Latest Updates
-
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ! -
ಸಣ್ಣ ಬಾಲ್ಕನಿಯಲ್ಲಿ ಓಣಂ ಸಂಭ್ರಮ: ಬಜೆಟ್ನಲ್ಲಿ ಸುಂದರ ಪೂಕಳಂ ಬಿಡಿಸುವ ಸರಳ ಟಿಪ್ಸ್ -
ಲಾಲ್ಬಾಗ್ ಫಲಪುಷ್ಪ ಪ್ರದರ್ಶನ: ಕೊನೆಯ ದಿನದ ಸಂಭ್ರಮ ಮತ್ತು ಮನೆಯನ್ನು ಸಿಂಗರಿಸುವ ಸುಲಭ ಟಿಪ್ಸ್
ಅಡುಗೆ ಮನೆಯ ಒಲೆ ಈ ದಿಕ್ಕಿನಲ್ಲಿದ್ದರೆ ಆಪತ್ತು ಗ್ಯಾರಂಟಿ!
ವಾಸ್ತು ವಿಜ್ಞಾನದಲ್ಲಿ ಅಡುಗೆ ಮನೆ ಮತ್ತು ಒಲೆಯನ್ನು ಬಹಳ ಮುಖ್ಯವಾದ ಸ್ಥಳವೆಂದು ಪರಿಗಣಿಸಲಾಗಿದೆ. ಏಕೆಂದರೆ ಮನೆಯಲ್ಲಿ ವಾಸಿಸುವವರಿಗೆ ಆಹಾರ ಮತ್ತು ಶಕ್ತಿ ಸಿಗುವುದು ಈ ಜಾಗದಿಂದಲೇ. ನೀವು ಧನಾತ್ಮಕ ಶಕ್ತಿಯನ್ನು ಸೇವಿಸಿದರೆ ನೀವು ಅಭಿವೃದ್ಧಿ ಹೊಂದುತ್ತೀರಿ. ಒಂದು ವೇಳೆ ನೀವು ನಕಾರಾತ್ಮಕ ಶಕ್ತಿಯನ್ನು ಸೇವಿಸಿದರೆ ಅದು ನಿಮ್ಮ ಮನಸ್ಸು ಮತ್ತು ಮೆದುಳಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ.

ಇದೇ ಕಾರಣಕ್ಕೆ ಅಡುಗೆ ಮಾಡುವಾಗ ಗೃಹಿಣಿ ಯಾವಾಗಲೂ ಸಕಾರಾತ್ಮಕ ಶಕ್ತಿಯನ್ನು ಎದುರಿಸುವುದು ಅವಶ್ಯಕ ಎಂದು ಹೇಳಲಾಗುತ್ತದೆ. ಇದರಿಂದ ಮನೆಯವರೆಲ್ಲರಿಗೂ ಒಳ್ಳೆಯದಾಗುತ್ತದೆ. ಮುಖ್ಯವಾಗಿ ನಮ್ಮ ಅಡುಗೆ ಮನೆ ಹಾಗೂ ಗ್ಯಾಸ್ ಒಲೆಯ ದಿಕ್ಕು ಕೂಡ ಮುಖ್ಯ ಪಾತ್ರ ವಹಿಸುತ್ತದೆ. ಅಷ್ಟಕ್ಕೂ ವಾಸ್ತು ಪ್ರಕಾರ ಅಡುಗೆ ಮನೆಯಲ್ಲಿ ಒಲೆ ಯಾವ ದಿಕ್ಕಿನಲ್ಲಿರಬೇಕು ಅನ್ನೋದನ್ನು ತಿಳಿಯೋಣ.
ಒಲೆ ಈ ದಿಕ್ಕಿನಲ್ಲಿದ್ದರೆ ದುಡ್ಡು ಹರಿದು ಬರುತ್ತಂತೆ!
ಅಡುಗ ಮನೆ ಅಥವಾ ಒಲೆ ಮನೆಯ ಆಗ್ನೇಯ ದಿಕ್ಕಿಗಿದ್ದರೆ ಒಳ್ಳೆಯದು ಅಂತ ಹೇಳಲಾಗುತ್ತದೆ. ಏಕೆಂದರೆ ಇದು ಆಹಾರದ ರುಚಿಯನ್ನು ಹೆಚ್ಚಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಯಾಕಂದ್ರೆ ಇದು ಶುಕ್ರ ಗ್ರಹದ ದಿಕ್ಕು. ಮನೆಯಲ್ಲಿ ಅಡುಗೆ ಮಾಡುವ ಕೆಲಸವನ್ನು ಹೆಚ್ಚಾಗಿ ಮಹಿಳೆಯರೇ ಮಾಡುತ್ತಾರೆ. ಮತ್ತು ಶುಕ್ರ ಗ್ರಹವು ಮಹಿಳೆಯರ ಮೇಲೂ ಪರಿಣಾಮ ಬೀರಬಹುದು. ಆಗ್ನೇಯ ದಿಕ್ಕಿನಲ್ಲಿ ಅಡುಗೆ ಮನೆಯಿದ್ದರೆ ಬೆಳಗ್ಗೆ ಬೇಗನೆ ಸೂರ್ಯನ ಕಿರಣಗಳು ಅಡುಗೆ ಮನೆಯನ್ನು ಪ್ರವೇಶ ಮಾಡುತ್ತದೆ.
ಬೆಳಗ್ಗಿನ ಬಿಸಿಲು ತುಂಬಾನೇ ಒಳ್ಳೆಯದು. ಈ ಬಿಸಿಲು ಹೆಚ್ಚು ಬಿಸಿಯಾಗಿಯೂ ಕೂಡ ಇರೋದಿಲ್ಲ. ಬೆಳಗ್ಗಿನ ವೇಳೆ ಸೂರ್ಯನ ಬಿಸಿಲು ಮನೆಯೊಳಗಡೆ ಪ್ರವೇಶಿಸಿದರೆ ಒಳ್ಳೆಯದಂತೆ. ಇನ್ನೂ ಅಡುಗೆ ಒಲೆ ಆಗ್ನೇಯ ದಿಕ್ಕಿನಲ್ಲಿದ್ದರೆ ಮನೆಗೆ ಹಣದ ಹರಿವು ಕೂಡ ಹೆಚ್ಚಾಗುತ್ತದೆ ಎನ್ನುವ ನಂಬಿಕೆಯಿದೆ. ಅಷ್ಟೇ ಅಲ್ಲ, ಕುಟುಂಬ ಸದಸ್ಯರು ಸರಿಯಾದ ಪೋಷಣೆಯನ್ನು ಪಡೆಯಬಹುದು. ಜೊತೆಗೆ ನಮ್ಮ ಆರೋಗ್ಯವೂ ಉತ್ತಮವಾಗುತ್ತದೆ.
ಈ ದಿಕ್ಕಿನಲ್ಲಿ ಅಡುಗೆ ಒಲೆ ಇದ್ದರೆ ಆಪತ್ತು!
ಆಗ್ನೇಯ ದಿಕ್ಕಿನಲ್ಲಿ ಒಲೆಯಿದ್ದರೆ ಇದ್ದರೆ ವ್ಯಕ್ತಿಯಲ್ಲಿ ಶಕ್ತಿ ಮತ್ತು ಆತ್ಮವಿಶ್ವಾಸವನ್ನು ಹೆಚ್ಚಾಗುತ್ತದೆ. ಈ ದಿಕ್ಕು ವ್ಯಕ್ತಿಯನ್ನು ಮೇಲಕ್ಕೆ ಕೊಂಡೊಯ್ಯಲು ಧನಾತ್ಮಕ ಶಕ್ತಿಯನ್ನು ನೀಡುತ್ತದೆ. ದಕ್ಷಿಣ ದಿಕ್ಕು ಮಂಗಳದ ದಿಕ್ಕು, ಇದು ತುಂಬಾ ಬಿಸಿಯಾದ ದಿಕ್ಕು, ಮತ್ತು ಈ ದಿಕ್ಕಿನಲ್ಲಿ ತಯಾರಿಸಿದ ಆಹಾರವು ತುಂಬಾ ಮಸಾಲೆಯುಕ್ತವಾಗಿರುತ್ತದೆ. ಇದು ಆರೋಗ್ಯಕ್ಕೆ ಒಳ್ಳೆಯದಲ್ಲ. ಈ ಜಾಗದಲ್ಲಿ ಗ್ಯಾಸ್ ಸ್ಟವ್ ಇರುವುದರಿಂದ ಜನರು ವಿಶ್ರಾಂತಿ ಪಡೆಯಲು ಸಾಧ್ಯವಾಗುತ್ತಿಲ್ಲ. ಮತ್ತು ಅವರ ಗೌರವದ ಮೇಲೆ ಪ್ರತಿಕೂಲ ಪರಿಣಾಮ ಬೀರುವ ಸಾಧ್ಯತೆಯಿದೆ. ಇನ್ನೂ ತುಂಬಾ ಬಿಸಿಯಾದ ದಿಕ್ಕಾಗಿರುವುದರಿಂದ ಆಹಾರವೂ ಬೇಗ ಹಾಳಾಗುತ್ತದೆ.
ಅಡುಗೆ ಒಲೆ ಈ ದಿಕ್ಕಿನಲ್ಲಿದ್ದರೆ ಖರ್ಚು ಅಧಿಕವಾಗುತ್ತದೆ!
ನೈಋತ್ಯ ದಿಕ್ಕಿನಲ್ಲಿ ಗ್ಯಾಸ್ ಸ್ಟೌವ್ ಇದ್ದರೆ ಅಧಿಕ ಹಣ ಖರ್ಚಾಗುತ್ತಂತೆ. ನಿಷ್ಪ್ರಯೋಜಕ ವಸ್ತುಗಳಿಗೆ ನಾವು ಹಣವನ್ನು ವಿನಿಯೋಗಿಸಬೇಕಾದ ಪರಿಸ್ಥಿತಿ ಎದುರಾಗುತ್ತಂತೆ. ನೈಋತ್ಯ ದಿಕ್ಕನ್ನು ರಾಹುವಿನ ದಿಕ್ಕು ಎಂದು ಕರೆಯುತ್ತಾರೆ. ಗ್ಯಾಸ್ ಸ್ಟೌವ್ ಅನ್ನು ಈ ದಿಕ್ಕಿನಲ್ಲಿ ಇಡಬೇಡಿ. ಹೋಟೆಲ್‌ನ ಗ್ಯಾಸ್ ಸ್ಟೌವ್ ಈ ದಿಕ್ಕಿನಲ್ಲಿದ್ದರೆ ಹೆಚ್ಚು ಗ್ರಾಹಕರು ಅಂಗಡಿಯತ್ತ ಬರುತ್ತಾರೆ. ಆದರೆ ಇದು ಮನೆಗೆ ಒಳ್ಳೆಯದಲ್ಲ ಅಂತ ಹೇಳಲಾಗುತ್ತದೆ.
ಗ್ಯಾಸ್ ಸ್ಟೈವ್ ನೈರುತ್ಯ ದಿಕ್ಕಿನಲ್ಲಿ ಇದ್ದರೆ ಮನೆಯಲ್ಲಿನ ಸಂಬಂಧಗಳು ಹದಗೆಡೋದಕ್ಕೆ ಶುರುವಾಗುತ್ತದೆ. ಗೃಹಿಣಿಯ ಆಲೋಚನೆಯು ನಕಾರಾತ್ಮಕವಾಗುತ್ತದೆ. ಇದು ಮನೆಗೆ ಒಳ್ಳೆಯದಲ್ಲ. ಈ ಕಾರಣದಿಂದಾಗಿ ಕುಟುಂಬದಲ್ಲಿನ ಸಂಬಂಧಗಳು ಹದಗೆಡಲು ಪ್ರಾರಂಭಿಸುತ್ತವೆ. ಇನ್ನೂ ಅಡುಗೆ ಮನೆಯಲ್ಲಿ ಆಂಜನೇಯನ ಫೋಟೋ ಇದ್ದರೆ ಒಳ್ಳೆಯದು.
ಅಡುಗೆ ಒಲೆ ಈ ದಿಕ್ಕಿನಲ್ಲಿದ್ದರೆ ಆರ್ಥಿಕ ಬಿಕ್ಕಟ್ಟು ಎದುರಾಗುತ್ತದೆ!
ನೈರುತ್ಯ ದಿಕ್ಕಿನಲ್ಲಿ ಅಡುಗೆ ಒಲೆ ಇದ್ದರೆ ಮಕ್ಕಳ ಶಿಕ್ಷಣದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇಷ್ಟೇ ಅಲ್ಲ, ಇದು ನಿಮ್ಮ ಸಂಗ್ರಹವಾದ ಬಂಡವಾಳವನ್ನು ನಾಶಪಡಿಸುತ್ತದೆ. ಅಷ್ಟೇ ಅಲ್ಲದೇ ವ್ಯಕ್ತಿಯು ವಿಪರೀತ ಆರ್ಥಿಕ ಬಿಕ್ಕಟ್ಟನ್ನು ಎದುರಿಸಬೇಕಾಗಬಹುದು. ಇನ್ನೂ ಪಶ್ಚಿಮದಲ್ಲಿ ಗ್ಯಾಸ್ ಸ್ಟೌವ್ ಇರುವುದು ವ್ಯಕ್ತಿಯ ಲಾಭದ ಮೇಲೆ ಪರಿಣಾಮ ಬೀರಬಹುದು.
ಈ ದಿಕ್ಕಿನಲ್ಲಿ ಒಲೆ ಇದ್ದರೆ ಪ್ರಗತಿಯಾಗುತ್ತದೆ!
ವಾಯುವ್ಯ ದಿಕ್ಕಿನಲ್ಲಿ ಅಡುಗೆ ಒಲೆ ಇದ್ದರೆ ಮನೆಯ ಮಹಿಳೆಯರು ಹತಾಶೆಗೆ ಒಳಗಾಗುತ್ತಾರಂತೆ. ಅವರು ಹಳೆಯ ವಿಷಯಗಳನ್ನು ಮತ್ತೆ ಮತ್ತೆ ಯೋಚಿಸುತ್ತಾರೆ. ಅವರಿಗೆ ಥೈರಾಯ್ಡ್ ಸಮಸ್ಯೆಯೂ ಎದುರಾಗಬಹುದು. ಈ ದಿಕ್ಕಿನ ದೋಷವನ್ನು ತೆಗೆದುಹಾಕಲು ಗ್ಯಾಸ್ ಸ್ಟೌವ್ ಅಡಿಯಲ್ಲಿ ಹಳದಿ ಬಣ್ಣವನ್ನು ಪೈಂಟ್ ಮಾಡಿ. ಈ ರೀತಿ ಪರಿಹಾರ ಕೈಗೊಂಡರೆ ವಾಯುವ್ಯ ದಿಕ್ಕಿನಲ್ಲಿ ಒಲೆಯನ್ನು ಇಡೋದ್ರಿಂದ ಒಳ್ಳೆಯದಾಗುತ್ತದೆ. ಈ ದಿಕ್ಕಿನಲ್ಲಿ ಆಹಾರವನ್ನು ಬೇಯಿಸುವುದು ಪ್ರಗತಿಗೆ ಕಾರಣವಾಗುತ್ತದೆ. ಜನರ ಸಹಕಾರ ಸಿಗುತ್ತದೆ ಮತ್ತು ಆಹಾರ ಆರೋಗ್ಯದ ಮೇಲೆ ಉತ್ತಮ ಪರಿಣಾಮ ಬೀರುತ್ತದೆ.
ಈ ದಿಕ್ಕಿನಲ್ಲಿ ಅಡುಗೆ ಒಲೆಯಿದ್ದರೆ ದಂಪತಿಗಳ ಮಧ್ಯೆ ಮನಸ್ಥಾಪ ಹೆಚ್ಚಾಗುತ್ತದೆ!
ಗ್ಯಾಸ್ ಸ್ಟೌವ್ ಅನ್ನು ವಾಯುವ್ಯ ದಿಕ್ಕಿನಲ್ಲಿ ಇಡುವುದರಿಂದ ಅತಿಥಿಗಳ ಆಗಮನ ಹೆಚ್ಚಾಗುತ್ತದೆ. ಗೃಹಿಣಿಯ ಹೆಚ್ಚಿನ ಸಮಯವನ್ನು ಅಡುಗೆಮನೆಯಲ್ಲಿ ಕಳೆಯುತ್ತಾಳೆ. ಇದರಿಂದಾಗಿ ಪತಿ-ಪತ್ನಿಯರ ನಡುವಿನ ಸಂಬಂಧದಲ್ಲೂ ಸಮಸ್ಯೆಗಳು ಉದ್ಭವಿಸುತ್ತವೆ. ಹೀಗಾಗಿ ಗ್ಯಾಸ್ ಸ್ಟೌವ್ ಅಡಿಯಲ್ಲಿ ಹಳದಿ ಕಲ್ಲು ಇಡುವುದರಿಂದ ಸಮಸ್ಯೆಗೆ ಪರಿಹಾರ ಸಿಗುತ್ತದೆ.



Click it and Unblock the Notifications