Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವಾಸ್ತು ಪ್ರಕಾರ ಗೃಹ ಪ್ರವೇಶದಲ್ಲಿ ಈ ಬಗೆಯ ವಸ್ತುಗಳು ಅದೃಷ್ಟದ ಗಿಫ್ಟ್‌ಗಳಾಗಿವೆ
ನಮ್ಮ ಬಂಧುಗಳ, ನಮ್ಮ ಸ್ನೇಹಿತರ ಮನೆಯ ಗೃಹಪ್ರವೇಶಕ್ಕೆ ಆಹ್ವಾನ ಬಂದಾಗ ಸ್ವಲ್ಪ ಸ್ಪೆಷಲ್ ಆಗಿರುವ ಗಿಫ್ಟ್ ನೀಡಬೇಕೆಂದು ಯೋಚಿಸುತ್ತೇವೆ ಅಲ್ವಾ? ನಾವು ಕೊಡುವ ಗಿಫ್ಟ್ ಅವರಿಗದು ಲಕ್ಕಿ ಗಿಫ್ಟ್ ಆದರೆ ನಮಗೂ ಖುಷಿ ಅಲ್ವಾ? ವಾಸ್ತು ಶಾಸ್ತ್ರ ಪ್ರಕಾರ ಕೆಲವೊಂದು ವಸ್ತುಗಳನ್ನು ಮನೆಗೆ ಗಿಫ್ಟ್ ಆಗಿ ನೀಡಿದ್ದರೆ ತುಂಬಾನೇ ಅದೃಷ್ಟಕರವಂತೆ. ವಾಸ್ತು ಪ್ರಕಾರ ಮನೆಗೆ ಈ ವಸ್ತುಗಳು ಗಿಫ್ಟ್ ಆಗಿ ನೀಡಿದರೆ ಅದೃಷ್ಟವಂತೆ...

ಶ್ರೀ ಮೇರು ಯಂತ್ರ
ವಾಸ್ತು ಪ್ರಕಾರ ಇದೊಂದು ಪವರ್‌ಫುಲ್ ಯಂತ್ರವಾಗಿದೆ. ಇದನ್ನು ಸರಿಯಾಗಿ ಬಳಸಿದರೆ ಇದರಿಂದ ಮನೆಯ ಸಮೃದ್ಧಿ ಹೆಚ್ಚಾಗಲಿದೆ, ಮನೆಯಲ್ಲಿ ಧನಾತ್ಮಕ ಶಕ್ತಿ ಹೆಚ್ಚಾಗಲಿದೆ. ಮೇರು ಯಂತ್ರವನ್ನು ಸರಿಯಾದ ರೀತಿಯಲ್ಲಿ ಪೂಜಿಸುವುದರಿಂದ ದೈವಿಕ ಕೃಪೆ ನಿಮ್ಮ ಮೇಲಿರಲಿದೆ ಅಲ್ಲದೆ ನಿಮ್ಮ ಸಮೃದ್ಧಿ ಹೆಚ್ಚಾಗಲಿದೆ. ಮೇರು ಯಂತ್ರವನ್ನು ಪೂಜಾ ಕೋಣೆಯಲ್ಲಿ ಇಟ್ಟು ಪೂಜಿಸಿ.
ಶ್ರೀ ಗಣೇಶನ ಮೂರ್ತಿ
ನೀವು ಮನೆಗೆ ಗಣೇಶನ ಮೂರ್ತಿಯನ್ನು ಗಿಫ್ಟ್ ಆಗಿ ನೀಡಿ. ಇದು ಅವರ ಮನೆಗೆ ಲಕ್ಕಿ ಗಿಫ್ಟ್ ಆಗಲಿದೆ. ಹಿಂದೂಗಳ ಯಾವುದೇ ಪೂಜೆಯನ್ನು ಮಾಡುವ ಮೊದಲು ಮೊದಲಿಗೆ ಶ್ರೀ ಗಣೇಶನ ಆರಾಧನೆ ಮಾಡಿದ ಬಳಿಕವಷ್ಟೇ ನಾವು ಪೂಜೆಯನ್ನು ಮಾಡುತ್ತೇವೆ, ಶ್ರೀ ಗಣೇಶನ ಆರಾಧನೆ ಮಾಡುವುದರಿಂದ ನಿಮ್ಮ ಎಲ್ಲಾ ವಿಘ್ನಗಳು ದೂರಾಗುವುದು, ಗಣೇಶನ ಕೃಪೆಯಿಂದ ಬದುಕು ಉತ್ತಮವಾಗುವುದು. ಆದ್ದರಿಂದ ಗಣೇಶನ ಮೂರ್ತಿಯನ್ನು ಗಿಫ್ಟ್ ಆಗಿ ನೀಡುವುದು.
ಗೋಮತಿ ಚಕ್ರ ಮರ
ಗೋಮತಿ ಚಕ್ರ ಮರವನ್ನು ಅತ್ಯಂತ ಶುಭ ಎಂದು ಪರಿಗಣಿಸಲಾಗಿದೆ. ಆದ್ದರಿಂದ ಗೃಹಪ್ರವೇಶ ಮಾಡುವಾಗ ಇದನ್ನು ಗಿಫ್ಟ್ ಆಗಿ ನೀಡುವುದು ಒಳ್ಳೆಯದು. ಇದನ್ನು ಮನೆಯಲ್ಲಿದ್ದರೆ ಸಮೃದ್ದಿ ಹೆಚ್ಚಾಗುವುದು ಮನೆಯವರ ಆರೋಗ್ಯ ಕೂಡ ಚೆನ್ನಾಗಿರುತ್ತದೆ. ಇದು ಮನೆಯಲ್ಲಿನ ಮಕ್ಕಳನ್ನು ರಕ್ಷಣೆ ಮಾಡುತ್ತದೆ ಎಂದು ನಂಬಲಾಗಿದೆ.
ಆನೆ ಮತ್ತು ಆಮೆ
ಆನೆ ಸಮೃದ್ಧಿ, ಧೈರ್ಯ, ಬುದ್ಧಿವಂತಿಕೆಯ ಸಂಕೇತ. ಅಲ್ಲದೆ ಆಮೆ ಮನೆಯಲ್ಲಿರುವ ಋಣಾತ್ಮಕ ಶಕ್ತಿಯನ್ನು ಹೊರಹಾಕುತ್ತದೆ. ಆದ್ದರಿಂದ ಆನೆ ಮತ್ತು ಆಮೆಯ ಮೂರ್ತಿಯನ್ನು ಗಿಫ್ಟ್ ಆಗಿ ನೀಡಿ.
ಇವೆರಡನ್ನೂ ಜೊತೆಯಾಗಿ ಗಿಫ್ಟ್ ನೀಡಿದರೆ ಒಳ್ಳೆಯದು ಎಂದು ವಾಸ್ತು ಶಾಸ್ತ್ರ ಹೇಳುತ್ತದೆ.
ನೀರಿನ ಚಿಲುಮೆ
ಮನೆಗೆ ವಾಟರ್ ಫೌಂಟೇನ್ ಅನ್ನು ಗಿಫ್ಟ್ ಆಗಿ ನೀಡಿದರೆ ಒಳ್ಳೆಯದು. ಮನೆಯಲ್ಲಿ ಫೌಂಟೇನ್‌ನಲ್ಲ ನೀರು ಬೀಲುತ್ತಿದ್ದರೆ ಮನೆಯಲ್ಲಿರುವ ಋಣಾತ್ಮಕ ಶಕ್ತಿ ದೂರಾಗುವುದು ಎಂದು ಹೇಳಲಾಗುವುದು. ಆದ್ದರಿಂದ ನೀವು ವಾಟರ್ ಫೌಂಟೇನ್ ಅನ್ನು ಗಿಫ್ಟ್ ಆಗಿ ನೀಡಬಹುದು.
ನಗುತ್ತಿರುವ ಬುದ್ಧ
ನಗುತ್ತಿರುವ ಬುದ್ಧನನ್ನು ಗಿಫ್ಟ್ ನೀಡಿದರೆ ಅದು ಅವರ ಪಾಲಿಗೆ ಅದೃಷ್ಟದ ಗಿಫ್ಟ್ ಆಗಲಿದೆ. ವಾಸ್ತು ಪ್ರಕಾರ ನಗುತ್ತಿರುವ ಬುದ್ಧನನ್ನು ಗಿಫ್ಟ್ ನೀಡುವುದು ಒಳ್ಳೆಯದು. ನಗುತ್ತಿರುವ ಬುದ್ಧ ಮನೆಗೆ ಧನಾತ್ಮಕ ಶಕ್ತಿಯನ್ನು ತುಂಬಲಿದೆ.
ವಾಸ್ತು ಆಮೆ
ನಿವು ಮನೆಗೆ ವಾಸ್ತು ಆಮೆಯನ್ನು ಗಿಫ್ಟ್ ಆಗಿ ನೀಡಿ. ವಾಸ್ತು ಆಮೆ ನಿಮಗೆ ವಿವಿಧ ಬಗೆಯಲ್ಲಿ ಸಿಗುವುದು. ಗಾಜಿನ ಆಮೆ, ಸ್ಪಟಿಕದ ಆಮೆ, ಮರದ ಆಮೆ, ಲೋಹದ ಆಮೆ ಹೀಗೆ ಯಾವುದೇ ಆಮೆಯನ್ನು ನೀಡಬಹುದು. ನೀವು ವಾಸ್ತು ಆಮೆಯನ್ನು ಗಿಫ್ಟ್ ಆಗಿ ನೀಡುವುದರಿಂದ
ವಾಸ್ತು ಗಿಡ
ವಾಸ್ತು ಗಿಡಗಳನ್ನು ಕೂಡ ಗಿಫ್ಟ್ ಆಗಿ ನೀಡಬಹುದು. ತುಳಸಿ, ನಿಂಬೆ ಹಣ್ಣನ ಗಿಡ, ಜಡೆ ಗಿಡ, ಮನಿ ಪ್ಲ್ಯಾಂಟ್, ಬಿದಿರಿನ ಗಿಡ, ಮಲ್ಲಿಗೆ ಗಿಡ ಇವೆಲ್ಲಾ ವಾಸ್ತು ಗಿಡಗಳಾಗಿವೆ.
3 ಚಿನ್ನದ ಗೂಬೆಗಳು
ನೀವು ಸ್ವಲ್ಪ ದುಬಾರಿ ಗಿಫ್ಟ್ ನೀಡಲು ಬಯಸುವುದಾದರೆ ನೀವು ಮೂರು ಚಿನ್ನದ ಗೂಬೆಗಳ ಮೂರ್ತಿಯನ್ನು ಗಿಫ್ಟ್ ಆಗಿ ನೀಡಬಹುದು. ಇದು ಮನೆಗೆ ಧನಾತ್ಮಕ ಶಕ್ತಿ ತುಂಬಲಿದೆ. ಈ ಗೂಬೆಗಳ ಮೂರ್ತಿಗಳು ಮನೆಯಲ್ಲಿದ್ದರೆ ಧನಾತ್ಮಕ ಶಕ್ತಿ ತುಂಬುವುದು ಎಂದು ಹೇಳಲಾಗುವುದು.



Click it and Unblock the Notifications
