Latest Updates
-
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ? -
ಓಣಂ ಸದ್ಯದ ಸಂಭ್ರಮ: ಬೆಲೆ ಏರಿಕೆ ಮತ್ತು ಆರೋಗ್ಯದ ಚಿಂತೆಯಿಲ್ಲದೆ ಹಬ್ಬ ಆಚರಿಸುವುದು ಹೇಗೆ? -
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್!
ಸ್ತನಪಾನ ಮಾಡಿಸುತ್ತಿರುವ ತಂದೆ, ವೀಡಿಯೊ ಆಯ್ತು ವೈರಲ್
Trends N Style
oi-Reena TK
By Reena Tk
ಇಲ್ಲೊಬ್ಬ ತಂದೆ ಮಾಡಿರುವ ಕಾರ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮಗುವನ್ನು ಸಮಧಾನ ಮಾಡಿಸಲು ತಂದೆಯಂದಿರು ಹಲವಾರು ರೀತಿಯ ಸರ್ಕಸ್ ಮಾಡಿರುವ ತಮಾಷೆಯ ವೀಡಿಯೋಗಳನ್ನು ನೋಡಿರುತ್ತೀರಿ, ಆದರೆ ಇಲ್ಲೊಬ್ಬ ತಂದೆ ಒಂದು ಹೆಜ್ಜೆ ಮುಂದೆ ಹೋಗಿ ಸ್ತನಪಾನ ಮಾಡಿಸಿದ್ದಾರೆ. ಏನು ತಂದೆ ಸ್ತನಪಾನ ಮಾಡಿಸುವುದೇ? ಎಂದು ಅಚ್ಚರಿಗೊಳಗಾಗಬೇಡಿ. ಇದರ ಹಿಂದೆ ಸುಂದರವಾದ ಕತೆಯಿದೆ.

ತಂದೆ ಬಳಿ ಮಗು ಬಿಟ್ಟು ತಾಯಿ ಹೊರಗಡೆ ಹೋಗಿರುತ್ತಾಳೆ, ತಂದೆ ಜತೆ ಆಟವಾಡುತ್ತಿದ್ದ ಮಗುವಿಗೆ ಹಸಿವಾಗಿ ಅಳಲು ಪ್ರಾರಂಭಿಸುತ್ತದೆ. ತಂದೆ ಮಗಳಿಗೆ ಬಾಟಲಿನಲ್ಲಿ ಹಾಲು ಹಾಕಿ ಕುಡಿಸಲು ಹೋದರೆ ಮಗು ಬಾಟಲಿ ಹಾಲು ಕುಡಿಯುವುದನ್ನು ನಿರಾಕರಿಸಿ ಮತ್ತಷ್ಟು ಅಳಲು ಶುರು ಮಾಡುತ್ತದೆ, ಆಗ ತಂದೆಗೆ ಹೊಳೆದಿದ್ದೇ ಈ ಐಡಿಯಾ. ತನ್ನ ಟೀ ಶರ್ಟ್ ಒಳಗೆ ಬಾಟಲಿ ಹಾಕಿ ಕುಡಿಯಲುಕೊಟ್ಟರೆ ಮಗು ಹಾಲು ಕುಡಿಯಲಾರಂಭಿಸುತ್ತದೆ.
ಇದನ್ನು ವೀಡಿಯೋ ಮಾಡಿ ಸಾಮಾಜಿಕತಾಣದಲ್ಲಿ ಅಪ್ಲೋಡ್ ಮಾಡಿದ್ದೇ ತಡ ಆ ವೀಡಿಯೋ ವೈರಲ್ ಆಗಿ ಬಿಟ್ಟಿದೆ. ಕೆಲವರು ಅಪ್ಪನ ಆಲೋಚನೆಗೆ ಮೆಚ್ಚಿದರೆ, ಮತ್ತೆ ಕೆಲವರು ನೀನು ಈ ವರ್ಷದ ಬೆಸ್ಟ್ ಡ್ಯಾಡ್ ಎಂದು ಹೊಗಳುತ್ತಿದ್ದಾರೆ.
ಏನೇ ಆಗಲಿ ಮನೆಯಲ್ಲಿ ಅಮ್ಮ ಇಲ್ಲದಿದ್ದಾಗ ಮಗು ಅತ್ತರೆ ಏನು ಮಾಡಬೇಕೆಂದು ಅಪ್ಪಂದಿರಿಗೆ ಸಕತ್ ಐಡಿಯಾ ನೀಡಿದ್ದಾರೆ ಇವರು ಅಲ್ವಾ?
Comments
English summary



Click it and Unblock the Notifications