Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಯುಗಾದಿ ರಾಶಿ ಭವಿಷ್ಯ 2023 : ಮೀನ ರಾಶಿಯವರಿಗೆ ಈ ವರ್ಷ ಶುಭವೋ? ಅಶುಭವೋ?
ಯುಗಾದಿಯೆಂದರೆ ಪ್ರತಿಯೊಬ್ಬರಿಗೂ ಹೊಸ ವರುಷದ ಖುಷಿ. ಈ ವರ್ಷ ಏನನ್ನಾದರೂ ಹೊಸ ಕಾರ್ಯಗಳನ್ನು ಶುರು ಮಾಡಬೇಕು. ಅದರಲ್ಲಿ ಯಶಸ್ಸು ಸಾಧಿಸಬೇಕೆಂಬ ಆಸೆ ಎಲ್ಲರಿಗೂ ಇರುತ್ತದೆ. ಆದರೆ ಎಲ್ಲವೂ ನಾವಂದುಕೊಂಡಂತೆ ಆಗೋದಿಲ್ಲ.
ಹೌದು, ಗ್ರಹಗಳ ಸಂಚಾರದ ಮೇಲೆ ನಮ್ಮ ಎಲ್ಲಾ ಕಷ್ಟ-ಸುಖಗಳು ನಿಂತಿರೋದು. ಹಾಗಾದರೆ ಈ ಯುಗಾದಿಯ ನಂತರ ಮೀನ ರಾಶಿಯ ರಾಶಿಫಲ ಹೇಗಿದೆ ಅನ್ನೋದನ್ನ ನೋಡೋಣ.

ಮೀನ ರಾಶಿಯಲ್ಲಿ ಗ್ರಹಗಳ ಸಂಚಾರ
ಇಷ್ಟು ದಿನ ಮೀನ ರಾಶಿಯಲ್ಲಿ ಲಾಭಸ್ಥಾನದಲ್ಲಿ ಶನಿ ಗ್ರಹವಿತ್ತು. ಜನವರಿ 17ನೇ ತಾರೀಕಿಗೆ ಶನಿಯು ಮೀನರಾಶಿಯ 12ನೇ ಮನೆಗೆ ಪ್ರವೇಶ ಮಾಡಿ ಆಗಿದೆ. ಸದ್ಯ ಮೀನ ರಾಶಿಯಲ್ಲಿ ಗುರು ಸ್ಥಿತನಾಗಿದ್ದು, ಏಪ್ರಿಲ್ 22 ಕ್ಕೆ ಗುರುವು ಮೇಷ ರಾಶಿಗೆ ಪ್ರವೇಶ ಮಾಡುತ್ತಾನೆ. ಹಾಗಂತ ಭಯ ಪಡೋ ಅವಶ್ಯಕತೆಯಿಲ್ಲ. ಗುರು ನಿಮ್ಮನ್ನು ಕಾಪಾಡುತ್ತಾನೆ. ಯಾಕಂದ್ರೆ ಗುರು ಮುಂದಿನ ಸ್ಥಾನದಲ್ಲಿದ್ದು ಶನಿ ಹಿಂದಿನ ಸ್ಥಾನದಲ್ಲಿದ್ದಾನೆ. ಗುರು ಮುಂದೆ ಇರುವುದರಿಂದ ಯಾವುದೇ ತೊಂದರೆ ಇಲ್ಲ ಆತ ಸಂಕಷ್ಟದ ಸಮಯದಲ್ಲಿ ನಿಮಗೆ ದಾರಿ ತೋರಿಸುತ್ತಾನೆ.
ಉದ್ಯೋಗದಲ್ಲಿ ಕಿರಿ ಕಿರಿ
ಶನಿ ಸಾಡೆಸಾತ್ ಶುರುವಾಗಿರೋದ್ರಿಂದ ನಿಮ್ಮ ಕೆಲಸ ಕಾರ್ಯಗಳೆಲ್ಲಾ ತುಂಬಾ ನಿಧಾನವಾಗುತ್ತದೆ. ಕೊಟ್ಟ ಕೆಲಸವನ್ನು ಸರಿಯಾಗಿ ಮಾಡೋದಿಕ್ಕೆ ಸಾಧ್ಯವಾಗೋದಿಲ್ಲ. ಅಥವಾ ಕೆಲಸದಲ್ಲಿ ಆಸಕ್ತಿ ಇರೋದಿಲ್ಲ. ಹೀಗೆ ಅನೇಕ ಸಮಸ್ಯೆ ಎದುರಾಗುತ್ತದೆ. ಸೇವಾ ಸ್ಥಾನವನ್ನು ಶನಿ ನೋಡುತ್ತಿರುವುದರಿಂದ ಕೆಲಸದಲ್ಲಿ ಒತ್ತಡ ಹೆಚ್ಚಾಗುತ್ತದೆ. ಆದರೆ ಹಾಗಂತ ಸುಮ್ಮನಿರಬೇಡಿ. ಪರಿಹಾರಗಳನ್ನು ಕಂಡುಕೊಳ್ಳಿ.
ಹಣಕಾಸಿನ ವಿಚಾರದಲ್ಲಿ ಜಾಗರೂಕರಾಗಿರಿ
ಈ ವರ್ಷದಲ್ಲಿ ನೀವು ಹಣಕಾಸಿನ ವಿಚಾರದಲ್ಲಿ ತೆಗೆದುಕೊಳ್ಳುವ ನಿರ್ಧಾರಗಳು ಮುಂದಿನ ದಿನದಲ್ಲಿ ಸಮಸ್ಯೆ ಎದುರಾಗಲಿದೆ. ಹಾಗಾಗಿ ಯಾರಿಗಾದರೂ ಸಾಲವಾಗಿ ದುಡ್ಡು ಕೊಡುವಾಗ ಜಾಗರೂಕರಾಗಿರಿ. ಇನ್ನೂ ಆದಾಯ ಎಷ್ಟಿದೆಯೋ ಅಷ್ಟೇ ಖರ್ಚು ಕೂಡ ಇರುತ್ತದೆ.
ಸಾಲದ ಭಾದೆ ನಿವಾರಣೆ
ಹಣಕಾಸಿನ ಸಮಸ್ಯೆ, ಸಾಲದ ಭಾದೆಯಿಂದ ಬಳಲುತ್ತಿರುವವರಿಗೆ ಈ ಸಮಸ್ಯೆಯಿಂದ ಮುಕ್ತಿ ಸಿಗಲಿದೆ. ನಿಮ್ಮ ಆರ್ಥಿಕ ಪರಿಸ್ಥಿತಿ ಸುಧಾರಣೆ ಆಗಲಿದೆ. ಅಕ್ಟೋಬರ್ ನಂತರ ಹಣಕಾಸಿನಲ್ಲಿ ಚೆನ್ನಾಗಿ ಅಭಿವೃದ್ಧಿಯಾಗುತ್ತದೆ.
ಪರಿಶ್ರಮಕ್ಕೆ ತಕ್ಕ ಫಲ
ಭಾಗ್ಯಸ್ಥಾನಕ್ಕೆ ಶನಿ ದೃಷ್ಟಿ ಇರುವುದರಿಂದ ಅದೃಷ್ಟ ಕೆಲಸ ಮಾಡೋದಿಲ್ಲ. ಸ್ವಂತ ಉದ್ಯೋಗ ಮಾಡುತ್ತಿರುವವರಿಗೆ ಮಾಡಿದ ಕೆಲಸಕಷ್ಟೇ ಫಲ ಸಿಗುತ್ತದೆ.
ಗುರುವಿನ ಅನುಗ್ರಹವಿದೆ
ಶನಿ ಕಷ್ಟಗಳನ್ನು ಕೊಟ್ಟರು ಕೂಡ ಗುರು ನಿಮ್ಮ ಕಷ್ಟಗಳನ್ನೆಲ್ಲಾ ಮಂಜಿನಂತೆ ಕರಗಿಸುತ್ತಾನೆ. ಮೀನ ರಾಶಿಗೆ ಸಾಡೆಸಾತ್ ಶುರುವಾಯಿತು ಅಂತ ಚಿಂತಿಸಬೇಡಿ. ಧನ ಸ್ಥಾನಕ್ಕೆ ಗುರು ಬಂದಿರೋದ್ರಿಂದ ತುಂಬಾನೇ ಶುಭದಾಯಕವಾಗಲಿದೆ.
ಕುಟುಂಬದಲ್ಲಿ ನಿಮ್ಮದಿ ನೆಲೆಸುತ್ತದೆ
ಕುಟುಂಬದಲ್ಲಿ ಸಾಕಷ್ಟು ಮನಸ್ಥಾಪಗಳಿದ್ದವು. ಕಲಹ, ಬಿನ್ನಾಭಿಪ್ರಾಯಗಳೇ ಹೆಚ್ಚಾಗಿದ್ದವು. ಗುರು ಮೇಷರಾಶಿಗೆ ಬಂದ ನಂತರ ಈ ಸಮಸ್ಯೆಗಳನ್ನು ನಿವಾರಿಸುತ್ತಾನೆ. ಬಿನ್ನಾಭಿಪ್ರಾಯವನ್ನು ಸರಿ ಮಾಡಿ ಕುಟುಂಬದಲ್ಲಿ ನೆಮ್ಮದಿ ನೆಲೆಸುವಂತೆ ಮಾಡುತ್ತಾನೆ.
ಸರ್ಕಾರಿ ಉದ್ಯೋಗಸ್ಥರಿಗೆ ಸಮಸ್ಯೆಯಿಲ್ಲ
ಸರ್ಕಾರಿ ಉದ್ಯೋಗದಲ್ಲಿರುವವರಿಗೆ ಕೆಲಸ ಕಾರ್ಯದಲ್ಲಿ ಯಾವುದೇ ರೀತಿ ತೊಂದರೆ ಇರುವುದಿಲ್ಲ. ಆದ್ರೆ ದುಡಿಮೆ ಹೆಚ್ಚಾಗಿರುತ್ತದೆ. ಅದು ಬಿಟ್ಟರೆ ಬೇರ್ಯಾವುದೇ ಸಮಸ್ಯೆ ಇಲ್ಲ.
ಶುಭ ಕಾರ್ಯ ನಡೆಯುತ್ತದೆ
ಮನೆಯಲ್ಲಿ ಶುಭ ಕಾರ್ಯಗಳು ನಡೆಯುತ್ತದೆ. ಮದುವೆಯ ವಯಸ್ಸಿಗೆ ಬಂದಿರುವವರಿಗೆ ಕಂಕಣ ಭಾಗ್ಯವಿದೆ. ಮನೆಯಲ್ಲಿ ಪೂಜೆ-ಪುನಸ್ಕಾರ ನಡೆಯುತ್ತದೆ.
ವಿದ್ಯಾರ್ಥಿಗಳು, ಬರಹಗಾರರಿಗೆ ಉತ್ತಮ ಕಾಲ
ಎರಡನೇ ಮನೆಯಲ್ಲಿ ಗುರು ಇರೋದ್ರಿಂದ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಿಲ್ಲ. ಬರಹಗಾರರಿಗೆ ಉತ್ತಮ ಕಾಲವಿದು.
ಮಾತಿನಲ್ಲಿ ಹಿಡಿತವಿರಲಿ
ನಿಮ್ಮ ಮಾತಿನಿಂದ ಸಮಸ್ಯೆ ಎದುರಾಗುವ ಸಾಧ್ಯತೆ ಇದೆ. ವಾದಿಸುತ್ತಾ ಹೋದಷ್ಟು ಸಮಸ್ಯೆ ಹೆಚ್ಚಾಗುತ್ತದೆ. ಹೀಗಾಗಿ ಎಲ್ಲೂ ಕೂಡ ಹೆಚ್ಚಾಗಿ ಮಾತನಾಡಲು ಹೋಗಬೇಡಿ. ಸುಮ್ಮನಿದ್ದಷ್ಟು ನಿಮಗೆ ಒಳ್ಳೆಯದು.
ಪರಿಹಾರಗಳು
* ಪ್ರತಿ ಗುರುವಾರ ತಪ್ಪದೇ ಕಡ್ಲೆ ಬೇಳೆಯನ್ನು ದೇವಸ್ಥಾನಕ್ಕೆ ಕೊಡಿ
* ಪ್ರತಿ ಶನಿವಾರ ತಪ್ಪದೇ ಉದ್ದಿನ ಬೆಳೆ ಹಾಗೂ ಹುರುಳಿ, ಕಪ್ಪು ಎಳ್ಳನ್ನು ದೇವಸ್ಥಾನಕ್ಕೆ ಕೊಡಿ
* ಶುಕ್ರವಾರದ ದಿನ ಎಳ್ಳನ್ನು ಕಪ್ಪು ಬಟ್ಟೆಯಲ್ಲಿ ಗಂಟು ಕಟ್ಟಿ ದೇವರ ಮುಂದೆ ಇಡಿ. ಒಂಬತ್ತು ದಿನಗಳ ಕಾಲ ಪೂಜೆ ಮಾಡಿ. ನಂತರ ಅದನ್ನು ಹರಿಯುವ ನೀರಿನಲ್ಲಿ ಬಿಟ್ಟು ಬಿಡಿ. ಹೀಗೆ ಎರಡು ತಿಂಗಳಿಗೊಂದು ಸಲ ಮಾಡುತ್ತಾ ಬಂದರೆ ಈ ಶನಿ ಸಾಡೆಸಾತ್‌ನ ಕಾಲದಲ್ಲೂ ಕೂಡ ನಿಮಗೆ ಏನೇ ಸಮಸ್ಯೆಗಳು ಬಂದರೂ ಬಗೆ ಹರಿಯುತ್ತದೆ.
* ವೃದ್ಧಾಶ್ರಮಕ್ಕೆ ಹೋಗಿ ಸೇವೆ ಮಾಡಿ
* ಮನೆಯಲ್ಲಿ ಹಿರಿಯರ ಸೇವೆ ಮಾಡಿ
* ಎಳ್ಳೆಣ್ಣೆಯ ದೀಪ ಹಚ್ಚೋದ್ರಿಂದ ಕರ್ಮ ನಿವಾರಣೆಯಾಗುತ್ತದೆ
* ದೇವಾಸ್ಥಾನಕ್ಕೂ ಕೂಡ ಎಳ್ಳನ್ನು ನೀಡಿ
ಮೀನ ರಾಶಿಯ ಮೇಲೆ ಶನಿ ಸಾಡೆಸಾತ್‌ನ ಪ್ರಭಾವ ಇರೋದ್ರಿಂದ ತಾಳ್ಮೆ ತುಂಬಾನೇ ಮುಖ್ಯವಾಗುತ್ತದೆ. ಒಟ್ಟಿನಲ್ಲಿ ಈ ಯುಗಾದಿಯ ನಂತರ ಮೀನರಾಶಿಯವರಿಗೆ ಮಿಶ್ರಫಲವಿದೆ ಅಂತಾನೇ ಹೇಳಬಹುದು.



Click it and Unblock the Notifications


