Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ವೈರಲ್ ವೀಡಿಯೋ: ಪುಟ್ಟ ಮಗಳ ಸುಳ್ಳಿಗೆ, ತಂದೆಯ ಪ್ರತಿಕ್ರಿಯೆಗೆ ನೆಟ್ಟಿಗರು ಫುಲ್ ಫಿದಾ
ಮಕ್ಕಳು ಏನೂ ಮಾಡಿದರೂ ಮುದ್ದು ಮುದ್ದಾಗಿರುತ್ತದೆ, ಕೆಲವೊಮ್ಮೆ ಅವರು ಹೇಳುವ ಸುಳ್ಳುಗಳಂತೂ ಕೇಳಲು ತುಂಬಾ ಮಜಾವಾಗಿರುತ್ತದೆ. ಆದರೆ ಅವರು ಸುಳ್ಳು ಹೇಳುತ್ತಿದ್ದಾರೆ ಎಂದು ಗೊತ್ತಾದ ಮೇಲೂ ಏನೂ ಗೊತ್ತಾಗದಂತೆ ನಟಿಸಿ, ಸುಮ್ಮನಾದರೆ ಅದು ನಾವು ಅವರಿಗೆ ಮಾಡುವ ದ್ರೋಹವಾಗುತ್ತದೆ. ಏಕೆಂದರೆ ಮಕ್ಕಳಲ್ಲಿ ಒಳ್ಳೆಯ ಗುಣಗಳನ್ನು ಬೆಳೆಸುವ ಜವಾಬ್ದಾರಿ ಪೋಷಕರ ಮೇಲಿರುತ್ತದೆ, ಅವರ ತಪ್ಪುಗಳನ್ನು ಅವರ ಮನಸ್ಸಿಗೆ ನೋವಾಗದಂತೆ ತಿದ್ದಬೇಕು, ಆಗ ಅವರು ಒಳ್ಳೆಯ ರೀತಿ ವರ್ತಿಸುವುದನ್ನು ಕಲಿಯುತ್ತಾರೆ.

ಶಾಲೆಗೆ ಹೋಗುವ ಮಕ್ಕಳು ಸಹಪಾಠಿಯ ವಸ್ತುಗಳನ್ನು ಮನೆಗೆ ತಗೊಂಡು ಬರ್ತಾರೆ, ಆದರೆ ಆಗ ಮಕ್ಕಳಿಗೆ ಬೆದರಿಸಿ ಬುದ್ಧಿ ಹೇಳದೆ, ನಾಜೂಕಾಗಿ ಹೇಳಿದರೆ ಆ ಪುಟ್ಟ ಮನಸ್ಸಿಗೂ ನೋವಾಗುವುದಿಲ್ಲ, ಇಲ್ಲೊಬ್ಬ ತಂದೆ ತನ್ನ ಮಗಳು ಬೇರೆಯೊಬ್ಬ ಹುಡುಗನ ಜಾಕೆಟ್ ಹಾಕಿಕೊಂಡು ಮನೆಗೆ ಬಂದಾಗ ಮಗಳ ಜತೆ ವರ್ತಿಸಿದ ರೀತಿಗೆ ನೆಟ್ಟಿಗರು ಫುಲ್ ಫಿದಾ ಆಗಿದ್ದಾರೆ. ಮಗಳು ಹೇಳುವ ಚೆಂದದ ಸುಳ್ಳು, ಆಗ ತುಂಬಾ ನಾಜೂಕಾಗಿ ಆ ಜಾಕೆಟ್ ಎಂದು ತಿಳಿದುಕೊಳ್ಳುವುದನ್ನು ಆ ಪುಟಾಣಿಯ ಆಂಟಿ ವೀಡಿಯೊ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದೇ ತಡ ವೀಡಿಯೋ ವೈರಲ್ ಆಗಿದೆ.
so mila came home from school today with a random jacket pic.twitter.com/bAnBo3NOUf
— آيه (@samaraa0) October 31, 2019
ಮಗಳು ಮಿಲಾ ಬೇರೆ ಜಾಕೆಟ್ ಹಾಕಿ ಮನೆಗೆ ಬಂದಾಗ ತಂದೆ, ಈ ಜಾಕೆಟ್ ನೀನು ತಗೊಂಡಿದ್ದಾ ಅಂತ ಕೇಳುತ್ತಾರೆ, ಆಗ ಮಗು ಹೌದು ಎಂದು ಹೇಳುತ್ತದೆ, ನಂತರ ಇದರ ಬೆಲೆಯೆಷ್ಟು. ದುಡ್ಡು ಹೇಗೆ ಕೊಟ್ಟೆ, ಬ್ರ್ಯಾಂಡ್ ಯಾವುದು, ಜಾಕೆಟ್ ಬಣ್ಣ ಯಾವುದು, ಎಂದು ಪ್ರಶ್ನೆಗಳನ್ನು ಕೇಳುವಾಗ ಮಗು ಅಷ್ಟೇ ಚೆಂದವಾಗಿ ಸುಳ್ಳಿನ ಕತೆ ಪೋಣಿಸುತ್ತದೆ, ನಂತರ ಈ ರೀತಿ ಜಾಕೆಟ್ ನಿಮ್ಮ ಕ್ಲಾಸ್‌ನಲ್ಲಿ ಬೇರೆ ಯಾರ ಬಳಿ ಇದೆ ಎಂದು ಕೇಳಿದಾಗ ಹುಡುಗಿ ಒಂದು ಮಗುವಿನ ಹೆಸರು ಹೇಳುತ್ತದೆ, ಆಗ ತಂದೆ ಈ ಬಣ್ಣದ ಜಾಕೆಟ್ ಅಂದರೆ ನಿನಗೆ ಇಷ್ಟನಾ ಎಂದು ಕೇಳುತ್ತಾ, ನಾನಾಗಲಿ, ಅಮ್ಮವಾಗಲಿ ಈ ಜಾಕೆಟ್ ತರಲಿಲ್ಲ, ಮತ್ತೆ ಈ ಜಾಕೆಟ್ ನಿಂದು ಹೇಗಾಗುತ್ತೆ ಎಂದು ಮಗುವಿಗೆ ಮನವರಿಕೆ ಮಾಡುವ ವೀಡಿಯೋ ವೀಕ್ಷಕರ ಮನಗೆದ್ದಿದ್ದು, ಪ್ರತಿಯೊಬ್ಬ ಪೋಷಕರಿಗೂ ಈ ವೀಡಿಯೋ ಒಂದು ಸುಂದರ ಪಾಠ ಹೇಳುತ್ತದೆ.



Click it and Unblock the Notifications
