Latest Updates
-
ಆಗಸ್ಟ್ 15 ಧ್ವಜಾರೋಹಣ: ಬೆಂಗಳೂರಿನಲ್ಲಿ ಜೋಡಿಗಳು ಪಾಲಿಸಬೇಕಾದ ಪ್ರಮುಖ ನಿಯಮಗಳಿವು! -
ಆನ್ಲೈನ್ ಸೆಕ್ಸ್ಟಾರ್ಷನ್ ವಂಚನೆ: ಅಪರಿಚಿತ ವಿಡಿಯೋ ಕಾಲ್ ರಿಸೀವ್ ಮಾಡಿದ್ರೆ ಹುಷಾರ್, ಇಲ್ಲಿದೆ ಎಚ್ಚರಿಕೆ! -
ಮಳೆಗಾಲದ ಕಿರಿಕಿರಿ ಬೇಡವೇ? ₹999 ಒಳಗೆ ಸಿಗುವ ಈ ಸ್ಮಾರ್ಟ್ ವಸ್ತುಗಳು ನಿಮ್ಮ ಮನೆಗೆ ಮಸ್ಟ್! -
ಜಂಕ್ ಫುಡ್ ಪ್ಯಾಕೆಟ್ ಮೇಲೆ ಎಚ್ಚರಿಕೆ ಲೇಬಲ್ ಕಡ್ಡಾಯ: ಸುಪ್ರೀಂ ಕೋರ್ಟ್ನಿಂದ ಕಂಪನಿಗಳಿಗೆ ಖಡಕ್ ಎಚ್ಚರಿಕೆ! -
ಆಗಸ್ಟ್ 14 ಮತ್ತು 15ರ ಗೊಂದಲ ಬೇಡ: ಸೋಶಿಯಲ್ ಮೀಡಿಯಾದಲ್ಲಿ ಡಿಪಿ ಮತ್ತು ಪೋಸ್ಟ್ ಹಾಕುವಾಗ ಈ ತಪ್ಪು ಮಾಡ್ಬೇಡಿ! -
ಬಂಬಲ್ ಆಪ್ನಲ್ಲಿ ಮಹತ್ವದ ಬದಲಾವಣೆ: ಡೇಟಿಂಗ್ನಲ್ಲಿ ಸಂಭಾಷಣೆ ಶುರು ಮಾಡುವುದು ಹೇಗೆ? -
ಬೆಂಗಳೂರಿನ ಡೇಟಿಂಗ್ ಆ್ಯಪ್ಗಳಲ್ಲಿ ಹೊಸ ವಂಚನೆ: ಪಬ್ಗಳಲ್ಲಿ ಹಣ ಕಳೆದುಕೊಳ್ಳದಂತೆ ಪಾರಾಗುವುದು ಹೇಗೆ? -
ಬೆಂಗಳೂರಿನಲ್ಲಿ ಮಳೆಗಾಲ: ನಿಮ್ಮ ಅಪಾರ್ಟ್ಮೆಂಟ್ನಲ್ಲಿ ಹಾವುಗಳ ಕಾಟವೇ? ಈ ಮುನ್ನೆಚ್ಚರಿಕೆ ಕ್ರಮಗಳನ್ನು ತಪ್ಪದೇ ಪಾಲಿಸಿ! -
ಇಂದು ರಾತ್ರಿ ಆಕಾಶದಲ್ಲಿ ಅದ್ಭುತ: ಪರ್ಸೀಡ್ಸ್ ಉಲ್ಕಾಪಾತ ವೀಕ್ಷಿಸಲು ಮತ್ತು ಫೋಟೋ ತೆಗೆಯಲು ಸರಳ ಟಿಪ್ಸ್ -
ಮಳೆಗಾಲದಲ್ಲಿ ಹೊರಗಿನ ಊಟ ಅಪಾಯಕಾರಿ: ಆನ್ಲೈನ್ ಫುಡ್ ಆರ್ಡರ್ ಮಾಡುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ದೇವಸ್ಥಾನದ ಜಾತ್ರೆ ವೇಳೆ ಆನೆಗಳ ಕಾಳಗ..! ದಿಕ್ಕಾಪಾಲಾಗಿ ಓಡಿದ ಭಕ್ತರು..!
ದೇಶದ ಹತ್ತು ಹಲವು ದೇವಾಲಯಗಳಲ್ಲಿ ಆನೆಗಳಿರುವುದನ್ನು ನಾವು ನೋಡಿದ್ದೇವೆ. ದೇವಾಲಯದ ಕಾರ್ಯಗಳಲ್ಲಿ ಈ ಆನೆಗಳ ಬಳಸುತ್ತಾರೆ. ಅದರಲ್ಲೂ ಜಾತ್ರೆ, ಉತ್ಸವದಲ್ಲಿ ದೇವರನ್ನು ಆನೆಗಳ ಮೇಲೆ ಮೆರವಣಿಗೆ ಮಾಡುವುದು ಸಂಪ್ರದಾಯದಂತೆ ನಡೆದು ಬಂದಿದೆ. ಈ ಆನೆಗಳು ಸಹ ಮಾವುತರ ಮಾಹಿನಂತೆ ಮೆರವಣಿಗೆಯಲ್ಲಿ ಭಾಗಿಯಾಗುತ್ತವೆ. ಈ ಆನೆಗಳ ನೋಡಲೆಂದೇ ಭಕ್ತರು ಅಂದು ದೇವಾಲಯದ ಕಾರ್ಯಕ್ರಮದಲ್ಲಿ ಭಾಗಿಯಾಗುತ್ತಾರೆ.
ಹೀಗಿರುವಾಗ ಕೆಲವೊಂದು ಭಾರೀ ಈ ಆನೆಗಳು ವಿಚಿತ್ರವಾಗಿ ವರ್ತಿಸುತ್ತವೆ, ಕೆಲವು ಮಾವುತ ಮಾತು ಕೇಳದೆ ಅಲ್ಲಿಯೇ ನಿಂತುಬಿಡುತ್ತವೆ. ಇನ್ನೂ ಕೆಲವು ಜನರ ಕಂಡು, ಪಟಾಕಿ, ಗಲಾಟೆ ಕಂಡು ಭಯಗೊಂಡು ದಿಕ್ಕಾಪಾಲಾಗಿ ಓಡುತ್ತವೆ. ಆದ್ರೆ ಇನ್ನೂ ಕೆಲವು ಆಕೆಗಳು ಸಿಟ್ಟಿಗೆದ್ದು ಸಿಕ್ಕ ಸಿಕ್ಕ ವಸ್ತುವನೆಲ್ಲಾ ಪುಡಿ ಮಾಡುತ್ತವೆ. ಈ ಅನಾಹುತಗಳಲ್ಲಿ ಪ್ರಾಣ ಕಳೆದುಕೊಳ್ಳುವವರು ಇದ್ದಾರೆ.

ಇದೇ ರೀತಿ ಇಲ್ಲೊಂದು ದೇವಾಲಯದ ಜಾತ್ರೆಯಲ್ಲಿ ಎರಡು ಆನೆಗಳು ಜಗಳಕ್ಕಿಳಿದು ರಂಪ ಎಬ್ಬಿಸಿ ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡಿರುವ ಘಟನೆ ನಡೆದಿದೆ. ಹೌದು ಕೇರಳದ ಆರತ್ತುಪುಳ ದೇವಾಲಯದ ಆರಾತ್ ಆಚರಣೆ ವೇಳೆ ಎರಡು ಆನೆಗಳ ನಡುವೆ ನಡೆದ ಕಾಳಗದಲ್ಲಿ ಹಲವರು ಗಾಯಗೊಂಡಿದ್ದು, ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲ.
ಅಲ್ಲಿ ನಡೆದಿದ್ದೇನು?
ಶುಕ್ರವಾರ ಆರಟ್ಟುಪುಳ ದೇವಸ್ಥಾನದಲ್ಲಿ ಜಾತ್ರಾ ಉತ್ಸವ ನಡೆದಿತ್ತು. ಎರಡು ಆನೆಗಳಿಗೆ ಅಲಂಕಾರ ಮಾಡಿ ಅವುಗಳ ಮೇಲೆ ದೇವರ ಮೂರ್ತಿ ಇಟ್ಟು ಮೆರವಣಿಗೆಯೂ ಹೊರಟ್ಟಿತ್ತು, ಈ ದೇವಾಲಯದ ಮೆರವಣಿಗೆ ಕಣ್ತುಂಬಿಕೊಳ್ಳಲು ಭಕ್ತ ಸಾಗರವೇ ನಡೆದಿತ್ತು. ಆದ್ರೆ ಇದಕ್ಕಿದ್ದಂತೆ ಒಂದು ಆನೆ ಕೆರಳಿತು. ಅದರ ಮುಂದೆ ನಡೆದು ಹೋಗುತ್ತಿದ್ದವನ ಮೇಲೆ ಮೊದಲು ದಾಳಿ ಮಾಡಿದೆ. ಆತ ತಪ್ಪಿಸಿಕೊಂಡಾಗ ಅಲ್ಲಿದ್ದವರು ಆನೆ ಬಳಿ ಓಡಿದ್ದಾರೆ. ಇದರಿಂದ ಮತ್ತಷ್ಟು ಕೆರಳಿದ ಆನೆ ಎಲ್ಲರ ಮೇಲೂ ದಾಳಿಗೆ ಮುಂದಾಗಿದೆ.
ಮತ್ತೊಂದು ಆನೆಯ ಮೇಲೆ ಎರಗಿದ ಸಲಗ
ಎಲ್ಲರ ಮೇಲೆ ದಾಳಿಗೆ ಮುಂದಾದ ಆನೆ, ಹಿಂದೆ ಇದ್ದ ಮತ್ತೊಂದು ಆನೆ ಗುರುವಾಯೂರು ರವಿಕೃಷ್ಣನ್ ಕಾಳಗಕ್ಕೆ ಇಳಿದಿದೆ. ಸೊಂಡಿಲಿನಿಂದ ಎರಡೂ ಆನೆಗಳು ಕಾಳಗದಲ್ಲಿ ತೊಡಗಿವೆ. ನಡು ರಸ್ತೆಯಲ್ಲಿ ಆನೆಗಳ ಕಾಳಗ ಕಂಡ ಜನ ದಿಕ್ಕಾಪಾಲಾಗಿ ಓಡಿದ್ದಾರೆ. ಆದರೆ ಮಾವುತರು ಅವುಗಳನ್ನು ಹತೋಟಿಗೆ ತರಲು ಯತ್ನಿಸಿದರೂ ಅದು ಸಾಧ್ಯವಾಗಲಿಲ್ಲ. ಎದುರಿನಿಂದ ಮತ್ತೊಂದು ಆನೆ ಗುದ್ದಿದ ರಭಸಕ್ಕೆ ಮತ್ತೊಂದು ಆನೆ ಹಿಂದೆ ಸಾಗಿದೆ. ಎರಡೂ ಆನೆಗಳು ಒಂದಾನೊಂದು ತಳ್ಳುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ಈ ವೇಳೆಗೆ ದೇವಾಲಯದ ಆವರಣದಲ್ಲಿ ದೊಡ್ಡ ಗೊಂದಲ ಉಂಟಾಗಿದೆ. ಜನ ಜೀವ ಉಳಿಸಿಕೊಳ್ಳಲು ಎಲ್ಲೆಂದರಲ್ಲಿ ಓಡಿದ್ದಾರೆ. ಆನೆಗಳು ಸಹ ಜಗಳಕ್ಕಿಳಿದು ಎಲ್ಲೆಂದರಲ್ಲಿ ನುಗ್ಗುತ್ತಿವೆ. ಈ ಎರಡೂ ಆನೆಗಳು ಬೇರೆ ಬೇರೆ ದೇವಾಲಯದ ಆನೆಗಳು ಎನ್ನಲಾಗಿದೆ. ಇದೇ ಕಾರಣಕ್ಕೆ ಜಗಳ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಆದರೆ ಗುರುವಾಯೂರು ರವಿಕೃಷ್ಣನ್ ಆನೆ ಈ ಹಿಂದೆಯು ಇಂತಹ ಜಗಳದಲ್ಲಿ ಭಾಗಿಯಾಗಿದ್ದ ಉದಾಹರಣೆಯೂ ಇದೆ.
ಒಂದು ಗಂಟೆ ಬಳಿಕ ಎಲ್ಲವೂ ಯಥಾಸ್ಥಿತಿ
ಈ ಆನೆಗಳನ್ನು ಹತೋಟಿಗೆ ತರಲು ಮಾವುತರು ಪರದಾಡಿದ್ದಾರೆ. ದೇವಾಲಯದ ಸುತ್ತಲೂ ಓಡಿದ ಆನೆಗಳ ಹಿಡಿದು ಹತೋಟಿಗೆ ತರುವುದು ಸಾಮಾನ್ಯದ ಮಾತಾಗಿರಲಿಲ್ಲ. ಮಾವುತರು ಎಷ್ಟೇ ಪ್ರಯತ್ನ ಪಟ್ಟರು ರವಿಕೃಷ್ಣನ್ ಆನೆಯನ್ನು ಹಿಡಿಯಲು ಸಾಧ್ಯವಾಗಲಿಲ್ಲ. ಒಂದು ಗಂಟೆಯ ಬಳಿಕ ಆನೆ ಶಾಂತವಾಗಿತ್ತು, ಬಳಿಕ ಆನೆಯ ಕಾಲಿಗೆ ಸರಪಳಿ ಹಾಕಿ ವಾಪಾಸು ಕರೆತಂದು ದೇವಾಲಯದಲ್ಲಿ ಕಟ್ಟಲಾಗಿದೆ ಎಂದು ತಿಳಿದುಬಂದಿದೆ. ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.



Click it and Unblock the Notifications