Latest Updates
-
ಮದರ್ಸ್ ಡೇ 2026: ಅಮ್ಮ ಮತ್ತು ಅತ್ತೆಯ ನಡುವೆ ಸಿಲುಕಿದ್ದೀರಾ? ಈ ಟ್ರಿಕ್ಸ್ ಫಾಲೋ ಮಾಡಿ! -
ಬಿರುಗಾಳಿ ಅಪ್ಪಳಿಸುವ ಮುನ್ನ ಎಚ್ಚರ: ನಿಮ್ಮ ಮನೆಯನ್ನು ಸುರಕ್ಷಿತವಾಗಿಡಲು ಈ ಕೆಲಸಗಳನ್ನು ಇಂದೇ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಮದರ್ಸ್ ಡೇ 2026: ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಶೇಷ ಟ್ರೆಂಡ್ಸ್ ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಝಳದಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಹೀಟ್ವೇವ್ನಿಂದ ಪಾರಾಗಲು ಈ ಸಣ್ಣ ಬದಲಾವಣೆ ಸಾಕು! -
ತಾಯಂದಿರ ದಿನದ ಗೊಂದಲವೇ? ಅಮ್ಮ ಮತ್ತು ಅತ್ತೆ ಇಬ್ಬರನ್ನೂ ಖುಷಿಪಡಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಅಮೆಜಾನ್ ಸೇಲ್ ಶುರು: ನಿಮ್ಮ ಬಾಲ್ಕನಿಯನ್ನು ಸುಂದರ ತೋಟವನ್ನಾಗಿಸಲು ಮಿಸ್ ಮಾಡ್ಬೇಡಿ ಈ ಬೆಸ್ಟ್ ಡೀಲ್ಸ್! -
ಬಿಸಿಲ ಧಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಪಾನೀಯಗಳೇ ಮದ್ದು! -
ಅಮ್ಮನಿಗೆ ಕೊನೆಯ ನಿಮಿಷದಲ್ಲಿ ಗಿಫ್ಟ್ ಕೊಡಬೇಕಾ? ಈ ಟ್ರಿಕ್ಸ್ ಫಾಲೋ ಮಾಡಿ, ಅಮ್ಮನ ಮುಖದಲ್ಲಿ ನಗು ಮೂಡಿಸಿ! -
ಬಿಸಿಗಾಳಿಯ ಎಚ್ಚರಿಕೆ: ಮಧ್ಯಾಹ್ನ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪು ನಿಮ್ಮ ಆರೋಗ್ಯಕ್ಕೆ ಕುತ್ತು ತರಬಹುದು!
ಮದುವೆ ಫೋಟೋ ವೈರಲ್: ಇವರ ಬಗ್ಗೆ ತಿಳಿದರೆ ಟ್ರೋಲ್ ಮಾಡಲ್ಲ, ಹಾರೈಸುವಿರಿ
ಈಗ ಏನಿದ್ದರೂ ಟ್ರೋಲ್‌ಗಳ ಜಮಾನ... ದಿನನಿತ್ಯ ನೂರಾರು ವಿಷಯಗಳು ಟ್ರೋಲ್ ಆಗುತ್ತಲೇ ಇರುತ್ತವೆ, ಅವುಗಳಲ್ಲಿ ಕೆಲವೊಂದು ತುಂಬಾನೇ ಅತಿ ಅನಿಸುವಷ್ಟು ಟ್ರೋಲ್ ಆಗಿರುತ್ತೆ. ಹೌದು ಇತ್ತೀಚೆಗೆ ತುಮುಕೂರಿನಲ್ಲಿ ನಡೆದ ಮದುವೆಯ ಫೋಟೊವೊಂದು ಸಿಕ್ಕಾಪಟ್ಟೆ ಟ್ರೋಲ್ ಆಗಿತ್ತು.

ಅಷ್ಟಕ್ಕೂ ಟ್ರೋಲ್ ಆಗಲು ಕಾರಣ ಅವರ ವಯಸ್ಸಿನ ನಡುವೆ ಇರುವ ಅಂತರವಾಗಿತ್ತು. ಟ್ರೋಲ್ ಮಾಡುವವರು ಯಾರೂ ಆ ಮದುವೆಯ ಹಿಂದಿನ ಕತೆಯನ್ನು ತಿಳಿದುಕೊಳ್ಳಲು ಬಯಸಲಿಲ್ಲ. ಅವರಿಬ್ಬರು ಮದುವೆಯಾಗಿರುವುದೇ ದೊಡ್ಡ ವಿಷಯವೆಂಬಂತೆ ಟ್ರೋಲ್ ಮಾಡಿದ್ದರು. ಎಷ್ಟೋ ಸೆಲೆಬ್ರಿಟಿಗಳ ನಡುವಿನ ವಯಸ್ಸಿನ ಅಂತರ ತುಂಬಾ ಇರುತ್ತೆ.. ಉದಾಹರಣೆಗೆ ಮಿಲಿಂದ್ ಸೋಮನ್ ಹಾಗೂ ಅವರ ಪತ್ನಿ ಅಂಕಿತಾ ಕೋನ್ವಾರ್ ನಡುವಿನ ವಯಸ್ಸಿನ ಅಂತರ. ಆದರೆ ಈ ಜೋಡಿಯನ್ನು ಸೂಪರ್ ಹಾಟ್ ಜೋಡಿ ಅನ್ನುವವರು ತುಮುಕೂರಿನಲ್ಲಿ ಮದುವೆಯಾದ ಒಂದು ಸಾಮಾನ್ಯ ಜೋಡಿಯನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡಿದೆ. ಆದರೆ ಅವರ ಕತೆಯನ್ನು ಕೇಳಿದರೆ ಅವರ ವಯಸ್ಸಿನ ಅಂತರ ಒಂದು ವಿಷಯವೇ ಅಲ್ಲ, ಇನ್ನಾದರೂ ಆ ಜೋಡಿ ಸುಖವಾಗಿ ಬಾಳಲಿ ಎಂದು ಹಾರೈಸುವಿರಿ.
ಈ ಮದುವೆ ನಡೆದಿರುವುದು ತುಮುಕೂರಿನಲ್ಲಿ. ವರನ ಹೆಸರು ಶಂಕರಣ್ಣ, ವಧು ಮೇಘನಾ. ಮೇಘನಾ ಸ್ವತಃ ಬಯಸಿ ಆಗುತ್ತಿರುವ ಮದುವೆ ಇದು. ಇವರಿಬ್ಬರ ಮದುವೆಗೆ ಕುಟುಂಬಸ್ಥರಿಗೂ ಸಂಪೂರ್ಣ ಸಮ್ಮಿತಿ. ಆ ಹೆಣ್ಣು ತನ್ನ ಜೀವನದಲ್ಲಿ ನಡೆದ ಕಹಿ ಘಟನೆಯನ್ನು ಮರೆತು ಇನ್ನಾದರೂ ನನ್ನ ಬಾಳು ಹಸನಾಗಲಿ ಎಂಬ ಆಸೆಯಿಂದ ಇವರ ಕೈ ಹಿಡಿದಿದ್ದಾರೆ.
ಮೇಘನಾಗೆ ಈ ಮೊದಲು ಮದುವೆಯಾಗಿತ್ತು. ಆದರೆ ಗಂಡ ತುಂಬಾ ಹಿಂಸೆ ನೀಡುತ್ತಿದ್ದ, ಅವನು ಈಕೆಯನ್ನು ಬಿಟ್ಟು ನಾಪತ್ತೆಯಾಗುತ್ತಾನೆ. ಪತ್ನಿಯನ್ನು ಬಿಟ್ಟು ಹೋದವ ಮತ್ತೆ ಬರಲೇ ಇಲ್ಲ, ಪಾಪ ಮೇಘನಾ ಒಂಟಿ ಬಾಳು ಬದುಕುತ್ತಿರುತ್ತಾರೆ. ಒಬ್ಬ ಸಾಮಾನ್ಯ ಹೆಣ್ಣು ಗಂಡ ಬಿಟ್ಟು ಹೋದರೆ ಈ ಸಮಾಜದಲ್ಲಿ ಅನುಭವಿಸುವ ಕಷ್ಟಪಾಡುಗಳು ಎಂಥದ್ದು ಎಂಬುವುದು ಎಲ್ಲರಿಗೆ ತಿಳಿದಿರುವ ವಿಷಯವೇ..
ಇನ್ನು ಶಂಕರಣ್ಣ ಬಗ್ಗೆ ಹೇಳುವುದಾದರೆ ಇವರಿಗೆ ಮದುವೆಯಾಗಿರಲಿಲ್ಲ. ತುಂಬಾ ಹುಡುಗಿ ನೋಡಿದರೂ ಒಂದು ಸಂಬಂಧವೂ ಕೂಡಿ ಬರಲಿಲ್ಲ, ಪ್ರಾಯವೂ ಹೆಚ್ಚುತ್ತಾ ಹೋಯ್ತು.. ಹೀಗಿರುವಾಗ ಅವರ 45ನೇ ಪ್ರಾಯದಲ್ಲಿ ಮದುವೆ ಯೋಗ ಕೂಡಿ ಬಂದಿದೆ. ಮೇಘಾನ ಶಂಕರಣ್ಣನ ಮದುವೆಯಾಗಲು ಸಮ್ಮತಿ ಸೂಚಿಸಿದ್ದಾಳೆ... ನೋವಿನಲ್ಲಿರುವ ಎರಡು ಜೀವಗಳು ಒಬ್ಬರಿಗೊಬ್ಬರು ಆಸರೆಯಾಗುತ್ತಾರೆ ಎಂದು ಮನೆಯವರೂ ಸಂತೋಷದಿಂದ ಒಪ್ಪಿ ಮದುವೆ ಮಾಡುತ್ತಾರೆ. ಅವರ ಮದುವೆಗೆ ತೆಗೆದ ಫೋಟೋಗಳು ವೈರಲ್ ಆಗುತ್ತವೆ.
ಸಿನಿಮಾಗಳಲ್ಲಿ, ಸೀರಿಯಲ್‌ಗಳಲ್ಲಿ ವಯಸ್ಸಾದ ವ್ಯಕ್ತಿಯನ್ನು ಚಿಕ್ಕ ಪ್ರಾಯದ ಹೆಣ್ಮಗಳು ಪ್ರೀತಿಸಿದರೆ ಸೂಪರ್! ಎಂದು ಚಪ್ಪಾಳೆ ತಟ್ಟುತ್ತೇವೆ, ಅದೇ ನಿಜ ಜೀವನದಲ್ಲಿ ಅಂಥ ಘಟನೆ ನಡೆದರೆ ಟ್ರೋಲ್ ಮಾಡಲಾಗುವುದು... ಟ್ರೋಲ್ ಮಾಡುವ ಬದಲು ಹೊಸದೊಂದು ಜೀವನದ ಕನಸು ಕಾಣುತ್ತಿರುವ ಈ ಜೋಡಿಯ ಬಾಳು ಹಸನಾಗಲಿ ಎಂದು ಹಾರೈಸೋಣ....



Click it and Unblock the Notifications