Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಕರ್ನಾಟದ ಈ ಸ್ವಾತಂತ್ರ್ಯ ಹೋರಾಟಗಾರರ ಬಗ್ಗೆ ಈ ಪೀಳಿಗೆಗೆ ತಿಳಿಸಲು ಮರೆಯದಿರಿ
ಸ್ವಾತಂತ್ರ್ಯ ಹೋರಾಟದಲ್ಲಿ ನಮ್ಮ ಈಗೀನ ಮಕ್ಕಳಿಗೆ ಕೆಲವೇ ಕೆಲವು ಹೆಸರಷ್ಟೇ ಗೊತ್ತಿರುತ್ತದೆ.ನಮ್ಮ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರರ ಹೆಸರು ಹೇಳಿ ಎಂದರೆ ಕಿತ್ತೂರು ರಾಣಿ ಚೆನ್ನಮ್ಮ ಹೇಳಿ ನಂತರದ ಹೆಸರುಗಳು ಸಿಗದೆ ಸುಮ್ಮನಾಗುತ್ತಾರೆ.
ನಮ್ಮ ಕರ್ನಾಟಕದಲ್ಲಿ ಹಲವಾರು ವೀರರು, ವೀರ ವನತೆಯರು ಸ್ವಾತಂತ್ರ್ಯ ಹೋರಾಟ ಮಾಡಿದ್ದಾರೆ. ಕೆಲವರಂತೂ ಬ್ರಿಟಿಷರ ಪಾಲಿಗೆ ಸಿಂಹ ಸ್ವಪ್ನವಾಗಿದ್ದರು, ಆದರೆ ಇಂಥವರ ಬಗ್ಗೆ ಪಠ್ಯ ಪುಸ್ತಕದಲ್ಲಿ ಹೆಚ್ಚಿನ ಉಲ್ಲೇಖ ಇರಲ್ಲ, ಹಾಗಾಗಿ ಮಕ್ಕಳಿಗೆ ತಿಳಿಯುವುದಿಲ್ಲ.

ಸ್ವಾತಂತ್ರ್ಯ ಹೋರಾಟ ಮಾಡಿರುವ ವೀರ ಕನ್ನಡಿಗರ ಪರಿಚಯ ನಮ್ಮ ಮಕ್ಕಳಿಗೆ ಮಾಡಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ, ಸ್ವಾತಂತ್ರ್ಯ ಹೋರಾಟದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಕನ್ನಡಿಗರು ಭಾಗವಹಿಸಿದ್ದಾರೆ, ಅವರಲ್ಲಿ ಪ್ರಮುಖ ಹೆಸರುಗಳೆಂದರೆ
ಕಿತ್ತೂರು ರಾಣಿ ಚೆನ್ನಮ್ಮ
ಆಲೂರು ವೆಂಕಟ್‌ರಾವ್
ಬೆಳವಾಡಿ ಮಲ್ಲಮ್ಮ
ಸಂಗೊಳ್ಳಿ ರಾಯಣ್ಣ
ರಾಣಿ ಅಬ್ಬಕ್ಕ ದೇವಿ
ಕೆಳದಿ ಚೆನ್ನಮ್ಮ
ನಾಗಮ್ಮ ಪಾಟೇಲ್
ಹೆಚ್ ಎಸ್ ದೊರೆಸ್ವಾಮಿ
ಕಮಲದೇವಿ ಚಟೋಪದ್ಯೇಯ
ಎಸ್ ನಿಜಲಿಂಗಲಪ್ಪ
ತೇಕುರ್ ಸುಬ್ರಮಣ್ಯಂ
ಜಿ. ಆರ್ ಪಾಂಡೇಶ್ವರ್
ನಾರಾಯಣ ಶ್ರೀನಿವಾಸ ರಾಜಪುರೋಹಿತ್
ನಿಟ್ಟೂರ್ ಶ್ರೀನಿವಾಸ್ ರಾವ್
ಆರ್ ಎಸ್ ಹುಕ್ಕೇರಿಕ್ಕರ್
ಎನ್ ಎಸ್ ಹಾರ್ದಿಕರ್
ಟಿಪ್ಪು ಸುಲ್ತಾನ್
ಕಾರ್ನಾಡ್ ಸದಾಶಿವ ರಾವ್
ಕೆ ಜಿ ಗೋಖಲೆ
ವಿನ್ ಎನ್ ಒ ಕೀ
ಗಂಡುಗಲಿ ಕುಮಾರರಾಮ
ಕೆಳದಿಯ ಶಿವಪ್ಪ
ಉಮಾಬಾಯಿ ಕುಂದಾಪುರ
ಕಿತ್ತೂರು ರಾಣಿ ಚೆನ್ನಮ್ಮ: ಚಿಕ್ಕ ಪ್ರಾಯದಲ್ಲಿಯೇ ಕುದುರೆ ಸವಾರಿ, ಕತ್ತಿ ವರಸೆ, ಬಿಲ್ಲುಗಾರಿಕೆ ಕಲಿತಿದ್ದ ಕಿತ್ತೂರು ರಾಣಿ ಚೆನ್ನಮ್ಮ ಬ್ರಿಟಿಷರಿಗೆ ಸಿಂಹ ಸ್ವಪ್ನವಾಗಿದ್ದರು. ಬ್ರಿಟಿಷರು ಇವರನ್ನು ಬಂಧಿಸಿದಾಗ ವಿಷ ಇವರ ದೇಹ ಸೇರಿ ಸಾವನ್ನಪುತ್ತಾರೆ, ಇವರೇ ವಿಷ ತೆಗೆದುಕೊಂಡರೋ ಅಥವಾ ಬ್ರಿಟಿಷರು ವಿಷಹಾಕಿ ಸಾಯಿಸಿದರೋ ಇಂದಿಗೂ ನಿಗೂಢ.
ಆಲೂರು ವೆಂಕಟ್‌ರಾವ್: ಸಾಮಾಜಿಕ ಚಟುವಟಿಕೆಯಲ್ಲಿ ಗುರುತಿಸಿಕೊಂಡಿದ್ದರು, ಇವರು ಗಾಂಧೀಜಿಯವರು ಕರೆಒಟ್ಟ ಸತ್ಯಾಗ್ರಹ ಚಳುವಳಿಯಲ್ಲಿ ಭಾಗವಹಿಸಿದ್ದರು. ಕರ್ನಾಟಕದ ಏಕೀಕರಣ, ಕರ್ನಾಟಕ ಇತಿಹಾಸ ಮಂಡಲದ ಸ್ಥಾಪನೆ, ಕರ್ನಾಟಕ ವಿಶ್ವವಿದ್ಯಾನಿಲಯದ ಕಲ್ಪನೆ, ಕನ್ನಡ ಸಾಹಿತ್ಯ ಪರಿಷತ್ತಿನ ಸ್ಥಾಪನೆ, ಜಯನಗರ ಮಹೋತ್ಸವ, ನಾಡಹಬ್ಬದ ಯೋಜನೆ, ಕರ್ನಾಟಕ ವಿದ್ಯಾವರ್ಧಕ ಸಂಘ ಸ್ಥಾಪನೆ ಇವುಗಳಲ್ಲಿ ಇವರ ಕೊಡುಗೆ ತುಂಬಾನೇ ಇದೆ.
ಬೆಳವಾಡಿ ಮಲ್ಲಮ್ಮ
ಆ ಕಾಲದಲ್ಲಿಯೇ ಮಹಿಳಾ ಸೈನ್ಯ ಕಟ್ಟಿದವರು, ವಿಶ್ವದಲ್ಲಿ ಪ್ರಪ್ರಥಮ ಮಹಿಳಾ ಸೈನ್ಯ ಕಟ್ಟಿದ ಕೀರ್ತಿ ಇವರಿಗೆ ಸಲ್ಲುತ್ತದೆ. ಶಿವಾಜಿಯ ಸೈನ್ಯವೇ ಈ ಮಲ್ಲನ ಎದುರು ಸೋತು ಶರಣಾಗುತ್ತದೆ ಎಂದು ಇತಿಹಾಸ ಹೇಳುತ್ತದೆ. ಹೀಗಾಗಿ ಬೆಳವಾಡಿಯ ಸಂಸ್ಥಾನಗಳಲ್ಲಿರುವ ವೀರಗಲ್ಲುಗಳಲ್ಲಿ ಮಲ್ಲಮನ ಹೆಸರಿದೆ.
ಸಂಗೊಳ್ಳಿ ರಾಯಣ್ಣ: ಕಿತ್ತೂರು ರಾಣಿ ಚೆನ್ನಮ್ಮರ ಬಲಗೈ ಬಂಟ, ತನ್ನ ಕೊನೆಯ ಉಸಿರು ಇರುವವರೆಗೂ ಈಸ್ಟ್ ಇಂಡಿಯಾ ಕಂಪನಿ ವಿರುದ್ಧ ಹೋರಾಡಿದ ವೀರ.
ರಾಣಿ ಅಬ್ಬಕ್ಕ ದೇವಿ: ಪೋರ್ಚುಗೀಸರ ವಿರುದ್ಧ ಹೋರಾಟ ಮಾಡಿದ ವೀರ ವನಿತೆ.
ಕೆಳದಿ ಚೆನ್ನಮ್ಮ: ಭಾರತವನ್ನು ಬ್ರಿಟಿಷರು ಮಶಾತ್ರ ಆಳ್ವಿಕೆ ಮಾಡಲು ಬಂದಿಲ್ಲ, ಮೊಗಲರೂ ಬಂದಿದ್ದರು, ಔರಂಗ ಜೇಬನ ಪಡೆಯನ್ನು ಸಮರ್ಥವಾಗಿ ಎದುರಿಸಿದ ರಾಣಿ, ಈಕೆ ಯ ಸೇನೆಯ ಎದುರು ಜೌರಂಗಜೇಬನ ಮಗನ ಸೇನೆ ಸೋತು ಪಲಾಯನವಾಯಿತು.
ನಾಗಮ್ಮ ಪಾಟೇಲ್: ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ್ದರು. ಮಹತ್ಮಾ ಗಾಂಧಿ ಕರೆಗೆ ಓಗೊಟ್ಟು ತಮ್ಮ ಪತಿ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದರು. ಈ ಕಾರಣಕ್ಕೆ ಬ್ರಿಟಿಷರು ಇವರನ್ನು ಬಂಧಿಸಿದ್ದರು ಕೂಡ. ಕಸ್ತೂರಬಾ ನಿಧಿ ಸಂಗ್ರಹ ಮಾಡುವಾಗ ಸ್ವಂತ ಉಂಗುರ ದಾನ ಮಾಡುವ ಮೂಲಕ ಇತರರಿಗೆ ಪ್ರೇರಣೆಯಾಗಿದ್ದರು. ಕರ್ನಾಟಕದ ಹರಿಜನ ಮಕ್ಕಳ ಕಲ್ಯಾಣಕ್ಕಾಗಿ ತುಂಬಾನೇ ಶ್ರಮಿಸಿದ್ದಾರೆ.
ಕಮಲಾದೇವಿ ಚಟ್ಟೋಪಾಧ್ಯಾಯ
ಎರನೇ ಮಹಾ ಯುದ್ಧದ ಸಮಯದಲ್ಲಿ ವಿಶ್ವದೆಲ್ಲಡೆ ಸುತ್ತು ಹಾಕುತ್ತಾ ಭಾರತದ ಸ್ವಾತಂತ್ರ್ಯಕ್ಕಾಗಿ ಜಾಗತಿಕ ಸದಭಿಪ್ರಾಯ ಮೂಡಿಸಲು ಪ್ರಯತ್ನಪಟ್ಟರು. ನಮಗೆ ಸ್ವಾತಂತ್ರ್ಯ ಸಿಕ್ಕ ಬಳಿಕ ಭಾರತ-ಪಾಕಿಸ್ತಾನ ಎಂದು ದೇಶ ವಿಭಜನೆಯಾದಾಗ 'ಕಮಲಾದೇವಿ,' 'ಭಾರತೀಯ ಸಹಕಾರಿ ಒಕ್ಕೂಟ'ವನ್ನು ಸ್ಥಾಪಿಸಿ, 'ನಿರಾಶ್ರಿತರ ಪುನರ್ವಸತಿ'ಗೆ ಪ್ರಯತ್ನಿಸಿದರು.
ಎಸ್.ನಿಜಲಿಂಗಪ್ಪ
ಕರ್ನಾಟಕದ ಏಕೀಕರಣಕ್ಕೆ ಹೋರಾಡಿದ ವ್ಯಕ್ತಿಗಲ್ಲಿ ಪ್ರಮುಖರು. ಇವರು ಒಟ್ಟು ನಾಲ್ಕು ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಆಡಳಿತ ಮಾಡಿದ್ದಾರೆ.
ತೇಕುರ್ ಸುಬ್ರಮಣ್ಯಂ: ಇವರು ಬಳ್ಳಾರಿಯವರು,ಸ್ವಾತಂತ್ರ್ಯ ಹೋರಾಟದಲ್ಲಿ ಭಾಗಿಯಾದಾಗ ಹಲವು ಬಾರಿ ಬ್ರಿಟಿಷರು ಬಂಧಿಸಿದರೂ ಎದೆಗುಂದದೆ ಹೋರಾಟ ಮಾಡಿದವರು.
ಜಿ. ಆರ್ ಪಾಂಡೇಶ್ವರ್: ಇವರೊಬ್ಬರು ಪತ್ರಕರ್ತ, ಕವಿಯೂ ಹೌದು, ಇವರು ಸ್ವಾತಂತ್ರ್ಯ ಹೋರಾಟದಲ್ಲಿ ಅನೇಕ ಸಾಹಸಗಳನ್ನೂ ಮಾಡಿದ್ದಾರೆ. ಕರ್ನಾಟಕದ ಪ್ರಸಿದ್ಧ ಹೋರಾಟಗಾರರಲ್ಲಿ ಇವರೂ ಒಬ್ಬರು.
ನಾರಾಯಣ್ ಶ್ರೀನಿವಾಸ ರಾಜಪುರೋಹಿತ್: ಇವರು ಕೂಡ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದರು, ಈ ಕಾರಣಕ್ಕೆ ಬ್ರಿಟಿಷರು ಇವರನ್ನು ಕೆಲಸದಿಂದ ಕೂಡ ತೆಗೆದು ಹಾಕಿದ್ದರು.
ನಿಟ್ಟೂರ್ ಶ್ರೀನಿವಾಸ್ ರಾವ್: ಇವರು ಗಾಂಧಿ ತತ್ತ್ವಗಳನ್ನು ಪಾಲಿಸುತ್ತಿದ್ದರು, ಇವರು ಭಾರತದ ಸ್ವಾತಂತ್ರ್ಯ ಚಳುವಳಿಯಲ್ಲಿ ಭಾಗವಹಿಸಿದ್ದರು.
ಉಮಾಬಾಯಿ ಕುಂದಾಪುರ: ಇವರು ಕೂಡ ಕರ್ನಾಟಕದ ಸ್ವಾತಂತ್ರ್ಯ ಹೋರಾಟಗಾರ್ತಿ. ಬಾಲಗಂಗಾಧರ ತಿಲಕರು ಮೃತರಾದಾಗ ಅವರ
ಮೃತದೇಹದ ಭವ್ಯ ಮೆರವಣಿಗೆಯನ್ನು ನೋಡಿದ ಉಮಾಬಾಯಿಯವರಿಗೆ ತಾನು ಕೂಡಸ್ವಾತಂತ್ರ್ಯ ಹೋರಾಟಗಾರ್ತಿಯಾಗಲು ಪ್ರೇರಣೆ ಸಿಗುತ್ತದೆ. ದೇಶಕ್ಕಾಗಿ ಹೋರಾಟದಲ್ಲಿ ಭಾಗವಹಿಸುತ್ತಾರೆ.



Click it and Unblock the Notifications