Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ತನ್ನ ಮಕ್ಕಳ ಭವಿಷ್ಯಕ್ಕಾಗಿ ಭಾರತದಲ್ಲಿ ಸೆಟ್ಲ್ ಆಗಬೇಕೆಂದು ಬಂದಿದ್ದಾರೆ ಅಮೆರಿಕದ ಈ ಮಹಿಳೆ!
ಓಹೋ ಮಗ ಅಥವಾ ಮಗಳು ಅಮೆರಿಕಕ್ಕೆ ಹೋದ್ರಾ ಅವರ ಲೈಫ್ ಸೆಟ್ಲ್ ಬಿಡಿ ಎಂದು ಹೇಳುತ್ತಾರೆ, ಇನ್ನು ಅಲ್ಲಿಯ ಸಿಟಿಜನ್‌ಶಿಪ್ ಪಡೆಯಲೆಂದೇ ಅಮೆರಿಕದಲ್ಲಿಯೇ ಹೆರಿಗೆಯಾಗಿ ಬಳಿಕ ಬಾಣಂತಿ ಆರೈಕೆ ಭಾರತದಲ್ಲಿ ಮಾಡಿಸಿಕೊಳ್ಳಲು ಬರುವವರು, ಸೆಲೆಬ್ರಿಟಿ ಅಲ್ಲಿಯ ಸಿಟಿಜನ್ ಕಾರ್ಡ್ ಪಡೆಯಲು ಅಮರಿಕಕ್ಕೆ ಹೋಗಿ ಹೆರಿಗೆಯಾಗುವುದು ಈ ರೀತಿ ಹಲವರನ್ನು ನೋಡುತ್ತೇವೆ, ಆದರೆ ಕ್ರಿಸ್ಟೆನ್ ಫಿಷೆರ್ ಅವರೆಲ್ಲರಿಗಿಂತ ತುಂಬಾ ಭಿನ್ನ.
ಇಲ್ಲಿಂದ ಬಹುತೇಕರು ಅಮೆರಿಕ-ಅಮೆರಿಕ ಅಂತ ಓಡುವಾಗ ಅಮೆರಿಕದಲ್ಲಿ ಹುಟ್ಟಿ ಬೆಳೆದ ಇವರು ಐ ಲವ್ ಇಂಡಿಯಾ ನನಗೆ ಇಂಡಿಯಾದಲ್ಲಿ ಸೆಟ್ಲ್ ಆಗಬೇಕೆಂದು ಭಾರತದ ನೆಲಕ್ಕೆ ಬಂದಿದ್ದಾರೆ.

ಭಾರತದಲ್ಲಿ ಕುಟುಂಬದೊಂದಿಗೆ ನೆಲೆಸಿದ್ದಾರೆ ಕ್ರಿಸ್ಟೆನ್
ಅವರ ಮಕ್ಕಳು ನಮ್ಮ ಭಾರತೀಯ ಶಾಲೆಯಲ್ಲಿ ಓದುತ್ತಿದ್ದಾರೆ, ಜನ ಮನ ಗಣ ಹೇಳುತ್ತಾರೆ, ಸ್ವಾತಂತ್ರತ್ಯ ದಿನಾಚರಣೆ ಆಚರಿಸುತ್ತಾರೆ, ಕ್ರಿಸ್ಟೆನ್ ನಮ್ಮ ಭಾರತೀಯ ಉಡುಗೆ ತೊಡುಗೆ ಬಳಸುತ್ತಾರೆ, ಹೊರಗಡೆ ಹೋಗುವಾಗ ಚೂಡಿದಾರ ಬಳಸುತ್ತಾರೆ, ಭಾರತದ ಸಂಸ್ಕೃತಿಯನ್ನು ಮೆಚ್ಚಿ ಇಲ್ಲಿಗೆ ಬಂದಿರುವ ಅವರು ಅದನ್ನು ಅನುಸರಿಸುತ್ತಿದ್ದಾರೆ.
ನಾನು ಅಮೆರಿಕವನ್ನು ಬಿಟ್ಟು ಭಾರತಕ್ಕೆ ಬರಲು ಕಾರಣವೇನು ಎಂಬುವುದನ್ನು ತುಂಬಾ ಸುಂದರವಾಗಿ ಹೀಗೆ ಹೇಳುತ್ತಾರೆ
1. India is a lesser place to live and I am worse off for being here. (ಜೀವಿಸಲು ಇರುವ ಕೆಲವೇ ಸ್ಥಳಗಳಲ್ಲಿ ಭಾರತವಿದೆ ಹಾಗಾಗಿ ಭಾರತಕ್ಕೆ ಬಂದೆ ಎಂಬರ್ಥದಲ್ಲಿ ಹೇಳುತ್ತಾರೆ)
2. America is a better place to live and I would be crazy to leave ( ಅಮೆರಿಕದ ಬಿಡುವುದು ಒಳ್ಳೆಯದಾಗಿತ್ತು, ನಾನು ಬಿಡುವ ಹುಚ್ಚುತನ ತೋರಿದೆ)
ಇವರು ಸಾಮಾಜಿಕ ತಾಣದಲ್ಲಿ ಸಕ್ರೀಯರಾಗಿದ್ದು ಅಮೆರಿಕ ಹಾಗೂ ಭಾರತ ನಡುವೆ ಹಲವು ವಿಷಯಗಳನ್ನು ಹೋಲಿಕೆ ಮಾಡಿ ವೀಡಿಯೋ ಮಾಡ್ತಾರೆ. ಅವರು ಹೇಳ್ತಾರೆ ನೀವು ಭಾರತದಲ್ಲಿದದ್ರೆ ಅಮರಿಕಕ್ಕೆ ಹೋದರೆ ನನ್ನ ಲೈಫ್ ಇನ್ನೂ ಬೆಟರ್ ಆಗುತ್ತೆ ಎಂದು ಯೋಚಿಸುತ್ತೀರಿ, ನಾನು ಕೂಡ ಅಷ್ಟೇ ಅಮೆರಿಕಕ್ಕಿಂತ ಭಾರತದಲ್ಲಿ ನನ್ನ ಬದುಕು ಚೆನ್ನಾಗಿರುತ್ತದೆ ಎಂದು ಬಂದಿದ್ದೇನೆ ಎಂದು ಹೇಳುತ್ತಾರೆ.
ಹಾಗಂತ ಅಮೆರಿಕ ಬಗ್ಗೆ ತೆಗಳುವ ಕೆಲಸವನ್ನೂ ಮಾಡಲ್ಲ 'ನನ್ನ ಬಗ್ಗೆ ತಪ್ಪು ತಿಳಿಯಬೇಡಿ, ನಾನು ಅಮೆರಿಕ ಇಷ್ಟಪಡುತ್ತೇನೆ, ಹುಟ್ಟಿ ಬೆಳೆದಿರುವುದು ಕೂಡ ಅಮೆರಿಕದಲ್ಲಿಯೇ, ಆ ಜಾಗ ಅದ್ಭುತವಾಗಿದೆ ಹಾಗಂತ ಅದು ಪರ್ಫೆಕ್ಟ್ ಸ್ಥಳವಲ್ಲ, ಅಮೆರಿಕದಂಥ ಸ್ಥಳದಲ್ಲಿಯೂ ಹಲವು ಸಮಸ್ಯೆಗಳಿವೆ ಎಂಬುವುದಾಗಿ ಹೇಳುತ್ತಾರೆ.
ನಾವು ಬೆರೆತು ಬಾಳ್ವೆ ಮಾಡುವ ರೀತಿ ಅವರಿಗಿಷ್ಟವಾಗಿ ಬಂದಿದ್ದಾರೆ
ಈಗ ನಗರ ಪ್ರದೇಶದಲ್ಲಿ ನಾನಾಯ್ತು ನನ್ನ ಪಾಡಾಯ್ತು ಎಂದು ಇರುವವರು ಇದ್ದಾರೆ, ಅದರೆ ಬಹುತೇಕರು ಆ ರೀತಿಯಿಲ್ಲ ಎಂಬುವುದೆ ಸಮಧಾನ, ಇಲ್ಲಿ ಒಂಟಿಯಾಗಿ ಇರುವುದಕ್ಕಿಂತ ಜನರೊಂದಿಗೆ ಬೆರೆಯುತ್ತಾರೆ, ಒಬ್ಬರಿಗೊಬ್ಬರು ಕಷ್ಟದ ಸಂದರ್ಭದಲ್ಲಿ ಸ್ಪಂದಿಸುತ್ತಾರೆ, ಈ ಕಾರಣಕ್ಕೆ ನನಗೆ ಭಾರತ ತುಂಬಾನೇ ಇಷ್ಟ ಎಂದು ಹೇಳಿದ್ದಾರೆ. ನಾನು ನನ್ನ ಮಕ್ಕಳ ಬದುಕು ಭಾರತದಲ್ಲಿ ಒಳಿತಾಗುತ್ತದೆ, ಅವರು ಇಲ್ಲಿ ಒಳ್ಳೆಯ ಕಟ್ಟಿಕೊಳ್ಳುತ್ತಾರೆ ಎಂಬ ಭರವಸೆ ಇದೆ, ಹೀಗಾಗಿ ಭಾರತದಲ್ಲಿ ಇರಲು ಬಯಸುವುದಾಗಿ ಹೇಳುತ್ತಾರೆ. ನಾವು ಸೆಟ್ಲ್ ಅಗುವುದಕ್ಕೆ ಅಮೆರಿಕಕ್ಕೆ ಹೋಗುತ್ತೇವೆ, ಆದರೆ ಅಲ್ಲಿಯ ಮಹಿಳೆ ಭಾರತದಲ್ಲಿದ್ದರೆ ನಮ್ಮ ಮಕ್ಕಳ ಜೀವನ ಸೆಟ್ಲ್ ಆಗುತ್ತದೆ ಎಂದು ಬಂದಿದ್ದಾರೆ, ಇದನ್ನು ನೋಡುವಾಗ ಅನಿಸುವುದು ಒಂದೇ ನಮಗೆ ಹಿತ್ತಲ ಗಿಡ ಮದ್ದಲ್ಲ ಅಲ್ವಾ?
ಅವರು ಹೇಳುತ್ತಾರೆ ನೀವು ಅಮರಿಕದಲ್ಲಿ ಇಲ್ಲಿಗಿಂತ ಹೆಚ್ಚಿನ ಹಣ ದುಡಿಯಬಹುದು, ಹಣವೇ ಎಲ್ಲಕ್ಕಿಂತ ಮುಖ್ಯ ಎನ್ನುವುದಾದರೆ ಅದರಲ್ಲಿ ಖುಷಿ ಕಾಣಬಹುದು, ಆದರೆ ಹಣ ಮಾಡುವುದಕ್ಕಿಂತ ಇನ್ನೇನೋ ಬದುಕಿನಲ್ಲಿದೆ ಎಂದು ನಂಬುತ್ತೇನೆ, ಇಲ್ಲಿ ಕುಟುಂಬದಲ್ಲಿ ಖುಷಿ ಇದೆ, ಹೊಂದಾಣಿಕೆಯಿದೆ, ನನ್ನ ಮಕ್ಕಳು ಕೂಡ ಹೀಗೆ ಖುಷಿ ಖುಷಿಯಾಗಿರಬೇಕು ಎಂಬ ಉದ್ದೇಶದಿಂದ ಭಾರತದ ದೆಹಲಿಗೆ ಬಂದು ನೆಲೆಸಿದ್ದಾರೆ.
ಇವರು ವಿವಿಧತೆಯನ್ನು ಏಕತೆಯನ್ನು ಇಷ್ಟಪಡುತ್ತಾರೆ, ಯುಎಸ್‌ನಲ್ಲಿ ಜೀವನ ದುಬಾರಿ, ಅದಕ್ಕೆ ಹೋಲಿಸಿದರೆ ಭಾರತ ತುಂಬಾ ಒಳ್ಳೆಯದು ಎಂದು ಹೇಳಿದ್ದಾರೆ.
ಚೂಡಿದಾರ, ಭಾರತೀಯ ಉಡುಗೆ ಬಳಸುತ್ತಾರೆ
ಇವರು ಅಮೆರಿಕದಿಂದ ಬಂದ ಮೇಲೆ ಚೂಡಿದಾರ ಹಾಕಿಕೊಳ್ಳುತ್ತಾರೆ, ಇಲ್ಲಿಯ ಆಚಾರ ವಿಚಾರಗಳನ್ನು ಪಾಲಿಸುತ್ತಾರೆ.
ಇಂಡಿಯಾದಲ್ಲಿ ತುಂಬಾ ಒಳ್ಳೆಯ ವಿಷಯಗಳಿವೆ, ಆದರೆ ಮಹಿಳೆಯರ ಸುರಕ್ಷತೆಗೆ ಕಾನೂನು ಮತ್ತಷ್ಟು ಕಠಿಣವಾಗಬೇಕು, ಅಲ್ಲದೆ ಭಾರತದಲ್ಲಿ ಟ್ಯಾಕ್ಸ್ ಕೂಡ ಹೆಚ್ಚಿದೆ ಎಂಬುವುದು ಕೂಡ ಹೇಳುತ್ತಾರೆ. ಅವರು ಇಲ್ಲಿ ನೆಲೆಸಲು ಕಾರಣ ನಮ್ಮ ನೆಲದ ಸಂಸ್ಕೃತಿ, ಜನರ ನಡುವಿನ ಪ್ರೀತಿ.
ಆದರೆ ಆಧುನಿಕತೆ ಹೆಚ್ಚಾದಂತೆ ನಮ್ಮ ದೇಶದಲ್ಲಿಯೂ ವಿದೇಶ ಸಂಸ್ಕೃತಿ ಹೆಚ್ಚಾಗುತ್ತಿದೆ ಎಂದನಿಸುತ್ತಿಲ್ಲವೇ? ಪ್ಲ್ಯಾಟ್‌ಗಳಲ್ಲಿ ಇದ್ದರೆ ಪಕ್ಕದ ಫ್ಲ್ಯಾಟ್‌ನವರ ಪರಿಚಯ ಇರಲ್ಲ, ಇವರು ಅಮರಿಕದಲ್ಲಿ ಇಂಥ ಜೀವನಕ್ಕೆ ಬೇಸತ್ತು ಭಾರತಕ್ಕೆ ಬಂದಿದ್ದಾರೆ.



Click it and Unblock the Notifications











