Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
UPSCಯಲ್ಲಿ 2ನೇ ರ‍್ಯಾಂಕ್ ಗಳಿಸಿದ ಸಾಧಕನ ಡ್ಯಾನ್ಸ್ ವೀಡಿಯೋ ವೈರಲ್: ಇವರ ಬದುಕಿನಲ್ಲಿ ನಡೆದಿದೆ ಹಲವು ದುರಂತಗಳು
2023ರ ಯುಪಿಎಸ್‌ಸಿ ಫಲಿತಾಂಶ ಇತ್ತೀಚೆಗಷ್ಟೇ ಬಂದಿದೆ, ಅದರಲ್ಲಿ ಆಲ್ ಇಂಡಿಯಾ ರ‍್ಯಾಂಕ್‌ನಲ್ಲಿ 2ನೇ ರ‍್ಯಾಂಕ್ ಗಳಿಸಿ ದೇಶದ ಗಮನ ಸೆಳೆದವರು ಅನಿಮೇಶ್ ಪ್ರಧಾನ್. ಅವರು ರಿಲ್ಯಾಕ್ಸ್ ಮೂಡ್‌ನಲ್ಲಿ ಡ್ಯಾನ್ಸ್ ಮಾಡುತ್ತಿರುವ ವೀಡಿಯೋ ವೈರಲ್ ಆಗಿದೆ.
ಆ ವೀಡಿಯೋ ನೋಡಿದಾಗ ಯುಪಿಎಸ್‌ಸಿಗೆ ಪ್ರಿಪೇರ್ ಆಗುವಾಗ ತುಂಬಾನೇ ಗಂಭೀರವಾಗಿ ಓದುತ್ತಿರಲಿಲ್ಲ, ಓದಿನ ಜೊತೆಗೆ ಸ್ನೇಹಿತರೊಂದಿಗೆ ಮನೆಯವರೊಂದಿಗೆ ತುಂಬಾನೇ ಖುಷಿ-ಖುಷಿಯಾಗಿ ಇರುತ್ತಿದ್ದರು ಎಂಬುವುದು ತಿಳಿಯುತ್ತದೆ. ಅವರ ನೃತ್ಯದ ವೀಡಿಯೋ ವೈರಲ್ ಆಗುತ್ತಿದೆ.

ಶಾರ್ಟ್ಸ್ ಧರಿಸಿ ಖುಷಿಯಿಂದ ಕುಣಿಯುತ್ತಿರುವ ವೀಡಿಯೋ ಅದಾಗಿದೆ, ಈ ವೀಡಿಯೋವನ್ನು ಅವರೇ Animesh Pradhan IAS ಎಂಬ ಅಕೌಂಟ್‌ನ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದಾರೆ. Some People are making my dance video viral on social media. Some Enjoyment 🤩 ಎಂದು ಬರೆದು ಈ ವೀಡಿಯೋ ಪೋಸ್ಟ್ ಮಾಡಿದ್ದಾರೆ.
On Instagram ... #AnimeshPradhanhttps://t.co/nrj3iFA4m6
— Animesh Pradhan IAS (@AnimeshPradhan_) April 23, 2024
ಯುಪಿಎಸ್‌ಸಿಯಲ್ಲಿ 2ನೇ ಸ್ಥಾನ ಗಳಿಸುವ ಮೂಲಕ ಸಾಧನೆ
ಯುಪಿಎಸ್‌ಸಿ ಪರೀಕ್ಷೆಯ ಪಾಸಾಗಬೇಕು ಎಂಬುವುದು ಬಹುತೇಕ ಕನಸಾಗಿರುತ್ತದೆ, ಅದರೆ ಅದನ್ನು ಪಾಸು ಮಾಡುವುದು ಅಷ್ಟು ಸುಲಭ. ಅಷ್ಟೊಂದು ಪ್ರಯತ್ನದಿಂದ ಮಾತ್ರ ಈ ಪರೀಕ್ಷೆ ಪಾಸಾಗಲು ಸಾಧ್ಯ. ಯುಪಿಎಸ್‌ಸಿಯಲ್ಲಿ ಪಾಸಾದರೆ ನಂತರ ಐಎಎಸ್, ಐಪಿಎಸ್‌ನಂಥ ದೊಡ್ಡ ಹುದ್ದೆ ಸಿಗುವುದು ಹಾಗಾಗಿ ಈ ಪರೀಕ್ಷೆಯಲ್ಲಿ ರ‍್ಯಾಂಕ್ ಗಳಿಸುವುದು ಲಕ್ಷಾಂತರ ವಿದ್ಯಾರ್ಥಿಗಳ ಗುರಿಯಾಗಿರುತ್ತದೆ. ಅನಿಮೇಶ್ ಪ್ರಧಾನ್ 2ನೇ ರ‍್ಯಾಂಕ್ ಗಳಿಸುವ ಮೂಲಕ ಅವರ ರಾಜ್ಯವಾದ ಒಡಿಸ್ಸಾ ಹೆಮ್ಮೆ ಪಡುವಂತೆ ಮಾಡಿದ್ದಾರೆ.
ಅನಿಮೇಶ್ ಪ್ರಧಾನ್ ಐಎಎಸ್ ಆದನ್ನು ನೋಡುವ ಭಾಗ್ಯ ಅವರ ಪೋಷಕರಿಗೆ ಇರಲಿಲ್ಲ
ಅನಿಮೇಶ್ ಪ್ರಧಾನ್ ಅವರ ನಿಜವಾಗಲೂ ತುಂಬಾನೇ ಗ್ರೇಟ್, ಅಪ್ಪ-ಅಮ್ಮ ಇಲ್ಲದ ಕೊರಗಿನ ನಡುವೆ ಕೂಡ ಅವರಿಗಾಗಿ ಐಎಎಸ್ ಬರೆದಿದ್ದಾರೆ. ಅವರ ತಾಯಿ ಕಳೆದ ವರ್ಷ ಕ್ಯಾನ್ಸರ್‌ನಿಂದ ತೀರಿಕೊಂಡರು, ತಂದೆ ಇವರು 11ನೇ ತರಗತಿಯಲ್ಲಿ ಇದ್ದಾಗ ಹಾರ್ಟ್ ಅಟ್ಯಾಕ್‌ನಿಂದಾಗಿ ತೀರಿ ಹೋದರು. ಅವರ ಪೋಷಕರಿಗೆ ಮಗನನ್ನು ಐಎಎಸ್ ಆಫೀಸರ್ ಆಗಿ ನೋಡುವ ಬಹುದೊಡ್ಡ ಕನಸಿತ್ತು, ಆದರೆ ಮಗ 2ನೇ ರ‍್ಯಾಂಕ್ ಗಳಿಸಿದರೂ ಅದನ್ನು ಸಮಭ್ರಮಿಸಲು ಅವರ ಪೋಷಕರು ಜೊತೆಗಿಲ್ಲ, ಆದರೆ ಅವರು ಎಲ್ಲೇ ಇದ್ದರು ಈಗ ನನ್ನ ನೋಡಿ ಖುಷಿ ಪಟ್ಟಿರುತ್ತಾರೆ ಎಂದು ಹೇಳುತ್ತಾರೆ.
ಹಳ್ಳಿಯಿಂದ ಬಂದ ಪ್ರತಿಭೆ
ಇವರು ಒಡಿಸ್ಸಾದ ತಲ್ಚಾರ್ ಎಂಬ ಚಿಕ್ಕ ಹಳ್ಳಿಯವರು, ವಯಸ್ಸು 24 ವರ್ಷ, ಓದಿನಲ್ಲಿ ತುಂಬಾನೇ ಚುರುಕಾಗಿದ್ದ ಇವರು 24ನೇ ವಯಸ್ಸಿನಲ್ಲಿಯೇ ಐಎಎಸ್ ಆಫೀಸರ್ ಆಗಿದ್ದಾರೆ. ಅವರ ತಂದೆ ಲೆಕ್ಚರರ್ ಆಗಿದ್ದರು, ತಾಯಿ ಟೀಚರ್ ಆಗಿದ್ದರು, ತಂದೆ ಸಾವಿನ ನಂತರ ತಾಯಿ ಅನಿಮೇಶ್ ಹಾಗೂ ಸಹೋದರಿಯನ್ನು ಸಾಕಲು ಸ್ಕೂಲ್ ಟೀಚರ್ ಜೊತೆಗೆ ಒಂದು ಕಡೆ ಕ್ಲರ್ಕ್ ಆಗಿಯೂ ಕೆಲಸ ಮಾಡುತ್ತಿದ್ದರು, ತಾವು ಎಷ್ಟೇ ಕಷ್ಟಪಟ್ಟರೂ ಮಕ್ಕಳಿಗೆ ಒಳ್ಳೆಯ ಶಿಕ್ಷಣ ಸಿಗಬೇಕು, ಅವರು ಒಂದು ಒಳ್ಳೆಯ ಹಂತಕ್ಕೆ ಬೆಳೆಯಬೇಕೆಂಬುವವುದೇ ಅವರ ಕನಸಾಗಿತ್ತು.
ಅನಿಮೇಶ್ ತಂದೆ-ತಾಯಿಗೆ ಮಗನನ್ನು ಐಎಎಸ್ ಆಫೀಸರ್ ಆಗಿ ನೋಡುವ ಕನಸಿತ್ತು, ಆದರೆ ಅವರು ಇಂದು ಇಲ್ಲ, ಆದರೆ ತಂದೆ-ತಾಯಿಯ ಆಸೆಯನ್ನು ಪೂರೈಸುವ ಮೂಲಕ ಹೆಮ್ಮೆಯ ಮಗ ಆಗಿದ್ದಾರೆ. ಈಗ ಅವರ ತಂದೆ-ತಾಯಿ ದೂರದಲ್ಲಿಯೇ ಇದ್ದು ಸಂತೋಷ ಪಟ್ಟಿರುತ್ತಾರೆ.
ಸವಾಲುಗಳು ನೂರೆಂಟು ಇರುತ್ತದೆ, ಆದರೆ ಗುರಿಯತ್ತ ಗಮನವಿಟ್ಟರೆ ಗುರಿ ಮುಟ್ಟಲು ಸಾಧ್ಯ ಎಂಬುವುದಕ್ಕೆ ಸ್ಪೂರ್ತಿಯಾಗಿದ್ದಾರೆ.



Click it and Unblock the Notifications