Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ವಾಸ್ತು ಪ್ರಕಾರ ಗಣೇಶ ಮೂರ್ತಿ ಈ ಜಾಗದಲ್ಲಿಟ್ಟರೆ ಮನೆಗೆ ಶ್ರೇಯಸ್ಸು ಉಂಟಾಗುವುದು
ಎಲ್ಲಾ ಹಿಂದೂಗಳ ಮನೆಯಲ್ಲಿ ಶ್ರೀ ಗಣೇಶನ ಮೂರ್ತಿ ಅಥವಾ ಫೋಟೊ ಇದ್ದೇ ಇರುತ್ತದೆ, ಯಾವುದೇ ಪೂಜೆ ಮಾಡುವ ಮುನ್ನ ಶ್ರೀ ಗಣೇಶನ ಪೂಜೆ ಮಾಡಿದ ಬಳಿಕವಷ್ಟೇ ಪೂಜೆ ಕಾರ್ಯಗಳನ್ನು ಪ್ರಾರಂಭಿಸಬೇಕು.
ಅಲ್ಲದೆ ಶ್ರೀ ಗಣೇಶನನ್ನು ಪೂಜಿಸಲು ಕಠಿಣ ನಿಯಮಗಳೇನು ಇಲ್ಲ, ಶುದ್ಧ ಮನಸ್ಸಿನಿಂದ ಶ್ರೀ ಗಣೇಶನ ಪೂಜಿಸಿದರೆ ಸಾಕು ಶ್ರೀ ಗಣೇಶ ನಮ್ಮ ಕಷ್ಟಗಳನ್ನು ನಿವಾರಿಸುತ್ತಾನೆ, ಆದರೆ ಶ್ರೀ ಗಣೇಶನ ಮೂರ್ತಿಯನ್ನು ಕೆಲವೊಂದು ಕೆಲವೊಂದು ದಿಕ್ಕಿನಲ್ಲಿ ಇಡಲೇಬಾರದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ, ಗಣೇಶನ ಮೂರ್ತಿ ಯಾವ ದಿಕ್ಕಿನಲ್ಲಿಟ್ಟರೆ ಮನೆಗೆ ಶುಭ ಈ ಬಗ್ಗೆ ನೋಡೋಣ ಬನ್ನಿ:

ಮನೆಯ ಮುಖ್ಯ ದ್ವಾರದ ಬಳಿ ಗಣೇಶ ಮೂರ್ತಿ ಇಡುವುದರ ಮಹತ್ವ
ನೀವು ತುಂಬಾ ಕಡೆ ಗಮನಿಸಿರಬಹುದು ಮನೆಯ ಮುಂದುಗಡೆ, ಆಫೀಸ್ ಮುಂದುಗಡೆ ಕೆಲವರು ಗಣೇಶಮೂರ್ತಿ ಇಟ್ಟು ಪೂಜಿಸುತ್ತಾರೆ. ಮನೆಯ ಮುಂದುಗಡೆ ಗಣೇಶನ ಮೂರ್ತಿಯನ್ನು ಸ್ಥಾಪಿಸಿದರೆ ತುಂಬಾನೇ ಶುಭ ಎಂದು ಪರಿಗಣಿಸಲಾಗುವುದು. ಮನೆಯ ಮುಂದೆ ಗಣೇಶನ ಮೂರ್ತಿ ಇದ್ದರೆ ನಕರಾತ್ಮಕ ಶಕ್ತಿ ತಡೆಗಟ್ಟುತ್ತದೆ, ಮನೆಗೆ ಧನಾತ್ಮಕ ಶಕ್ತಿ ತುಂಬುತ್ತದೆ, ಗಣೇಶನ ಮೂರ್ತಿಯನ್ನು ಮನೆ ಮುಂದೆ ಇದ್ದರೆ ವಾಸ್ತು ದೋಷ ನಿವಾರಣೆ ಮಾಡುವುದು, ಗಣೇಶನ ಮೂರ್ತಿ ಮನೆ ಮುಂದೆ ಇದ್ದರೆ ಹಣದ ಕೊರತೆ ಉಂಟಾಗುವುದಿಲ್ಲ, ಮನೆಯಲ್ಲಿ ನೆಮ್ಮದಿ ಇರಲಿದೆ, ಹಾಗಾಗಿ ಮನೆ ಮುಂದುಗಡೆ ಗಣೇಶನ ವವಿಗ್ರಹ ಪ್ರತಿಷ್ಠಾಪನೆ ಮಾಡಲಾಗುವುದು.
ಮನೆಯ ಯಾವ ದಿಕ್ಕಿನಲ್ಲಿ ಗಣೇಶನ ವಿಗ್ರಹವಿಟ್ಟರೆ ಒಳ್ಳೆಯದು?
ವಾಸ್ತು ಶಾಸ್ತ್ರ ಪ್ರಕಾರ ಮನೆಯ ಮುಂಭಾಗ ಉತ್ತರದಲ್ಲಿದ್ದರೆ ಗಣೇಶನ ವಿಗ್ರಹ ಪ್ರತಿಷ್ಠಾಪಿಸಬಹುದು, ಅದೇ ಪೂರ್ವಕ್ಕೆ ಇದ್ದರೆ ಪ್ರತಿಷ್ಟಾಪಿಸಬಾರದು ಎಂದು ಹೇಳಲಾಗುವುದು.
ಮನೆಯೊಳಗಡೆ ಗಣೇಶ ಮೂರ್ತಿಯನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ಒಳ್ಳೆಯದು
ಮನೆಯೊಳಗಡೆ ಗಣೇಶನ ಫೋಟೋ ಅಥವಾ ಮೂರ್ತಿಯನ್ನು ಪೂರ್ವ ದಿಕ್ಕಿನಲ್ಲಿಟ್ಟರೆ ಸೂರ್ಯನ ಕಿರಣಗಳು ಗಣಪನ ಮೂರ್ತಿ ಮೇಲೆ ಬೀಳುವಂತಿದ್ದರೆ ಶುಭ ಎಂದು ಪರಿಗಣಿಸಲಾಗುವುದು
ಮನೆಯ ಉತ್ತರದಲ್ಲಿ ಇಡುವುದಾದರೆ
ಮನೆಯ ಉತ್ತರ ಭಾಗದಲ್ಲಿ ಗಣೇಶನ ಮೂರ್ತಿ ಇಡುವುದಾದರೆ ಉತ್ತರದ ಭಾಗದಲ್ಲಿ ಕಿಟಕಿಗಳಿರಬೇಕು, ಆ ಕಿಟಕಿಗಳ ಮೂಲಕ ಸೂರ್ಯನ ಬೆಳಕು ಮನೆಯೊಳಗಡೆ ಚೆನ್ನಾಗಿ ಬೀಳುವಂತಿರಬೇಕು, ಅಥವಾ ಉತ್ತರದಲ್ಲಿ ಮನೆಯ ಮುಂಬಾಗಿಲು ಇದ್ದರೆ ಕೂಡ ಒಳ್ಳೆಯದು ಎಂದು ಪರಿಗಣಿಸಲಾಗಿದೆ.
ಈಶಾನ್ಯ ದಿಕ್ಕು: ಮನೆಯಲ್ಲಿ ಈಜುಕೊಳ, ಬೋರ್‌ವೆಲ್, ಪೂಜಾಸ್ಥಳ ಇದೆಲ್ಲಾ ಈ ಭಾಗದಲ್ಲಿ ಇದ್ದರೆ ಒಳ್ಳೆಯದು ಎಂದು ಪರಿಗಣಿಸಲಾಗಿದೆ, ಈ ದಿಕ್ಕಿನಲ್ಲಿ ಮುಖ್ಯದ್ವಾರವಿಡಬಹುದು, ಅಲ್ಲಿ ಗಣೇಶನ ಮೂರ್ತಿ ಇಟ್ಟರೆ ಒಳ್ಳೆಯದು ಎಂದು ಹೇಳಲಾಗುವುದು,
ಬೆಡ್‌ರೂಂ ವಾಯುವ್ಯ ದಿಕ್ಕಿನಲ್ಲಿರಬೇಕು
ಮನೆಯ ಬೆಡ್‌ರೂಂ ವಾಯುವ್ಯ ದಿಕ್ಕಿನಲ್ಲಿರಬೇಕು
ಆಗ್ನೇಯ ದಿಕ್ಕು: ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆ, ಗ್ಯಾಸ್, ಬಾಯ್ಲರ್ ಇವೆಲ್ಲಾ ಈ ದಿಕ್ಕಿನಲ್ಲಿದ್ದರೆ ಒಳ್ಳೆಯದು.
ಮನೆಗೆ ಅಂಗಳವಿರಬೇಕು ಎಂದು ಹೇಳಲಾಗುವುದು
ಫ್ಲ್ಯಾಟ್ ಆಗಲಿ ಬಾಲ್ಕನಿಯಲ್ಲಿ ಇರಬೇಕು, ಮನೆಯಾದರೆ ಅಂಗಳವಿರಬೇಕು ಎಂದು ಹೇಳಲಾಗುವುದು. ವಾಸ್ತು ಪ್ರಕಾರ ಮನೆಯ ಮುಂದೆ ಹಾಗೂ ಹಿಂಭಾಗದಲ್ಲಿ ಕೂಡ ಅಂಗಳವಿದ್ದರೆ ಒಳ್ಳೆಯದು ಎಂದು ಹೇಳಲಾಗುವುದು.
ಮನೆಯ ಮುಂದುಗಡೆ ತುಳಸಿ, ನೆಲ್ಲಿಕಾಯಿ, ಹೂವು ಗಿಡಗಳಿದ್ದರೆ ಶುಭ ಎಂದು ಹೇಳಲಾಗುವುದು.
ಸೂಚನೆ
ಈ ಲೇಖನವನ್ನು ಜ್ಯೋತಿಷ್ಯ ಪ್ರಕಾರ ನೀಡಲಾಗಿದ್ದು, ಮಾಹಿತಿಯ ಉದ್ದೇಶದಿಂದ ಮಾತ್ರ ನೀಡಲಾಗಿದೆ, ಯಾವುದೇ ನಿರ್ಧಾರ ಅಥವಾ ನಷ್ಟಗಳಿಗೆ Kannada Boldsky.com ಹೊಣೆಯಲ್ಲ. ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಅಥವಾ ಹೂಡಿಕೆ ಮುನ್ನ ತಜ್ಞರ ಸಲಹೆ ಪಡೆಯುವುದು ಸೂಕ್ತ



Click it and Unblock the Notifications
