ವೈಕುಂಠ ಏಕಾದಶಿ 2025: ವಿಷ್ಣುವಿನ ಪೂಜೆ ಯಾವಾಗ? ಉಪವಾಸ ಮಾಡುವ ಸಮಯ ಇಲ್ಲಿದೆ..!!

ವೈಕುಂಠ ಏಕಾದಶಿಯನ್ನು ಹಿಂದೂ ಧರ್ಮದಲ್ಲಿ ಅತ್ಯಂತ ಪ್ರಮುಖ ಹಾಗೂ ಮಹತ್ವಪೂರ್ಣ ಏಕಾದಶಿಯಾಗಿ ಆಚರಿಸಲಾಗುತ್ತದೆ. ಈ ದಿನವನ್ನು ಶ್ರೀ ಹರಿ ವಿಷ್ಣುವಿಗೆ ಸಮರ್ಪಿಸಲಾಗಿದೆ. ಈ ದಿನದಂದು, ಶ್ರೀ ವಿಷ್ಣುವಿನ ಪೂಜೆ ಮತ್ತು ಉಪವಾಸದ ಸಂಪ್ರದಾಯವಿದೆ. ಶ್ರೀಮನ್ನಾರಾಯಣ ಸಾಕ್ಷಾತ್ ವೈಕುಂಠದಿಂದ ಭೂಲೋಕಕ್ಕೆ ಬರುತ್ತಾನೆ ಎಂದು ಹಾಗೆ ಭಕ್ತರ ಎಲ್ಲಾ ಬೇಡಿಕೆಯನ್ನೂ ಕೂಡ ಈಡೇರಿಸಲಿದ್ದಾನೆ ಎಂದು ನಂಬಲಾಗಿದೆ.

ಈ ವೈಕುಂಠ ಏಕಾದಶಿಯನ್ನು ಮುಕ್ಕೋಟಿ ಏಕಾದಶಿ ಎಂದೂ ಕೂಡ ಕರೆಯುತ್ತಾರೆ. ಸೂರ್ಯ ದಕ್ಷಿಣಾಯಣದಿಂದ ಉತ್ತರಾಯಣಕ್ಕೆ ಬದಲಾಗುವ ಮುನ್ನ ದಿನ ಬರುವ ಧನುರ್ಮಾಸದ ಶುದ್ಧ ಏಕಾದಶಿ ಇದಾಗಿದೆ. ಈ ವರ್ಷ ಜನವರಿ 10ರಂದು ಈ ವೈಕುಂಠ ಏಕಾದಶಿ ಆಚರಿಸಲಾಗುತ್ತಿದೆ. ಈ ಪವಿತ್ರ ದಿನವು ಅಪಾರ ಆಧ್ಯಾತ್ಮಿಕ ಮಹತ್ವವನ್ನು ಹೊಂದಿದೆ ಏಕೆಂದರೆ ಇದು ವೈಕುಂಠಕ್ಕೆ ದಾರಿ ತೋರುತ್ತದೆ ಎಂನ ನಂಬಿಕೆ ಕೂಡ ಇದೆ.

Vaikuntha Ekadashi 2025 Know Date Puja Vidhi And Fasting Time

ಈ ದಿನದ ಪೂಜೆಯು ನಿಮಗೆ ಮೋಕ್ಷ ಸಿಗುವ ದಾರಿಯನ್ನು ತೋರಿಸಲಿದೆ ಎಂದು ಹೇಳಲಾಗಿದೆ. ಹೀಗಾಗಿ ವಿಷ್ಣುವಿನ ಜಪ ಹಾಗೂ ಉಪವಾಸ ಮಾಡಲಾಗುತ್ತದೆ.
ವೈಕುಂಠ ಏಕಾದಶಿ ವ್ರತ 2025: ದಿನಾಂಕ ಮತ್ತು ಸಮಯ
ವೈಕುಂಠ ಏಕಾದಶಿ ಶುಕ್ರವಾರ, ಜನವರಿ 10, 2025
ಪಾರಣ ಸಮಯ 07:15 ರಿಂದ 08:21, ಜನವರಿ 11
ದ್ವಾದಶಿ ಅಂತ್ಯದ ಕ್ಷಣ 08:21, ಜನವರಿ 11
ಏಕಾದಶಿ ತಿಥಿ ಜನವರಿ 09, 2025 ರಂದು 12:22ಕ್ಕೆ ಪ್ರಾರಂಭ
ಏಕಾದಶಿ ತಿಥಿಯು ಜನವರಿ 10 2025 ರಂದು 10:19ಕ್ಕೆ ಕೊನೆಯಾಗಲಿದೆ

ಕೆಲವು ಸಂದರ್ಭಗಳಲ್ಲಿ ಈ ಏಕಾದಶಿಯನ್ನು ಉಪವಾಸವನ್ನು ಸತತ ಎರಡು ದಿನಗಳ ಕಾಲ ಆಚರಿಸಲಾಗುತ್ತದೆ. ಯಾವ ದಿನದಂದು ಉಪವಾಸ ಮಾಡಬೇಕು ಎಂಬುದು ಅವರ ವೈಯಕ್ತಿಕ ನಂಬಿಕೆಯ ಅನುಸಾರ ಮಾಡಲಾಗುತ್ತದೆ.

ಶ್ರೀ ವೇಂಕಟೇಶ್ವರ ಸ್ತೋತ್ರಂ

ಕಮಲಾ ಕುಚ ಚೂಚುಕ ಕುಂಕುಮತೋ
ನಿಯತಾರುಣಿತಾತುಲನೀಲತನೋ |
ಕಮಲಾಯತಲೋಚನ ಲೋಕಪತೇ
ವಿಜಯೀಭವ ವೇಂಕಟಶೈಲಪತೇ || ೧ ||
ಸಚತುರ್ಮುಖಷಣ್ಮುಖಪಂಚಮುಖ
ಪ್ರಮುಖಾಖಿಲದೈವತಮೌಳಿಮಣೇ |
ಶರಣಾಗತವತ್ಸಲ ಸಾರನಿಧೇ
ಪರಿಪಾಲಯ ಮಾಂ ವೃಷಶೈಲಪತೇ || ೨ ||
ಅತಿವೇಲತಯಾ ತವ ದುರ್ವಿಷಹೈ-
-ರನುವೇಲಕೃತೈರಪರಾಧಶತೈಃ |
ಭರಿತಂ ತ್ವರಿತಂ ವೃಷಶೈಲಪತೇ
ಪರಯಾ ಕೃಪಯಾ ಪರಿಪಾಹಿ ಹರೇ || ೩ ||
ಅಧಿವೇಂಕಟಶೈಲಮುದಾರಮತೇ-
-ರ್ಜನತಾಭಿಮತಾಧಿಕದಾನರತಾತ್ |
ಪರದೇವತಯಾ ಗದಿತಾನ್ನಿಗಮೈಃ
ಕಮಲಾದಯಿತಾನ್ನ ಪರಂ ಕಲಯೇ || ೪ ||
ಕಲವೇಣುರವಾವಶಗೋಪವಧೂ-
-ಶತಕೋಟಿವೃತಾತ್ಸ್ಮರಕೋಟಿಸಮಾತ್ |
ಪ್ರತಿವಲ್ಲವಿಕಾಭಿಮತಾತ್ಸುಖದಾತ್
ವಸುದೇವಸುತಾನ್ನ ಪರಂ ಕಲಯೇ || ೫ ||

ವೈಕುಂಠ ಏಕಾದಶಿ ಆಚರಿಸುವು ಏಕೆ?

ಹಿಂದೂ ಧಾರ್ಮಿಕ ನಂಬಿಕೆಗಳ ಪ್ರಕಾರ ವೈಕುಂಠ ಏಕಾದಶಿಯಂದು ಯಾರು ಉಪವಾಸ ಮಾಡುತ್ತಾರೋ ಅವರ ಎಲ್ಲಾ ಪಾಪ ಕರ್ಮಗಳು ನಿವಾರಣೆಯಾಗುತ್ತದೆ. ಹಾಗೆ ಉಪವಾಸದ ಪೂಜೆ ಮಾಡುವುದು ವಿಷ್ಣುವಿನ ಆಶೀರ್ವಾದ ಪಡೆಯುವಲ್ಲಿ ಪ್ರಮುಖವಾಗಿದೆ. ಜೀವನದಲ್ಲಿ ಸುಖ, ಸಂಪತ್ತು, ಧನಲಾಭಕ್ಕೆ ಕಾರಣರಾಗುತ್ತಾರೆ ಎಂಬ ನಂಬಿಕೆ ಇದೆ. ಹಾಗೆ ಮರದ ನಂತರ ಅವರು ಮೋಕ್ಷ ಪಡೆಯುತ್ತಾರೆ, ವೈಕುಂಠ ವಾಸ ಅನುಭವಿಸುತ್ತಾರೆ ಎಂದು ನಂಬಲಾಗಿದೆ. ವೈಕುಂಠ ಏಕಾದಶಿಯಂದು ಉಪವಾಸ ಮಾಡುವವರಿಗೆ ಸ್ವರ್ಗದ ಹಾದಿ ಸುಲಭವಾಗಿ ಸಿಗುತ್ತೆ. ಇದರಿಂದ ನೀವು ಮರಣ ಹಾಗೂ ಜನನ ಎಂಬ ಜಂಜಾಟದಿಂದ ಮುಕ್ತಿ ಹಾಗೂ ಮೋಕ್ಷ ಹೊಂದುತ್ತೀರಿ ಎಂದು ಹೇಳಲಾಗಿದೆ.

English summary

Vaikuntha Ekadashi 2025: Know Date, Puja Vidhi And Fasting Time

Vaikuntha Ekadashi, also known as Mukkoti Ekadashi, is a significant day that falls on the Shuddha Ekadashi of Dhanurmaasa, marking the eve of the sun's transition from Dakshinayana to Uttarayana.
Story first published: Wednesday, January 8, 2025, 7:30 [IST]
X
Desktop Bottom Promotion