Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ತಂದೆ ಆಶೀರ್ವಾದ ಬೇಕೆಂದು ಹಠ ಹಿಡಿದ ಮಕ್ಕಳು..! ಐಸಿಯು ವಾರ್ಡ್‌ನಲ್ಲೇ ವಿವಾಹ..!
ಮದುವೆ ಸ್ವರ್ಗದಲ್ಲಿ ನಿಶ್ಚಯವಾಗುತ್ತೆ ಎನ್ನಲಾಗುತ್ತೆ. ಜೊತೆಗೆ ಮದುವೆ ಅಂದ್ರೆ ಹಿರಿಯರು ನೋಡಿ ನೂರಾರು ಜನರ ಸಮ್ಮುಖದಲ್ಲಿ ಮದುವೆ ಸಮಾರಂಭ ನಡೆಯುತ್ತೆ. ಆದ್ರೆ ಇಲ್ಲೊಂದು ಕಡೆ ಆಸ್ಪತ್ರೆಯಲ್ಲಿ ಮದುವೆಯಾಗಿದೆ. ಆದರೆ ಇದು ತಾಮಷೆಯ ಕಥೆಯಲ್ಲ ಬದಲಿಗೆ ಒಂದು ಜೀವದ ಎದುರು ಇಬ್ಬರು ಮಕ್ಕಳ ಮದುವೆ ನಡೆಸಿದ ಪ್ರಸಂಗವಿದು.
ತಂದೆ ವೆಂಟಿಲೇಟರ್ ಬೆಂಬಲದೊಂದಿಗೆ ಆಸ್ಪತ್ರೆಯಲ್ಲಿ ಮಲಗಿದ್ದಾರೆ ಅವರ ಇಬ್ಬರು ಮಕ್ಕಳು ಅಲ್ಲಿಯೇ ಮದುವೆ ಆಗಿದ್ದಾರೆ. ಲಕ್ನೋದ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಈ ವಿಚಿತ್ರ ಮದುವೆಯೊಂದು ನಡೆದಿದೆ. ಐಸಿಯುನಲ್ಲಿದ್ದ ತಂದೆ ಎದುರು ಇಬ್ಬರು ಸಹೋದರಿಯರು ಮದುವೆಯಾಗಿದ್ದಾರೆ.

55 ವರ್ಷದ ಸೂಫಿ ಸೈಯದ್ ಜುನೈದ್ ಸಾಬ್ರಿ ಎದೆಯ ಸೋಂಕಿನಿಂದ ಐಸಿಯುಗೆ ದಾಖಲಾಗಿದ್ದಾರೆ ಅವರ ಇಬ್ಬರು ಹೆಣ್ಣು ಮಕ್ಕಳಿಗೂ ಮದುವೆ ನಿಶ್ಚಯ ಆಗಿತ್ತು. ಆದರೆ ಅಷ್ಟರೊಳಗೆ ಯಾರು ಊಹಿಸದ ಘಟನೆ ನಡೆದಿದೆ. ವಧುಗಳಾದ ಡಾ ದರ್ಶ ಸೈಯದ್, 29, ಮತ್ತು ತಂಜಿಲಾ ಸೈಯದ್, 26, ಮೂಲತಃ ಜೂನ್ 22 ರಂದು ಮುಂಬೈನಲ್ಲಿ ಮದುವೆಯಾಗಲು ನಿರ್ಧರಿಸಲಾಗಿತ್ತು.
ಜೂನ್ 8 ರಂದು ತಮ್ಮ ತಂದೆಗೆ ಎದೆನೋವು ಕಾಣಿಸಿಕೊಂಡು ಅವರು ಆಸ್ಪತ್ರೆ ಸೇರಿದರು. ಐಸಿಯು ವಾರ್ಡ್‌ನಲ್ಲಿ ಕೃತಕ ಉಸಿರಾಟದ ಮೂಲಕ ಅವರು ಜೀವನ್ಮರಣದ ನಡುವೆ ಹೋರಾಡುತ್ತಿದ್ದಾರೆ. ಆದರೆ ಅವರ ಆರೋಗ್ಯ ಸರಿ ಇದ್ದಾಗಲೇ ಈ ಮದುವೆ ನಿಶ್ಚಯವಾಗಿತ್ತು, ಮದುವೆಗೆ ತಂದೆಯೇ ಓಡಾಡಿ ಕೆಲಸ ಮಾಡಿದ್ದರು.
ಹೀಗಾಗಿ ಮದುವೆ ನಿಲ್ಲಿಸಲು ಯಾರಿಗೂ ಮನಸಿರಲಿಲ್ಲ. ಆದ್ರೆ ಐಸಿಯು ಒಳಗೆ ವೈದ್ಯನ್ನು ಬಿಟ್ಟು ಬೇರೆ ಯಾರಿಗೂ ಪ್ರವೇಶವೇ ಇರುವುದಿಲ್ಲ. ಅಲ್ಲಿ ಸೋಂಕಿ ಅಪಾಯ ಹೆಚ್ಚಾಗಿರುತ್ತದೆ. ಆದರೂ ವೈದ್ಯರ ಬಳಿ ನಿರಂತರ ಮನವಿ ಮಾಡಿದ ಬಳಿಕ ಅವರು ಒಟ್ಟು 5 ಜನರಿಗಷ್ಟೇ ಅನುಮತಿ ನೀಡಿದರು. ಹೀಗಾಗಿ ಎಲ್ಲಿ ಎಲ್ಲರೂ ಸಮವಸ್ತ್ರ ಧರಿಸಿ ಮಾಸ್ಕ್ ಹ್ಯಾಂಡ್ ಗ್ಲೌಸ್ ಧರಿಸಿ ಬಂದಿರುವುದನ್ನು ನಾವು ನೋಡಬಹುದು.
ಮಾನವೀಯ ಆಧಾರದ ಮೇಲೆ ಐದು ಜನರು ಸಮಾರಂಭದಲ್ಲಿ ಭಾಗವಹಿಸಲು ಪ್ರತ್ಯೇಕ ಕೊಠಡಿ ವ್ಯವಸ್ಥೆಯನ್ನೂ ಸಹ ಮಾಡಲಾಗಿತ್ತು. ಆದರೆ ತಂದೆಯ ಅನುಪಸ್ಥಿತಿಯಲ್ಲಿ ಮದುವೆ ಮಾಡುವುದು ಸೂಕ್ತ ಎಂದು ವೈದ್ಯರು ಸಲಹೆ ನೀಡಿದ್ದರು, ಆದರೆ ಸಹೋದರಿಯರು ಇದಕ್ಕೆ ಒಪ್ಪಿಗೆ ನೀಡಲಿಲ್ಲ. ಅವರು ತಂದೆಯ ಆಶೀರ್ವಾದವಿಲ್ಲದೆ ಮದುವೆಯಾಗುವುದಿಲ್ಲ ಎಂದು ಹಠ ಹಿಡಿದಿದ್ದರು.
ಇನ್ನು ವಿಡಿಯೋದಲ್ಲಿ ವಧು ವರರು ಹಾಗೂ ಅವರ ಮುಂದೆ ತಂದೆ ಮಲಗಿರುವುದನ್ನು ನೋಡಬಹುದು. ಅಲ್ಲಿಯೇ ಇಸ್ಲಾಮಿಕ ಪಠಣೆಯ ಮೂಲಕ ಇಬ್ಬರ ವಿವಾಹ ನೆರವೇರುತ್ತಿದೆ.
ಹೀಗಾಗಿ ವೈದ್ಯರ ಅನುಮತಿ ಮೇರೆಗೆ ಐಸಿಯುನಲ್ಲಿ ಇಬ್ಬರಿಗೂ ಮದುವೆ ಮಾಡಲಾಗಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಪರ ವಿರೋಧದ ಚರ್ಚೆಯು ನಡೆಯುತ್ತಿದೆ. ಏಕೆಂದರೆ ಆಸ್ಪತ್ರೆಯಲ್ಲಿ ಸಹೋದರಿಯರು ಮದುವೆಯಾಗಬೇಕು ಎಂದು ಹಠ ಹಿಡಿದಿರುವುದು ಕಂಡು ಅವರ ತಂದೆ ಮೇಲೆ ಅವರಿಗಿರುವ ಕಾಳಜಿ, ಪ್ರೀತಿ ಕಂಡು ಜನರೇ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಇನ್ನೊಂದೆಡೆ ಅವರ ತಂದೆಯ ಆರೋಗ್ಯ ಮತ್ತಷ್ಟು ಹದಗೆಡಲು ಇದೊಂದು ಕಾರಣವಾಗಬಹುದು ಅಂತಲೂ ಆತಂಕ ಹೊರಹಾಕಿದ್ದಾರೆ.
ಐಸಿಯು ವಾರ್ಡ್‌ನಲ್ಲಿರುವ ತಂದೆಗೆ ಇದರಿಂದ ಸಮಸ್ಯೆ ಎದುರಾಗುವ ಆಪಾಯವಿರುತ್ತದೆ. ಅವರು ಚಿಕಿತ್ಸೆಯಲ್ಲಿರುವಾಗ ವಿಶ್ರಾಂತಿಯ ಅಗತ್ಯವಿರುತ್ತದೆ. ಒಂದು ವೇಳೆ ಅವರಿಗೆ ಇದರಿಂದ ಸಮಸ್ಯೆ ಮತ್ತಷ್ಟು ದೊಡ್ಡದಾಗುವ ಅಪಾಯ ಸಹ ಇದೆ ಎಂದಿದ್ಧಾರೆ. ಜೊತೆಗೆ ಅಪ್ಪಂದಿರ ದಿನದ ಸಂದರ್ಭದಲ್ಲಿ ಈ ಸಹೋದರಿಯರು ಅವರ ತಂದೆಗೆ ನೀಡಿದ ಈ ಪ್ರೀತಿ ಕಂಡು ಮೆಚ್ಚುಗೆ ಕೇಳಿಬಂದಿದೆ.



Click it and Unblock the Notifications