Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
Valmiki Jayanti Wishes: ವಾಲ್ಮೀಕಿ ಜಯಂತಿಗೆ ಶುಭ ಕೋರಲು, ಹಂಚಿಕೊಳ್ಳಲು ಇಲ್ಲಿವೆ ಶುಭಾಶಯಗಳು
Valmiki Jayanti Wishes: ಆದಿಕವಿ ಮಹರ್ಷಿ ವಾಲ್ಮೀಕಿ ಜಯಂತಿ ಆಚರಿಸಲಾಗುತ್ತಿದೆ. ಹಿಂದೂಗಳ ಪವಿತ್ರ ಧರ್ಮಗ್ರಂಥ ರಾಮಾಯಣ ಮಹಾಕಾವ್ಯದ ಕರ್ತೃ ಆಗಿರುವ ಅವರನ್ನು ನೆನೆಯುವ ದಿನವಾಗಿದೆ. ವಾಲ್ಮೀಕಿ ಮಹರ್ಷಿಗಳು ಬ್ರಹ್ಮನ ಅನುಗ್ರಹದಿಂದ ರಾಮಾಯಣವನ್ನು ರಚಿಸಿದರು ಎಂಬುದು ಭಾರತೀಯ ನಂಬಿಕೆ. ಇದು ಭಾರತದ ಮೊಟ್ಟ ಮೊದಲ ಮಹಾಕಾವ್ಯ ಎಂಬ ಹಿರಿಮೆಗೆ ಸಹ ಪಾತ್ರವಾದ ಕೃತಿ ಇದಾಗಿದೆ.
ಅಕ್ಟೋಬರ್ 07ರಂದು ಮಹರ್ಷಿ ವಾಲ್ಮೀಕಿ ಅವರ ಜಯಂತಿಯನ್ನು ಆಚರಿಸಲಾಗುತ್ತಿದೆ. ಈ ದಿನ ಪೂಜ್ಯರು ಹೇಳಿಕೊಟ್ಟ, ಹಾಗೆ ಭೋದಿಸಿದಂತಹ ಹಿತನುಡಿಗಳನ್ನು ನೆನೆಯುವ ಹಾಗೆ ಅವರು ಹೇಳಿಕೊಟ್ಟ ಸಿದ್ದಾಂತದಂತೆ ಬದುಕು ನಡೆಯುವಂತಹ ಪ್ರತಿಜ್ಞೆ ಮಾಡಬೇಕಿದೆ. ಇದು ಅವರಿಗೆ ನಾವು ನೀಡುವ ನಿಜವಾದ ಗೌರವವೂ ಹೌದು.

ವಿಶೇಷವಾಗಿ ಕರ್ನಾಟಕದಲ್ಲಿ ವಾಲ್ಮೀಕಿ ಜಯಂತಿಗೆ ವಿಶೇಷ ಗೌರವ ನೀಡಲಾಗಿದೆ. ವಾಲ್ಮೀಕಿ ಸಮುದಾಯದ ಮಂದಿ ಈ ದಿನವನ್ನು ಬಹಳ ಸಂಭ್ರಮದಿಂದ ಆಚರಿಸುತ್ತಾರೆ. ಆದ್ರೆ ಅವರು ಒಂದು ಸಮುದಾಯಕ್ಕೆ ಮಾತ್ರ ಸೀಮಿತಿವಾಗಿಲ್ಲ. ಅವರ ಹಿತನುಡಿಗಳು ಕೂಡ ಒಂದೇ ಸಮುದಾಯಕ್ಕೆ ಸೀಮಿತವಾಗಿಲ್ಲ.
ಬೆನ್ನ ಹಿಂದೆ ಆಡಿಕೊಳ್ಳುವ ಜನರ ಬಗ್ಗೆ ತಲೆಕೆಡಿಸಿಕೊಳ್ಳಬೇಡ, ಏಕೆಂದರೆ ನಿನ್ನ ಬೆನ್ನೇ ನಿನಗೆ ಕಾಣುವುದಿಲ್ಲ, ಎದುರಾದರೆ ಎದುರಿಸು ಗೆದ್ದೇ ಗೆಲ್ಲುವೆ. ಮಹರ್ಷಿ ವಾಲ್ಮೀಕಿ ಜಯಂತಿಯ ಶುಭಾಶಯಗಳು.
ಸತ್ಯವು ಸದಾಚಾರ ಮತ್ತು ಧರ್ಮದ ಅಡಿಪಾಯ. ಸತ್ಯವಂತ ಜೀವನವು ಶಾಂತಿ ಮತ್ತು ದೈವಿಕ ಅನುಗ್ರಹಕ್ಕೆ ಕಾರಣವಾಗುತ್ತದೆ.
ದೇವರಿಗೆ ಭಕ್ತಿಯು ಕುಟುಂಬ, ಸಮಾಜ ಮತ್ತು ಸದಾಚಾರದ ಕಡೆಗೆ ಒಬ್ಬರ ಕರ್ತವ್ಯಗಳಲ್ಲಿ ಪ್ರತಿಫಲಿಸಬೇಕು. ಎಲ್ಲಾ ಜೀವಿಗಳಿಗೂ ಸಮಾನತೆ ಮತ್ತು ಕರುಣೆ.
ಪ್ರತಿಯೊಂದು ಕ್ರಿಯೆ, ಅದು ಒಳ್ಳೆಯದಾಗಲಿ ಅಥವಾ ಕೆಟ್ಟದ್ದಾಗಲಿ, ಫಲ ನೀಡುತ್ತದೆ. ಆದ್ದರಿಂದ, ಒಬ್ಬರು ಅರಿವು ಮತ್ತು ಸದ್ಗುಣದಿಂದ ವರ್ತಿಸಬೇಕು.
ನೀವು ಜ್ಞಾನ, ಹಣ, ಪ್ರತಿಷ್ಠೆ, ಶಕ್ತಿಯನ್ನು ಸಂಗ್ರಹಿಸಬಹುದು. ಆದರೆ ಇದೆಲ್ಲದರ ನಡುವೆ ಪ್ರೀತಿಯನ್ನು ಕಳೆದುಕೊಂಡಿದ್ದರೆ ನೀವು ನಿಜವಾದ ಬದುಕನ್ನೇ ಕಳೆದುಕೊಂಡಿದ್ದೀರಿ ಎಂದರ್ಥ
ಪ್ರಶ್ನಿಸಿದರು ಎಂದು ಕುಗ್ಗಬೇಡ, ಪ್ರಶ್ನೆ ಯಾರಾದರೂ ಕೇಳುವರು, ಸಮಯ ನೋಡಿ ಉತ್ತರ ಕೊಡುವವನೇ ಚಾಣಾಕ್ಯ.
ವ್ಯಕ್ತಿಯು ಆನೆಯನ್ನೇ ಉಡುಗೊರೆಯಾಗಿ ನೀಡುವಾಗ, ಆನೆಯನ್ನು ಕಟ್ಟುವ ಹಗ್ಗದ ಮೇಲೆ ಮನಸ್ಸಿದ್ದರೆ ಏನು ಪ್ರಯೋಜನ. ಆನೆಯನ್ನೇ ಕಳೆದುಕೊಂಡಾಗ ಹಗ್ಗದ ಮೇಲಿನ ಬಾಂಧವ್ಯದಿಂದ ಏನು ಉಪಯೋಗ.
ಯಾವಾಗಲೂ ಸಂತೋಷವಾಗಿರಲು ಹೇಗೆ ತಾನೇ ಸಾಧ್ಯ. ಜೀವನ ಎಂದ ಮೇಲೆ ಸುಖ ಮತ್ತು ದುಃಖಗಳ ಮಿಳಿತವಾಗಿರುತ್ತದೆ, ನಿರಂತರವಾದ ಸಂತೋಷ ಮಾತ್ರ ಇರಲು ಸಾಧ್ಯವೇ ಇಲ್ಲ.



Click it and Unblock the Notifications







