Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮೇ.4ಕ್ಕೆ ವರೂಧಿನಿ ಏಕಾದಶಿ: ಈ ಏಕಾದಶಿ ಆಚರಣೆಯಿಂದ ಸಿಗುವ ಫಲವೇನು? ಈ ದಿನ ಪಠಿಸಬೇಕಾದ ಮಂತ್ರಗಳು
ಪ್ರತಿಯೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ. ಪ್ರತಿ ಮಾಸ ಎರಡು ಏಕಾದಶಿ ಬರುತ್ತದೆ. ವರ್ಷದಲ್ಲಿ ಒಟ್ಟು 24 ಏಕಾದಶಿಯನ್ನು ಆಚರಿಸಲಾಗುವುದು. ಪ್ರತಿಯೊಂದು ಏಕಾದಶಿ ಶ್ರೀ ವಿಷ್ಣುವಿಗೆ ಮೀಸಲಾಗಿರುವ ವಿಶೇಷ ದಿನವಾಗಿದೆ.
ಈ ದಿನ ಉಪವಾಸವಿದ್ದು ಶ್ರೀ ವಿಷ್ಣುವಿನ ಆರಾಧನೆ ಮಾಡಿದರೆ ನಮ್ಮ ಕಷ್ಟಗಳೆಲ್ಲಾ ದೂರಾಗುವುದು ಜೊತೆಗೆ ಒಂದೊಂದು ಏಕಾದಶಿಗೆ ಅದರದ್ದೇ ಆದ ಮಹತ್ವವಿದೆ, ಆ ಏಕಾದಶಿಗಳನ್ನು ಆಚರಣೆ ಮಾಡುವುದರಿಂದ ಅದರ ಪ್ರಯೋಜನ ದೊರೆಯಲಿದೆ.

ವೈಶಾಖ ಮಾಸದ ಕೃಷ್ಣ ಪಕ್ಷದ ಏಕಾದಶಿಯನ್ನು ವರೂಧಿನಿ ಏಕಾದಶಿ ಎಂದು ಆಚರಿಸಲಾಗುವುದು. ವೈಶಾಖ ಮಾಸವೆಂದರೆ ಶ್ರೀವಿಷ್ಣುವಿಗೆ ಪ್ರಿಯವಾದ ಮಾಸವೆಂದು ಹೇಳಲಾಗುವುದು, ಹಾಗಾಗಿ ಅದೇ ಮಾಸದಲ್ಲಿ ಬರುವ ಏಕಾದಶಿ ಕೂಡ ತುಂಬಾನೇ ವಿಶೇಷವಾಗಿರಲಿದೆ. ಆದ್ದರಿಂದ ಈ ದಿನ ವಿಷ್ಣುವಿಗೆ ಪೂಜೆ ಮಾಡಿದರೆ ಹೆಚ್ಚಿನ ಫಲ ಸಿಗಲಿದೆ. ಭಕ್ತರು ಏನಾದರೂ ಸಂಕಲ್ಪ ತೆಗೆದುಕೊಂಡು ಈ ಏಕಾದಶಿ ಆಚರಣೆ ಮಾಡಿದರೆ ಆ ಸಂಕಲ್ಪ ನೆರವೇರುವುದು.
ವರೂಧಿನಿ ಏಕಾದಶಿ ದಿನಾಂಕ ಮತ್ತು ಸಮಯ
ಏಕಾದಶಿ ತಿಥಿ ಪ್ರಾರಂಭ: ಮೇ 3 ರಾತ್ರಿ 11:24ಕ್ಕೆ
ಏಕಾದಶಿ ತಿಥಿ ಮುಕ್ತಾಯ: ಮೇ 4 ರಾತ್ರಿ 08: 38ರವರೆಗೆ
ಪಾರಣ ಸಮಯ: ಮೇ 5 ಬೆಳಗ್ಗೆ 05:15ರಿಂದ 07:51ರವರೆಗೆ
ವರೂಧಿನಿ ಏಕಾದಶಿ ಪೂಜೆ
ಈ ದಿನ ಬೆಳಗ್ಗೆ ಬೇಗನೆ ಎದ್ದು ಸ್ನಾನ ಮಾಡಿ ಬಂದು ದೇವರ ಕೋಣೆ ಶುದ್ಧ ಮಾಡಿ ಶ್ರೀ ವಿಷ್ಣು ಮೂರ್ತಿ ಅಥವಾ ಫೋಟೋವನ್ನು ಸ್ವಚ್ಛಗೊಳಿಸಿ ಹಳದಿ ಹೂವುಗಳಿಂದ ಅಲಂಕರಿಸಿ, ನಂತರ ಹಳದಿ ಬಣ್ಣದ ಹಣ್ಣುಗಳ ಜೊತೆಗೆ ಇತರ ಹಣ್ಣುಗಳನ್ನೂ ಅರ್ಪಿಸಬಹುದು, ನಂತರ ಶ್ರೀ ವಿಷ್ಣುವಿನ ಮಂತ್ರ ಪಠಣೆ ಮಾಡುತ್ತಾ ಶ್ರೀ ವಿಷ್ಣುವನ್ನು ಪೂಜಿಸಿ ಬಳಿಕ ತುಳಸಿ ಹಾಕಿದ ನೈವೇದ್ಯ ಅರ್ಪಿಸಿ, ಮಂಗಳಾರತಿ ಬೆಳಗಿ.
ಪದ್ಮ ಪುರಾಣದ ಪ್ರಕಾರ ವ್ಯಕ್ತಿಯು ಉಪವಾಸವಿದ್ದು ಈ ಏಕಾದಶಿ ಆಚರಣೆ ಮಾಡುವುದರಿಂದ ಅವನಿಗೆ ವೈಕುಂಠದಲ್ಲಿ ಸ್ಥಾನ ಸಿಗುವುದು. ಈ ಏಕಾದಶಿ ಆಚರಣೆ ಮಾಡುವುದರಿಂದ ತಪಸ್ಸು ಮಾಡಿದ ಪುಣ್ಯ ಸಿಗಲಿದೆ ಎಂದು ಹೇಳಲಾಗುವುದು. ಬಡತನ, ಆರೋಗ್ಯ ಸಮಸ್ಯೆ ಎಲ್ಲಾ ಕಷ್ಟಗಳು ದೂರಾಗುವುದು.
ವಿಷ್ಣು ಮಂತ್ರಗಳು:
ವಿಷ್ಣು ಮೂಲ ಮಂತ್ರ:
ಓಂ ನಮೋ ನಾರಾಯಣಾಯ
ಓಂ ನಮೋ ಭಗವತೇ ವಾಸುದೇವಾಯ
ವಿಷ್ಣು ಗಾಯತ್ರಿ ಮಂತ್ರ
ಓಂ ನಾರಾಯಣಯೇ ವಿದ್ಮಹೇ ವಾಸುದೇವಾಯ ಧೀಮಹಿ ತನ್ನೋ ವಿಷ್ಣು ಪ್ರಚೋದಯಾತ್
ಮುಕ್ತಿ ಮಂತ್ರ:
ಓಂ ಭಗವತೇ ವಾಸುದೇವಾಯ ನಮಃ
ವಿಷ್ಣು ಶಾಂತಾಕಾರಂ ಮಂತ್ರ:
ಶಾಂತಾಕಾರಂ ಭುಜಗಶಯನಂ ಪದ್ಮನಾಭಂ ಸುರೇಶಂ ವಿಶ್ವಧಾರಂ ಗಗನಸದ್ರಿಶಂ,
ಮೇಘವರ್ಣಂ ಶುಭಾಂಗಂ ಲಕ್ಷ್ಮಿಂಕಾತಂ ಕಮಲಾನಯನಂ,
ಯೋಗಿಭಿರ್ಧ್ಯಾನಗಮ್ಯಂ ವಂದೇ ವಿಷ್ಣುಂ ಭವಭಯಹರಂ, ಸರ್ವಲೋಕೈಕನಾಥಂ
ಶ್ರೀ ವಿಷ್ಣು ಮಂತ್ರ:
ತ್ವಮೇವ ಮಾತಾ ಚ ಪಿತಾ ತ್ವಮೇವ ತ್ವಮೇವ ಬಂಧುಶ್ ಚ ಸಖಾ ತ್ವಮೇವ ತ್ವಮೇವ ವಿದ್ಯಾ ದ್ರವಿಣಂ ತ್ವಮೇವ ತ್ವಮೇವ ಸರ್ವಂ ಮಮ ದೇವದೇವ
ಪೌರಾಣಿಕ ಕತೆ
ಹಿಂದಿನ ಕಾಲದಲ್ಲಿ ಮಾಂಧಾತ ಎಂಬ ತಪಸ್ವಿ ರಾಜನು ನರ್ಮದಾ ನದಿಯ ದಡದಲ್ಲಿ ತಪಸ್ಸು ಮಾಡುತ್ತಿದ್ದಾಗ ಕಾಡು ಕರಡಿಯೊಂದು ಅಲ್ಲಿಗೆ ಬಂದು ರಾಜನ ಕಾಲನ್ನು ಕಚ್ಚಲಾರಂಭಿಸಿತು. ಆದರೆ ರಾಜನು ತಪಸ್ಸಿನಲ್ಲಿ ಮಗ್ನನಾಗಿದ್ದನು. ಕರಡಿ ರಾಜನನ್ನು ಕಾಡಿಗೆ ಎಳೆದುಕೊಂಡು ಹೋಯ್ತು ರಾಜ ಕಣ್ಣು ಬಿಟ್ಟಾಗ ಕರಡಿ, ಭಯಗೊಂಡ ರಾಜ ಶ್ರೀ ವಿಷ್ಣುವನ್ನು ಪ್ರಾರ್ಥಿಸಿದನು. ಅವನ ಕರೆಯನ್ನು ಕೇಳಿದ ಭಗವಂತ ಕರಡಿಯಿಂದ ರಾಜನ ಪ್ರಾಣ ರಕ್ಷಣೆ ಮಾಡುತ್ತಾನೆ, ಆದರೆ ಅಷ್ಟರಲ್ಲಿಯೇ ಕರಡಿ ರಾಜನ ಕಾಲು ತುಂಡರಿಸಿತ್ತು. ಆಗ ವಿಷ್ಣು ವರೂಧಿನಿ ವ್ರತದ ಬಗ್ಗೆ ಹೇಳುತ್ತಾನೆ. ರಾಜನು ಅದರಂತೆ ವರಾಹ ಮೂರ್ತಿಯನ್ನು ಪೂಜಿಸಿದನು. ಆ ರಾಜನ ಕಷ್ಟಗಳು ದೂರಾಗುತ್ತದೆ, ಸಾವಿನ ನಂತರ ಸುಂದರ ರೂಪದಲ್ಲಿ ವೈಕುಂಠಕ್ಕೆ ಹೋದಾಗ ಅಲ್ಲಿ ಅವನಿಗೆ ಸ್ವಾಗತ ಸಿಗುತ್ತದೆ.



Click it and Unblock the Notifications
