Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಕೈಯಲ್ಲಿ ತಿನ್ನುತ್ತಿದ್ದ ಮಹಿಳೆ ಕ್ಯಾಮರಾ ಕಂಡ ತಕ್ಷಣ ಸ್ಪೂನ್ ಬಾಯಿಗಿಟ್ಟಳು: ಈ ಫನ್ನೀ ವೀಡಿಯೋ ಸಕತ್ ವೈರಲ್
ಭಾರತೀಯರ ಆಹಾರಶೈಲಿಯಷ್ಟೇ ಭಿನ್ನವಾಗಿಲ್ಲ, ತಿನ್ನುವ ಶೈಲಿ ಕೂಡ ಭಿನ್ನವೇ. ಇತರ ದೇಶಗಳಲ್ಲಿ ಆಹಾರ ತಿನ್ನಲು ಸ್ಪೂನ್, ಫೋರ್ಕ್ ಅಂತ ಬಳಸಿದರೆ ನಮಗೆ ಕೈಯಲ್ಲಿ ತಿಂದ್ರೆ ಮಾತ್ರ ತೃಪ್ತಿ.

ಕೆಲವೊಮ್ಮೆ ರೆಸ್ಟೋರೆಂಟ್‌ಗಳಿಗೆ ಹೋದಾಗ ಅಥವಾ ಹೈಫೈ ಸ್ತಳಗಳಿಗೆ ಹೋದಾಗ ಅಲ್ಲಿಯ ರೀತಿ ರಿವಾಜುಗಳಿಗೆ ತಕ್ಕಂತೆ ವರ್ತಿಸಿದರೂ ಕೈಯಲ್ಲಿ ತಿಂದ್ರೆ ಮಾತ್ರ ಆಹಾರ ತಿಂದ ತೃಪ್ತಿ ನಮಗೆ ಸಿಗುವುದು ಅಲ್ವಾ?
ಇನ್ನು ಮದುವೆ ಮನೆಗಳಿಗೆ ಹೋದರೆ ನಾವು ಅಲ್ಲಿಯ ಭೂರೀ ಭೋಜನ! ಸವಿಯಬೇಕೆಂದಿರುವಾಗ ನಮಗೆ ಶತ್ರುಗಳಂತೆ ಕಾಡುವುದೇ ಅಲ್ಲಿರುವ ವೀಡಿಯೋಗ್ರಾಫರ್‌ಗಳು. ಇನ್ನೇನು ನಾವು ತಿನ್ನುತ್ತಿರುತ್ತೇವೆ ಅಷ್ಟರಲ್ಲಿ ಅವರು ತಮ್ಮ ಕ್ಯಾಮರಾ ಹಿಡಿದು ನಮ್ಮ ಮುಂದೆ ಪ್ರತ್ಯಕ್ಷವಾಗಿ ಬಿಡುತ್ತಾರೆ, ನಮಗೆ ತಿನ್ನಬೇಕಾ, ವೀಡಿಯೋಗೆ ಪೋಸ್ ನೀಡಬೇಕಾ ಎಂದು ತಿಳಿಯದ ಪರಿಸ್ಥಿತಿ, ಅಂಥ ಸಂದರ್ಭವೊಂದರಲ್ಲಿ ಯುವತಿಯೊಬ್ಬಳು ವರ್ತಿಸಿದ ರೀತಿ ಇದೀಗ ಸಕತ್ ವೈರಲ್ ಆಗಿದೆ.
ಅವಳು ಪಾಪ ತನ್ನ ಪಾಡಿಗೆ ತಾನು ಕೂತು ಕೈಯಿಂದ ಆಹಾರ ಸವಿಯುತ್ತಿದ್ದಳು, ಅಷ್ಟೊತ್ತಿಗೆ ಅಲ್ಲಿಗೆ ಬಂದ ಕ್ಯಾಮರಾಮೆನ್ ಅವಳೆಡೆಗೆ ಕ್ಯಾಮರಾ ಫೋಕಸ್ ಮಾಡುತ್ತಾನೆ, ಆಕೆಗೂ ಏನೂ ಮಾಡುವುದು ಗೊತ್ತಾಗುತ್ತಿಲ್ಲ, ಅವನಂತೂ ಅಲ್ಲಿಂದ ಕದಲುತ್ತಿಲ್ಲ, ಹಪ್ಪಳ ಮುರಿದು ಬಾಯಿಗೆ ಹಾಕಿಕೊಳ್ಳುತ್ತಾಳೆ, ಇನ್ನು ಕ್ಯಾಮರಾ ಇದೆ ಕೈಯಿಂದ ಹೇಗೆ ತಿನ್ನುವುದು ಎಂದು ಭಾವಿಸಿದ ಅವಳು ಸ್ಪೂನ್ ತೆಗೆದು ಸ್ಟೈಲ್ ಆಗಿ ತಿನ್ನಲಾರಂಭಿಸುತ್ತಾಳೆ, ಇದೀಗ ಈ ವೀಡಿಯೋ ಸಕತ್ ವೈರಲ್ ಆಗಿದೆ.
ಈ ವೀಡಿಯೋ ನೋಡಿದ ಯಾರಿಗಾದರೂ ನಗು ಬರುವುದು ಗ್ಯಾರಂಟಿ, ನೆಟ್ಟಿಗರು ಇದರ ಬಗ್ಗೆ ಕಮೆಂಟ್ ಮಾಡುತ್ತಿದ್ದು ಕೆಲವರು ಏಕೆ ತಿನ್ನುವಲ್ಲಿಗೆ ಹೋಗಿ ಡಿಸ್ಟರ್ಬ್ ಮಾಡುತ್ತೀರಾ ಎಂದು ಕ್ಯಾಮರಾಮೆನ್‌ಗಳಿಗೆ ಕೇಳ್ತಾ ಇದ್ದಾರೆ.
ನನಗಂತೂ ಕೈಯಿಂದ ತಿನ್ನುವ ತೃಪ್ತಿ ಸ್ಪೂನ್‌ನಲ್ಲಿ ತಿಂದ್ರೆ ಸಿಗಲ್ಲ, ನಿಮಗೆ?



Click it and Unblock the Notifications
