವರ ಮೇಲೆ ಹೊಟ್ಟೆ ಕಿಚ್ಚಿತ್ತು. ಕೊನೆಗೆ ಇದೇ ವಿಚಾರಕ್ಕೆ ದುಯೋಧನನ ಕೊನೆಯಾಯಿತು. ಪುರಾಣಗಳಲ್ಲಿ ಕೂಡ ಇದೇ ವಿಚಾರ ಉಲ್ಲೇಖವಾಗಿದೆ. ನಾವು ಬೇರೊಬ್ಬರ ಏಳಿಗೆ ಕಂಡು ಹೊಟ್ಟೆಯುರಿ ಪಟ್ಟುಕೊಳ್ಳೋದು ಸರಿಯಲ್ಲ.
ನಿಮ್ಮ ಕೆಲಸವನ್ನು ನೀವು ಮಾಡಿ. ಅದನ್ನು ಬಿಟ್ಟು ಬೇರೆಯವರ ಮೇಲೆ ಹೊಟ್ಟೆಕಿಚ್ಚು ಪಟ್ಟುಕೊಂಡರೆ ನೀವು ಜೀವನದಲ್ಲಿ ಏನನ್ನೂ ಸಾಧಿಸೋಕೆ ಸಾಧ್ಯವಿಲ್ಲ. ನೀವು ಇದ್ದಲ್ಲೇ ಇರುತ್ತೀರಿ ನಿಮ್ಮ ವೈರಿಗಳು ಜೀವನದಲ್ಲಿ ಮತ್ತಷ್ಟು ಮುಂದೆ ಹೋಗುತ್ತಾರೆ.



Click it and Unblock the Notifications


