Latest Updates
-
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು! -
ಪುಣೆ-ಮುಂಬೈ ಮಳೆಗಾಲ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಇಂದೇ ರಾತ್ರಿ ಈ 45 ನಿಮಿಷಗಳ ಕೆಲಸ ಮಾಡಿ! -
ಮಳೆಗಾಲದಲ್ಲಿ ಆರೋಗ್ಯದ ಬಗ್ಗೆ ಎಚ್ಚರ: ಅತಿಸಾರ ತಡೆಯಲು ಮತ್ತು ಸುರಕ್ಷಿತ ಆಹಾರಕ್ಕಾಗಿ ಈ ಸರಳ ಟಿಪ್ಸ್ ಪಾಲಿಸಿ -
ಫಾದರ್ಸ್ ಡೇ 2026: ಅಪ್ಪನ ಮುಖದಲ್ಲಿ ನಗು ಮೂಡಿಸಲು ಇಲ್ಲಿದೆ ಸಿಂಪಲ್ ಮತ್ತು ಬೆಸ್ಟ್ ಐಡಿಯಾಗಳು!
ಆಂಜನೇಯನ ಫೋಟೋ ಯಾವ ದಿಕ್ಕಿನಲ್ಲಿದ್ದರೆ ಸುಖ, ಸಮೃದ್ಧಿ ವೃದ್ಧಿಯಾಗುತ್ತೆ!
ಹಿಂದೂ ಧರ್ಮದಲ್ಲಿ ಮೂರ್ತಿ ಪೂಜೆಗೆ ಮಹತ್ವ ಇರೋದ್ರಿಂದ ಹೆಚ್ಚಾಗಿ ಎಲ್ಲಾ ಹಿಂದೂಗಳ ಮನೆಯಲ್ಲಿ ದೇವರ ಮೂರ್ತಿ ಅಥವಾ ಫೋಟೋವನ್ನು ಇಟ್ಟು ಪೂಜೆ-ಪುನಸ್ಕಾರಗಳನ್ನು ಸಲ್ಲಿಸಲಾಗುತ್ತದೆ. ಅದ್ರಲ್ಲೂ ಹೆಚ್ಚಿನ ಮನೆಗಳಲ್ಲಿ ಆಂಜನೇಯನನ್ನು ಮೂಲ ದೇವರಾಗಿ ಪೂಜಿಸಲಾಗುತ್ತದೆ.
ಆದರೆ ಆಂಜನೇಯನ ಪೋಟೋ ಅಥವಾ ಮೂರ್ತಿಯನ್ನು ನಮಗೆ ಇಷ್ಟ ಬಂದ ಹಾಗೆ ಎಲ್ಲೆಂದರಲ್ಲಿ ಇಡೋದಿಕ್ಕೆ ಆಗೋದಿಲ್ಲ. ನಾವು ಯಾವ ದಿಕ್ಕಿನಲ್ಲಿ ಆಂಜನೇಯನ ಮೂರ್ತಿ ಅಥವಾ ಫೋಟೋ ಇಟ್ಟು ಪೂಜೆ ಮಾಡುತ್ತೇವೆ ಅನ್ನೋದು ಮುಖ್ಯವಾಗುತ್ತದೆ. ಅಷ್ಟಕ್ಕು ಮನೆಯಲ್ಲಿ ಆಂಜನೇಯನ ಮೂರ್ತಿಯನ್ನು ಯಾವ ದಿಕ್ಕಿನಲ್ಲಿಟ್ಟರೆ ಶುಭ ಅನ್ನೋದನ್ನು ತಿಳಿಯೋಣ.

ವಾಸ್ತು ಶಾಸ್ತ್ರ ಏನು ಹೇಳುತ್ತೆ?
ವಾಸ್ತು ಶಾಸ್ತ್ರದ ಪ್ರಕಾರ ಯಾವ ಮನೆಯಲ್ಲಿ ವಾಸ್ತು ದೋಷ ಇರುತ್ತೋ ಆ ಮನೆಯಲ್ಲಿ ಸುಖ ಹಾಗೂ ಸಮೃದ್ಧಿ ನೆಲೆಸೋದಕ್ಕೆ ಸಾಧ್ಯವೇ ಇಲ್ವಂತೆ. ವಾಸ್ತು ದೋಷದ ಪರಿಣಾಮ ನೇರವಾಗಿ ಆ ಮನೆಯವರನ್ನು ತಟ್ಟುತ್ತಂತೆ.
ವಾಸ್ತು ದೋಷವನ್ನು ತಪ್ಪಿಸಬೇಕೆಂದರೆ ಕೆಲವೊಂದು ಪರಿಹಾರಗಳನ್ನು ಮಾಡಲೇಬೇಕಾಗುತ್ತದೆ. ಇದು ಕೇವಲ ಮನೆ ಮಾತ್ರವಲ್ಲ, ನಮ್ಮ ವ್ಯಾಪಾರ, ಆಫಿಸ್, ಅಂಗಡಿಗಳ ಮೇಲೆಯೂ ಪರಿಣಾಮವನ್ನು ಬೀರುತ್ತಂತೆ. ಹೀಗಾಗಿ ಒಂದು ಚಿಕ್ಕ ದೋಷವು ನಮ್ಮ ಜೀವನದ ಮೇಲೆ ದೊಡ್ಡ ಪರಿಣಾಮವನ್ನೇ ಬೀರಬಹುದು.
ಆಂಜನೇಯನಿಂದ ಮಂಗಳ, ಶನಿ, ಪಿತೃ ದೋಷಕ್ಕೆ ಪರಿಹಾರ!
ಅನೇಕರ ಜಾತಕದಲ್ಲಿ ಮಂಗಳ, ಶನಿ ಹಾಗೂ ಪಿತೃ ದೋಷವಿರುತ್ತದೆ. ಅಂತವರು ಏನೇ ಪರಿಹಾರ ಮಾಡಿದ್ರು ಕೂಡ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋದಿಕ್ಕೆ ಕಷ್ಟ ಆಗುತ್ತದೆ. ಆದರೆ ಮನೆಯಲ್ಲಿ ಆಂಜನೇಯನ ಮೂರ್ತಿಯಿದ್ದರೆ ಈ ಎಲ್ಲಾ ದೋಷಗಳಿಗೆ ಮುಕ್ತಿ ಕಂಡುಕೊಳ್ಳಬಹುದಂತೆ. ಆದರೆ ಕೆಲವು ವಾಸ್ತು ಟಿಪ್ಸ್ ಗಳನ್ನು ಪಾಲಿಸುವುದರ ಮೂಲಕ ಆಂಜನೇಯನ ಫೋಟೋವನ್ನು ಮನೆಯಲ್ಲಿ ಇಡಬಹುದು.
ಆಂಜನೇಯನ ಫೋಟೋ ಮನೆಯ ಯಾವ ದಿಕ್ಕಿನಲ್ಲಿರಬೇಕು?
- ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಆಂಜನೇಯನ ಫೋಟೋ ಇಡುವಾಗ ಗಮನಿಸಬೇಕಾದ ಮುಖ್ಯ ಅಂಶವೆಂದರೆ ಆಂಜನೇಯನ ಫೋಟೋ ಮನೆಯಲ್ಲಿ ದಕ್ಷಿಣ ದಿಕ್ಕಿಗೆ ಮುಖ ಮಾಡಿರುವಂತೆ ಇಡಬೇಕು. ಇದರಿಂದ ನಿಮ್ಮ ಮನೆಯಲ್ಲಿ ಸಂತೋಷ ಹಾಗೂ ಸಮೃದ್ಧಿ ಹೆಚ್ಚಾಗುವುದು ಮಾತ್ರವಲ್ಲದೇ, ಹಾಗೂ ಎಲ್ಲಾ ರೀತಿಯ ನಕಾರಾತ್ಮಕ ಶಕ್ತಿಗಳನ್ನು ಮನೆಯಿಂದ ಹೊಡೆದೋಡಿಸುತ್ತಂತೆ.
- ವಾಸ್ತು ಶಾಸ್ತ್ರದ ಪ್ರಕಾರ ಆಂಜನೇಯನ ಫೋಟೋವನ್ನು ಉತ್ತರ ದಿಕ್ಕಿಗೆ ಮುಖ ಮಾಡುವಂತೆ ಇಟ್ಟರೂ ಕೂಡ ಒಳ್ಳೆಯದು. ಇದರಿಂದ ನಮ್ಮ ಅದೃಷ್ಟ ಹೆಚ್ಚಾಗುತ್ತಂತೆ. ಅಷ್ಟೇ ಅಲ್ಲದೇ, ಲಕ್ಷ್ಮೀಯು ಸಂತೃಪ್ತಿಯಿಂದ ನಮಗೆ ಆಶೀರ್ವಾದ ಮಾಡುತ್ತಾಳಂತೆ.
ಪಂಚಮುಖಿ ಹನುಮಂತನ ವಿಗ್ರಹ ಇಟ್ಟರೆ ಉತ್ತಮ
ವಾಸ್ತು ಶಾಸ್ತ್ರದ ಪ್ರಕಾರ ಮನೆಯಲ್ಲಿ ಪಂಚಮುಖಿ ಹನುಮಂತನ ವಿಗ್ರಹ ಇಟ್ಟರೆ ಉತ್ತಮ. ಇದರಿಂದ ಮನೆಯಲ್ಲಿರುವ ಎಲ್ಲಾ ಸಮಸ್ಯೆಗಳು ಪರಿಹಾರವಾಗುವುದು ಮಾತ್ರವಲ್ಲದೇ, ದುಷ್ಟ ಶಕ್ತಿಗಳು ಮನೆಗೆ ಪ್ರವೇಶ ಮಾಡೋದನ್ನು ತಡೆಯುತ್ತಂತೆ.
ಅಷ್ಟೇ ಅಲ್ಲ, ಇದರಿಂದ ಲಕ್ಷ್ಮೀ ಕೃಪಾ ಕಟಾಕ್ಷ ಸಿದ್ಧಿಸೋದಕ್ಕೂ ನೆರವಾಗುತ್ತಂತೆ. ಹೀಗಾಗಿ ಪಂಚಮುಖಿ ಹನುಮಂತನ ವಿಗ್ರಹವನ್ನು ಮನೆಯ ಪ್ರವೇಶದ್ವಾರದಲ್ಲಿಟ್ಟರೆ ಉತ್ತಮ.
ಪರಿಹಾರಗಳು :
- ನಿಮ್ಮ ಮನೆಯಲ್ಲಿ ನೀವು ಪಂಚಮುಖಿ ಹನುಮಂತನ ಫೋಟೋವನ್ನು ಇಟ್ಟುಕೊಂಡರೆ ಒಳ್ಳೆಯದು. ಇದು ನಿಮಗೆ ಜೀವನದಲ್ಲಿ ಎಲ್ಲಾ ರೀತಿಯ ಕಷ್ಟಗಳಿಂದ ಹೊರ ಬರೋದಕ್ಕೆ ಸಹಾಯ ಮಾಡುತ್ತಂತೆ. ಅಷ್ಟೇ ಅಲ್ಲದೇ, ನಿಮ್ಮ ಜೀವನದಲ್ಲಿ ಸಮೃದ್ಧಿಯೂ ಹೆಚ್ಚಾಗುತ್ತದೆ. ನಿಮಗೆ ತುಂಬಾನೇ ಕಷ್ಟ ಇದ್ದಾಗ ನೀವು ಈ ಫೋಟೋವನ್ನು ನಿಮ್ಮ ಮನೆಯ ಬಾಗಿಲಿನ ಮುಂಬಾಗ ಹಾಕಬಹುದು.
- ಇನ್ನೂ ನೀವು ನಿಮ್ಮ ಮನೆಯಲ್ಲಿ ಹನುಮಂತನು ಬೆಟ್ಟವನ್ನು ಎತ್ತುವ ಫೋಟೋವನ್ನು ಹಾಕಿದರೆ ಒಳ್ಳೆಯದು. ಏಕೆಂದರೆ ಇದರಿಂದ ನಿಮ್ಮ ಮನೆಯವರ ಶಕ್ತಿ ಹೆಚ್ಚಾಗುವುದು ಮಾತ್ರವಲ್ಲದೇ, ಜೊತೆಗೆ ದೈರ್ಯವೂ ಹೆಚ್ಚಾಗುತ್ತಂತೆ. ಅಷ್ಟೇ ಅಲ್ಲ ನಿಮ್ಮ ಆತ್ಮಸ್ಥೈರ್ಯ ಉತ್ತಮವಾಗುತ್ತಂತೆ.
- ವಾಸ್ತು ಶಾಸ್ತ್ರದ ಪ್ರಕಾರ ನೀವು ನಿಮ್ಮ ಮನೆಯಲ್ಲಿ ಬಿಳಿ ಬಣ್ಣದ ಹನುಮಂತನ ಮೂರ್ತಿಯನ್ನು ಹಾಕಬಹುದು. ಇದುರಿಂದ ನಿಮ್ಮ ಜೀವನದಲ್ಲಿ ಯಶಸ್ಸು ಹಾಗೂ ಸಮೃದ್ಧಿ ಹೆಚ್ಚಾಗುತ್ತದೆ. ಇನ್ನೂ ಕೆಲಸದ ಸ್ಥಳದಲ್ಲಿ ಯಾವುದೇ ರೀತಿ ತೊಂದರೆ ಎದುರಾಗೋದಿಲ್ಲ.
ಮಂತ್ರಗಳು :
1. ಹನುಮಾನ್ ಮೂಲ ಮಂತ್ರ
ಓಂ ಹನುಮತೇ ನಮಃ
2. ಹನುಮಾನ್ ಮಂತ್ರ
ಹಂಗ್ ಹನುಮತೆ ರುದ್ರಾತ್ಮಕಾಯ್ ಹಂಗ್ ಫಟ್
3. ಹನುಮಾನ್ ಗಾಯತ್ರಿ ಮಂತ್ರ
ಓಂ ಆಂಜನೇಯಾಯ ವಿದ್ಮಹೇ ವಾಯುಪುತ್ರಾಯ ಧೀಮಹಿ । ತನ್ನೋ ಹನುಮತ್ ಪ್ರಚೋದಯಾತ್
4. ಆಂಜನೇಯ ಮಂತ್ರ
ಓಂ ಶ್ರೀ ವಜ್ರದೇಹಾಯ ರಾಮಭಕ್ತಾಯ ವಾಯುಪುತ್ರಾಯ ನಮೋಸ್ತುತೇ
5. ಮನೋಜವಂ ಮರುತತುಲ್ಯವೇಗಂ ಮಂತ್ರ
ಮನೋಜವಂ ಮರುತತುಲ್ಯವೇಗಂ ಜಿತೇನ್ದ್ರಿಯಂ ಬುದ್ಧಿಮತಂ ವರಿಷ್ಠಮ್ । ವತಾತ್ಮಜಂ ವಾನರಯುತಮುಖ್ಯಂ ಶ್ರೀರಾಮದೂತಂ ಶರಣಂ ಪ್ರಪದ್ಯೇ||
6. ಭಕ್ತ ಹನುಮಾನ್ ಮಂತ್ರ
ಅಂಜನೀ-ಗರ್ಭ ಸಂಭೂತ ಕಪಿಇ-[ಐ]ಇಂದ್ರ ಸಸಿವೋ[ಅ-ಉ]ತ್ತಮ | ರಾಮ-ಪ್ರಿಯಾ ನಮಸ್-ತುಭ್ಯಂ ಹನುಮಾನ್ ರಾಕ್ಷ ಸರ್ವದಾ ||
7. ಹನುಮಾನ್ ಬೀಜ ಮಂತ್ರ
ಔಂ ಐಂ ಭ್ರೀಂ ಹನುಮತೇ ಶ್ರೀ ರಾಮ್ ದೂತಾಯ ನಮಃ
ಆಂಜನೇಯನನ್ನು ಭಕ್ತಿಯಿಂದ ಯಾರು ಆರಾಧನೆ ಮಾಡುತ್ತಾರೆ ಅವರಿಗೆ ಯಾವ ರೀತಿಯ ತೊಂದರೆಗಳು ಆಗದಂತೆ ರಕ್ಷಣೆಯನ್ನು ನೀಡುತ್ತಾನೆ. ಹೀಗಾಗಿ ಮನೆಯಲ್ಲಿ ಆಂಜನೇಯನ ಫೋಟೋ ಹಾಕುವಾಗ ಯಾವುದೇ ತೊಂದರೆಗಳಾಗದಂತೆ ಎಚ್ಚರಿಕೆ ವಹಿಸಿ.



Click it and Unblock the Notifications

