Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಗಂಡ-ಮಕ್ಕಳ ಬಿಟ್ಟು ಬಂದು ಮದುವೆಯಾದ ಇಬ್ಬರು ಮಹಿಳೆಯರು..!!
ಭಾರತದಲ್ಲಿ ಸಲಿಂಗ ವಿವಾಹ ಇನ್ನೂ ಕಾನೂನು ಬದ್ಧವಾಗಿಲ್ಲ ಈ ಕುರಿತಂತ ಸುಪ್ರೀಂಕೋರ್ಟ್ ಈ ರೀತಿಯ ಮದುಗೆ ಸಿಂಧುವಾಗುವುದಿಲ್ಲ ಎಂದು ತೀರ್ಪು ನೀಡಿದ್ದರೂ ಅಲ್ಲಲ್ಲಿ ಸಲಿಂಗ ಮದುವೆಗಳು ನಡೆಯುವ ಉದಾಹರಣೆ ನೋಡುತ್ತಿದ್ದೇವೆ. ಇನ್ನು ಈ ಸಲಿಂಗ ವಿವಾಹ ಕುರಿತಂತೆ ಸುಪ್ರೀಂಕೋರ್ಟ್‌ನಲ್ಲಿ ವಿಚಾರಣೆ ನಡೆಯುತ್ತಲೇ ಇರುತ್ತದೆ. ಈಗ ತೀರ್ಪು ಮರುಪರಿಶೀಲನೆಗೆ ಸುಪ್ರೀಂ ಮುಂದಾಗಿದೆ.
ಸಲಿಂಗ ವಿವಾಹದ ಬೇಡಿಕೆಯು ನಗರಗಳಲ್ಲಿ ವಾಸಿಸುವ ಗಣ್ಯ ವರ್ಗದ ಜನರದ್ದಾಗಿದೆ ಎಂದು ಸರ್ಕಾರ ಒತ್ತಿ ಹೇಳಿದೆ. ವಿಶ್ವದ 34ಕ್ಕೂ ಹೆಚ್ಚು ದೇಶಗಳು ಸಲಿಂಗಪ್ರೇಮ ವಿವಾಹಕ್ಕೆ ಕಾನೂನು ಮಾನ್ಯತೆ ನೀಡಿವೆ. ಭಾರತದಲ್ಲೂ ಇದನ್ನು ಸಕ್ರಮಗೊಳಿಸಬೇಕೆಂಬ ಬೇಡಿಕೆ ಬಹಳ ದಿನಗಳಿಂದ ಕೇಳಿ ಬರುತ್ತಿದೆ. ಈ ನಡುವೆ ಈಗೊಂದು ಸಲಿಂಗ ವಿವಾಹ ಭಾರೀ ಸುದ್ದಿ ಮಾಡುತ್ತಿದೆ.

ಬಿಹಾರದಲ್ಲಿ ಇಬ್ಬರು ಯುವತಿಯರು ಈಗ ಮದುವೆಯಾಗಿದ್ದು ಭಾರೀ ಚರ್ಚೆ ಹುಟ್ಟುಹಾಕಿದೆ. ಇಬ್ಬರು 7 ವರ್ಷಗಳ ಕಾಲ ಜೊತೆಗಿದ್ದು ಈಗ ಸಪ್ತಪದಿ ತುಳಿದಿದ್ದಾರೆ. ಬಿಹಾರದ ಜಮುಯಿಯ ನಿವಾಸಿಗಳಾದ ಕೋಮಲ್ ಕುಮಾರಿ ಹಾಗೂ ಸೋನಿ ಕುಮಾರಿ ಈಗ ಮದುವೆಯಾಗಿದ್ದಾರೆ.
7 ವರ್ಷಗಳ ಕಾಲ ಒಬ್ಬರಿಗೊಬ್ಬರು ಮೊದಲು ಭೇಟಿಯಾಗಿದ್ದರಂತೆ, ಈ ಭೇಟಿಯ ಬಳಿಕ ಇಬ್ಬರು ಪ್ರೀತಿಸಿದ್ದರು. ನಂತರ ಇಬ್ಬರು ಮದುವೆಯಾಗುವುದಾಗಿ ತೀರ್ಮಾನಿಸಿ ಈಗ ಸಪ್ತಪದಿ ತುಳಿದಿದ್ದಾರೆ.
ಮಿಸ್ ಕಾಲ್‌ನಿಂದ ಆರಂಭಗೊಂಡ ಪ್ರೀತಿ
7 ವರ್ಷದ ಹಿಂದೆ ಇಬ್ಬರು ಮಿಸ್ ಕಾಲ್ ಮೂಲಕ ಭೇಟಿಯಾಗಿದ್ದರು. ಕೋಮಲ್ ಕುಮಾರ್ ಎಂಬಾಕೆ ತಪ್ಪಾದ ನಂಬರ್‌ಗೆ ಫೋನ್ ಕಾಲ್ ಮಾಡಿದಾಗ ಸೋನಿ ಕುಮಾರಿಯ ಪರಿಯವಾಗಿದೆ. ಇದಾದ ಬಳಿಕ ಇಬ್ಬರು ಸ್ನೇಹಿತರಾಗಿದ್ದರು. ಬರೋಬ್ಬರಿ 7 ವರ್ಷಗಳ ಕಾಲ ಒಟ್ಟಿಗಿದ್ದ ಅವರು ಈಗ ಮದುವೆಯಾಗಿದ್ದಾರೆ.
ಕೋಮಲ್ ಮತ್ತು ಸೋನಿ ಇಬ್ಬರೂ ಪರಸ್ಪರ ಫೋನ್‌ನಲ್ಲಿ ಮಾತನಾಡುತ್ತಿದ್ದರು. ಗಂಟೆಗಳ ಕಾಲ ಇಬ್ಬರ ಮತುಕತೆ ನಡೆಯುತ್ತಿತ್ತು. ನಂತರ ಸ್ನೇಹಿತರಾಗಿ ಕ್ರಮೇಣ ಪ್ರೀತಿಯಾಗಿ ಅರಳಿತು. 7 ವರ್ಷಗಳ ಕಾಲ ಒಬ್ಬರಿಗೊಬ್ಬರು ತಿಳಿದ ನಂತರ, ಅವರು ಮದುವೆಯಾಗಲು ನಿರ್ಧರಿಸಿದರು ಮತ್ತು ತಮ್ಮ ಮನೆಯವರಿಗೆ ತಿಳಿಸದೆ 2023 ರಲ್ಲಿ ರಹಸ್ಯವಾಗಿ ವಿವಾಹವಾದರು.
ಇಬ್ಬರಿಗೂ ಮೊದಲೇ ಮದುವೆಯಾಗಿತ್ತು
ಅಚ್ಚರಿಯ ವಿಚಾರ ಏನೆಂದರೆ ಇವರಿಬ್ಬರಿಗೂ ಮೊದಲೇ ಪುರುರೊಂದಿಗೆ ಮದುವೆಯೂ ಆಗಿದೆ. ಕೋಮಲ್ ಕುಮಾರಿ 4 ವರ್ಷಗಳ ಹಿಂದೆ ಲಖಿಸಾರೈ ಜಿಲ್ಲೆಯ ಹಳ್ಳಿಯೊಂದರಲ್ಲಿ ವ್ಯಕ್ತಿಯೊಂದಿಗೆ ಮದುವೆಯಾಗಿದ್ದು, ಅವರಿಗೆ ಒಬ್ಬ ಮಗ ಮತ್ತು ಮಗಳು ಇದ್ದಾರೆ.
ಸೋನಿ ಕುಮಾರಿ 2020 ರಲ್ಲಿ ಪಾಟ್ನಾದ ವ್ಯಕ್ತಿಯೊಂದಿಗೆ ವಿವಾಹವಾಗಿದ್ದರು. ಹೀಗಿದ್ದರೂ ಇಬ್ಬರು ಗಂಡನ ಬಿಟ್ಟು ಬಂದು ಈಗ ಮದುವೆಯಾಗಿದ್ದಾರೆ.
mi
ಮನೆಯವರಿಗೆ ತಿಳಿಯದೆ ಮದುವೆಯಾಗಿದ್ದರು. ಆದರೆ ಕುಟುಂಬಸ್ಥರಿಗೆ ಈ ಮಾಹಿತಿ ತಿಳಿದು ಇಬ್ಬರನ್ನು ಕರೆತಂದಿದ್ದರು. ಆದರೆ ಇದಾದ ಬಳಿಕ ಗಂಡ, ಮಕ್ಕಳನ್ನು ಬಿಟ್ಟು ಓಡಿ ಹೋಗಿ ಬೇರೆ ಕಡೆ ವಾಸಿಸಲು ಎಲ್ಲಾ ರೀತಿಯ ತಯಾರಿ ನಡೆಸಿದ್ದರು. ಆದರೆ ಈ ಬಾರಿ ಕುಟುಂಬಸ್ಥರ ಕೈಗೆ ಸಿಕ್ಕಿಬಿದ್ದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕಾಗಮಿಸಿದ ಪೊಲೀಸರು ಮಹಿಳೆಯರಿಬ್ಬರನ್ನೂ ಠಾಣೆಗೆ ಕರೆತಂದಿದ್ದಾರೆ. ಅವರು ಕೋಮಲ್ ಮತ್ತು ಸೋನಿ ಅವರನ್ನು ವಿಚಾರಣೆ ನಡೆಸುತ್ತಿದ್ದಾರೆ. ಇಬ್ಬರೂ ಮಹಿಳೆಯರು ತಮ್ಮ ಜೀವನವನ್ನು ಪರಸ್ಪರ ಜೀವನ ಕಳೆಯಲು ಬಯಸಿದ್ದರು ಎಂದು ಹೇಳಿದರು. ಆದರೆ ಈ ಪ್ರಕರಣವೀಗ ಹಲವು ರೀತಿಯ ಚರ್ಚೆಗೆ ಕಾರಣವಾಗಿದೆ. ಇಬ್ಬರು ವಿಚ್ಛೇದನ ಪಡೆಯುತ್ತಾರಾ? ಅಥವಾ ತಮ್ಮ ಪತಿ ಜೊತೆ ಮತ್ತೆ ಜೀವನ ನಡೆಸುತ್ತಾರಾ ಎಂಬ ಕುತೂಹಲಕ್ಕೆ ಕಾರಣವಾಗಿದೆ.



Click it and Unblock the Notifications

