Latest Updates
-
ಅಸ್ಸಾಂನಲ್ಲಿ ಲಿವ್-ಇನ್ ಸಂಬಂಧದಲ್ಲಿದ್ದೀರಾ? ಹೊಸ ಕಾನೂನಿನ ಪ್ರಕಾರ ನೋಂದಣಿ ಮಾಡದಿದ್ದರೆ ಜೈಲು ಶಿಕ್ಷೆ ಕಟ್ಟಿಟ್ಟ ಬುತ್ತಿ! -
ಬಿಸಿಲಿಗೆ ಗಿಡಗಳು ಬಾಡುತ್ತಿವೆಯೇ? ಈ ಮ್ಯಾಜಿಕ್ ಟಿಪ್ಸ್ ಬಳಸಿ ನಿಮ್ಮ ಬಾಲ್ಕನಿ ಗಾರ್ಡನ್ ಅನ್ನು ಹಸಿರಾಗಿಡಿ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಹೀಟ್ಸ್ಟ್ರೋಕ್ನಿಂದ ಪಾರಾಗಲು ಈ ತಂಪು ಪದಾರ್ಥಗಳು ನಿಮ್ಮ ಆಹಾರದಲ್ಲಿರಲಿ, ಇಂದೇ ಟ್ರೈ ಮಾಡಿ! -
ಬಕ್ರೀದ್ 2026: ಈ ಬಾರಿಯ ಹಬ್ಬದ ಸಂಭ್ರಮದಲ್ಲಿ ಮಿಂಚಲು ನೀವು ಮಿಸ್ ಮಾಡಲೇಬಾರದ ಫ್ಯಾಷನ್ ಟ್ರೆಂಡ್ಸ್ ಮತ್ತು ಸ್ಟೈಲಿಂಗ್ ಟಿಪ್ಸ್! -
ಬಿಸಿಲ ಬೇಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ! -
ಬಿಸಿಲಿನ ಬೇಗೆಗೆ ದಂಪತಿಗಳ ನಡುವೆ ಜಗಳವೇ? ಈ ಸಣ್ಣ ಬದಲಾವಣೆಗಳು ನಿಮ್ಮ ಸಂಬಂಧವನ್ನು ಬಿರುಕಿನಿಂದ ಕಾಪಾಡುತ್ತವೆ! -
ಉತ್ತರ ಭಾರತದಲ್ಲಿ ಸುಡುವ ಬಿಸಿಲು: ಮನೆಯನ್ನು ತಂಪಾಗಿಡಲು ಮತ್ತು ಗಿಡಗಳನ್ನು ಬಚಾವ್ ಮಾಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ನಿಮಗೆ ರಾಮಬಾಣ! -
ಬಿಸಿಲ ಝಳಕ್ಕೆ ಸುಸ್ತಾಗಿದ್ದೀರಾ? ಈ ಸಿಂಪಲ್ ಟಿಪ್ಸ್ ಪಾಲಿಸಿದ್ರೆ ಬೇಸಿಗೆಯಲ್ಲೂ ನೀವು ಕೂಲ್ ಆಗಿರಬಹುದು! -
ಬಿಸಿಲ ಬೇಗೆಯಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ನಿಮ್ಮ ಹೃದಯದ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಎಚ್ಚರ!
ವಿಶ್ವ ಅಂಚೆ ದಿನ 2021: ಮರೆಯಾಗುತ್ತಿದ್ದ ಅಂಚೆಯನ್ನು ಮರಳಿ ತಂದ ಡಿಜಿಟಲೀಕರಣ
ವಿಶ್ವ ಅಂಚೆ ದಿನವನ್ನು ಪ್ರತೀವರ್ಷ ಅಕ್ಟೋಬರ್ 9ರಂದು ಆಚರಿಸಲಾಗುವುದು. ಒಂದು ಕಾಲದಲ್ಲಿ ಅಂಚೆ ಮನುಷ್ಯ ಬಾಂಧವ್ಯದ ಕೊಂಡಿಯನ್ನು ಬೆಸೆಯುವ ಪ್ರಮುಖ ಸಾಧನವಾಗಿತ್ತು. ಅಂಚೆಯಣ್ಣ ದಾರಿ ಕಾಯುತ್ತಾ ಕೂರುತ್ತಿದ್ದವರಿಗೆ ಅವನನ್ನು ನೋಡುವಾಗ ಮರುಭೂಮಿಯಲ್ಲಿ ನೀರು ಸಿಕ್ಕಾಗ ಸಿಗುವ ಸಂಭ್ರಮ...

ದೂರದಲ್ಲಿ ಕೆಲಸದಲ್ಲಿರುವ ಮಗ ಅಪ್ಪ-ಅಮ್ಮನಿಗೆ ಕಳುಹಿಸುವ ಮನಿ ಆರ್ಡರ್, ಪ್ರೇಮಿ ಎದುರು ನೋಡುತ್ತಿದ್ದ ಪ್ರೇಮದ ಕರಿಯೋಲೆ, ದೂರದಲ್ಲಿರುವ ಸಂಗಾತಿಯ ವಿರಹ ವೇದನೆ ಮರಿಸುವಂಥ ಸಾಂತ್ವಾನದ ನುಡಿಗಳನ್ನು ಹೊತ್ತು ಬರುವ ಬರಹ, ಸಂಬಂಧಿಗಳಿಂದ ಕುಶಲೋಪಕಾರಿ ವಿಚಾರಿಸಿ ಬರುವ ಲೆಟರ್‌ಗಳು ಹೀಗೆ ಎಲ್ಲಾ ಸಂಬಂಧಗಳನ್ನು ಬೆಸೆಯುವ ಸೇತುವೆಯಾಗಿತ್ತು ಅಂಚೆ.
ಆದರೆ ಕಾಲಗಳು ಉರುಳಿದಂತೆ ತಾಂತ್ರಿಕತೆ ಹೆಚ್ಚಾಯಿತು. ಕೈಯಲ್ಲಿ ಮೊಬೈಲ್ ಬಂತು, ಅಂಚೆಯ ಪ್ರಾಮುಖ್ಯತೆ ನಿಧಾನಕ್ಕೆ ಕಡಿಮೆಯಾಗುತ್ತಾ ಬಂತು, ಜನರು ತಮ್ಮ ವ್ಯವಹಾರಗಳಿಗೆ ಮೊಬೈಲ್ ಬಳಸಲಾರಂಭಿಸಿದರು. ಮೊಬೈಲ್ ಬಂದ ಮೇಲೆ ಪ್ರೇಮಿಗಳಿಗೆ ಪ್ರೇಮ ಪತ್ರ ಬರೆಯುವುದೇ ತಿಳಿಯದಾಯ್ತು.. ತಮ್ಮ ಭಾವನೆಗಳನ್ನು ಟೆಕ್ಸ್ಟ್‌ಗೆ ಅಥವಾ ಇಮೋಜಿಗಳಿಗೆ ಸೀಮಿತಗೊಳಿಸಲಾಯಿತು. ಹೀಗಾಗಿ ಅಂಚೆ ಕಚೇರಿಗಳು ಕಣ್ಮರೆಯಾಗುವಂಥ ಪರಿಸ್ಥಿತಿಯೂ ನಿರ್ಮಾಣವಾಗಿತ್ತು...
ಆದರೆ ಅಂಚೆ ತನ್ನ ಹೊಸತನಕ್ಕೆ ಬಾಗಿಲು ತೆರೆಯಿತು... ಸೇವಿಂಗ್ಸ್, ಬ್ಯಾಂಕ್‌ನಲ್ಲಿ ನಡೆಯುತ್ತಿದ್ದ ಹಣದ ವ್ಯವಹಾರವನ್ನು ಅಂಚೆಯಲ್ಲಿ ಮಾಡಬಹುದಾದ ಸೌಲಭ್ಯ ಬಂತು, ಹೂಡಿಕೆಗೆ ಸುಕನ್ಯಾ ಸಮೃದ್ಧಿ ಯೋಜನೆ, ಪಿಪಿಎಫ್, ಆರ್‌ಡಿ ಮುಂತಾದ ಆಕರ್ಷಣೆಯ ಯೋಜನೆಗಳಿವೆ, ಖಾಸಗಿ ಪೋಸ್ಟಲ್ ಕಂನಿಗಳಿಗೆ ಸಡ್ಡು ಹೊಡೆಯುವಂತೆ ವೇಗವಾಗಿ ಪೋಸ್ಟ್ ತಲುಪಿಸುವ ವ್ಯವಸ್ಥೆ ಮಾಡಲಾಗಿದೆ.. ಹೀಗೆ ಎಲ್ಲಾ ರೀತಿಯಲ್ಲಿ ತನ್ನನ್ನು ನವೀಕರಿಸಿಕೊಂಡು ಮತ್ತೆ ಜನರಿಗೆ ಸಮೀಪವಾಗಿದೆ.
ಈಗ ಲೆಟರ್ ಹಿಡಿದು ಪೋಸ್ಟ್ ಮ್ಯಾನ್ ಬಾರದೇ ಇರಬಹುದು, ಆದರೆ ಪೆನ್ಷನ್, ಹೂಡಿಕೆ ಮುಂತಾದ ವ್ಯವಹಾರಗಳು ಇದರ ಮೂಲಕ ನಡೆಯುತ್ತಿರುವುದರಿಂದ ಪೋಸ್ಟ್ ಆಫೀಸ್ ಗರಿಗೆದರಿದೆ.... ಭಾರತೀಯ ಅಂಚೆ ಸೇವೆ ವಿಶ್ವದಲ್ಲಿಯೇ ಅತೋ ದೊಡ್ಡದಾದ ಸಂಪರ್ಕ ಜಾಲವನ್ನು ಹೊಂದಿದೆ.
ಇತಿಹಾಸ
1874ರಲ್ಲಿ ಸ್ವಿಜರ್‌ಲ್ಯಾಂಡ್‌ನ ಬರ್ನ್‌ನಲ್ಲಿ ಯೂನುವರ್ಸಲ್ ಪೋಸ್ಟಲ್ ಯೂನಿಯನ್ ಸ್ಥಾಪನೆ ಮಾಡಲಾಯಿತು. ಅಕ್ಟೋಬರ್ 9, 1969ರಂದು ಜಪಾನಿನ ಟೋಕಿಯೋದಲ್ಲಿ ವಿಶ್ವ ಅಂಚೆ ದಿನವನ್ನು ಆಚರಿಸಲಾಯಿತು. ಅಲ್ಲಿಂದ ಪ್ರತೀವರ್ಷ ಅಕ್ಟೋಬರ್ 9ನ್ನು ವಿಶ್ವ ಅಂಚೆ ದಿನವನ್ನಾಗಿ ಆಚರಿಸಲಾಗುವುದು.
ಥೀಮ್
ಈ ವರ್ಷದ ಥೀಮ್ ಎಂದರೆ "Innovate to Recover" ಚೇತರಿಕೆಗೆ ಹೊಸತನ ಎಂಬುವುದಾಗಿದೆ. ಅಂಚೆಯಲ್ಲಿ ಡಿಜಿಟಲೀಕರಣಕ್ಕೆ ಹೆಚ್ಚು ಒತ್ತ ನೀಡಲಾಗುತ್ತಿದೆ.



Click it and Unblock the Notifications