Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತುಳುನಾಡಿನಲ್ಲಿ ಆಟಿ ಅಮಾವಾಸ್ಯೆ ಸಂಭ್ರಮ: ಹಾಲೆ ಮರದ ಕಷಾಯ ಕುಡಿಯೋದೇಕೆ ಗೊತ್ತಾ?
ಇಂದು ನಾಡಿನ ಹಲವು ಭಾಗಗಳಲ್ಲಿ ಆಟಿ ಅಮಾವಾಸ್ಯೆ, ಭೀಮನ ಅಮಾವಾಸ್ಯೆ ಆಚರಿಸಲಾಗುತ್ತದೆ. ಈ ದಿನ ಆಟಿ ಕಷಾಯ ಸೇವಿಸುವುದು ತುಳುನಾಡಿನ ಸಂಸ್ಕೃತಿಯ ಒಂದು ಭಾಗವಾಗಿದೆ. ಇಂದು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೀವು ಯಾವುದೇ ದೇವಾಲಯಕ್ಕೆ ಹೋದರು ಅಲ್ಲಿ ತೀರ್ಥ ರೂಪದಲ್ಲಿ ನಿಮಗೆ ಈ ಆಟಿ ಕಷಾಯ ನೀಡುವುದು ನೋಡಬಹುದು. ಈ ದಿನ ಸೇವಿಸುವ ಆಟಿ ಕಷಾಯ ಸರ್ವ ಔಷಧಿ ಗುಣಗಳ ಹೊಂದಿರುವ ಒಂದು ಅತ್ಯಂತ ಅಮೂಲ್ಯ ಪಾನಿಯ ಎಂದು ನಂಬಲಾಗಿದೆ.
ಈ ಕಷಾಯವನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳುವುದು ಬಹಳ ಆರೋಗ್ಯಕರ ಲಾಭಗಳಿಗೆ ಕಾರಣವಾಗಲಿದೆ. ಹಾಗಾದ್ರೆ ಆಟಿ ಅಮಾವಾಸ್ಯೆ ಎಂದರೇನು? ಆಚರಿಸೋದ್ಯಾಕೆ? ಎಂಬುದನ್ನು ನಾವು ತಿಳಿಯಬೇಕಿದೆ. ಈ ತಿಂಗಳನ್ನು ತುಳುವರು ಆಟಿ ತಿಂಗಳು ಎಂದು ಕೂಡ ಕರೆಯುತ್ತಾರೆ. ಈ ತಿಂಗಳಿನಲ್ಲಿ ಹಾಲೆ ಮರದ ಕಷಾಯ ಕುಡಿದರೆ ವರ್ಷ ಪೂರ್ತಿ ಆರೋಗ್ಯವಾಗಿರಬಹುದು ಎಂಬ ವಾದವಿದೆ.

ಈ ಆಷಾಢ ಮಾಸದಲ್ಲಿ ಭಾರೀ ಮಳೆಯಾಗುವ ಕಾರಣ ರೋಗಗಳು ಹೆಚ್ಚಾಗಿರುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿ ಕಡಿಮೆ ಇರುವುದು ನೋಡಬಹುದು. ಹಾಗೆ ಸೂರ್ಯನ ಬೆಳಕು ನಮ್ಮ ಮೇಲೆ ಬೀಳದ ತಿಂಗಳು ಎಂದು ಕೂಡ ಕರೆಯುತ್ತಾರೆ. ಹೀಗಾಗಿ ದೇಹಕ್ಕೆ ಅಗತ್ಯ ಪೋಷಣೆ ಬೇಕಿರುತ್ತದೆ. ಹೀಗಾಗಿ ಹಾಲೆ ಮರದ ತೊಟಗೆಯಿಂದ ಸಿಗುವ ಹಾಲನ್ನು ತಂದು ಕಷಾಯ ಮಾಡಲಾಗುತ್ತದೆ. ಈ ಹಾಲಿನಲ್ಲಿ ಅದ್ಭುತ ರೋಗ ನಿರೋಧಕ ಶಕ್ತಿ ಹಾಗೆ ಹಲವು ರೋಗಗಳ ತಡೆಯುವ ಗುಣವಿದೆ. ಕ್ಯಾನ್ಸರ್‌ನಂತಹ ಭಯಾಕನ ಕಾಯಿಲೆಗೂ ಇದು ಮದ್ದು ಎಂಬ ಮಾತಿದೆ.
ಹಾಲೆ ಮರದ ತೊಗಟೆಯನ್ನು ಚೆನ್ನಾಗಿ ಜಜ್ಜಿ ಈ ಕಷಾಯ ರೆಡಿ ಮಾಡುತ್ತಾರೆ. ಅದ್ರಲ್ಲೂ ಸೂರ್ಯ ಹುಟ್ಟುವ ಮೊದಲೇ ತೊಗಡೆ ಹಾಲು ತೆಗೆಯಬೇಕು ಎಂದು ಹೇಳಲಾಗಿದೆ. ಬಳಿಕ ಇದಕ್ಕೆ ಕಾಳು ಮೆಣಸು, ಓಂ ಕಾಳು, ಬೆಳ್ಳುಳ್ಳಿ, ಸ್ವಲ್ಪ ಜೀರಿಗೆ, ಅರಿಶಿಣ ಸೇರಿಸಿ ಕಷಾಯ ಮಾಡುತ್ತಾರೆ. ಹಾಗೆ ಮಕ್ಕಳಿಂದ ಹಿಡಿದು ಹಿರಿಯರು, ಸಕ್ಕರೆ ಕಾಯಿಲೆ ಇರುವವರು, ಯಾರು ಬೇಕಾದರು ಇದನ್ನು ಸೇವಿಸಬಹುದು ಎಂದು ಹೇಳಲಾಗಿದೆ.
ಕ್ಯಾನ್ಸರ್‌ನಂಥ ಕಾಯಿಲೆ ತಡೆಗಟ್ಟುತ್ತದೆ
ಈ ಕಷಾಯವು ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು ಸೇರಿದಂತೆ ಹೊಟ್ಟೆ ನೋವು, ಅತಿಸಾರ, ಮಲೇರಿಯಾ, ವಾಂತಿ ಹೀಗೆ ಹಲವು ಸಮಸ್ಯೆಗಳಿಗೆ ಪರಿಹಾರ ನೀಡಲಿದೆ ಎನ್ನಲಾಗಿದೆ. ಹಾಗೆ ಇದು ಕ್ಯಾನ್ಸರ್ ತಡೆಗಟ್ಟುವ ಗುಣ ಹೊಂದಿದೆ ಎಂದು ಹೇಳಲಾಗುವುದು. ಹಾಗಾಗಿ ಈ ಹಾಲೇಮರದ ತೊಗಟೆಯನ್ನು ತಂದು ಆಟಿ ಅಮವಾಸ್ಯೆಗೆ ಕಷಾಯ ಮಾಡಿ ಸೇವಿಸಲಾಗುವುದು.
ಹಾಲೆ ಮರವು 10 ಮೀ.ಗೂ ಹೆಚ್ಚು ಎತ್ತರ ಬೆಳೆಯಲಿದೆ. ಎಲೆಯ ಮೇಲೆ ನರಗಳಂತಹ ರಚನೆ ನೋಡಬಹುದಾಗಿದೆ. ಎಲೆಗಳು ಗೊಂಚಲು ಗೊಂಚಲಾಗಿ ಬಿಡುತ್ತವೆ. ಅದರಲ್ಲೂ ಕರಿ ಹಾಲೆ ಮರ ಹಾಗೂ ಬಿಳಿ ಹಾಲ ಮರ ಎಂದು ಎರಡು ಪ್ರಕಾರದ ಮರಗಳಿವೆ. ಈ ಮರದಲ್ಲಿ ಬಿಡುವ ಹೂವು ಬಹಳ ಸುವಾಸನೆಯಿಂದ ಕೂಡಿರುತ್ತದೆ. ಹಾಗೆ ಕಾಯಿಗಳು ಕೂಡ ಉದ್ದವಾಗಿ ಕೊಳವೆಯಂತೆ ಕಾಣಿಸುತ್ತವೆ. ಈ ಮರವನ್ನು ಪಾಲೆ ಮರ, ಏಳೇಲೆ ಹೊನ್ನೆ, ಕೊಡಾಲೆಮರ ಎಂದು ಕೂಡ ಕರೆಯುತ್ತಾರೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
