Latest Updates
-
ದೆಹಲಿ ಮಾಲಿನ್ಯದ ಆತಂಕ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ದಂಪತಿಗಳಿಗೆ ಇಲ್ಲಿದೆ ಸರಳ ಟಿಪ್ಸ್ -
ಅಮೆಜಾನ್-ಫ್ಲಿಪ್ಕಾರ್ಟ್ ಸೇಲ್: ₹1,999ರೊಳಗೆ ಸಿಗುವ 12 ಬೆಸ್ಟ್ ಹೋಮ್ ಆಕ್ಸೆಸರೀಸ್ ಇವೇ ನೋಡಿ! -
ಬೇಳೆಕಾಳು ಬೆಲೆ ಏರಿಕೆ: ₹20ಕ್ಕಿಂತ ಕಡಿಮೆ ವೆಚ್ಚದಲ್ಲಿ ಪ್ರೋಟೀನ್ ಪಡೆಯುವುದು ಹೇಗೆ? -
ಆರ್ಬಿಐ ರೆಪೋ ದರ ನಿರ್ಧಾರ: ನಿಮ್ಮ ಇಎಂಐ ಮೇಲೆ ಬರೆ ಬೀಳುತ್ತಾ? ಇಲ್ಲಿದೆ ಲೆಕ್ಕಾಚಾರ -
ದೆಹಲಿ-ಎನ್ಸಿಆರ್ ಭೂಕಂಪನ: ಆತಂಕ ಬೇಡ, ಸುರಕ್ಷಿತವಾಗಿರಲು ಈ ತಕ್ಷಣದ ಕ್ರಮಗಳನ್ನು ಪಾಲಿಸಿ -
IND vs WI T20 ಮ್ಯಾಚ್ ನೋಡುವಾಗ ಸಂಗಾತಿಯೊಂದಿಗೆ ಜಗಳವಾಡ್ತೀರಾ? ಈ ಸಿಂಪಲ್ ಪ್ಲಾನ್ ಟ್ರೈ ಮಾಡಿ! -
ಇಂದೇ ಎಚ್ಚರ! ದೆಹಲಿ-ಎನ್ಸಿಆರ್ನಲ್ಲಿ ಭಾರಿ ಮಳೆ, ಸಿಡಿಲು: ನಿಮ್ಮ ಸುರಕ್ಷತೆಗಾಗಿ ಈ 30 ನಿಮಿಷಗಳ ಚೆಕ್ಲಿಸ್ಟ್ ಪಾಲಿಸಿ -
ಎವರೆಸ್ಟ್ ಜೀರಿಗೆ ಪುಡಿ ಬಳಸುತ್ತಿದ್ದೀರಾ? ತಕ್ಷಣ ಈ ಬ್ಯಾಚ್ ನಂಬರ್ ಚೆಕ್ ಮಾಡಿ, ಇಲ್ಲದಿದ್ದರೆ ಅಪಾಯ! -
ಹುಟ್ಟುಹಬ್ಬದ ದಿನವೇ ಫ್ಯಾನ್ಸ್ಗೆ ಭರ್ಜರಿ ಗಿಫ್ಟ್ ಕೊಟ್ಟ ಧ್ರುವ ಸರ್ಜಾ: ಹೊಸ ಸಿನಿಮಾ 'ಕೆಮಿಸ್ಟ್ರಿ' ಅನೌನ್ಸ್! -
ಚೆನ್ನೈ-ಕೊಯಮತ್ತೂರಿನಲ್ಲಿ ಭಾರಿ ಮಳೆ: ಹೊರಗೆ ಹೋಗಬೇಡಿ, ಮನೆಯಲ್ಲೇ ಮಾಡಿ ಈ ಸಿಂಪಲ್ ವರ್ಕ್ಔಟ್!
ಲ್ಯಾಪ್‌ಟಾಪ್‌ನಲ್ಲಿ ಕೆಲಸ ಮಾಡುತ್ತಾ ಬೈಕ್ ರೈಡ್ ಮಾಡಿದ ಬೆಂಗಳೂರಿನ ವ್ಯಕ್ತಿ: ಟಾರ್ಗೆಟ್ ಪ್ರೆಷರ್ ಎಂಬ ಕಠೋರ ವಾಸ್ತವದ ಚಿತ್ರ
Bangalore at its best or worst? ಎಂದು ಕೇಳಿ ಮಾಡಿರುವ ಒಂದು ಪೋಸ್ಟ್ ಬೆಂಗಳೂರಿನ ಉದ್ಯೋಗಿಗಳ ವಾಸ್ತವ ಬದುಕಿನ ಚಿತ್ರಣವನ್ನು ತೆರೆದಿಡುವಂತಿದೆ. ಆ ಒಂದು ಫೋಟೋ ಬೆಂಗಳೂರಿನ ಐಟಿ ವರ್ಲ್ಡ್ ಎಂಬ ಪ್ರಪಂಚದ ಕಠೋರ ಸತ್ಯವನ್ನು ಸಾರಿ-ಸಾರಿ ಹೇಳುತ್ತಿದೆ.

ಅಷ್ಟಕ್ಕೂ ಆ ಫೋಟೋವನ್ನು ಬೈಕ್ ರೈಡರ್ ಲ್ಯಾಪ್‌ಟಾಪ್ ತೊಡೆ ಮೇಲಿಟ್ಟು ಕೆಲಸ ಮಾಡುತ್ತಾ ಸಾಗುವಾಗ ಹರ್ಶ್ಮೀತ್ ಸಿಂಗ್ ಎಂಬವರು ಕ್ಲಿಕ್ಕಿಸಿದ ಫೋಟೋ.
ಐಟಿಯಲ್ಲಿ ಕೆಲಸ ಮಾಡುತ್ತಿದ್ದೀರಾ? ಓಹೋ ಹಾಗಾದರೆ ಕೈ ತುಂಬಾ ದುಡ್ಡು ಎಣಿಸಿ ಆರಾಮ ಜೀವನ ನಡೆಸುತ್ತಿರಬಹುದೆಂದೇ ಊರಿನ ಜನ ಮಾತನಾಡಿಕೊಳ್ಳುತ್ತಾರೆ. ಆದರೆ ಆ ಜಗತ್ತಿನಲ್ಲಿರುವ ಕಾಂಪಿಟೇಷನ್, ಡೆಡ್‌ಲೈನ್, ಟಾರ್ಗೆಟ್ ಪ್ರೆಷರ್ ಅದು ಅನುಭವಿಸಿದವರಿಗೆ ಮಾತ್ರ ಗೊತ್ತಿರುತ್ತದೆ.
ಈ ಟಾರ್ಗೆಟ್ ಪ್ರೆಷರ್ ನಮ್ಮ ನೆಮ್ಮದಿ, ಖುಷಿ, ಆರೋಗ್ಯ ಎಲ್ಲವನ್ನೂ ಕಿತ್ತುಕೊಳ್ಳುತ್ತದೆ, ಆದರೆ ಅಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ ಇರುತ್ತೆ, ಹಾಗಾಗಿ ದುಡಿಯುತ್ತಾರೆ, ಈ ಡೆಡ್‌ಲೈನ್, ಟಾರ್ಗೆಟ್ ಪ್ರೆಷರ್‌ನಿಂದಾಗಿ ಮನೆಗೆ ಬಂದರೂ ನೆಮ್ಮದಿಯಾಗಿ ಕುಟುಂಬದೊಂದಿಗೆ ಸಮಯ ಕಳೆಯಲು ಸಾಧ್ಯವಾಗುವುದಿಲ್ಲ, ಎಷ್ಟೋ ಜನ ಮನೆಗೆ ಬಂದರೂ ಲ್ಯಾಪ್‌ಟಾಪ್ ಮುಂದೆ ಕೂತಿರುತ್ತಾರೆ. ಬೆಂಗಳೂರಿನಲ್ಲಿ ವರ್ಕ್ ಮಾಡುತ್ತಿರುವವರಿಗೆ ಈ ಲೈಫ್‌ಸ್ಟೈಲ್ ಹೊಸತಲ್ಲ, ಆದರೆ ಈ ರೀತಿ ಬೈಕ್‌ನಲ್ಲಿ ರೈಡ್ ಮಾಡುತ್ತಾ ಲ್ಯಾಪ್‌ಟಾಪ್ ಹಿಡಿದು ಕೆಲಸ ಮಾಡುವವಷ್ಟು ಅನಿವಾರ್ಯತೆಗೆ ಈ ಟಾರ್ಗೆಟ್ ಪ್ರೆಷರ್ ದೂಡಿದೆ ಎಂಬುವುದು ಈಗ ಶಾಕಿಂಗ್ ವಿಷಯವೇ ಸರಿ, ಅಲ್ಲದೆ ಇದು ಚರ್ಚಿಸಬೇಕಾದ ವಿಷಯವೇ...
ಒಬ್ಬ ವ್ಯಕ್ತಿ ರೈಡ್ ಮಾಡುವಾಗ ಅದು ಸಿಟಿಯ ಗಾಡಿಗಳು ತುಂಬಾ ಓಡಾಡುತ್ತಿರುವ ಫ್ಲೈ ಓವರ್ ಮೇಲೆ ಹೋಗುವಾಗ ತೊಡೆಯ ಮೇಲೆ ಲ್ಯಾಪ್‌ಟ್ಯಾಪ್ ಇಟ್ಟು ಕೆಲಸ ಮಾಡುವುದು ಇದೆಯೆಲ್ಲಾ ಅದು ದೊಡ್ಡ ಸಾಹಸವೇ ಸರಿ, ಸ್ವಲ್ಪ ಹೆಚ್ಚು ಕಡಿಮೆಯಾದರೂ ಪ್ರಾಣಕ್ಕೆ ಅಪಾಯ.. ಅದು ಗೊತ್ತಿದ್ದರೂ ಆತ ಆ ರೀತಿ ಕೆಲಸ ಮಾಡಿದ್ದಾನೆ ಎಂದರೆ ಆತನ ವರ್ಕ್ ಪ್ರೆಷರ್ ಹೇಗಿರಬಹುದು ಅಲ್ವಾ?
ನೀವು ಬಾಸ್ ಆಗಿದ್ದರೆ ನಿಮ್ಮ ಉದ್ಯೋಗಿಗಳ ಪ್ರಾಣಕ್ಕೆ ಕುತ್ತು ನೀಡುವಂಥ ಪ್ರೆಷರ್ ಬಗ್ಗೆ ಮರು ಚಿಂತನೆ ಮಡಬೇಕಾಗಿದೆ. ಅದರಲ್ಲೂ ನೀವು ಒಂದು ಮ್ಯಾನೇಜರ್, ಟೀಂ ಲೀಡರ್, ಸಿಇಒ ಹೀಗೆ ಒಂದು ಒಳ್ಳೆಯ ಹುದ್ದೆಯಲ್ಲಿದ್ದರೆ ನಿಮ್ಮ ಅಂಡರ್‌ನಲ್ಲಿ ಕೆಲಸ ಮಾಡುವವರ ಬಗ್ಗೆ ಚಿಂತಿಸಿ, 'IT'S URGENT' and 'DO IT ASAP ಎಂಬ ಕೂಗು ಕೇಳಿ ಬರುತ್ತಿದೆ.



Click it and Unblock the Notifications

